Asianet Suvarna News Asianet Suvarna News

ಮದುವೆಯಾಗುವಂತೆ ಒತ್ತಾಯಿಸಿದ ಯುವತಿ, ಕೊಂದು ಮೃತದೇಹ ಕಂಬಳಿಯಲ್ಲಿ ಸುತ್ತಿ ನದಿಗೆಸೆದ ಟ್ಯಾಕ್ಸಿ ಡ್ರೈವರ್!

ಮದುವೆಯಾಗಲು ಒತ್ತಾಯಿಸಿದ ಮಹಿಳೆಯನ್ನು ಟ್ಯಾಕ್ಸಿ ಡ್ರೈವರ್‌ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ . ಮಹಿಳೆಯ ಕೊಳೆತ ಶವ ಕಂಬಳಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿದೆ.

Navi Mumbai Taxi Driver Kills Woman After She Forced Him To Marry Her Arrested Vin
Author
First Published Apr 28, 2024, 6:43 PM IST

ಮುಂಬೈ: ಮದುವೆಯಾಗಲು ಒತ್ತಾಯಿಸಿದ ಮಹಿಳೆಯನ್ನು ಟ್ಯಾಕ್ಸಿ ಡ್ರೈವರ್‌ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 28 ವರ್ಷದ ಟ್ಯಾಕ್ಸಿ ಚಾಲಕನನ್ನು ಮಹಾರಾಷ್ಟ್ರದ ನವಿ ಮುಂಬೈ ಪೊಲೀಸರು ಬಂಸಿದ್ದಾರೆ. 27 ವರ್ಷದ ಮಹಿಳೆಯ ಕೊಳೆತ ಶವ ಕಂಬಳಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಏಪ್ರಿಲ್ 25ರಂದು ಬೆಳಿಗ್ಗೆ ನವಿ ಮುಂಬೈನ ಉರಾನ್ ಪ್ರದೇಶದ ಚಿರ್ನರ್-ಖಾರ್ಪಾಡಾದ ತಲೇಖರ್‌ನಲ್ಲಿ ನದಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ವ್ಯಕ್ತಿಯ ವಿರುದ್ಧ 302 (ಕೊಲೆ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಉರಾನ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸತೀಶ್ ನಿಕಮ್ ತಿಳಿಸಿದ್ದಾರೆ.

ಭಾವ ರೇಪ್ ಮಾಡಿದ ಎಂದು ಸಂಕಟ ಹೇಳಿಕೊಂಡರೆ, 'ನೀನಿನ್ನು ನಂಗೆ ಅತ್ತಿಗೆ' ಎಂದ ಗಂಡ!

ಏಪ್ರಿಲ್ 18ರಂದು ನೆರೆಯ ಮುಂಬೈನ ಮಾನ್ಕುರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪರಿಶೀಲನೆಯ ನಂತರ, ಉರಾನ್‌ನಲ್ಲಿ ಪತ್ತೆಯಾದ ಶವ ನಾಪತ್ತೆಯಾದ ಮಹಿಳೆಯದ್ದು ಎಂದು ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ತನಿಖೆಯಿಂದ ಮಹಿಳೆ ಮುಂಬೈನ ನಾಗ್ಪಾಡಾ ನಿವಾಸಿ ಟ್ಯಾಕ್ಸಿ ಚಾಲಕನನ್ನು ಪ್ರೀತಿಸುತ್ತಿದ್ದಳು. ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ.. ಆದರೆ ಅವನು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳವಾಗಿತ್ತು. ಏಪ್ರಿಲ್ 18 ರಂದು ಸಂಜೆ, ವ್ಯಕ್ತಿ ಮನ್ಖುರ್ದ್‌ನಿಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಥಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದ ಖಡವ್ಲಿಗೆ ಕರೆದುಕೊಂಡು ಹೋದನು. ಏಪ್ರಿಲ್ 19ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆಕೆಯನ್ನು ಕೊಂದು ಶವವನ್ನು ನದಿಗೆ ಎಸೆದಿದ್ದಾಗಿ ಆರೋಪಿ ತಿಳಿಸಿದ್ದಾನೆ.

ಬೆಳಗಾವಿ: ರಾಕ್ಷಸನಂತೆ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ..!

ಆರೋಪಿಯನ್ನು ಶನಿವಾರ ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 29ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios