ಆಕಾಶದಲ್ಲಿ ಮೂಡಿದ ಅಪರೂಪದ ಚಿತ್ತಾರ ಉತ್ತರ ದೀಪಗಳು ಎಂದು ಕರೆಯಲ್ಪಡುವ ಪ್ರಕೃತಿ ನಿರ್ಮಿತ ಬೆಳಕು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾದ ಸ್ಕಾಟ್‌ಲ್ಯಾಂಡ್
ಸ್ಕಾಟ್‌ಲ್ಯಾಂಡ್ ಅಪರೂಪದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಉತ್ತರ ದೀಪಗಳು ಎಂದು ಕರೆಯಲ್ಪಡುವ ಪ್ರಕೃತಿ ನಿರ್ಮಿತ ಬೆಳಕು ಕಾಣಿಸಿದ್ದು, ಈ ವಿಸ್ಮಯವನ್ನು ಜನ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುಂದರ ಫೋಟೋಗಳು ಬೆರಗು ಮೂಡಿಸುವಂತಿದೆ. ಈ ಉತ್ತರದ ದೀಪಗಳನ್ನು ಅರೋರಾ ಬೋರಿಯಾಲಿಸ್ ಎಂದು ಕೂಡ ಕರೆಯುತ್ತಾರೆ. ರೋಮನ್ ದೇವತೆಯ ಡಾನ್ (ಅರೋರಾ) ಮತ್ತು ಉತ್ತರ ಗಾಳಿಯ ರೋಮನ್ ದೇವರು (ಬೋರಿಯಾಸ್) ಎಂಬೆರಡು ಪದಗಳ ಸಂಯೋಗದಿಂದ ಅರೋರಾ ಬೋರಿಯಾಲಿಸ್ ಬಂದಿದೆ.
ಈ ಉತ್ತರದ ದೀಪಗಳು ವರ್ಷದ ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದು, ಸೆಪ್ಟೆಂಬರ್, ಅಕ್ಟೋಬರ್, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಅವು ಆಗಾಗ್ಗೆ ಕಂಡುಬರುತ್ತವೆ.ಈ ಸುಂದರವಾದ ಉತ್ತರ ದೀಪಗಳನ್ನು ನೋಡುವುದು ಅನೇಕ ಜನರ ಕನಸಾಗಿದೆ ಮತ್ತು ಅವರು ಖಗೋಳ ಕೌತುಕವೆನಿಸುವ (astronomical occurrence) ಈ ಘಟನೆಯನ್ನು ನೋಡಲು ವರ್ಷಗಟ್ಟಲೇ ಮತ್ತೆ ಕಾಯಬೇಕಾಗುವುದು. ಕಳೆದ ವಾರ, ಸ್ಕಾಟ್ಲೆಂಡ್ (Scotland) ನಿವಾಸಿಗಳ ಪಾಲಿಗೆ ಈ ಕನಸು ನನಸಾಯಿತು ಏಕೆಂದರೆ ಅವರಿಗೆ ಈ ಪ್ರಕಾಶಮಾನವಾದ ಉತ್ತರ ದೀಪಗಳು ಕಾಣಿಸಲು ಸಿಕ್ಕವು.
ರೋಮನ್ ದೇವತೆಯಾದ ಡಾನ್ (ಅರೋರಾ) ಮತ್ತು ಉತ್ತರದ ಗಾಳಿಯ ರೋಮನ್ ದೇವರು (ಬೋರಿಯಾಸ್) ಹೆಸರನ್ನು ಸೇರಿಸಿ ಈ ಬೆಳಕಿಗೆ ಅರೋರಾ ಬೋರಿಯಾಲಿಸ್ ಎಂಬ ಹೆಸರಿಡಲಾಗಿದೆ, ಸೌರ ಕಣಗಳು ಭೂಮಿಯ ವಾತಾವರಣದೊಂದಿಗೆ ಡಿಕ್ಕಿ ಹೊಡೆದಾಗ ಮತ್ತು ವರ್ಣರಂಜಿತ ವಿಕಿರಣ ದೀಪಗಳನ್ನು ಹೊರಸೂಸಿದಾಗ ಈ ವಿದ್ಯಮಾನವು ಸಂಭವಿಸುತ್ತದೆ. ಹೆಚ್ಚಾಗಿ ನಮ್ಮ ಗ್ರಹದ ಕಾಂತೀಯ ಕ್ಷೇತ್ರವಿರುವ ಉತ್ತರ ಮತ್ತು ದಕ್ಷಿಣ ಧ್ರುವದಲ್ಲಿಇದು ಕಾಣಿಸಿಕೊಳ್ಳುವುದು. ಈ ಶಕ್ತಿಶಾಲಿ ದೀಪಗಳು ವರ್ಷದ ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದಾದರೂ, ವಿಶೇಷವಾಗಿ ಅವು ಸೆಪ್ಟೆಂಬರ್, ಅಕ್ಟೋಬರ್ (October), ಮಾರ್ಚ್ (March) ಮತ್ತು ಏಪ್ರಿಲ್‌ನಲ್ಲಿ ಆಗಾಗ್ಗೆ ಕಂಡು ಬರುತ್ತವೆ.
