ಈದ್ ಹಬ್ಬ ಆಚರಣೆ ನಡುವೆ ಸೌದಿ ಅರೆಬಿಯಾ ಮೇಲೆ ಇರಾನ್ ಮಿಸೈಲ್ ದಾಳಿ, ಕೆರಳಿದ ಯುಎಇ, ರಿಯಾದ್, ಖತಾರ್ ಸೇರಿದಂತೆ ಹಲೆವೆಡೆ ಮಿಸೈಲ್ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಯುಎಇ (ಮಾ.19) ಈದ್ ಹಬ್ಬದ ಆಚರಣೆ ಜೋರಾಗಿದೆ. ಅದರಲ್ಲೂ ಮೆಕ್ಕಾ ಮದೀನಾ ಸೇರಿದಂತೆ ಇಸ್ಲಾಂನ ಪವಿತ್ರ ಸ್ಥಳಗಳಲ್ಲಿ ಈದ್ ಹಬ್ಬದ ಆಚರಣೆ ವಿಶೇಷವಾಗಿದೆ. ಇದರ ನಡುವೆ ಸೌದಿ ಅರೇಬಿಯಾದ ರಿಯಾದ್ ಮೇಲೆ ಇರಾನ್ ಮಿಸೈಲ್ ದಾಳಿ ಮಾಡಿದೆ. ಅಮೆರಿಕೆ ಹಾಗೂ ಇಸ್ರೇಲ್ ಮೇಲಿನ ಆಕ್ರೋಶವನ್ನು ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡಿ ತೀರಿಸಿಕೊಳ್ಳುತ್ತಿದೆ. ಇಷ್ಟು ದಿನ ಎಚ್ಚರಿಕೆ ನೀಡುತ್ತಾ ಬಂದಿದ್ದ ಯುಎಇ ಇದೀಗ ತಿರುಗೇಟು ನೀಡಲು ಮುಂದಾಗಿದೆ. ಇರಾನ್ ಮೇಲಿನ ನಂಬಿಕೆ ಹೊರಟುಹೋಗಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. ಇತ್ತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಯುಎಐ ಮೇಲೆ ಸತತ ದಾಳಿ
ಸೌದಿ ಅರೆಬಿಯಾ, ಖತಾರ್ ಮೇಲೆ ಇರಾನ್ ಸತತ ದಾಳಿ ನಡೆಸಿದೆ. ಮಿಸೈಲ್ ದಾಳಿಯಿಂದ ಯುಎಇನ ಹಲವು ರಾಜ್ಯಗಳಲ್ಲಿ ತೀವ್ರ ಹಾನಿಯಾಗಿದೆ. ರಿಯಾದ್‌ನಲ್ಲಿರುವ ರಿಫೈನರಿ ಘಟಕಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಎರಡು ಪ್ರಮುಖ ರಿಫೈನರಿ ಘಟಗಳು ಸ್ಥಗಿತಗೊಂಡಿದೆ. ಸೌದಿ ಅರೆಬಿಯಾದ ರಾಜಧಾನಿ ರಿಯಾದ್ ಮೇಲಿನ ದಾಳಿಯ ಭೀಕರ ದೃಶ್ಯಗಳು ಬಿಡುಗಡೆಯಾಗಿದೆ. ಸೌದಿ ಅರೆಬಿಯಾದ ಒಟ್ಟು 5 ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ ಮಾಡಿದೆ. ಮಿಸೈಲ್ ಹಾಗೂ ಡ್ರೋನ್ ದಾಳಿಯಲ್ಲಿ ಬಹುತೇಕ ಘಟಕಗಳು ಸಂಪೂರ್ಣ ಹಾನಿಯಾಗಿದೆ.
ಏರ್ ಡಿಫೆನ್ಸ್ ಮೂಲಕ ಹಲವು ಮಿಸೈಲ್ ದಾಳಿಯನ್ನು ತಡೆಯಲಾಗಿದೆ. ಪ್ರಮುಖವಾಗಿ ರಿಯಾದ್ ಜನವಸತಿ ಕೇಂದ್ರ ಗುರಿಯಾಗಿಸಿ ನಡೆಸಿದ ಮಿಸೈಲ್ ದಾಳಿಯಲ್ಲಿ ನಾಲ್ಕು ಮಿಸೈಲ್‌ಗಳನ್ನು ಏರ್ ಢಿಪೆನ್ಸ್ ಹೊಡೆದುರುಳಿಸಿದೆ. ಹೀಗಾಗಿ ಪ್ರಾಣಾಪಾಯ ಸಂಭವಿಸಿಲ್ಲ. ಗ್ಯಾಸ್ ಘಟಕದ ಮೇಲಿನ ದಾಳಿ ಇದೀಗ ತೀವ್ರ ಆತಂಕ ಸಷ್ಟಿಸಿದೆ.
ಖತಾರ್ ಮೇಲೆ ದಾಳಿ, ಭಾರತಕ್ಕೂ ಆತಂಕ
ಖತಾರ್ ಮೇಲೆ ಇರಾನ್ ನಡೆಸಿದ ಮಿಸೈಲ್ ದಾಳಿ ಹಲವು ದೇಶಗಳ ಆತಂಕ ಹೆಚ್ಚಿಸಿದೆ. ಖತಾರ್‌ನಲ್ಲಿರುವ ವಿಶ್ವದ ಅತೀದೊಡ್ಡ ಎಲ್ಎನ್‌ಜಿ ಗ್ಯಾಸ್ ಘಟಕದ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಇದು ವಿಶ್ವದ ಅತೀ ದೊಡ್ಡ ಗ್ಯಾಸ್ ಘಟಕವಾಗಿದ್ದು, ಹಲವು ದೇಶಗಳಿಗೆ ಗ್ಯಾಸ್ ಪೂರೈಕೆ ಮಾಡುತ್ತಿದೆ. ಇರಾನ್ ದಾಳಿಯಿಂದ ಘಟಕ ಸ್ಥಗಿತಗೊಂಡಿದೆ. ಹೊರ್ಮುಜ್ ಜಲಸಂಧಿ ಭಾರತಕ್ಕೆ ತೆರೆದರೂ ಇದೀಗ ಗ್ಯಾಸ್ ಪೂರೈಕೆ ಘಟಕವೇ ಸ್ಥಗಿತಗೊಂಡಿರುವ ಕಾರಣ ಭಾರತದಲ್ಲಿ ಗ್ಯಾಸ್ ವ್ಯತ್ಯಯ ಹೆಚ್ಚಾಗುವ ಸಾಧ್ಯತೆ ಇದೆ.


