ಕೆಲವರಿಗೆ ಯಾವಾಗ ಹೇಗೆ ಪ್ರೀತಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಬಿದ್ದವರನ್ನ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದು ಉತ್ತರವಿರುತ್ತದೆ. ಪಾಕಿಸ್ತಾನದಲ್ಲಿ ಓರ್ವ ಮಹಿಳೆಗೆ ವಿಚಿತ್ರ ಕಾರಣಕ್ಕೆ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದ್ದು, ಇಬ್ಬರು ಮದುವೆಯಾಗಿದ್ದಾರೆ. 

ಕರಾಚಿ: ಕೆಲವರಿಗೆ ಯಾವಾಗ ಹೇಗೆ ಪ್ರೀತಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಬಿದ್ದವರನ್ನ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದು ಉತ್ತರವಿರುತ್ತದೆ. ಸಾಮಾನ್ಯವಾಗಿ ಪರಸ್ಪರ ತೋರುವ ಕಾಳಜಿ, ಪರಸ್ಪರ ಸಮಾನ ಆಸಕ್ತಿ, ಒಂದೇ ರೀತಿಯ ಕೆಲಸ, ಸೌಂದರ್ಯ, ಶ್ರೀಮಂತಿಕೆ ಹಾಗೂ ಸುಂದರವಾದ ವ್ಯಕ್ತಿತ್ವದ ಕಾರಣಕ್ಕೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಮೂಡುವುದು ಸಾಮಾನ್ಯವಾಗಿರುತ್ತದೆ. ಆದರೆ ಪಾಕಿಸ್ತಾನದಲ್ಲಿ ಓರ್ವ ಮಹಿಳೆಗೆ ವಿಚಿತ್ರ ಕಾರಣಕ್ಕೆ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದ್ದು, ಇಬ್ಬರು ಮದುವೆಯಾಗಿದ್ದಾರೆ. 

Add Asianetnews Kannada as a Preferred SourcegooglePreferred

17 ವರ್ಷದ ಈ ಪಾಕಿಸ್ತಾನದ (Pakistan) ಯುವತಿಗೆ 21 ವರ್ಷದ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದೆ. ಕಾರು ಚಾಲಕನ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ಮಾಧ್ಯಮಗಳು ಕೇಳಿದ್ದು, ಯುವತಿ ವಿಚಿತ್ರ ಉತ್ತರ ನೀಡಿದ್ದಾಳೆ. ಕಾರು ಚಾಲಕ (Car Driver) ಕಾರಿನ ಗೇರು (Car Gear)ಬದಲಿಸುವ ಸ್ಟೈಲ್ ನೋಡಿ ಆತನ ಮೇಲೆ ನನಗೆ ಪ್ರೀತಿಯಾಯಿತು ಎಂದು 17ರ ಹರೆಯದ ಯುವತಿ ಹೇಳಿಕೊಂಡಿದ್ದಾಳೆ. 

150 ವರ್ಷ ಬದುಕೋ ವಿಶಿಷ್ಟ ಪಾಕ್ ಸಮುದಾಯವಿದು, ಏನು ಈ ದೀರ್ಘಾಯುಷ್ಯದ ಗುಟ್ಟು?

ಪಾಕಿಸ್ತಾನದ ಮಾಧ್ಯಮ ಡೈಲಿ ಪಾಕಿಸ್ತಾನ್ ಈ ಜೋಡಿಯ ಸಂದರ್ಶನ ಮಾಡಿದ್ದು, ಈ ವೇಳೆ ಯುವತಿ ಈ ವಿಚಿತ್ರ ಉತ್ತರ ನೀಡಿದ್ದಾಳೆ. ಯುವತಿ ಖತೀಜಾಳ (Khatiza) ತಂದೆ ಮಗಳಿಗೆ ಡ್ರೈವಿಂಗ್ ಕಲಿಸಲು ಯುವಕನೋರ್ವನನ್ನು ನೇಮಿಸಿದ್ದಾರೆ. ಆದರೆ ವಿಧಿ ಇವರಿಬ್ಬರ ಬಗ್ಗೆ ಬೇರೆಯೇ ಯೋಜನೆ ರೂಪಿಸಿತ್ತು. ಈತನಿಂದ ಚಾಲನಾ ತರಬೇತಿ ಪಡೆಯುವ ಬದಲು ಈ ತರುಣಿ ಆತನ ಚಾಲನಾ ಕೌಶಲ್ಯಕ್ಕೆ ಮಾರು ಹೋಗಿದ್ದು ಪ್ರೀತಿಯಲ್ಲಿ ಬಿದ್ದಿದ್ದಾಳೆ. ಡ್ರೈವಿಂಗ್ ಕಲಿಯುವ ಬದಲು ಜೋಡಿಗಳಿಬ್ಬರು ಪ್ರೇಮ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪರಿಣಾಮ ಇವರಿಬ್ಬರ ಸಂಭಾಷಣೆ ಪ್ರೇಮಕ್ಕೆ (Love conversation) ತಿರುಗಿದ್ದು, ಈಗ ಮದುವೆಯೂ ಆಗಿದ್ದಾರೆ. 

ಸಂದರ್ಶನದ ವೇಳೆ ಆತನ ಚಾಲನಾ ಕೌಶಲ್ಯ (Driving skills) ಹಾಗೂ ಆತ ಗೇರು (Car Gear)ಬದಲಿಸುವ ಸ್ಟೈಲ್ ನೋಡಿ ನನಗೆ ಪ್ರೀತಿಯಾಯ್ತು ಎಂದು ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೇ ಸಂದರ್ಶನದಲ್ಲಿ ಆಕೆ ತನ್ನ ಇನಿಯನಿಗಾಗಿ 1973ರ ಬಾಲಿವುಡ್ ಸಿನಿಮಾ 'ಬಾಬಿ'ಯ (Boby) ಹಮ್ ತುಮ್ ಏಕ್ ಕಮ್ರೆ ಮೇ ಬಂದ್ ಹೋ ಎಂಬ ಹಾಡನ್ನು ಹಾಡಿದ್ದಾಳೆ. ಒಟ್ಟಿನಲ್ಲಿ ಅಪ್ಪ ಡ್ರೈವಿಂಗ್ ಕಲಿ ಮಗಳೇ ಅಂತ ಚಾಲಕನನ್ನ ನೇಮಿಸಿದ್ರೆ ಈ ಯುವ ತರುಣಿ ಆತನನ್ನೇ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡು ಹಸೆಮಣೆ ಏರಿದ್ದಾಳೆ. 

Shocking! ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್‌ ಲಾಕ್‌! ನೆರೆಯ ದೇಶದಲ್ಲಿ ಇದೆಂತಾ ದುಸ್ಥಿತಿ..