Asianet Suvarna News Asianet Suvarna News

ಪರ್ವತದ ಮೇಲೆ ಸುರುಳಿ ಸುತ್ತುವ ಮೋಡ : ಪ್ರಕೃತಿಯ ವಿಸ್ಮಯದ ಅಪರೂಪದ ವಿಡಿಯೋ

  • ಪ್ರಕೃತಿಯ ವಿಸ್ಮಯದ ಅಪರೂಪದ ವಿಡಿಯೋ
  • ಪರ್ವತದ ಮೇಲೆ ಸುರುಳಿ ಸುತ್ತುವ ಮೋಡ 
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Cap Cloud Rotating Over Mountain watch viral video akb
Author
Bangalore, First Published Apr 7, 2022, 6:02 PM IST

ಪ್ರಕೃತಿ ತನ್ನ ವಿಸ್ಮಯಗಳನ್ನು ಮತ್ತೆ ಮತ್ತೆ ತೋರಿಸುತ್ತಲೇ ಇದೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಗಗನಚುಂಬಿ ಪರ್ವತದ ಮೇಲೆ ಮೋಡಗಳು ಸುರುಳಿ ಸುರುಳಿಯಾಗಿ ಸುತ್ತುತ್ತಿರುವ ದೃಶ್ಯ ಕಾಣಿಸುತ್ತಿದ್ದು, ಪ್ರಕೃತಿ ಅಚ್ಚರಿಗೆ ಜನ ಬೆರಗಾಗಿದ್ದಾರೆ. ಕ್ಯಾಪ್ ಕ್ಲೌಡ್ ಎಂದೂ ಕರೆಯಲ್ಪಡುವ ಲೆಂಟಿಕ್ಯುಲರ್ ಮೋಡವು ಹಿಮದಿಂದ ಆವೃತವಾದ ಪರ್ವತದ ಶಿಖರದ ಮೇಲೆ ಸುತ್ತುತ್ತಿರುವುದನ್ನು ನೋಡಬಹುದಾಗಿದೆ. 

ಈ ವೀಡಿಯೊವನ್ನು ಆಮೇಜಿಂಗ್ ನೇಚರ್ ಎಂಬ ಹೆಸರಿನ ಖಾತೆಯಿಂದ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಕ್ಯಾಪ್ ಕ್ಲೌಡ್ ಎಂದೂ ಕರೆಯಲ್ಪಡುವ ಲೆಂಟಿಕ್ಯುಲರ್ ಮೋಡವು ಹಿಮದಿಂದ ಆವೃತವಾದ ಪರ್ವತದ ಶಿಖರದ ಮೇಲೆ ಸುತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಅದ್ಭುತವಾದ ದೃಶ್ಯ ನೋಡುಗರನ್ನು ಮಂತ್ರಮುಗ್ಧರಾಗಿಸುತ್ತಿದೆ. ಮೋಡವು ಪರ್ವತದ ಸುತ್ತಲೂ ತ್ರಿಕೋನದ ಟೋಪಿಯಂತಹ ರಚನೆಯನ್ನು ರೂಪಿಸಿತು ಮತ್ತು ನಿಧಾನವಾಗಿ ತಲೆಕೆಳಗಾದ ಸುಂಟರಗಾಳಿಯಂತೆ ಅದೇ ಸ್ಥಾನದಲ್ಲಿ ಸುತ್ತುತ್ತಲೇ ಇತ್ತು. ಈ ನೋಟವು ನಿಜವಾಗಿಯೂ ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿದೆ.

