ಸಿಡ್ನಿ(ಜ.03): ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಈ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

ಮಾರಿಸನ್ ಜನವರಿ 13 ರಿಂದ 16 ರವರೆಗೆ ಭಾರತ ಪ್ರವಾಸ ಕೈಗೊಳ್ಳುವವರಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾರಿಸನ್ ಮಹತ್ವದ ಮಾತುಕತೆ ನಡೆಸುವವರಿದ್ದರು.

ಆದರೆ ಸದ್ಯ ತಾವು ಭಾರತ ಪ್ರವಾಸ ಕೈಗೊಳ್ಳಲು ಒಲವು ತೋರುತ್ತಿಲ್ಲ ಎಂದು ಹೇಳಿದ್ದು, ಇದಕ್ಕೆ ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟು ಕಾರಣ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೇ ಮಾರಿಸನ್ ಭಾರತದ ಪ್ರವಸಾದ ಬಳಿಕ ಜಪಾನ್‌ಗೂ ಭೇಟಿ ನೀಡುವ ಉದ್ದೇಶವಿತ್ತು. ಆದರೆ ಈ ಪ್ರವಾಸವನ್ನೂ ಅವರು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಈ ಕುರಿತು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದ್ದು, ದೇಶಕಾರ್ಯ ನಿಮಿತ್ತ ಮಾರಿಸನ್ ತಮ್ಮ ವಿದೇಶ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದೆ.