ಭಾರತದ ತಾಕೀತು ಬಳಿಕ ಮೆತ್ತಗಾದ ಕೆನಡಾ: ಖಲಿಸ್ತಾನಿಗಳ ಓಸಿಐ ಸ್ಥಾನಮಾನ ಕಟ್‌?

ಭಾರತದಲ್ಲಿರುವ ಕೆನಡಾದ 41 ರಾಯಭಾರಿಗಳನ್ನು ಮರಳಿ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮೆತ್ತಗಾಗಿರುವ ಕೆನಡಾ ಸರ್ಕಾರ, ಈ ವಿಷಯದಲ್ಲಿ ಭಾರತದ ಜೊತೆ ಬಹಿರಂಗ ಜಟಾಪಟಿ ನಡೆಸುವ ಬದಲು ಖಾಸಗಿಯಾಗಿ ಮಾತುಕತೆ ನಡೆಸಲು ಒಲವು ಹೊಂದಿರುವುದಾಗಿ ಹೇಳಿದೆ.

Canada softened after Indias warning indian govt cuts Khalistanis OCI status akb


ಒಟ್ಟಾವಾ: ಭಾರತದಲ್ಲಿರುವ ಕೆನಡಾದ 41 ರಾಯಭಾರಿಗಳನ್ನು ಮರಳಿ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮೆತ್ತಗಾಗಿರುವ ಕೆನಡಾ ಸರ್ಕಾರ, ಈ ವಿಷಯದಲ್ಲಿ ಭಾರತದ ಜೊತೆ ಬಹಿರಂಗ ಜಟಾಪಟಿ ನಡೆಸುವ ಬದಲು ಖಾಸಗಿಯಾಗಿ ಮಾತುಕತೆ ನಡೆಸಲು ಒಲವು ಹೊಂದಿರುವುದಾಗಿ ಹೇಳಿದೆ.

ಖಲಿಸ್ತಾನ್‌ ಉಗ್ರ ನಿಜ್ಜರ್‌ ಹತ್ಯೆ ವಿಷಯದಲ್ಲಿ ಭಾರತದ ಮೇಲೆ ಬಹಿರಂಗವಾಗಿ ಆರೋಪ ಮಾಡಿ ಜಗಳ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Canadian Prime Minister Justin Trudeau) ವರ್ತನೆಗೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಈ ವಿಷಯದಲ್ಲಿ ಕೆನಡಾ ನೀತಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ‘ನಾವು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಕೆನಡಾದ ರಾಯಭಾರಿಗಳ ಸುರಕ್ಷತೆ ನಮಗೆ ಹೆಚ್ಚು ಗಂಭೀರ ವಿಷಯವಾಗಿದೆ. ಅಲ್ಲದೇ ರಾಜತಾಂತ್ರಿಕ ಮಾತುಕತೆಗಳು ಖಾಸಗಿಯಾಗಿದ್ದಾಗ ಅವು ಅತ್ಯುತ್ತಮವಾಗಿರುತ್ತವೆ’ ಎಂದು ಹೇಳಿದ್ದಾರೆ.

ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ

ಭಾರತ ಕೆನಡಾದಲ್ಲಿ 21 ರಾಜತಾಂತ್ರಿಕ ಸಿಬ್ಬಂದಿ (Canadian ambassadors) ಹೊಂದಿದೆ. ಆದರೆ ಕೆನಡಾ ಭಾರತದಲ್ಲಿ 62 ಸಿಬ್ಬಂದಿ ಹೊಂದಿದೆ. ಆದರೆ ಇತ್ತೀಚಿನ ಉಭಯ ದೇಶಗಳ ನಡುವಿನ ಸಂಘರ್ಷದ ಬಳಿಕ ಉಭಯ ದೇಶಗಳು ರಾಜತಾಂತ್ರಿಕ ಸಿಬ್ಬಂದಿ ವಿಷಯದಲ್ಲಿ ಸಮಾನತೆ ಹೊಂದಿರಬೇಕು ಎಂದು ಪ್ರತಿಪಾದಿಸಿದ್ದ ಭಾರತ ಹೆಚ್ಚುವರಿ 41 ಸಿಬ್ಬಂದಿಗಳನ್ನು ಮರಳಿ ಕರೆಸಿಕೊಳ್ಳಲು ಅ.10ರ ಗಡುವು ನೀಡಿತ್ತು.