ಲೆಂಟಿಕ್ಯುಲರ್ ಮೋಡ ಎಂದರೇನು?
ವಾತಾವರಣದ ಮೇಲಿನ ಮಟ್ಟದಲ್ಲಿ ತೇವಾಂಶವು ಹೆಚ್ಚಾಗಲು ಪ್ರಾರಂಭಿಸಿದಾಗ ಪರ್ವತ ಶಿಖರಗಳ ಮೇಲೆ ಲೆಂಟಿಕ್ಯುಲರ್ ಮೋಡಗಳು ರೂಪುಗೊಳ್ಳುತ್ತವೆ. ಲೆಂಟಿಕ್ಯುಲರ್ ಮೋಡಗಳನ್ನು ಕೆಲವೊಮ್ಮೆ ಸ್ಟ್ಯಾಂಡಿಂಗ್ ವೇವ್ ಕ್ಲೌಡ್ಸ್‌ ಎಂದೂ ಕರೆಯುತ್ತಾರೆ ಏಕೆಂದರೆ ಅವು ವಾತಾವರಣದಲ್ಲಿನ ಅಲೆಗಳೊಂದಿಗೆ ಸಂಬಂಧ ಹೊಂದಿವೆ. ಪರ್ವತ ಶ್ರೇಣಿ ಅಥವಾ ಜ್ವಾಲಾಮುಖಿಯಂತಹ ಭೌತಿಕ ಅಡಚಣೆಯ ಮೇಲೆ ವೇಗವಾಗಿ ಚಲಿಸುವ ಗಾಳಿಯು ಬಲವಂತವಾಗಿ ಚಲಿಸಿದಾಗ ಇವು ಹುಟ್ಟಿಕೊಳ್ಳುತ್ತವೆ.

ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾದ ಸ್ಕಾಟ್‌ಲ್ಯಾಂಡ್‌: ಆಕಾಶದಲ್ಲಿ ಮೂಡಿದ ಅಪರೂಪದ ಚಿತ್ತಾರ

ಕೆಲ ದಿನಗಳ ಹಿಂದೆ ಸ್ಕಾಟ್‌ಲ್ಯಾಂಡ್‌ ಇಂತಹದ್ದೇ ಒಂದು ಅಪರೂಪದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿತ್ತು. ಉತ್ತರ ದೀಪಗಳು ಎಂದು ಕರೆಯಲ್ಪಡುವ ಪ್ರಕೃತಿ ನಿರ್ಮಿತ ಬೆಳಕು ಅಲ್ಲಿ ಕಾಣಿಸಿದ್ದು, ಈ ವಿಸ್ಮಯವನ್ನು ಜನ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣವಾದ  ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಸುಂದರ ಫೋಟೋಗಳು ಬೆರಗು ಮೂಡಿಸುವಂತಿದ್ದವು. ಈ ಉತ್ತರದ ದೀಪಗಳನ್ನು ಅರೋರಾ ಬೋರಿಯಾಲಿಸ್ ಎಂದು ಕೂಡ ಕರೆಯುತ್ತಾರೆ. ರೋಮನ್ ದೇವತೆ ಡಾನ್ (ಅರೋರಾ) ಮತ್ತು ಉತ್ತರ ಗಾಳಿಯ ರೋಮನ್ ದೇವರು (ಬೋರಿಯಾಸ್) ಎಂಬೆರಡು ಪದಗಳ ಸಂಯೋಗದಿಂದ ಅರೋರಾ ಬೋರಿಯಾಲಿಸ್  ಬಂದಿದೆ.

ಪ್ರಕೃತಿ ವಿಸ್ಮಯ! 5 ನಿಮಿಷಗಳ ಕತ್ತಲು ಬೆಳಕಿನ ಆಟಕ್ಕೆ ಜನ ಬೆರಗು

ಈ ಉತ್ತರದ ದೀಪಗಳು ವರ್ಷದ ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದು, ಸೆಪ್ಟೆಂಬರ್, ಅಕ್ಟೋಬರ್, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಅವು ಆಗಾಗ್ಗೆ ಕಂಡುಬರುತ್ತವೆ.ಈ ಸುಂದರವಾದ ಉತ್ತರ ದೀಪಗಳನ್ನು ನೋಡುವುದು ಅನೇಕ ಜನರ ಕನಸಾಗಿದೆ ಮತ್ತು ಅವರು ಖಗೋಳ ಕೌತುಕವೆನಿಸುವ (astronomical occurrence) ಈ ಘಟನೆಯನ್ನು ನೋಡಲು ವರ್ಷಗಟ್ಟಲೇ ಮತ್ತೆ ಕಾಯಬೇಕಾಗುವುದು. ಕಳೆದ ವಾರ, ಸ್ಕಾಟ್ಲೆಂಡ್‌ (Scotland)  ನಿವಾಸಿಗಳ ಪಾಲಿಗೆ ಈ ಕನಸು ನನಸಾಯಿತು ಏಕೆಂದರೆ ಅವರಿಗೆ ಈ ಪ್ರಕಾಶಮಾನವಾದ ಉತ್ತರ ದೀಪಗಳು ಕಾಣಿಸಲು ಸಿಕ್ಕವು.

 

 

Follow Us:
Download App:
  • android
  • ios