ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ
ಪೆನ್ಸಿಲ್ವೇನಿಯಾದ ಐತಿಹಾಸಿಕ ಮಮ್ಮಿ 'ಸ್ಟೋನ್‌ಮ್ಯಾನ್ ವಿಲ್ಲಿ'ಯನ್ನು 128 ವರ್ಷಗಳ ಸುಧೀರ್ಘ ಪ್ರದರ್ಶನಕ್ಕಿಟ್ಟ ಬಳಿಕ ಅಂತಿಮವಾಗಿ ಅದ್ದೂರಿಯಾಗಿ ಸಮಾಧಿ ಮಾಡಲು ನಿರ್ಧರಿಸಲಾಗಿದೆ.
Stoneman Willie, Oldest Mummy,
ಮದ್ಯವ್ಯಸನಿ ಜೇಬುಗಳ್ಳನಾಗಿದ್ದ ಸ್ಟೋನ್‌ಮ್ಯಾನ್ ವಿಲ್ಲಿ ಎಂದೇ ಪ್ರೀತಿಯಿಂದ ಕರೆಯಲ್ಪಟ್ಟಿದ್ದ ವಿಲ್ಲಿ ಮಮ್ಮಿಯಾಗಿ ಮಾರ್ಪಟ್ಟಿದ್ದೆ ವಿಚಿತ್ರ. ಹೊಸದಾದ ಎಂಬಾಮಿಂಗ್ ಎಂದರೆ ಶವಗಳನ್ನು ಸಂರಕ್ಷಿಸುವ ತಂತ್ರಜ್ಞಾನವನ್ನು ಪ್ರಯೋಗ ಮಾಡುತ್ತಿದ್ದ (ಮೋರ್ಟಿಶಿಯನ್‌ಗೆ) ಶವಗಾರದ ಸಿಬ್ಬಂದಿಯೋರ್ವ ಸ್ಟೋನ್‌ಮ್ಯಾನ್ ವಿಲ್ಲಿ ಶವವನ್ನು ಆಕಸ್ಮಿಕವಾಗಿ ತನ್ನ ಈ ಪ್ರಯೋಗಕ್ಕೆ ಬಳಸಿದ್ದ.
Stoneman Willie, Oldest Mummy,
ಇದಾದ ನಂತರ ಸುಮಾರು 128 ವರ್ಷಗಳ ಕಾಲ ಪೆನ್ಸಿಲ್ವೇನಿಯಾದ ಶವಾಗಾರದಲ್ಲಿ ಈ ಮಮ್ಮಿಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಈಗ ಈ ಶವವನ್ನು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದು, ಸತ್ತು 128 ವರ್ಷಗಳ ನಂತರ ಸ್ಟೋನ್‌ಮ್ಯಾನ್ ವಿಲ್ಲಿಗೆ ಸಮಾಧಿ ಭಾಗ್ಯ ದೊರಕಿದೆ.
Stoneman Willie, Oldest Mummy,
1895ರಲ್ಲಿ ನವಂಬರ್ 19 ರಂದು ಈಗ ಸ್ಟೋನ್‌ಮ್ಯಾನ್ ವಿಲ್ಲಿ ಎಂದು ಕರೆಯಲ್ಪಡುವ, ಆದರೆ ಆಗ ಅಪರಿಚಿತನಾಗಿದ್ದ ವ್ಯಕ್ತಿ ರೀಡಿಂಗ್ ಜೈಲಿನಲ್ಲಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದ ತನ್ನ 37ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದ.
Stoneman Willie, Oldest Mummy,
ಆಗ ಅಲ್ಲಿ ಮೃತ ಶವಗಳಿಗೆ ಸಂಸ್ಕಾರದ ಕೆಲಸ ಮಾಡುತ್ತಿದ್ದ ಅಂಡರ್‌ಟೇಕರ್ ಥಿಯೋಡರ್ ಔಮನ್ ಎಂಬಾತ ಶವಗಳನ್ನು ಹಾಳಾಗದಂತೆ ಇಡುವ ಪ್ರಯೋಗ ಮಾಡುತ್ತಿದ್ದ. ಆತ ಈ ಅಪರಿಚಿತ ಶವದ ಮೇಲೆ ಪ್ರಯೋಗ ಮಾಡುತ್ತಿದ್ದ, ಈ ಬಾರಿ ಆತನ ಪ್ರಯೋಗ ಯಶಸ್ವಿಯಾಗಿತ್ತು, ಅಪರಿಚಿತ ಶವಕ್ಕೆ ಮಮ್ಮಿ ರೂಪ ಸಿಕ್ಕಿತ್ತು..!
Stoneman Willie, Oldest Mummy,
ಕಳೆದೊಂದು ಶತಮಾನದಿಂದ ಸ್ಟೋನ್ಮನ್ ವಿಲ್ಲಿ ಎಂದು ಕರೆಯಲ್ಪಡುವ ಈ ಮಮ್ಮಿ ಈ ಪ್ರದೇಶದಲ್ಲಿ ಸೆಲೆಬ್ರಿಟಿ ಸ್ಥಾನಮಾನವನ್ನು ಪಡೆದಿದೆ. ಇಂತಹ ಮಮ್ಮಿಗೆ ಈಗ ಕೊನೆಗೂ ಸಮಾಧಿಯಾಗುವ ಭಾಗ್ಯ ಸಿಕ್ಕಿದೆ. ನಾವು ಈತನಿಗೆ ಮಮ್ಮಿ ಎನ್ನಲಾಗುತ್ತಿಲ್ಲ, ಈತನನ್ನು ನಾವು ನಮ್ಮ ಸ್ನೇಹಿತ ವಿಲ್ಲಿ ಎಂದೇ ಪರಿಚಯಿಸುತ್ತೇವೆ ಎಂದು ಈ ಅಂತ್ಯಸಂಸ್ಕಾರದ ಹೊಣೆ ಹೊತ್ತ ಬ್ಲಾಂಕೆನ್‌ಬಿಲ್ಲೆರ್ ಹೇಳಿದ್ದಾರೆ.
Stoneman Willie, Oldest Mummy,
ಈ ಮಮ್ಮಿ ಅಮೆರಿಕಾದ ಅತ್ಯಂತ ಪುರಾತನವಾದ ಮಮ್ಮಿಗಳಲ್ಲಿ ಒಂದು ಎನಿಸಿದ್ದು, ಶವಪೆಟ್ಟಿಗೆಯಲ್ಲಿ ಈಗ ಶಾಶ್ವತವಾಗಿ ಮಲಗುತ್ತಿದೆ. ಶವ ಸಂಸ್ಕಾರಕ್ಕೂ ಮೊಲದು ಈ ಮಮ್ಮಿಗೆ ಶೂಟು ಬೂಟು ತೊಡಿಸಿ ಕುತ್ತಿಗೆ ಸುತ್ತ ಟೈ ಕಟ್ಟಿ ಸುಂದರವಾಗಿ ಅಲಂಕರಿಸಿ ಭಾವುಕವಾಗಿ ಬಿಳ್ಕೊಡಲಾಗುತ್ತಿದೆ. ಅಪರಿಚಿತನಾಗಿ ಸತ್ತು ಮಮ್ಮಿಯಾಗಿ ಖ್ಯಾತಿ ಗಳಿಸಿ ಸ್ಟೋನ್‌ಮನ್ ವಿಲ್ಲಿ ಎಂಬ ಖ್ಯಾತಿ ಗಳಿಸಿದ ಈ ಮಮ್ಮಿಯ ಹಲ್ಲು ಕೂದಲು ಉಗುರು ಸಹಜ ಸ್ಥಿತಿಯಲ್ಲಿದ್ದು, ಚರ್ಮ ಮಾತ್ರ ಕಂದು ಬಣ್ಣಕ್ಕೆ ತಿರುಗಿದೆ.
Stoneman Willie, Oldest Mummy,
ಸ್ಟೋನ್ ಮ್ಯಾನ್ ವಿಲ್ಲಿ ಅಪರಿಚಿತನಾಗಿಯೇ ಉಳಿಯಲು ಬಯಸಿದ್ದರಿಂದ ಹಲವು ವರ್ಷಗಳ ಕಾಲ ಈತನ ಕುಟುಂಬವನ್ನು ಹುಡುಕಲು ಪ್ರಯತ್ನಿಸಿದ್ದರೂ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ,
Stoneman Willie, Oldest Mummy,
ಜೇಬುಗಳ್ಳ ಮದ್ಯವ್ಯಸನಿ ಎಂಬೆಲ್ಲಾ ಕುಖ್ಯಾತಿ ಗಳಿಸಿದ್ದ ಈತನಿಗೆ ತನ್ನ ಕುಟುಂಬದವರ ಪರಿಚಯ ತಿಳಿಸಿ ಅವರನ್ನು ಅವಮಾನಿಸುವುದಕ್ಕೆ ಇಷ್ಟವಿರಲಿಲ್ಲವಂತೆ ಹೀಗಾಗಿ ಸಾವಿನ ಕೊನೆ ಕ್ಷಣದಲ್ಲೂ ಈತ ತನ್ನ ಕುಟುಂಬದ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡದೇ ಅಪರಿಚಿತನಾಗಿಯೇ ಉಳಿದನಂತೆ.
Stoneman Willie, Oldest Mummy,
ಹೀಗಾಗಿ ಸಾವಿನ ನಂತರವೂ ಆತ ನಮ್ಮವ ಎಂದು ಶವ ಪಡೆಯಲು ಯಾರೂ ಬರಲಿಲ್ಲ, ಹೀಗಾಗಿ ಬಂಧುಗಳಿಲ್ಲದವರ ಶವವನ್ನು ಅಂತ್ಯಕ್ರಿಯೆ ನಡೆಸುವ ಶವಗಾರಕ್ಕೆ ಈ ಶವ ತಲುಪಿ ಮಮ್ಮಿಯಾಯ್ತು. ಆದರೆ ಈಗ ಅಂತ್ಯಕ್ರಿಯೆ ನಡೆಸುವ ಸಂಸ್ಥೆ ಈತನ ಗುರುತು ಪತ್ತೆ ಮಾಡಲಾಗಿದೆ ಎಂದು ಹೇಳುತ್ತಿದ್ದು, ಶವ ಸಂಸ್ಕಾರದ ನಂತರದ ಕೆಲ ದಿನಗಳಲ್ಲಿ ಆತನ ಹೆಸರು ಬಹಿರಂಗಪಡಿಸಲಾಗುವುದು ಎಂದು ಹೇಳಿದೆ.