Asianet Suvarna News Asianet Suvarna News
breaking news image

ಹೆಂಡ್ತಿ ಹತ್ಯೆಗೈದು ವಿಮೆ ಹಣದಲ್ಲಿ 1.66 ಲಕ್ಷ ರೂ ಸೆಕ್ಸ್ ಡಾಲ್ ಖರೀದಿಸಿ ಮಜಾ ಮಾಡಿದ ಗಂಡ!

ಪತ್ನಿ ಹತ್ಯೆ ಮಾಡಿದ ಪತಿ ಕೆಲ ತಿಂಗಳು ಶೋಕ ಸಾಗರದಲ್ಲಿ ಮುಳುಗಿದಂತೆ ನಟಿಸಿದ್ದಾನೆ. ಆದರೆ ಯಾವಾಗ ಇನ್ಶೂರೆನ್ಸ್ ಹಣ ಪತಿ ಕೈಸೇರಿತೋ ವರ್ತನೆ ಬದಲಾಗಿದೆ.  ಪೈಕಿ 1.66 ಲಕ್ಷ ರೂಪಾಯಿ ನೀಡಿ ಸೆಕ್ಸ್ ಡಾಲ್ ಖರೀದಿಸಿ ಮಜಾ ಮಾಡಿದ್ದೇ ಈತನಿಗೆ ಮುಳುವಾಗಿದೆ. ಈ ಸೆಕ್ಸ್ ಡಾಲ್‌ನಿಂದ ಈತನ ಹತ್ಯೆ ಬಯಲಾಗಿದೆ.
 

America Man purchase sex doll using wife insurance money after killing her ckm
Author
First Published Apr 28, 2024, 10:36 PM IST

ಟೆಕ್ಸಾಸ್(ಏ.28) ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿದೆ ಅನ್ನೋ ಮಾತು ಪದೇ ಪದೇ ಕೇಳಿಬರುತ್ತಿದೆ. ಇಲ್ಲೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಆಕೆಯ ವಿಮೆ ಹಣದಲ್ಲಿ ಸೆಕ್ಸ್ ಡಾಲ್ ಖರೀದಿಸಿ ಮಜಾ ಮಾಡಿದ್ದಾನೆ. ಆದರೆ ಬರೋಬ್ಬರಿ 1.66 ಲಕ್ಷ  ರೂಪಾಯಿ ನೀಡಿ ಖರೀದಿಸಿದ ಸೆಕ್ಸ್ ಡಾಲ್‌ನಿಂದ ಈತ ಜೈಲು ಪಾಲಾದ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.

ಕಾಲ್ಬಿ ಟ್ರಿಕಲ್ ಅನ್ನೋ ಈತ 2019ರಲ್ಲಿ 911 ತುರ್ತು ಸೇವೆಗೆ  ಕರೆ ಮಾಡಿ ತನ್ನ ಪತ್ನಿ ಕ್ರಿಸ್ಟನ್ ಟ್ರಿಕಲ್ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ. ಕಾಲ್ಬಿ ಟ್ರಿಕಲ್ ಪತ್ನಿ ಕಳೆದುಕೊಂಡ ಶೋಕದಲ್ಲಿದ್ದ. ಪತಿ ಮೇಲೆ ಅನುಮಾನಪಟ್ಟಿದ್ದರೂ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ.

ಮದುವೆಯಾಗುವಂತೆ ಒತ್ತಾಯಿಸಿದ ಯುವತಿ, ಕೊಂದು ಮೃತದೇಹ ಕಂಬಳಿಯಲ್ಲಿ ಸುತ್ತಿ ನದಿಗೆಸೆದ ಟ್ಯಾಕ್ಸಿ ಡ್ರೈವರ್!

ಕ್ರಿಸ್ಟನ್ ಟ್ರಿಕಲ್ ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ಮಗಳ ಸಾವಿನ ಹಿಂದೆ ಕಾಲ್ಬಿ ಟ್ರಿಕಲ್ ಕೈವಾಡದ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಸಾಕ್ಷ್ಯಗಳಿಲ್ಲದ ಕಾರಣ ಆಲ್ಬಿಗೆ ಯಾವುದೇ ಸಂಕಟ ಎದುರಾಗಲಿಲ್ಲ. ಜೊತೆಗೆ ಅರೆಸೇನಾ ಪಡೆಯಲ್ಲಿದ್ದ ಕಾರಣ ವಿಚಾರಣೆ ಮುಗಿಯುವರೆಗೆ ಪೊಲೀಸರ ವಶದಲ್ಲಿರಬೇಕಾದ ಅವಶ್ಯಕತೆಯೂ ಇರಲಿಲ್ಲ.