ವಿಶ್ವದೆಲ್ಲೆಡೆ ಖಗೋಳ ಕೌತುಕ ಕಣ್ತುಂಬಿಕೊಂಡ ಜನ!
ಉತ್ತರದ ಈ ದೀಪಗಳನ್ನು ವೀಕ್ಷಿಸುವ ಬಗ್ಗೆ ಯೋಚಿಸಿದರೆ ಅಲಾಸ್ಕಾ (Alaska), ಆರ್ಕ್ಟಿಕ್ (Arctic), ಸ್ವೀಡನ್ (Sweden) ಮತ್ತು ಫಿನ್ಲ್ಯಾಂಡ್‌ನಂತಹ (Finland) ಸ್ಥಳಗಳು ಒಬ್ಬರ ಮನಸ್ಸಿಗೆ ಬರುತ್ತವೆ. ಆದರೆ ಸ್ಕಾಟ್ಲೆಂಡ್ ಬಗ್ಗೆ ಯೋಚಿಸುವುದು ವಿರಳ. ಆದಾಗ್ಯೂ, ಸ್ಕಾಟ್‌ಲ್ಯಾಂಡ್‌ನ ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯಾದ ವಿಸಿಟ್ ಸ್ಕಾಟ್‌ಲ್ಯಾಂಡ್‌ನ ಪ್ರಕಾರ, ದೇಶವು ನಾರ್ವೆ (Norway) ಮತ್ತು ಅಲಾಸ್ಕಾದಂತಹ ಅನೇಕ ಪ್ರಧಾನ ಉತ್ತರ ಬೆಳಕು ಕಾಣಿಸಿಕೊಳ್ಳುವ ಸ್ಥಳಗಳಂತೆಯೇ ಅದೇ ಅಕ್ಷಾಂಶದಲ್ಲಿದೆ. ಕಳೆದ ವಾರ ಸ್ಕಾಟ್‌ಲ್ಯಾಂಡ್‌ನಲ್ಲಿ ಈ ಉತ್ತರದ ಬೆಳಕಿನ ವೀಕ್ಷಣೆಯ ನಂತರ, ಟ್ವಿಟರ್‌ನಲ್ಲಿ ಅರೋರಾ ಬೋರಿಯಾಸ್‌ನ ಅದ್ಭುತ ಚಿತ್ರಗಳೇ ತುಂಬಿದ್ದವು.
100 ವರ್ಷ ಹಳೆಯ ಒಣಗಿದ ಮರದಿಂದ ಹರಿಯುತ್ತೆ ನೀರು
ಡಿಸೆಂಬರ್ 2020 ರಲ್ಲಿ, ಛಾಯಾಗ್ರಾಹಕ ನೇಟ್ ಲ್ಯೂಬೆ ( Nate Luebbe) ಅವರ ಸೆರೆ ಹಿಡಿದ ಉತ್ತರ ದೀಪಗಳ ವೀಡಿಯೊಗಳು ವೈರಲ್ ಆಗಿದ್ದವು. ಈ ವಿಡಿಯೋ ಸೆರೆ ಹಿಡಿಯುವ ಸಲುವಾಗಿ ಲ್ಯೂಬೆ ಅವರು ಅಲಾಸ್ಕಾದ (Alaska) ಫೇರ್‌ಬ್ಯಾಂಕ್ಸ್‌ಗೆ (Fairbanks) ಪ್ರಯಾಣಿಸಿದ್ದರು. ಅಲ್ಲಿ ಅವರು ಹವಾಮಾನ ತಿಳಿಯಲು ಹಾರಿ ಬಿಡುವ ಬಲೂನ್‌ಗೆ ಕ್ಯಾಮೆರಾವನ್ನು ಜೋಡಿಸಿ ಅದನ್ನು ಆಕಾಶದಲ್ಲಿ ಹಾರಿ ಬಿಟ್ಟರು. ಪರಿಣಾಮವಾಗಿ ಕಡು ಹಸಿರು ಬಣ್ಣದ ನೈಸರ್ಗಿಕ ಬೆಳಕಿನ ಚಮತ್ಕಾರದ ಒಂದು ಮೋಡಿ ಮಾಡುವ ನೋಟ ಕ್ಯಾಮರಾದಲ್ಲಿ ಸೆರೆಯಾಯ್ತು. ಜಪಾನ್‌ನ 'ಹಿಮ ರಾಕ್ಷಸರ'ತೆಯೇ (snow monsters) ಉತ್ತರದ ದೀಪಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ನೈಸರ್ಗಿಕ ವಿದ್ಯಮಾನವಾಗಿದೆ.