ಇರಾನ್ ವಿರುದ್ಧದ ಯುದ್ಧಕ್ಕೆ 5 ದಿನಗಳ ಕದನ ವಿರಾಮ ಘೋಷಿಸಿರುವುದಾಗಿ ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಹೊಸ ಹೇಳಿಕೆ ನೀಡಿದ್ದಾರೆ. ಇರಾನ್ ತನಗೆ ಅಗಾಧ ಪ್ರಮಾಣದ ಹಣದಷ್ಟು ಬೆಲೆ ಬಾಳುವ ಉಡುಗೊರೆ ನೀಡಿದೆ ಎಂದು ಹೇಳಿದ್ದಾರೆ.

ಇರಾನ್‌ನಿಂದ ಉಡುಗೊರೆ ಸಿಕ್ಕಿದ್ದಾಗಿ ಹೇಳಿದ ಟ್ರಂಪ್

ವಾಷ್ಟಿಂಗ್ಟನ್: ಇರಾನ್ ವಿರುದ್ಧದ ಯುದ್ಧಕ್ಕೆ 5 ದಿನಗಳ ಕದನ ವಿರಾಮ ಘೋಷಿಸಿರುವುದಾಗಿ ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಹೊಸ ಹೇಳಿಕೆ ನೀಡಿದ್ದಾರೆ. ಇರಾನ್ ತನಗೆ ಅಗಾಧ ಪ್ರಮಾಣದ ಹಣದಷ್ಟು ಬೆಲೆ ಬಾಳುವ ಯುಎಸ್ ಇಸ್ರೇಲ್ ಇರಾನ್ ನಡುವಣ ಯುದ್ಧದಿಂದಾಗಿ ಮುಚ್ಚಲ್ಪಟ್ಟ ಹರ್ಮುಜ್‌ ಜಲಸಂಧಿಗೆ ಸಂಬಂಧಿಸಿದ ದುಬಾರಿ ಉಡುಗೊರೆಯನ್ನು ನೀಡಿದೆ ಎಂದು ಹೇಳಿಕೆ ನೀಡಿದ್ದಾರೆ. ಹರ್ಮುಜ್ ಜಲಸಂಧಿಯ ಬಂದ್‌ನಿಂದಾಗಿ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರಲು ಕಾರಣವಾಗಿತ್ತು. ಆದರೆ ಈಗ ಇರಾನ್ ತನಗೆ ಉಡುಗೊರೆ ನೀಡಿರುವುದಾಗಿ ಹೇಳಿರುವ ಟ್ರಂಪ್ ಇದು ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಅಲ್ಲ, ಇದು ಇಂಧನ ಹಾಗೂ ತೈಲಕ್ಕೆ ಸಂಬಂಧಿಸಿದ್ದು ಎಂದು ಒತ್ತಿ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕಾಗಿ ಇರಾನ್‌ನೊಂದಿಗೆ ಮಾತುಕತೆ ಸಿದ್ಧವಿರುವುದಾಗಿ ಹೇಳಿರುವುದರ ಜೊತೆಗೆ ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಐದು ದಿನಗಳವರೆಗೆ ಮುಂದೂಡಿಕೆ ಮಾಡಿರುವುದಾಗಿ ಹೇಳಿದ ಬೆನ್ನಲ್ಲೇ ಟ್ರಂಪ್‌ನಿಂದ ಈ ಕುತೂಹಲಕಾರಿ ಹೇಳಿಕೆ ಬಂದಿದೆ. ಆದರೆ ಇರಾನ್ ಮಾತ್ರ ಟ್ರಂಪ್ ಮಾತುಕತೆಯ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮಾತುಕತೆಯನ್ನು ನಿರಾಕರಿಸಿದೆ.

ಟ್ರಂಪ್ ಹೇಳಿದ್ದೇನು?