ಲೇಸರ್‌ ಫೇಶಿಯಲ್‌ ಎಫೆಕ್ಟ್‌: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ

ಖಲಿಸ್ತಾನಿಗಳ ಓಸಿಐ ಸ್ಥಾನಮಾನ ಕಟ್‌?

ನವದೆಹಲಿ: ಭಾರತ ವಿರೋಧಿ ಚಟುವಟಿಕೆ ನಿಗ್ರಹಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕೆನಡಾಕ್ಕೆ ತೆರಳುವವರಿಗೆ ವೀಸಾ ನೀಡಿಕೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದ ಭಾರತ ಸರ್ಕಾರ, ಇದೀಗ, ವಿದೇಶಗಳಲ್ಲಿದ್ದುಕೊಂಡು ಭಾರತ ವಿರೋಧಿ ಕೃತ್ಯ ನಡೆಸುತ್ತಿರುವವರ ‘ಸಾಗರೋತ್ತರ ಭಾರತೀಯ ಪ್ರಜೆ’(ಓಸಿಐ) ಸ್ಥಾನಮಾನ ರದ್ದುಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಮೊದಲ ಹಂತದಲ್ಲಿ ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆಗಳಲ್ಲಿ ನಿರತ ಕೆಲ ವ್ಯಕ್ತಿಗಳ ವಿರುದ್ಧ ಇಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ‘ಖಲಿಸ್ತಾನದ ಬಾವುಟ ಹಿಡಿದು ಭಾರತ ವಿರೋಧಿ ಘೋಷಣೆಗಳನ್ನು ಕೂಗುವುದು ಮತ್ತು ಭಾರತದ ಕೃಷಿ ಪ್ರದೇಶಗಳಿಂದ ಆದಾಯ ಗಳಿಸುವುದು ಒಟ್ಟಿಗೆ ಸಾಗುವುದು ಸಾಧ್ಯವಿಲ್ಲ. ಹೀಗಾಗಿ ಇಂಥವರ ವಿರುದ್ಧ ಶಿಸ್ತು ಕ್ರಮ ಅಗತ್ಯ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಅಕ್ಷತಾ

ಸಾಗರೋತ್ತರ ಭಾರತೀಯ ಸ್ಥಾನಮಾನ ರದ್ದುಪಡಿಸಿದರೆ ಅವರು ಭಾರತದಲ್ಲಿ ಯಾವುದೇ ಆಸ್ತಿ ಖರೀದಿಸುವುದು, ಭಾರತದಲ್ಲಿನ ತಮ್ಮ ಆಸ್ತಿಗಳಿಂದ ಆದಾಯ ಸ್ವೀಕರಿಸುವುದಕ್ಕೆ ಬ್ರೇಕ್‌ ಬೀಳುತ್ತದೆ.

ಇದರ ಜೊತೆಗೆ ವಿಶ್ವದ ಹಲವು ದೇಶಗಳ ಭಾರತೀಯ ರಾಯಭಾರ ಕಚೇರಿಗಳ ಮುಂದೆ ಖಲಿಸ್ತಾನದ ಪರ ಘೋಷಣೆ ಕೂಗುವಿಕೆ ಹೆಚ್ಚುತ್ತಿದ್ದು, ಅದರಲ್ಲಿ ಭಾರತದಿಂದ ಅಧ್ಯಯನ ವೀಸಾ (Study Visa) ಪಡೆದ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಮೇಲೆ ಹಂತ ಹಂತವಾಗಿ ಪ್ರಕರಣದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

 

Latest Videos
Follow Us:
Download App:
  • android
  • ios