ಗಾಜಿಯಾಬಾದ್‌ನಲ್ಲಿ, 44 ವರ್ಷದ ಮಗನೊಬ್ಬ ತನ್ನ 70 ವರ್ಷದ ಹಾಸಿಗೆ ಹಿಡಿದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಮೆರಿಕಾದಲ್ಲಿರುವ ಮಗಳು ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೀಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಮಗ:

ಗಾಜಿಯಾಬಾದ್: ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ 70 ವರ್ಷದ ತಾಯನ್ನು ಆಕೆ ಹೆತ್ತು ಹೊತ್ತು ಸಾಕಿ ಬೆಳೆಸಿದ ಮಗನೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಘಟನೆಯ ಆಘಾತಕಾರಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಆಘಾತದ ಜೊತೆ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗಾಜಿಯಾಬಾದ್‌ನ ಸಂಜಯ್‌ನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾಗೃತಿ ನಗರದ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜಾಗೃತಿ ವಿಹಾರದ ಸೆಕ್ಟರ್ 23ರಲ್ಲಿ ಘಟನೆ ನಡೆದಿದೆ. ಆರೋಪಿಯನ್ನು 44 ವರ್ಷದ ನಿಶಾಂತ್ ಠಾಕೂರ್ ಎಂದು ಗುರುತಿಸಲಾಗಿದೆ. ಅರೋಪಿ ತನ್ನ ವೃದ್ಧ ತಾಯಿಯ ಜೊತೆ ವಾಸ ಮಾಡುತ್ತಿದ್ದ, ವೈರಲ್ ಆದ ವೀಡಿಯೋದಲ್ಲಿ ಅರೋಪಿಯೂ ಏನೂ ತೀರದ ಅಸಹಾಯಕ ವೃದ್ಧ ಮಹಿಳೆಯ ಮೇಲೆ ಮತ್ತೆ ಮತ್ತೆ ಹಲ್ಲೆ ಮಾಡುವುದನ್ನು ಕಾಣಬಹುದು.

ನಿಶಾಂತ್‌ನ ಸೋದರಿ ನಿಶಾ ಅಮೆರಿಕಾದಲ್ಲಿ ವಾಸ ಮಾಡುತ್ತಿದ್ದು, ತನ್ನ ವೃದ್ಧ ತಾಯಿಯ ಕ್ಷೇಮವನ್ನು ದೂರದಿಂದಲೇ ಗಮನಿಸುವುದಕ್ಕಾಗಿ ಆಕೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದರು. ಆದರೆ ಕೆಲವು ಅನುಮಾನಾಸ್ಪದ ವರ್ತನೆ ಕಂಡು ಬಂದ ನಂತರ ಆಕೆ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ತನ್ನ ಸೋದರನೇ ತನ್ನ ತಾಯಿಯ ಮೇಲೆ ಇಷ್ಟು ಭೀಕರವಾಗಿ ಹಲ್ಲೆ ಮಾಡಿದ್ದು ನೋಡಿ ಆಘಾತಗೊಂಡಿದ್ದಾರೆ. ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗದೆ, ಅವರು ಹೌಸಿಂಗ್ ಸೊಸೈಟಿಯ ನಿವಾಸಿಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ ನಂತರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ: ನಾಯಿ ದಾಳಿಯಿಂದಾಗಿ ಮುಖ ಗುರುತಿಸದಷ್ಟು ಬದಲಾಯ್ತು ತಾಯಿಯ ನೋವಿನ ನೋಡಿ

ಶೀಘ್ರದಲ್ಲೇ ಪೊಲೀಸರ ಗಮನ ಸೆಳೆದಿದ್ದು, ನಂತರ ಜನವರಿ 31ರಂದು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯ ಬಂಧಿಸಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದ ಪೊಲೀಸರು ಪ್ರಾಥಮಿಕವಾಗಿ ತನಿಖೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ 70 ವರ್ಷದ ತಾಯಿಗೆ ಹೊಡೆದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಂದೆ ತಾಯಿಯ ಋಣ ಜನ್ಮಜನ್ಮಾಂತರದ್ದು, ಹೆತ್ತತಾಯಿಯ ಋಣವನ್ನು ಈ ಜನ್ಮದಲ್ಲಿ ತೀರಿಸಲಾಗದು ಎಂಬ ಮಾತಿದೆ. ಅದರೆ ಇಲ್ಲಿ ಈತ ಋಣ ತೀರಿಸುವುದಿರಲಿ ಕರುಣೆಯೇ ಇಲ್ಲದಂತೆ ತಾಯಿಯನ್ನು ಥಳಿಸಿ ತನ್ನ ಕರ್ಮ ಎಂಬ ಪಾಪದ ಕೊಡವನ್ನು ತುಂಬಿಕೊಂಡಿದ್ದಾನೆ ಈ ಮಗ.

ಇದನ್ನೂ ಓದಿ: ಸುಳ್ಳು ರೇಪ್ ಕೇಸಲ್ಲಿ 20 ವರ್ಷ ಜೈಲಲ್ಲಿ ಕಳೆದ ವ್ಯಕ್ತಿ ಅಳುತ್ತಿರುವ ವೀಡಿಯೋ ಮತ್ತೆ ವೈರಲ್

Scroll to load tweet…