ನವದೆಹಲಿ(ಅ.26): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಇತ್ತೀಚೆಗೆ ಟಿ20 ಪಂದ್ಯದ ಬ್ರೇಕ್ ವೇಳೆ ವಾಟರ್ ಬಾಯ್ ವಿಶ್ವದ ಗಮನಸೆಳೆದಿದ್ದರು. ಇದೀಗ ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತೀಯರಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ. ಈ ಮನವಿ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ vs ಶ್ರೀಲಂಕಾ ಟಿ20 ; ವಾಟರ್ ಬಾಯ್ ಆಗಿ ಬದಲಾದ ಪ್ರಧಾನಿ!

2020ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಇದಕ್ಕೆ ಈಗಲೇ ತಯಾರಿಗಳು ನಡೆಯುತ್ತಿದೆ. ಇದೀಗ ಟೂರ್ನಿ ಜೊತೆಗೆ ಪ್ರವಾಸೋದ್ಯಮವನ್ನು ಪ್ರಚಾರ ಮಾಡೋ ನಿಟ್ಟಿನಲ್ಲಿ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಕಳೆದ ರಾತ್ರಿಯ ರೋಚಕ ಟಿ20 ಪಂದ್ಯದ ಬಳಿಕ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಆಯೋಜನೆಯನ್ನು ಎದುರುನೋಡುತ್ತಿದ್ದೇನೆ. ಈ ಟೂರ್ನಿಯಿಂದ ಆಸ್ಟ್ರೇಲಿಯಾ ಪ್ರವಾಸೋದ್ಯಮ ಕೂಡ ಹೊಸ ದಿಕ್ಕಿನತ್ತ ಸಾಗಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಟಿ20 ವಿಶ್ವಕಪ್ ಟೂರ್ನಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡುವ ಕುರಿತು ಪರಿಗಣಿಸಲಿ. ಏನು ಹೇಳುತ್ತೀರಿ ಎಂದು ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದರು.

 

ಇದನ್ನೂ ಓದಿ: ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!

ಸ್ಕಾಟ್ ಮಾರಿಸನ್ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಆತ್ಮೀಯ ಗೆಳೆಯ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆಹ್ವಾನ ನೀಡಿದಾಗ, ಖಂಡಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಕ್ರಿಕೆಟಿಗರು, ಪ್ರವಾಸಿಗರು ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದಾರೆ ಎಂಬುದು ನನ್ನ ಭರವಸೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ದೇಶದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ ಮಾರಿಸನ್ ಪ್ರತ್ಯಕ್ಷವಾಗೋ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.  ಪಂದ್ಯದ ನಡುವಿನ ಡ್ರಿಂಕ್ಸ್ ಬ್ರೇಕ್ ವೇಳೆ ಆಸ್ಟ್ರೇಲಿಯಾ ಪ್ರಧಾನಿ ವಾಟರ್ ಬಾಯ್ ಆಗಿ ಮೈದಾನಕ್ಕಿಳಿದಿದ್ದರು. ಆಸೀಸ್ ಕ್ರಿಕೆಟಿಗರಿಗೆ ನೀರು ಸರಬರಾಜು ಮಾಡೋ ಮೂಲಕ ಸರಳತೆ ಮೆರೆದಿದ್ದರು. ಇದೀಗ ಭಾರತೀಯರನ್ನು ಆಹ್ವಾನಿಸೋ ಮೂಲಕ ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಬಾಂಧವ್ಯವನ್ನು ಹೆಚ್ಚಿಸಿದ್ದಾರೆ.