ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

ಬೆಳಕಿನ ನಗರಿ ಪ್ರೇಮ ನಗರಿ ಎಂದೆಲ್ಲಾ ಪ್ರಸಿದ್ಧಿ ಪಡೆದಿರುವ ಪ್ಯಾರಿಸ್‌ ನಗರ ಅನಪೇಕ್ಷಿತ ಅತಿಥಿಗಳ ಹಾವಳಿಯಿಂದ ಸಂಕಟಕ್ಕೀಡಾಗಿದೆ. ಹಾಸಿಗೆಯಲ್ಲಿ ಒಂದೇ ಒಂದು ತಿಗಣೆ ಇದ್ದರೂ ಅಲ್ಲಿ ಮಲಗಲಾಗದು ಹೀಗಿರುವಾಗ ಇಡೀ ನಗರದಲ್ಲಿ ತಿಗಣೆ ಹಾವಳಿಯಾದರೆ ಸಹಿಸೋದು ಹೇಗೆ?

New headache for Paris as it prepares for 2024 Olympics, bedbugs seated Metro airport hotels theaters everywhere in the city akb

ಪ್ಯಾರಿಸ್‌: 2024 ಒಲಿಂಪಿಕ್ಸ್‌ಗೆ  ಪ್ಯಾರಿಸ್‌ ನಗರ ಸಿದ್ಧಗೊಳ್ಳುತ್ತಿದೆ. ಜಗತ್ತಿನೆಲ್ಲೆಡೆಯ ಕ್ರೀಡಾಳುಗಳ ಸ್ವಾಗತಕ್ಕೆ ಪ್ರಣಯ ನಗರಿ ಸಜ್ಜಾಗುತ್ತಿದೆ.  ಆದರೆ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳು ನಗರಕ್ಕೆ ಆಗಮಿಸುವ ಮೊದಲು ನಗರದಲ್ಲಿ ಅತೀಯಾದ ತಿಗಣೆ ಹಾವಳಿ ಶುರುವಾಗಿದ್ದು, ಇದು ಇಲ್ಲಿನ ಆಡಳಿತಕ್ಕೆ ಹೊಸ ತಲೆನೋವಾಗಿದೆ.  ಸಾರ್ವಜನಿಕ ಸಾರಿಗೆ ಬಸ್‌ಗಳು, ಹೊಟೇಲ್‌ಗಳು ರೈಲುಗಳು ಹೀಗೆ ಎಲ್ಲೆಂದರಲ್ಲಿ ತಿಗಣೆ ಹಾವಳಿ ಜೋರಾಗಿದ್ದು, ಹಿಂದೆಂದಿಗಿಂತಲೂ ಅತೀಯಾಗಿ ಕಾಣಿಸಿಕೊಂಡಿರುವ ಇವುಗಳನ್ನು ನಿವಾರಿಸುವುದು ಹೇಗೆ ಎಂಬ ಚಿಂತೆಯಲ್ಲಿದೆ ಸರ್ಕಾರ... 

ಬೆಳಕಿನ ನಗರಿ ಪ್ರೇಮ ನಗರಿ ಎಂದೆಲ್ಲಾ ಪ್ರಸಿದ್ಧಿ ಪಡೆದಿರುವ ಪ್ಯಾರಿಸ್‌ ನಗರ ಅನಪೇಕ್ಷಿತ ಅತಿಥಿಗಳ ಹಾವಳಿಯಿಂದ ಸಂಕಟಕ್ಕೀಡಾಗಿದೆ. ಹಾಸಿಗೆಯಲ್ಲಿ ಒಂದೇ ಒಂದು ತಿಗಣೆ ಇದ್ದರೂ ಅಲ್ಲಿ ಮಲಗಲಾಗದು ಹೀಗಿರುವಾಗ ಇಡೀ ನಗರದಲ್ಲಿ ತಿಗಣೆ ಹಾವಳಿಯಾದರೆ ಸಹಿಸೋದು ಹೇಗೆ? ಇಡೀ ಪ್ಯಾರಿಸ್ ನಗರವನ್ನು ತಿಗಣೆಗಳು ಕಾಡುತ್ತಿವೆ. ಬಸ್‌ ರೈಲು ಮುಂತಾದ ಸಾರಿಗೆ ವಾಹನಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದು, ಇದರಿಂದ ಅಲ್ಲಿನ ಜನರಿಗೆ ಪೀಕಲಾಟ ಶುರುವಾಗಿದೆ.  

 ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ

ರಕ್ತ ಹೀರುವ ಈ ಸಣ್ಣ ಕೀಟ, ಫ್ರೆಂಚ್ ರಾಜಧಾನಿಯ ಮೆಟ್ರೋ  ರೈಲುಗಳು, ಸಿನಿಮಾ ಥಿಯೇಟರ್‌ಗಳು ಹಾಗೂ ಇಲ್ಲಿನ ಚಾರ್ಲ್ಸ್ ಡಿ ಗೌಲ್ಲೆ ಏರ್‌ಪೋರ್ಟ್‌ನಲ್ಲೂ ಪ್ರಯಾಣಿಕರನ್ನು ಬಿಡದೆ ಕಾಡುತ್ತಿವೆ ಈ ತಿಗಣೆಗಳು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ಯಾರಿಸ್ ನಗರದ ಡೆಪ್ಯೂಟಿ ಮೇಯರ್ ಇಮಾನ್ಯುವೆಲ್ ಗ್ರೇಗೋಯಿರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ತಿಗಣೆಗಳಿಂದ ಯಾರೊಬ್ಬರೂ ಸುರಕ್ಷಿತರಲ್ಲ ಎಂದು ಬರೆದುಕೊಂಡಿದ್ದಾರೆ. ಈ ತಿಗಣೆಗಳ ನಿರ್ಮೂಲನೆಗೆ ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಇರುವ ಸಮುದಾಯಿಕ ಹೋರಾಟದ ಸಂಘಟಿತ ಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 

ಫ್ರಾನ್ಸ್ 2024 ರಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಪಂದ್ಯಗಳನ್ನು ಸ್ವಾಗತಿಸಲು ತಯಾರಿ ನಡೆಸುತ್ತಿರುವ ಕಾರಣ ಈ ಪಿಡುಗಿನ ವಿರುದ್ಧ ತುರ್ತಾಗಿ ಕ್ರಿಯಾ ಯೋಜನೆಯನ್ನು ಜಾರಿಗೆ ತರಬೇಕಾಗಿದೆ ಎಂದು ಮೇಯರ್‌ ಗ್ರೆಗೊಯಿರ್ ಅವರು ಪ್ರಧಾನಿ ಎಲಿಜಬೆತ್ ಬೋರ್ನ್ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಕೂಡ ಸಾರ್ವಜನಿಕ ಸಾರಿಗೆಯಲ್ಲಿ ತಿಗಣೆ ಹಾವಳಿ ನಿವಾರಣೆಗೆ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 

ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!

ಇನ್ನು ಈ ತಿಗಣೆಯಿಂದ ಕಚ್ಚಿಸಿಕೊಂಡಿರುವ ವ್ಯಕ್ತಿಯೊಬ್ಬರು, ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದ ವೇಳೆ ನನ್ನ ಬೆನ್ನಿಡಿ ತಿಗಣೆ ಕಚ್ಚಿ ಗಾಯಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ಆಹಾರ, ಪರಿಸರ ಮತ್ತು ವೃತ್ತಿ ಆರೋಗ್ಯ ಮತ್ತು ಸುರಕ್ಷತೆಗಾಗಿ ಕೆಲಸ ಮಾಡುವ ಫ್ರೆಂಚ್ ಏಜೆನ್ಸಿ Ansesನ ಸಮೀಕ್ಷೆಯ ಪ್ರಕಾರ, '2017 ಮತ್ತು 2022 ರ ನಡುವೆ 10 ರಲ್ಲಿ ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಜನ ಈ ತಿಗಣೆ ಹಾವಳಿಯಿಂದ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲಿನ ಮಯೋ ಕ್ಲಿನಿಕ್ ಪ್ರಕಾರ ಈ ತಿಗಣೆಗಳು, ಅಲರ್ಜಿಯ ಹೊರತಾಗಿ ಬೇರಾವುದೇ ಅಪಾಯವನ್ನು ಹೊಂದಿಲ್ಲ, ಆದರೆ ಸೇಬಿನ ಬೀಜದ ಗಾತ್ರದಲ್ಲಿರುವ ಕೆಂಪು ಕಂದು ಬಣ್ಣದಲ್ಲಿರುವ ಈ ಕೀಟ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಹೇಳಿದೆ.

ಮ್ಯಾಚ್‌ ನೋಡಲು ಮೊಸಳೆಯೊಂದಿಗೆ ಸ್ಟೇಡಿಯಂಗೆ ಬಂದ ಅಭಿಮಾನಿ: ದಂಗಾದ ಭದ್ರತಾ ಸಿಬ್ಬಂದಿ

Latest Videos
Follow Us:
Download App:
  • android
  • ios