ಪೊಲೀಸರು ಮಾತ್ರ ಈ ಪ್ರಕರಣದ ಮೇಲೆ ಒಂದು ಕಣ್ಣಿಟ್ಟಿದ್ದರು. ವರ್ಷಗಳೇ ಉರುಳಿತು. ಹೀಗಿರುವಾಗ ಆಲ್ಪಿ ಟ್ರಿಕಲ್ ಲೈಫ್ ಸ್ಟೈಲ್ ಬದಲಾಗಿದೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ತನಿಖೆ ಚುರುಕುಗೊಳಿಸಿದ ಪೊಲೀಸರು ದಾಖಲೆ ಕಲೆಹಾಕಿದ್ದಾರೆ. ಈ ವೇಳೆ 1.66 ಲಕ್ಷ ರೂಪಾಯಿ ನೀಡಿ ಸೆಕ್ಸ್ ಡಾಲ್ ಖರೀದಿಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಸಾಲದಲ್ಲಿದ್ದ ಆಲ್ಬಿ ಟ್ರಿಕಲ್ ದುಬಾರಿ ಮೊತ್ತದ ಸೆಕ್ಸ್ ಡಾಲ್ ಖರೀದಿ ಸೇರಿದಂತೆ ಕೆಲ ಅನುಮಾನಗಳು ಪೊಲೀಸರಿಗೆ ಕಾಡಿತ್ತು. ತನಿಖೆ ನಡೆಸಿದಾಗ ಪತ್ನಿಯ ವಿಮೆ ಹಣದಲ್ಲಿ ಪತಿ ಮಜಾ ಮಾಡಿರುವುದು ಬೆಳಕಿಗೆ ಬಂದಿದೆ. ಒಂದಷ್ಟು ಹಣವನ್ನು ತನ್ನ ಸಾಲ ತೀರಿಸಲು ಬಳಸಿಕೊಂಡಿದ್ದಾನೆ. ಮತ್ತೆ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ಹಲವು ವಸ್ತುಗಳ ಖರೀದಿಸಿದ್ದಾನೆ. ಈ ಪೈಕಿ 1.66 ಲಕ್ಷ ರೂಪಾಯಿ ಸೆಕ್ಸ್ ಡಾಲ್ ಕೂಡ ಸೇರಿದೆ. ಪತ್ನಿ ಸಾವಿನ 2 ತಿಂಗಳ ಬಳಿಕ ಆಲ್ಬಿ ಕೈಗೆ ಪತ್ನಿಯ ವಿಮೆ ಹಣ ಸೇರಿದೆ. 2 ತಿಂಗಳಲ್ಲೇ ಆಲ್ಬಿ ಲೈಫ್ ಸ್ಟೈಲ್ ಕೂಡ ಬದಲಾಗಿದೆ.

ಭಾವ ರೇಪ್ ಮಾಡಿದ ಎಂದು ಸಂಕಟ ಹೇಳಿಕೊಂಡರೆ, 'ನೀನಿನ್ನು ನಂಗೆ ಅತ್ತಿಗೆ' ಎಂದ ಗಂಡ!

ಮತ್ತೆ ವಿಚಾರಣೆಗೆ ಕರೆಸಿದಾಗ ಸಾಲ, ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಬಹಿರಂಗವಾಗಿದೆ. ಆದರೆ ಕೋರ್ಟ್ ಆಲ್ಬಿ ಟ್ರಿಕಲ್‌ಗೆ ಜೈಲು ಶಿಕ್ಷೆ ವಿಧಿಸಿದರೂ ತಪ್ಪು ಒಪ್ಪಿಕೊಂಡಿಲ್ಲ. ಇಷ್ಟೇ ಅಲ್ಲ ಈತನ ತಾಯಿ ಆಲ್ಬಿ ಪರವಾಗಿ ನಿಂತಿದ್ದಾಳೆ. ತನ್ನ ಮಗ ಕ್ರಿಸ್ಟನ್ ಮದುವೆಯಾಗಿ ನಿದ್ದೆ ಇಲ್ಲದ ರಾತ್ರಿ ಕಳೆದಿದ್ದಾನೆ. ಜೀವನದಲ್ಲಿ ನೋಂದಿದ್ದಾನೆ. ಇದಕ್ಕಾಗಿ ಸೆಕ್ಸ್ ಡಾಲ್ ಖರೀದಿಸಿದ್ದಾನೆ. ಸೆಕ್ಸ್ ಡಾಲ್ ಖರೀದಿಸಿರುವುದಕ್ಕೂ ಕ್ರಿಸ್ಟನ್ ಹತ್ಯೆಗೂ ಸಂಬಂಧವಿಲ್ಲ. ಇದಕ್ಕೆ ಪೊಲೀಸರೇ ಸಂಬಂಧ ಕಲ್ಪಿಸಿ ಆರೋಪ ಹೊರಿಸಿದ್ದಾರೆ ಎಂದು ವಾದಿಸಿದ್ದರು. ಆದರೆ ಕೋರ್ಟ್ ಈ ವಾದನಕ್ಕೆ ಮನ್ನಣೆ ನೀಡಿಲ್ಲ. ಇದೀಗ ಜೀವನ ಪರ್ಯಂತ ಆಲ್ಬಿ ಜೈಲಿನಲ್ಲಿ ಕಳೆಯಬೇಕಾಗಿದೆ. ಇಷ್ಟೇ ಅಲ್ಲ 50 ವರ್ಷ ಯಾವುದೇ ಪರೋಲ್ ಕೂಡ ಇಲ್ಲ.
 

Latest Videos
Follow Us:
Download App:
  • android
  • ios