ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!
ಕುರಿಗಳಿಗೆ ಸೊಪ್ಪು ತರಲು ಹೋದ ಕುರಿಗಾಹಿಯನ್ನು ಎಳೆದೊಯ್ದು ಮುಕ್ಕಾಲು ಭಾಗ ದೇಹವನ್ನು ತಿಂದು ಹಾಕಿದ ಹುಲಿ.
ವರದಿ- ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ
ಚಾಮರಾಜನಗರ (ಡಿ.12): ನಮ್ಮ ದೇಶದಲ್ಲಿ ಹುಲಿಗಳ ಪ್ರಮುಖ ಆವಾಸ ತಾಣಗಳಲ್ಲಿ ಒಂದಾಗಿರುವ ಚಾಮರಾಜನಗರದ ಬಂಡೀಪುರ ಹುಲಿ ಅಭಯಾರಣ್ಯದ ಬಳಿ ಕುರಿಗಳಿಗೆ ಸೊಪ್ಪು ತರಲು ಹೋಗಿದ್ದ ವ್ಯಕ್ತಿಯನ್ನು ಹುಲಿ ತಿಂದು ಹಾಕಿದ ಘಟನೆ ನಡೆದಿದೆ. ನಿನ್ನೆ ಸೊಪ್ಪು ತರಲು ಹೋದ ವ್ಯಕ್ತಿಯನ್ನು ಹುಲಿ ಎಳೆದೊಯ್ದು ಅರ್ಧ ದೇಹದ ಮುಕ್ಕಾಲು ಭಾಗವನ್ನು ತಿಂದು ಹಾಕಿದೆ. ಕುರಿಗಾಹಿಯ ತಲೆ ಹಾಗೂ ದೇಹದ ಕೆಲವು ಮೂಳೆಗಳು ಅಲ್ಲಲ್ಲಿ ಬಿದ್ದಿದ್ದು ಅವುಗಳನ್ನು ಆಯ್ದುಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕುಂದುಕೆರೆ ಅರಣ್ಯ ವಲಯದ ಆಡಿನ ಕಣಿವೆ ಬಳಿ ಘಟನೆ ನಡೆದಿದೆ. ಕುರಿಗಾಹಿ ಮೇಲೆ ಹುಲಿ ದಾಳಿ ಪ್ರಕರಣದಲ್ಲಿ ಕುರಿಗಾಹಿ ಬಸವಯ್ಯ (54) ಸಾವನ್ನಪ್ಪಿದ್ದಾನೆ. ಇದರಿಂದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸವಯ್ಯ ಅವರು ಎಂದಿನಂತೆ ಕುರಿಗಳಿಗೆ ಸೊಪ್ಪು ತರಲೂ ಕಾಡಂಚಿನ ಪ್ರದೇಶಕ್ಕೆ ಹೋಗಿದ್ದನು. ಕಾಡಂಚಿನಲ್ಲಿ ಸೊಪ್ಪು ಕತ್ತರಿಸಲು ಮರದ ಬುಡದಲ್ಲಿ ನಿಂತಿದ್ದಾಗ ಏಕಾಏಕಿ ಹುಲಿ ಬಂದು ದಾಳಿ ಮಾಡಿದೆ. ನಂತರ ಆತನನ್ನು ಅಲ್ಲಿಂದ ಎಳೆದೊಯ್ದು ದೇಹದ ಮುಕ್ಕಾಲು ಭಾಗ ಮಾಂಸವನ್ನು ತಿಂದು ಹಾಕಿದೆ. ಇನ್ನು ಕುರಿಗಾಹಿಯ ಕುತ್ತಿಗೆಗೆ ಬಾಯಿ ಹಾಕಿ ರಕ್ತವನ್ನು ಹೀರಿದೆ. ನಂತರ, ದೇಹದ ಮುಕ್ಕಾಲು ಭಾಗದ ಮಾಂಸವನ್ನು ತಿಂದು ಹಾಕಿದೆ.
Bengaluru: ಹೊಸ ವರ್ಷಕ್ಕೆ ಡ್ರಗ್ಸ್ ಸೇಲ್ ಮಾಡಲು ಬಂದ ವಿದೇಶ ಪ್ರಜೆ: ಸೋಪು, ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಣೆ
ಕುರಿಗಳಿಗೆ ಸೊಪ್ಪು ತರುತ್ತೇನೆಂದು ಹೋದ ಬಸವಯ್ಯನನ್ನು ಮನೆಯವರು ಹುಡುಕಾಡಿದ್ದಾರೆ. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ರಾತ್ರಿವರೆಗೂ ಕಾದಿದ್ದಾರೆ. ಆದರೆ, ಬೆಳಗಾದರೂ ಬಾರದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಹಾಗೂ ಅರಣ್ಯಾಧಿಕಾರಿಗಳಿಗೆ ದೂರು ನಿಡಿದ್ದಾರೆ. ಜೊತೆಗೆ, ಗ್ರಾಮಸ್ಥರು ಕಾಡಂಚಿನ ಅರಣ್ಯ ಪ್ರದೇಶದಲ್ಲಿ ಬಸವಯ್ಯನಿಗಾಗಿ ಹುಡುಕಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪತ್ತೆಯಾಗಿರುವ ಕುರಿಗಾಹಿಯ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ.
ಇನ್ನು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಅರಣ್ಯಾಧಿಕಾರಿಗಳು ಬಸವಯ್ಯನ ತಲೆ ಹಾಗೂ ದೇಹದ ಇತರೆ ಭಾಗಗಳನ್ನು ನೋಡಿ ಇದು ಕಾಡು ಪ್ರಾಣಿ ತಿಂದು ಹಾಕಿರುವುದು ಎಂಬುದನ್ನು ಖಚಿತ ಮಾಡಿಕೊಂಡಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ಹುಲಿಗಳ ದಾಳಿ ಹೆಚ್ಚಾಗುತ್ತಿದೆ. ಆದ್ದರಿಂದ ಹುಲಿಗಳು ಕಾಡು ಬಿಟ್ಟು ಬಾರದಂತೆ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ, ಸತ್ತ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದು ಹಾಗೂ 15 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು ಪತ್ನಿ ಕೊಲೆ? ಅನುಮಾನಾಸ್ಪದವಾಗಿ ಗೃಹಿಣಿ ಸಾವು!
ಕಾಡಂಚಿನ ಗ್ರಾಮದಲ್ಲಿ ಹುಲಿ, ಆನೆ ದಾಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸ್ಥಳದಲ್ಲೇ ಸೂಕ್ತ ಪರಿಹಾರ ಕೊಡಬೇಕು. ಜೊತೆಗೆ, ಇವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡುವಂತೆ ಬಂಡೀಪುರ ಸಿಎಫ್ ರಮೇಶ್ ಕುಮಾರ್ ಅವರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.