Asianet Suvarna News Asianet Suvarna News

ಭಾವ ರೇಪ್ ಮಾಡಿದ ಎಂದು ಸಂಕಟ ಹೇಳಿಕೊಂಡರೆ, 'ನೀನಿನ್ನು ನಂಗೆ ಅತ್ತಿಗೆ' ಎಂದ ಗಂಡ!

ಏಪ್ರಿಲ್ 2ರಂದು ತನ್ನ ಪತಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಭಾವ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.

Not My Wife Anymore Man Tries To Kill Woman After Brother Rapes Her skr
Author
First Published Apr 28, 2024, 9:59 AM IST

ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಎದೆಯ ಮೇಲೆ ಕುಳಿತು, ಅವಳ ಕತ್ತು ಹಿಸುಕಲು ಪ್ರಯತ್ನಿಸುತ್ತಿದ್ದಾನೆ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಿಂದ ಈ ದುಃಖಕರವಾದ ವೀಡಿಯೊ ಹೊರಬಿದ್ದಿದೆ.

ಇಷ್ಟಕ್ಕೂ ಅವಳು ಮಾಡಿದ ತಪ್ಪೇನು ಗೊತ್ತೇ? ಆಕೆಯ ಗಂಡನ ಸಹೋದರ ಅವಳ ಮೇಲೆ ಅತ್ಯಾಚಾರ ಮಾಡಿದ್ದನ್ನು ಪತಿಯ ಬಳಿ ಹೇಳಿಕೊಂಡಿದ್ದು!

ಏಪ್ರಿಲ್ 2ರಂದು ತನ್ನ ಪತಿ ಮನೆಯಲ್ಲಿ ಇಲ್ಲದಿದ್ದಾಗ ಆತನ ಸಹೋದರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಆಕೆಯ ವಿಡಿಯೋ ಕೂಡಾ ಚಿತ್ರಿಸಿದ್ದಾನೆ. ಆ ವಿಷಯವನ್ನು ಗಂಡ ಮನೆಗೆ ಹಿಂದಿರುಗಿದ ಕೂಡಲೇ ಆಕೆ ಹೇಳಿಕೊಂಡಿದ್ದಾಳೆ. ಇದಕ್ಕೆ ಪತಿ ಗಾಯದ ಮೇಲೆ ಬರೆ ಎಳೆದಂತೆ ಆಘಾತಕಾರಿ ಪ್ರತಿಕ್ರಿಯೆ ನೀಡಿದ್ದಾನೆ. 

ವರ್ಕ್ ಫ್ರಂ ಟ್ರಾಫಿಕ್; ಬೆಂಗಳೂರು ಮಹಿಳಾ ಉದ್ಯೋಗಿಯ ಪಾಡು ನೋಡಿ ಅಯ್ಯೋ ಎಂದ ನೆಟ್ಟಿಗರು
 

ಹೌದು,  'ನೀನು ಇನ್ನು ಮುಂದೆ ನನ್ನ ಹೆಂಡತಿಯಲ್ಲ. ನೀನು ಈಗ ನನ್ನ ಅತ್ತಿಗೆ,' ಎಂದವನು ಘೋಷಿಸಿದ್ದಾನೆ. 

ಮರುದಿನ, ಆಕೆಯ ಪತಿ ಮತ್ತು ಭಾವ ಅವಳ ಕೋಣೆಗೆ ಪ್ರವೇಶಿಸಿದರು. ಆಕೆಯ ಪತಿ ಅವಳದೇ ದುಪ್ಪಟ್ಟಾದಿಂದ ಕತ್ತು ಹಿಸುಕಲು ಯತ್ನಿಸಿದಾಗ ಆತನ ಸಹೋದರ ತನ್ನ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಮಹಿಳೆಯೇ ವಿಡಿಯೋವನ್ನು ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೂರನ್ನು ಅಲ್ಲಿಯೇ ಬರೆದುಕೊಂಡಿದ್ದಾರೆ. ನಂತರ ಪೊಲೀಸರು ಘಟನೆಯನ್ನು ಗಮನಿಸಿದ್ದಾರೆ. 

ಎಲೆಕ್ಷನ್ ಬಂತು, ಮತ್ತೆ ಸುದ್ದಿಗೆ ಬಂದ್ರು ಹಳದಿ ಸೀರೆಯ ಎಲೆಕ್ಷನ್ ಅಧಿಕಾರಿ!
 

ಆರೋಪಿ ಪತಿ ಮತ್ತು ಭಾವನ ವಿರುದ್ಧ ಖತೌಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 376 (ಅತ್ಯಾಚಾರ), 307 (ಕೊಲೆಗೆ ಯತ್ನ), ಮತ್ತು 328 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಿಬ್ಬರನ್ನೂ ಬಂಧಿಸುವ ಪ್ರಯತ್ನ ನಡೆಯುತ್ತಿದ್ದು, ಶೀಘ್ರವೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios