150 ವರ್ಷ ಬದುಕೋ ವಿಶಿಷ್ಟ ಪಾಕ್ ಸಮುದಾಯವಿದು, ಏನು ಈ ದೀರ್ಘಾಯುಷ್ಯದ ಗುಟ್ಟು?
ಪಾಕಿಸ್ತಾನದ ಗುಡ್ಡಗಾಡು ಪ್ರದೇಶದಲ್ಲಿ ಹುಂಝಾ ಅನ್ನೋ ಮುಸ್ಲಿಮ್ ಸಮುದಾಯವಿದೆ. ಇವರು 150 ವರ್ಷ ಬದುಕುತ್ತಾರೆ ಅನ್ನೋದು ಇದೀಗ ಜಗತ್ತನ್ನು ಅಚ್ಚರಿಗೆ ನೂಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅದು 1984ನೇ ಇಸವಿ. ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ತಲೆಬಿಸಿ ಮಾಡಿಕೊಂಡು ಓಡಾಡುತ್ತಿದ್ದರು. ಅಬ್ದುಲ್ ಮೊಬಾಟ್ ಅನ್ನೋ ಪ್ರಯಾಣಿಕ ಅವರಿಗೆ ತಲೆನೋವಾಗಿದ್ದ. ಇದಕ್ಕೆ ಕಾರಣ ಅವನ ವಯಸ್ಸು. ಅದೆಷ್ಟು ಅಂತೀರಿ, ತೊಂಭತ್ತು, ನೂರಾದರೂ ಕೊಂಚ ಪರಿಶೀಲಿಸಿ ಮುಂದೆ ಬಿಡಬಹುದೇನೋ, ಆದರೆ ಆತನ ವಯಸ್ಸು ಬರೋಬ್ಬರಿ 152 ವರ್ಷಗಳು ಅಂತ ತಪಾಸಣೆಯ ಸಮಯದಲ್ಲಿ ಕಂಡುಬಂತು. ಅಬ್ದುಲ್ ಮೊಬಾಟ್ ಎಂಬ ಪ್ರಯಾಣಿಕ 1832 ರಲ್ಲಿ ಜನಿಸಿರುವುದನ್ನು ಅಧಿಕಾರಿಗಳು ಕಂಡುಕೊಂಡರು. ಮೊದಲಿಗೆ ಇದು ತಾಂತ್ರಿಕ ದೋಷ ಎಂದು ಅವರು ಭಾವಿಸಿದ್ದರು. ಆತನನ್ನು ನಿಲ್ಲಿಸಿಕೊಂಡು ಸಂಪೂರ್ಣ ತನಿಖೆ ನಡೆಸಿದಾಗ ನಿಜಕ್ಕೂ ಆ ಅಬ್ದುಲ್ ಮೊಬಾಟ್ ಅವರ ವಯಸ್ಸು 152 ವರ್ಷಗಳು ಎಂದು ತಿಳಿದುಬಂತು. ಇದು ಅಲ್ಲಿದ್ದ ಅಧಿಕಾರಿಗಳಿಂದ ಹಿಡಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಮಾಹಿತಿ ಕೆದಕುತ್ತಾ ಹೋದಾಗ ತಿಳಿದು ಬಂದ ಮತ್ತೊಂದು ಅಚ್ಚರಿಯ ಸಂಗತಿ ಅಂದರೆ ಈ ಅಬ್ದುಲ್ ಪಾಕಿಸ್ತಾನದ ಹುಂಜಾ ಸಮುದಾಯಕ್ಕೆ ಸೇರಿದವರಾಗಿದ್ದರು.
ಆಮೇಲೆ ನೋಡಿದರೆ ಆ ಸಮುದಾಯದಲ್ಲಿ (Community) ಇಷ್ಟು ಸುದೀರ್ಘ ವರ್ಷ ಬದುಕೋದು ಬಹಳ ಕಾಮನ್ ಆಗಿತ್ತು. 150 ವರ್ಷಗಳ ಕಾಲ ಬದುಕುವ ಹುಂಜಾ ಸಮುದಾಯದ ಜನರ ದೊಡ್ಡ ರಹಸ್ಯವೆಂದರೆ, ಈ ಜನರು ಯಾವುದೇ ಗಂಭೀರ ಕಾಯಿಲೆಯಿಂದ (Disease) ಬಳಲುವುದಿಲ್ಲ. ವೃದ್ಧಾಪ್ಯವು ಅವರನ್ನೂ ಕಾಡುವುದಿಲ್ಲ. ಇದಲ್ಲದೆ, ಈ ಸಮುದಾಯದ ಮಹಿಳೆಯರು (Woman) ತುಂಬಾ ಸುಂದರವಾಗಿರುತ್ತಾರೆ.
ಸೋಮಾರಿ ಫಿಟ್ನೆಸ್ ಫ್ರೀಕ್, ಟ್ರೆಡ್ಮಿಲ್ನಲ್ಲಿ ಕುಳಿತು ಸ್ನ್ಯಾಕ್ಸ್ ಮೆಲ್ಲುತ್ತಿರುವ ಭೂಪ!
ಇಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಜೀವಿತಾವಧಿ 70 ವರ್ಷಗಳು. ಆದರೆ ಪಾಕಿಸ್ತಾನದಲ್ಲಿರುವ ಹುಂಝಾ ಎಂಬ ಸಮುದಾಯದ ಜನರು 120 ರಿಂದ 150 ವರ್ಷಗಳ ಕಾಲ ಬದುಕುತ್ತಾರೆ. ನಮ್ಮಲ್ಲೆಲ್ಲ ನಲವತ್ತೈದಕ್ಕೆಲ್ಲ ಯೌವನ ಕಳೆದುಕೊಂಡವರಂತೆ ಹ್ಯಾಪು ಮೋರೆ ಹಾಕಿಕೊಂಡಿರೋರೆ ಬಹಳ ಮಂದಿ. ಆದರೆ ಈ ಸಮುದಾಯದ ಜನರು ಹಾಗಲ್ಲ. ಅವರು 70 ವರ್ಷಗಳವರೆಗೆ ತುಂಬ ತಾರುಣ್ಯವಂತರಾಗಿ ಕಾಣುತ್ತಾರೆ, ಇನ್ನೊಂದು ಅಚ್ಚರಿಯ ಸಂಗತಿ ಅಂದರೆ ಈ ಸಮುದಾಯದ ಮಹಿಳೆಯರು 65 ವರ್ಷ ವಯಸ್ಸಿನಲ್ಲೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಸಾಮಾನ್ಯ ಮನುಷ್ಯರಿಗೆ ಹೋಲಿಸಿದರೆ ದೀರ್ಘಕಾಲದವರೆಗೆ ಯವ್ವನಿಗರಾಗಿರುತ್ತಾರೆ. ಇದಕ್ಕೆಲ್ಲ ಕಾರಣ ಅವರ ಜೀವನ ಪದ್ಧತಿ.
ಈ ಸಮುದಾಯವು ಪಾಕಿಸ್ತಾನದ ಕಾರಕೋರಂ ಪರ್ವತ ಪ್ರದೇಶದ ಹುಂಜಾ ಕಣಿವೆಯಲ್ಲಿ ವಾಸಿಸುತ್ತಿದೆ. ಇದನ್ನು ಹಂಜ್ಕುಟಾಸ್ ಅಥವಾ ಹುಂಜಾ ಎಂದು ಕರೆಯಲಾಗುತ್ತದೆ. ಅವರ ಜನಸಂಖ್ಯೆಯು ತುಂಬಾ ಚಿಕ್ಕದಾಗಿದ್ದರೂ ವಿಶ್ವದಲ್ಲೇ ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದಾರೆ. ಅತ್ಯಂತ ಆರೋಗ್ಯಕರ, ಅತ್ಯಂತ ಸಮೃದ್ಧ ಹಾಗೂ ಸಂತೋಷದ ಸಮುದಾಯ ಎಂದೂ ಕರೆಯಲಾಗುತ್ತದೆ. ಇಲ್ಲಿಯವರೆಗೆ ಈ ಸಮುದಾಯದ ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಬಂದಿಲ್ಲ ಎಂದು ಹೇಳಲಾಗುತ್ತದೆ. ಹುಂಜಾ ಸಮುದಾಯದ ದೀರ್ಘಾಯುಷ್ಯದ ಹಿಂದೆ ಏನಾದರೂ ಪವಾಡವಿರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ಜನರು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯವಾಗಿರುತ್ತಾರೆ. ಅವರ ಆಯುಷ್ಯವೂ ದೀರ್ಘವಾಗಿರಲು ಇದೇ ಕಾರಣ. ಅಖ್ರೋಟ್ ಮತ್ತು ಜರ್ದಾಳುಗಳನ್ನು ಅತಿಯಾಗಿ ಸೇವಿಸುವುದರಿಂದ ಈ ಸಮಯದಾಯದ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದಿಲ್ಲವಂತೆ.
Robert De Niro: 79ರ ವಯಸ್ಸಿನಲ್ಲಿ ತಂದೆಯಾದ ಹೀರೋ ರಾಬರ್ಟ್ ಡಿ ನೀರೋ! ಏನಿದರ ಗುಟ್ಟು?
ಇನ್ನೊಂದು ವಿಶೇಷತೆ ಅಂದರೆ ಹುಂಜಾ ಸಮುದಾಯದ ಜನರು ವರ್ಷದಲ್ಲಿ 2 ರಿಂದ 3 ತಿಂಗಳು ಆಹಾರ(Food) ಸೇವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಪಾನೀಯ(Drink) ಮಾತ್ರ ಕುಡಿಯುತ್ತಾರೆ. ಅವರ ಜೀವನಶೈಲಿಯು(Lifestyle) ದೀರ್ಘ ನಡಿಗೆ ಮತ್ತು ಹಣ್ಣುಗಳು, ಹಸಿ ತರಕಾರಿಗಳು, ಬೀಜಗಳು, ಹಾಲು ಮತ್ತು ಮೊಟ್ಟೆಗಳ ಆಹಾರಕ್ರಮವನ್ನು ಒಳಗೊಂಡಿದೆ. ಈ ಜನರು 70 ವರ್ಷ ವಯಸ್ಸಿನಲ್ಲೂ ಯುವಕರಾಗಿ ಕಾಣಲು ಮತ್ತು 150 ವರ್ಷಗಳವರೆಗೆ ಬದುಕಲು ಇದು ಕಾರಣವಾಗಿದೆ ಎನ್ನಲಾಗಿದೆ.
ಈ ಸಮುದಾಯ ನಿಜಕ್ಕೂ ನಮ್ಮ ಬದುಕು ಹೇಗಿರಬೇಕು, ಹೇಗಿದ್ದರೆ ದೀರ್ಘಾಯುಸ್ಸು ಮಾತ್ರವಲ್ಲ ಆರೋಗ್ಯವಂತರಾಗಿ ಬದುಕಬಹುದು ಅನ್ನೋದನ್ನು ಜಗತ್ತಿಗೆ ಸಾರುವಂತಿದೆ.