ನಿನ್ನೆ ಅವರು ಅದ್ಭುತವಾದ ಕೆಲಸ ಮಾಡಿದರು, ಅದು ನಿಜಕ್ಕೂ ಅದ್ಭುತ. ಅವರು ನಮಗೆ ಉಡುಗೊರೆಯನ್ನು ನೀಡಿದರು, ಮತ್ತು ಉಡುಗೊರೆ ಇಂದು ಬಂದಿತು. ಮತ್ತು ಅದು ಅಪಾರ ಮೊತ್ತದ ಹಣದ ದೊಡ್ಡ ಉಡುಗೊರೆಯಾಗಿತ್ತು. ಆ ಉಡುಗೊರೆ ಏನೆಂದು ನಾನು ನಿಮಗೆ ಹೇಳುವುದಿಲ್ಲ, ಆದರೆ ಅದು ಬಹಳ ಮಹತ್ವದ ಬಹುಮಾನವಾಗಿತ್ತು. ಅದು ನನಗೆ ಒಂದು ವಿಷಯವನ್ನು ಅರ್ಥೈಸಿತು ನಾವು ಸರಿಯಾದ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ದೇಶಗಳು ಸಂಭಾವ್ಯ ಕದನ ವಿರಾಮದತ್ತ ನೋಡುತ್ತಿರುವಾಗ ಟೆಹ್ರಾನ್ ಕಳುಹಿಸಿದ ಉಡುಗೊರೆ 'ಪ್ರಸ್ತುತ' ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗ ಹಾದುಹೋಗುವ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಇದು ಸಂಬಂಧಿಸಿದೆಯೇ ಎಂದು ಕೇಳಿದಾಗ ಟ್ರಂಪ್ ಹೌದು ಎಂಬರ್ಥದಲ್ಲಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಕದನ ವಿರಾಮದ ಘೋಷಣೆಯ ನಡುವೆ 26ನೇ ದಿನಕ್ಕೆ ಕಾಲಿಟ್ಟ ಅಮೆರಿಕಾ ಇಸ್ರೇಲ್ ಇರಾನ್ ಯುದ್ಧ

ಇದು ಹರಿವು ಮತ್ತು ಜಲಸಂಧಿಗೆ ಸಂಬಂಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರಸ್ತುತ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಇದು ಸಂಬಂಧಿಸಿಲ್ಲ ಎಂದು ಅಮೆರಿಕ ಅಧ್ಯಕ್ಷರು ಒತ್ತಿ ಹೇಳಿದರು ಆದರೆ ಇರಾನಿನ ಕಡೆಯವರು ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಹೇಳಿಕೆ ನೀಡಿದ ಸ್ವಲ್ಪ ಸಮಯದ ನಂತರ, ಅಂತರರಾಷ್ಟ್ರೀಯ ಕಡಲ ಸಂಸ್ಥೆ ಪ್ರಸಾರ ಮಾಡಿದ ಸಂದೇಶದಲ್ಲಿ, ಪರ್ಷಿಯನ್ ಕೊಲ್ಲಿಯನ್ನು ವಿಶ್ವದ ಇತರ ಭಾಗಗಳಿಗೆ ಸಂಪರ್ಕಿಸುವ ದ್ವಾರವಾದ ಹರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಅಪಾಯಕಾರಿ ಅಲ್ಲದ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಇರಾನ್ ಖಚಿತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮಿತ್ರರಾಷ್ಟ್ರಗಳಿಗೆ ಈ ಮಾರ್ಗ ತೆರೆದಿದೆ. ಆದರೆ ಶತ್ರುರಾಷ್ಟ್ರಗಳಿಗೆ ಈ ಮಾರ್ಗದಲ್ಲಿ ಒಂದು ಲಿಟರ್ ತೈಲವನ್ನು ಕೂಡ ಸಾಗಿಸುವುದಕ್ಕೆ ಬಿಡುವುದಿಲ್ಲ ಎಂಬ ಹೇಳಿಕೆ ನೀಡಿತ್ತು. ಆದರೂ ವಿಮಾ ಕಂಪನಿಗಳು ಅಪಾಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅನೇಕ ಹಡಗುಗಳು ಹಿಂದೆ ಸರಿದಿದ್ದವು.

ಇದನ್ನೂ ಓದಿ: ಯುದ್ಧವಿದರೂ ಚಿನ್ನದ ದರ ಕುಸಿತವೇಕೆ? ಭವಿಷ್ಯದಲ್ಲಿ ಏನಾಗಲಿದೆ?