ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್, ಭಾರತದ ರಫೇಲ್, ಸುಖೋಯ್, ಎಸ್-400 ವ್ಯವಸ್ಥೆಗಳನ್ನು ಹೊಡೆದುರುಳಿಸಿದ್ದೇವೆ ಎಂದು ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾಗಿದ್ದಾರೆ. 

ಇಸ್ಲಾಮಾಬಾದ್: 'ಭಾರತ ನಡೆಸಿದ ಆಪರೇಷನ್ ಸಿಂದೂರಕ್ಕೆ ಪ್ರತಿಯಾಗಿ ನಾವು ಶೇ.90 ರಷ್ಟು ಸ್ವದೇಶಿ ತಂತ್ರ ಜ್ಞಾನವನ್ನು ಬಳಸಿ ತಿರುಗೇಟು ನೀಡಿ, ಅದರ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದೆವು. ಅವುಗಳ ಸಹಾಯದಿಂದಲೇ ಭಾರತದ ರಫೇಲ್, ಸುಖೋಯ್, ಮಿಗ್-29, ಮಿರಾಜ್-2000 ಮತ್ತುಎಸ್-400 ವ್ಯವಸ್ಥೆಗಳನ್ನು ಹೊಡೆದುಹಾಕಿದೆವು' ಎಂದು ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಆಸೀಂ ಮುನೀರ್ ಹೇಳಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು, ನಗೆಪಾಟಲಿಗೆ ಈಡಾಗಿದ್ದಾರೆ.

ಸೌದಿ ಅರೇಬಿಯಾ ಪ್ರಶಸ್ತಿ: ಅತ್ತ ಸೌದಿ ಅರೇಬಿಯಾ ಪ್ರವಾಸ

ಕೈಗೊಂಡಿದ್ದ ಮುನೀರ್‌ಗೆ ಅಲ್ಲಿನ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕಿಂಗ್ ಅಬ್ದುಲಜೀಜ್ ಮೆಡಲ್ ಆಫ್ ಎಕ್ಸಲೆನ್ಸ್' ಅನ್ನು ನೀಡಿದೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ಶ್ರಮಿಸಿದ್ದಕ್ಕಾಗಿ ಈ ಗೌರವ ನೀಡಿರುವುದಾಗಿ ಸೌದಿ ಅರೇಬಿಯಾ ಸರ್ಕಾರ ಹೇಳಿದೆ. 2016ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೌದಿ ಇದೇ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪಾಕ್‌ ವಿಮಾನ ಸಂಸ್ಥೆ 4000 ಕೋಟಿಗೆ ಸೇಲ್‌

ಹರಾಜಿಗೆ ಇಟ್ಟಿದ್ದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಕೊನೆಗೂ ಬಿಕರಿಯಾಗಿದೆ. ಪಿಎಐ ಅನ್ನು ಆರಿಫ್‌ ಹಬೀಬ್‌ ಗ್ರೂಪ್‌ 135 ಲಕ್ಷ ಪಾಕಿಸ್ತಾನದ ರುಪಾಯಿ (4000 ಕೋಟಿ ರು.) ನೀಡಿ ಖರೀದಿಸಿದೆ. ಪಾಕ್‌ಗೆ ಐಎಂಎಫ್‌ ಸಾಲ ನೀಡುವ ವೇಳೆ ಭಾರೀ ನಷ್ಟದಲ್ಲಿರುವ ಪಿಎಐ ಅನ್ನು ಮಾರಾಟ ಮಾಡುವ ಷರತ್ತು ವಿಧಿಸಿತ್ತು. ಖರೀದಿ ಬಿಡ್‌ನಲ್ಲಿ ಪಾಕ್‌ ಸೇನೆ ಒಡೆತನದ ಕಂಪನಿ ಸೇರಿ ಒಟ್ಟು 4 ಕಂಪನ ಭಾಗವಹಿಸಿದ್ದವು.

ನಾವು ದೊಡ್ಡ ದೇಶಭ್ರಷ್ಟರು: ಪಾರ್ಟಿಯಲ್ಲಿ ವಿಜಯ್‌ ಮಲ್ಯ, ಲಲಿತ್‌ ಮೋದಿ ಜೋಕ್‌

ಲಂಡನ್‌: ದೇಶಬಿಟ್ಟು ಪರಾರಿಯಾಗಿರುವ ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯರ ಹುಟ್ಟುಹಬ್ಬದ ನಿಮಿತ್ತ ಇನ್ನೊಬ್ಬ ದೇಶಭ್ರಷ್ಟ ಉದ್ಯಮಿ ಲಲಿತ್‌ ಮೋದಿ ಇತ್ತೀಚೆಗೆ ಲಂಡನ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಆ ವೇಳೆ ಲಲಿತ್‌ತ್‌ ಮೋದಿ, ತಮ್ಮಿಬ್ಬರನ್ನು ‘ಭಾರತದ ಅತಿ ದೊಡ್ಡ ದೇಶಭ್ರಷ್ಟ’ ಎಂದು ತಮಾಷೆ ಮಾಡಿಕೊಂಡ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ: ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ಇದು ಭಾರತ ಸರ್ಕಾರದ ಅಪಹಾಸ್ಯ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಪಾರ್ಟಿಯ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೋದಿ, ‘ಭಾರತದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತಗೊಳಿಸೋಣ. ಹುಟ್ಟುಹಬ್ಬದ ಶುಭಾಶಯಗಳು ಗೆಳೆಯ ವಿಜಯ್ ಮಲ್ಯ. ಲವ್‌ ಯು’ ಎಂಬ ಅಡಿಬರಹ ಕೊಟ್ಟಿದ್ದಾರೆ. ವಿಡಿಯೋದಲ್ಲಿ ತಮ್ಮನ್ನು ಭಾರತದ ಅತಿದೊಡ್ಡ ದೇಶಭ್ರಷ್ಟರು ಎಂದು ವ್ಯಂಗ್ಯವಾಗಿ ಪರಿಚಯಿಸಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ: ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