ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ

ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಇದೇ ಮೊದಲ ಬಾರಿಗೆ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಪತಿ ರಿಷಿ ಸುನಕ್‌ ಅವರನ್ನು ತಮ್ಮ ‘ಆತ್ಮೀಯ ಗೆಳೆಯ’ ಎಂದು ಹೇಳಿದ್ದಾರೆ.

Infosys Narayana Murthy daughter Akshata Murthy took the political platform for the first time for her husband Rishi Sunak akb

ಲಂಡನ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಇದೇ ಮೊದಲ ಬಾರಿಗೆ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಪತಿ ರಿಷಿ ಸುನಕ್‌ ಅವರನ್ನು ತಮ್ಮ ‘ಆತ್ಮೀಯ ಗೆಳೆಯ’ ಎಂದು ಹೇಳಿದ್ದಾರೆ. ಬ್ರಿಟನ್‌ ಪ್ರಧಾನಿಯಾದ ಬಳಿಕ ಮೊದಲ ಬಾರಿ ರಿಷಿ ಸುನಕ್‌ ಕನ್ಸರ್ವೇಟಿವ್‌ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದು, ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ಷತಾ ಮಾತನಾಡಿದ್ದಾರೆ. ನಾನು ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ರಿಷಿಗೆ ಗೊತ್ತಿರಲಿಲ್ಲ. ನಾನು ಮತ್ತು ರಿಷಿ ಆತ್ಮೀಯ ಸ್ನೇಹಿತರು. ನಾವು ಯಾವಾಗಲೂ ಒಂದೇ ಆಗಿರುತ್ತೇವೆ. ಇಂದಲ್ಲದೇ ಮತ್ತೆ ಯಾವಾಗ ನಾನು ನನ್ನ ಬೆಂಬಲವನ್ನು ಸೂಚಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಮಗಳಾದ  43 ವರ್ಷದ ಅಕ್ಷತಾ, ಪತಿ ಸುನಕ್ (Rishi Sunak) ಅವರ ಅನೇಕ ಸಾಧನೆಗಳ ಬಗ್ಗೆ  ಈ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು ಮತ್ತು ಅವರ ಸುನಕ್ ಅವರ ಪ್ರಾಮಾಣಿಕತೆ ಮತ್ತು ಸಮಗ್ರತೆ ಅವರಿಬ್ಬರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಾಗಿ ಮೊದಲ ಬಾರಿ ಭೇಟಿಯಾದಾಗ ಅವರನ್ನು ಹೇಗೆ ಆಕರ್ಷಿಸಿತ್ತು ಎಂಬುದನ್ನು ಅಕ್ಷತಾ ಹೇಳಿಕೊಂಡರು.

ಲೇಸರ್‌ ಫೇಶಿಯಲ್‌ ಎಫೆಕ್ಟ್‌: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ

ನಾವಿಬ್ಬರೂ ಅಮೆರಿಕದಲ್ಲಿ (US) ವಿದೇಶದಲ್ಲಿ ಓದುತ್ತಿದ್ದಾಗ 24 ವರ್ಷದವರಾಗಿದ್ದಾಗ ಪರಸ್ಪರ ಭೇಟಿಯಾದೆವು. ಮೊದಲಿನಿಂದಲೂ, ನಾನು ಅವನ ಎರಡು ವಿಚಾರಗಳಿಂದ ಅಚ್ಚರಿಗೊಳಗಾಗಿದ್ದೆ, ಒಂದು ಅವನ ಮನೆ ಮತ್ತೊಂದು ಯುನೈಟೆಡ್ ಕಿಂಗ್‌ಡಮ್‌ನ ಮೇಲಿನ ಅವನ ಆಳವಾದ ಪ್ರೀತಿ ಮತ್ತು ಸಾಧ್ಯವಾದಷ್ಟು ಜನರಿಗೆ ಅವಕಾಶ ಸಿಗಬೇಕು ಎಂಬ ಅವನ ಪ್ರಾಮಾಣಿಕ ಬಯಕೆ. ಇದೇ ಅವರಿಗೆ ಸಂಪೂರ್ಣವಾಗಿ ಶಕ್ತಿ ತುಂಬಿತು. ರಿಷಿ  ಜೊತೆಗಿರಬೇಕು ಎನ್ನುವುದು ನನ್ನ ಜೀವನದ ಅತ್ಯಂತ ಸುಲಭವಾದ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ. 

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

 

Latest Videos
Follow Us:
Download App:
  • android
  • ios