ಅಂಗಡಿಯಿಂದ ತಂದ ಹೊಸದಾದ ವಸ್ತುಗಳನ್ನು ಅಂದರೆ ಬಟ್ಟೆ ಬೆಡ್‌ಶಿಟ್‌ಗಳು ಮುಂತಾದವುಗಳನ್ನು ತೊಳೆದೇ ಬಳಸಬೇಕು ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತು ಪಕ್ಕಾ ಇಲ್ಲೊಂದು ಕಡೆ ಬೆಡ್‌ಶಿಟ್ ತೊಳೆಯದೇ ಅದನ್ನೇ ಹೊದ್ದುಕೊಂಡು ಮಲಗಿದ್ದರಿಂದ ವ್ಯಕ್ತಿಯೊಬ್ಬನಿಗೆ ಏನಾಯ್ತು ನೋಡಿ..

ಹೊಸ ಬೆಡ್‌ಶಿಟ್ ತೊಳೆಯದೇ ಬಳಸಿದವನಿಗೆ ಆಗಿದ್ದೇನು?

ಅಂಗಡಿಯಿಂದ ತಂದ ಹೊಸದಾದ ವಸ್ತುಗಳನ್ನು ಅಂದರೆ ಬಟ್ಟೆ ಬೆಡ್‌ಶಿಟ್‌ಗಳು ಮುಂತಾದವುಗಳನ್ನು ತೊಳೆದೇ ಬಳಸಬೇಕು ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತು ಪಕ್ಕಾ ಇಲ್ಲೊಂದು ಕಡೆ ಬೆಡ್‌ಶಿಟ್ ತೊಳೆಯದೇ ಅದನ್ನೇ ಹೊದ್ದುಕೊಂಡು ಮಲಗಿದ್ದರಿಂದ ಮುಂಜಾನೆ ಎದ್ದು ನೋಡುತ್ತಿದ್ದಂತೆ ವ್ಯಕ್ತಿಯ ದೇಹವೆಲ್ಲಾ ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದ ಭಯಗೊಂಡ ಆತ ಬೆಚ್ಚಿಬಿದ್ದಿದ್ದು, ತನಗೇನೋ ಆರೋಗ್ಯ ಸಮಸ್ಯೆಯಾಗಿದೆ ಎಂದು ತಿಳಿದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಅಲ್ಲಿ ಆತನನ್ನು ತಪಾಸಣೆ ಮಾಡಿದ ವೈದ್ಯರು ಹೇಳಿದ್ದೇನು ಆತನಿಗೆ ಆಗಿದ್ದೇನು? ಇಲ್ಲಿದೆ ಡಿಟೇಲ್ ಸ್ಟೋರಿ...

Add Asianetnews Kannada as a Preferred SourcegooglePreferred

ಬೆಳಗ್ಗೆದ್ದು ನೋಡಿದಾಗ ನೀಲಿ ಬಣ್ಣಕ್ಕೆ ತಿರುಗಿದ ದೇಹ

ಅಂದಹಾಗೆ ಇಂತಹದೊಂದು ಘಟನೆ ನಡೆದಿರುವುದು ಯುಕೆಯಲ್ಲಿ(United Kingdom) 42 ವರ್ಷದ ಟಾಮಿಲಿಂಚ್‌ ವ್ಯಕ್ತಿಯೊಬ್ಬರು ರಾತ್ರಿ ಹೊಸದಾಗಿ ಕೊಂಡ ಬೆಡ್‌ಶಿಟ್ ಹೊದ್ದು ಮಲಗಿದ್ದ. ಬೆಳಗೆದ್ದು ನೋಡಿದಾಗ ಆತನ ದೇಹ ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗಿತ್ತು. ದೇಹವೆಲ್ಲಾ ಸುಸ್ತಾದಂತೆ ಭಾಸವಾಗುತ್ತಿತ್ತು. ಇದರಿಂದ ಭಯಭೀತರಾದ ಅವರನ್ನು ನೋಡಿ, ಆರೈಕೆದಾರರಾಗಿ ಕೆಲಸ ಮಾಡುವ ಅವರ ಸ್ನೇಹಿತರೊಬ್ಬರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದನ್ನು ನೋಡಿ ವೈದ್ಯಕೀಯ ಸಿಬ್ಬಂದಿ ಕೂಡ ಭಯಗೊಂಡರು. ಅಲ್ಲದೇ ಕೂಡಲೇ ಆತನ ಮೂಗಿಗೆ ಆಮ್ಲಜನಕವನ್ನು ಇರಿಸಿದರು.

ಇದನ್ನೂ ಓದಿ: ಇರಾನ್ ತನಗೆ ದುಬಾರಿ ಮೊತ್ತದ ಹರ್ಮುಜ್ ಉಡುಗೊರೆ ನೀಡಿದೆ ಎಂದ ಟ್ರಂಪ್

ಇದಾದ ನಂತರ ತಪಾಸಣೆಯ ಸಮಯದಲ್ಲಿ, ವೈದ್ಯರು ಟಾಮಿಲಿಂಚ್ ಅವರ ತೋಳುಗಳನ್ನು ಆಲ್ಕೋಹಾಲ್ ಸ್ವ್ಯಾಬ್‌ನಿಂದ ಒರೆಸಿದರು. ಈ ವೇಳೆ ಅವರಿಗೆ ಅಚ್ಚರಿ ಕಾದಿತ್ತು. ಆಲ್ಕೋಹಾಲ್ ಸ್ವ್ಯಾಬ್‌ ಇದ್ದ ಹತ್ತಿ ತಕ್ಷಣವೇ ನೀಲಿ ಬಣ್ಣಕ್ಕೆ ತಿರುಗಿತು. ಇದರಿಂದ ಇವರ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದಕ್ಕೆ ಸರಿಯಾದ ಕಾರಣ ಸಿಕ್ಕಿತ್ತು. ಈ ನೀಲಿ ಬಣ್ಣ ಬಂದಿರೋದು ದೇಹದೊಳಗಿನ ಸಮಸ್ಯೆಯಿಂದ ಅಲ್ಲ ಎಂಬುದನ್ನು ವೈದ್ಯರು ಕೂಡಲೇ ಕಂಡುಕೊಂಡರು. ಅಲ್ಲದೇ ಈ ನೀಲಿ ಬಣ್ಣ ದೇಹಕ್ಕೆ ಹೊರಗಿನಿಂದ ಅಂಟಿರೋದು ಎಂಬುದನ್ನು ವೈದ್ಯರು ಕಂಡುಕೊಂಡರು. ಕೂಡಲೇ ಟಾಮಿಲಿಂಚ್ ಅವರಿಗೆ ಇದು ತನ್ನ ಹೊಸ ಬೆಡ್‌ಶಿಟ್‌ನಿಂದ ಸಿಕ್ಕಿದ ಕೊಡುಗೆ ಎಂಬುದು ಗೊತ್ತಾಗಿದ್ದು, ಈ ವಿಚಾರ ತಿಳಿದ ಆತನ ಸ್ನೇಹಿತರು ಹಾಗೂ ವೈದ್ಯಕೀಯ ಸಿಬ್ಬಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು

ತಾವು ಇತ್ತೀಚೆಗೆ ಹೊಸದಾಗಿ ಖರೀದಿಸಿ ಬಳಸಲು ಪ್ರಾರಂಭಿಸಿದ್ದ ನೇವಿ ಬ್ಲೂ ಬಣ್ಣದ ಬೆಡ್‌ಶೀಟ್‌ಗಳ ಸೆಟ್‌ನ ಬಣ್ಣವು ಮಾಸಿ ಹೋಗಿತ್ತು. ಟಾಮಿ ಲಿಂಚ್ ಇವುಗಳನ್ನು ತೊಳೆಯದೇ ಎರಡು ರಾತ್ರಿ ಇದರಿಂದಾಗಿ ಅದರ ಬಣ್ಣವು ಇವರ ದೇಹಕ್ಕೆ ಅಂಟಿತ್ತು. ಇತ್ತ ವೈದ್ಯಕೀಯ ತಪಾಸಣೆಯಿಂದ ಸಮಾಧಾನಗೊಂಡ ಟಾಮಿಲಿಂಚ್ ತಾನು ಅವತಾರ್ ಚಿತ್ರದ ಪಾತ್ರದಂತೆ ಕಾಣುತ್ತಿದ್ದೇನೆ ಎಂದು ತಮ್ಮನ್ನು ತಾವೇ ತಮಾಷೆ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಈ ಪರಿಸ್ಥಿತಿಯು ಭಯ ಉಂಟುಮಾಡಿದರೂ, ವೈದ್ಯರು ಏನಾಯಿತು ಎಂದು ಅರಿತುಕೊಂಡ ನಂತರ ಆಸ್ಪತ್ರೆಯಲ್ಲಿ ಅದು ಶೀಘ್ರದಲ್ಲೇ ಒಂದು ಹಾಸ್ಯದ ಕ್ಷಣವಾಗಿ ಮಾರ್ಪಟ್ಟಿತು. ವಿಚಾರ ತಿಳಿದ ವೈದ್ಯಕೀಯ ಸಿಬ್ಬಂದಿ ಬಿದ್ದು ಬಿದ್ದು ನಕ್ಕಿದ್ದರು. ತನ್ನ ದೇಹ ನೀಲಿ ಬಣ್ಣಕ್ಕೆ ತಿರುಗಿದೆ ಎಂದು ವಿವರಿಸಲು ಪ್ರಯತ್ನಿಸಿದಾಗ ತುರ್ತು ವಿಭಾಗದಲ್ಲಿದ್ದ ಜನರು ಆಘಾತದಿಂದ ತನ್ನತ್ತ ನೋಡಿದರು ಎಂದು ಲಿಂಚ್ ಹೇಳಿದರು. ಒಟ್ಟಿನಲ್ಲಿ ತೊಳೆಯದೇ ಬಳಸಿದ ಬೆಡ್ಶಿಟ್‌ನಿಂದ ಬೇಸ್ತು ಬೀಳುವಂತಾಗಿತ್ತು.