ಲೇಸರ್‌ ಫೇಶಿಯಲ್‌ ಎಫೆಕ್ಟ್‌: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ

ಸುಮಾರಾಗಿ ಚೆನ್ನಾಗಿಯೇ ಇದ್ದ ಹುಡುಗಿಯೊಬ್ಬಳು ಇನ್ನಷ್ಟು ಚೆಂದ ಕಾಣಲು ಹೋಗಿ ಮುಖಕ್ಕೆ ಲೇಸರ್‌ ಫೇಶಿಯಲ್‌ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದು, ಮುಖ ವಿರೂಪವಾಗಿದೆ.

Thailand tv hostar woman's face turned as Burned after Laser Treatment Goes wrong akb

ಬ್ಯಾಕಾಂಕ್: ಇದ್ದಿದ್ದು ಹೋಯ್ತು ಮದ್ದಿನ ಗುಣದಿಂದ ಎಂಬ ಲೋಕರೂಢಿಯ ಮಾತನ್ನು ನೀವು ಕೇಳಿರುತ್ತೀರಿ, ಅದೇ ರೀತಿ ಇಲ್ಲೊಬ್ಬಳು ಹುಡುಗಿ ಇದ್ದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಹೋಗಿ ಮುಖವೇ ವಿರೂಪವಾಗಿದೆ. ಬ್ಯಾಂಕಾಕ್‌ನಲ್ಲಿ ಈ ಘಟನೆ ನಡೆದಿದ್ದು, ಈಕೆಯ ಕತೆ ಈಗ ವೈರಲ್ ಆಗಿದೆ. ಕೆಲವರಿಗೆ ಎಷ್ಟು ಚೆಂದ ಇದ್ದರೂ ತಾನು ಇನ್ನಷ್ಟು ಚಂದ ಕಾಣಬೇಕು. ಸೌಂದರ್ಯದಿಂದಲೇ ಜಗವ ಆಳಬೇಕು ಎಂಬ ಆಶೆ ಹಲವರದ್ದು, ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಕೈಗೆ ಸಿಗಬಹುದಾದಂತಹ ಎಲ್ಲಾ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ಮೂಲತ ಇರುವ ಬಣ್ಣವನ್ನು  ಬದಲಿಸುತ್ತಾ ಗೊತ್ತಿಲ್ಲ? ಆದರೆ ಅದರಿಂದ ಅಡ್ಡ ಪರಿಣಾಮಗಳು ಮಾತ್ರ ಬೇಕಾದಷ್ಟು ಆಗಿದೆ.

ಅದೇ ರೀತಿ ಸುಮಾರಾಗಿ ಚೆನ್ನಾಗಿಯೇ ಇದ್ದ ಹುಡುಗಿಯೊಬ್ಬಳು ಇನ್ನಷ್ಟು ಚೆಂದ ಕಾಣಲು ಹೋಗಿ ಮುಖಕ್ಕೆ ಲೇಸರ್‌ ಫೇಶಿಯಲ್‌ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದು, ಮುಖ ವಿರೂಪವಾಗಿದೆ. ಥೈಲ್ಯಾಂಡ್‌ನ (Thailand) ಟಿವಿಯೊಂದರ ನಿರೂಪಕಿಯಾಗಿ ಕೆಲಸ ಮಾಡುವ ಇಸ್ಸದಾ ಐಸಿರಿ ಎಂಬಾಕೆಯೇ ಹೀಗೆ ಏನೋ ಮಾಡಲು ಹೋಗಿ ಇರುವುದನ್ನು ಕಳೆದುಕೊಂಡ ಬೆಡಗಿ.  ಟಿವಿ ಪರದೆಯ ಮೇಲೆ ನಿರೂಪಕಿಯಾಗಿ ಕೆಲಸ ಮಾಡುತ್ತಿರುವವರಿಗೆ ಸೌಂದರ್ಯವೇ ಬಂಡವಾಳವಾಗಿದ್ದು, ಇದರಿಂದ ತಾನು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದೇನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ. 

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

ಆಗಿದ್ದೇನು?
ಇಸ್ಸದಾ ಐಸಿರಿ ಬ್ಯಾಂಕಾಕ್‌ನ  ಕ್ಲಿನಿಕೊಂದರಲ್ಲಿ ತಿಂಗಳ ಹಿಂದೆ ಮೊಡವೆ ಬರದಂತೆ ಮಾಡಲು ಲೇಸರ್‌ ಚಿಕಿತ್ಸೆಗೆ (Laser Treatment) ಒಳಗಾಗಿದ್ದರು. ಚಿಕಿತ್ಸೆಗೆ ಒಳಗಾಗುವ ವೇಳೆಯೇ ಆಕೆಗೆ ಮುಖದಲ್ಲಿ ಸುಟ್ಟು ಹೋದಂತಹ ಅನುಭವ ಆಗಿತ್ತು. ಆದರೆ ಆಕೆ ಇದು ಚಿಕಿತ್ಸೆಯ ಭಾಗವೆಂದೇ ಭಾವಿಸಿದ್ದಳು. ಆದರೆ ಚಿಕಿತ್ಸೆಯ ನಂತರ ಸೌಂದರ್ಯ (Beauty) ಹೆಚ್ಚಾಗುವ ಬದಲು ಮುಖ ಅಲ್ಲಲ್ಲಿ ಸುಟ್ಟು ಹೋದಂತೆ ಕಪ್ಪು ಕಪ್ಪು ಆಗಲು ಶುರುವಾಯ್ತು. ಹೀಗಾಗಿ ಇದರಲ್ಲೇನೋ ಎಡವಟ್ಟಾಗಿದೆ ಎಂಬುದು ಅವರ ಅನುಭವಕ್ಕೆ ಬಂತು, ನಂತರ ಕ್ಲಿನಿಕ್‌ನಲ್ಲಿ ವಿಚಾರಿಸಿದಾಗ ಅವರು ಮೌಖಿಕವಾಗಿ ಸೇವಿಸುವ ಸ್ಟೀರಾಯ್ಡ್  ಕೊಡಲು ಮುಂದಾದರು. ಆದರೆ ವೈದ್ಯಕೀಯವಾಗಿ ಇದು ಆರೋಗ್ಯಕಾರಿ ಅಲ್ಲದ ಕಾರಣ ಇವರದನ್ನು ತಿರಸ್ಕರಿಸಿದರು. ಇದಾದ ನಂತರ ಸಂಪೂರ್ಣ ಮುಖದಲ್ಲಿ ಅಲ್ಲಲ್ಲಿ ಸುಟ್ಟ ಗಾಯಗಳಂತೆ ಗಾಯಗಳು ಕಾಣಿಸಿಕೊಂಡವು. 

ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ

ಈ ಘಟನೆಯಿಂದ ನನ್ನ ಕೆಲಸದ ಮೇಲೆ ಭಾರಿ ಪರಿಣಾಮ ಬೀರಿದೆ. ಟಿವಿ ಹೋಸ್ಟ್ ಆಗಿರುವ ಕಾರಣ ನಾನು ದಿನವೂ ಕ್ಯಾಮರಾ ಮುಂದೆ ಹೋಗಬೇಕು. ಜನರ ಮುಂದೆ ಮಾತನಾಡಬೇಕು ಆದರೆ ಈ ಮುಖವಿಟ್ಟುಕೊಂಡು ಹೇಗೆ ಮಾತನಾಡಲಿ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ. ಘಟನೆಯಿಂದ ಆಘಾತಗೊಂಡಿದ್ದಾಗಿ ಆಕೆ ಹೇಳಿದ್ದಾರೆ.  ಇತ್ತ ಈಕೆಗೆ ಚಿಕಿತ್ಸೆ ನೀಡಿದ ಕ್ಲಿನಿಕ್‌ನವರು (Clinic) ಇದನ್ನು ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಮತ್ತೆ ನನಗೆ ಅಲ್ಲಿಗೆ ಹೋಗುವ ಧೈರ್ಯ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.

ಅಲ್ಲದೇ ಅವರು ಪರಿಹಾರ ನೀಡುವುದಾಗಿ ಹೇಳಿ  ಸುಮ್ಮನಾಗಿದ್ದಾರೆ. ಆದರೆ ಈಕೆ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಹೇಳಿಕೊಂಡ ನಂತರ ಎಚ್ಚೆತ್ತ ಕ್ಲಿನಿಕ್ ಕ್ಷಮೆಯಾಚಿಸಿದ್ದಾರೆ ಎಂದು ಈ ನಿರೂಪಕಿ ಹೇಳಿದ್ದಾರೆ. 

ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!

Latest Videos
Follow Us:
Download App:
  • android
  • ios