Asianet Suvarna News Asianet Suvarna News

ಮೊಸಳೆಗೆ ಕೈಯಲ್ಲಿ ಆಹಾರ ತಿನ್ನಿಸಿದ ವ್ಯಕ್ತಿ: ಭಯಾನಕ ವಿಡಿಯೋ ವೈರಲ್‌

 ಮೊಸಳೆಯನ್ನು ನೋಡಿ ಯಾರೂ ಮುದ್ದು ಮಾಡಲು ಹೋಗುವುದಿಲ್ಲ. ಆದರೆ ಇಲ್ಲೊಂದು ಕಡೆ ಜೋಡಿಯೊಂದು ಮೊಸಳೆಗೆ ಕೈಯಲ್ಲಿ ಆಹಾರ ನೀಡುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

A Florida man who fed a crocodile with his hand: Horrifying video goes viral akb
Author
First Published Mar 26, 2023, 12:47 PM IST

ವೈರಲ್ ವೀಡಿಯೋ: ನೀರಲ್ಲೂ ನೆಲದಲ್ಲೂ ಎರಡೂ ಕಡೆಯೂ ವಾಸಿಸುವ ಪರಭಕ್ಷಕ ಪ್ರಾಣಿ ಮೊಸಳೆ ಅತ್ಯಂತ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು.  ಆಹಾರಕ್ಕಾಗಿ ಇತರ ಪ್ರಾಣಿಗಳ ಮೇಲೆ ಉಪಾಯವಾಗಿ ದಾಳಿ ಮಾಡುವ ಮೊಸಳೆಯನ್ನು ನೋಡಿ ಕಾಲಿಗೆ ಬುದ್ಧಿ ಹೇಳುವವರೇ ಹೆಚ್ಚು.  ಮೊಸಳೆಯನ್ನು ನೋಡಿ ಯಾರೂ ಮುದ್ದು ಮಾಡಲು ಹೋಗುವುದಿಲ್ಲ. ಆದರೆ ಇಲ್ಲೊಂದು ಕಡೆ ಜೋಡಿಯೊಂದು ಮೊಸಳೆಗೆ ಕೈಯಲ್ಲಿ ಆಹಾರ ನೀಡುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಯ ಆತಂಕದ ಜೊತೆ ಅಚ್ಚರಿ ಮೂಡಿಸಿದೆ.  ಈ ವಿಡಿಯೋವನ್ನು onlyinfloridaa ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ (instagram) ಅಪ್‌ಲೋಡ್ ಮಾಡಲಾಗಿದ್ದು,  ಲಕ್ಷಾಂತರ ಜನ ಈ ವಿಡಿಯೋ ನೋಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 

ಹೀಗೆ ಮೊಸಳೆಗೆ ಬರಿಗೈಯಲ್ಲಿ ಆಹಾರ ತಿನ್ನಿಸುತ್ತಿರುವ ವ್ಯಕ್ತಿಯ ಅಮೆರಿಕಾದ (US) ಫ್ಲೋರಿಡಾ ನಿವಾಸಿಯಾಗಿದ್ದು,  ಆತ ಹಾಗೂ ಇನ್ನೊಬ್ಬಳು ಮಹಿಳೆ ಜೊತೆಯಾಗಿ ನೀರಲ್ಲಿ ಕುಳಿತುಕೊಂಡು ಮೊಸಳೆಗೆ ಕೈಯಲ್ಲಿ ಸ್ಯಾಂಡ್‌ವಿಚ್ (sandwich)ತಿನ್ನಿಸುತ್ತಿದ್ದಾರೆ.ಈ ಜೋಡಿಯ ಸಾಹಸ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಸಾಮಾನ್ಯವಾಗಿ  ಮೊಸಳೆಗಳು ಭಯ ಹುಟ್ಟಿಸುವ ಪ್ರಾಣಿಗಳು  ಅವುಗಳ ಬಲವಾದ ದವಡೆ ಹಾಗೂ ಹಲ್ಲುಗಳು ಮನುಷ್ಯನನ್ನು ಕ್ಷಣದಲ್ಲಿ ತುಂಡು ಮಾಡಬಲ್ಲವು, ಜೊತೆಗೆ  ಸಾವಿನ ಮನೆ ಸೇರಿಸಬಲ್ಲವು. ಹೀಗಿದ್ದೂ ವಿದೇಶಗಳಲ್ಲಿ ಕೆಲವರು ಅದರೊಂದಿಗೆ ಉತ್ತಮ ಓಡನಾಟ ನಡೆಸಲು ಬಯಸುತ್ತಾರೆ. ಅದರಂತೆ ಇಲ್ಲಿ ಜೋಡಿಯೊಂದು ಸ್ವಲ್ಪವೂ ಹೆದರದೇ ಮೊಸಳೆಗೆ ಆಹಾರ ನೀಡಿದ್ದಾರೆ.  ಹಾಗೆಯೇ ಯಾವಾಗಲೂ ದಾಳಿ ಮಾಡುವ ಕಾರಣಕ್ಕೆ ಹೆಸರಾಗಿರುವ ಮೊಸಳೆ ಇಲ್ಲಿ ಮಾತ್ರ ಸುಮ್ಮನಿದ್ದು, ಅಚ್ಚರಿ ಮೂಡಿಸಿದೆ.

ವಿಜಯಪುರ: ರಾಷ್ಟ್ರೀಯ ಹೆದ್ದಾರಿ ಬಳಿ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಮೊಸಳೆ ಪತ್ತೆ

ಈ ಜೋಡಿಯ ಕೈಯಿಂದ ಆಹಾರವನ್ನು(Food) ಮಾತ್ರ ಸ್ವೀಕರಿಸುವ ಮೊಸಳೆ ಮತ್ತೆ ಸೀದಾ ತನ್ನ ಆವಾಸದತ್ತ ಹೋಗುತ್ತಿದೆ. ಈ ವೇಳೆ ಈ ಜೋಡಿ ಮತ್ತೊಂದು ತುಂಡು ಆಹಾರವನ್ನು ಅದರತ್ತ ಬಿಸಾಕಿದ್ದಾರೆ. ಅದನ್ನು ಅದು ಬಾಯಿಗೆ ಹಾಕಿಕೊಳ್ಳುತ್ತದೆ. ಒಟ್ಟಿನಲ್ಲಿ ಈ ವಿಡಿಯೋ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ 5 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ರೀತಿ ಮಾಡುವುದನ್ನು ನಿಲ್ಲಿಸಿ ಜನರೇ, ನಾವು ಅವುಗಳಿಂದ ಅಂತರ ಕಾಯ್ದುಕೊಳ್ಳಬೇಕಿದೆ. ಅವುಗಳಿಗೆ ಆತ್ಮೀಯತೆ ಹೆಚ್ಚಾಗಿ ನಮ್ಮ ಮಕ್ಕಳತ್ತ ಬಂದು ದಾಳಿ ಮಾಡಿದರೆ ಏನು ಮಾಡುವಿರಿ, ನಮ್ಮ ಮಕ್ಕಳು ಅವುಗಳಿಗೆ ಆಹಾರವಾಗಬಲ್ಲವೂ ಎಂದು ಕಾಮೆಂಟ್ ಒಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. 

ಹಾರುತ್ತಿದ್ದ ಡ್ರೋಣ್ ಹಿಡಿಯಲು ನೀರಿನಿಂದ ನೆಗೆದ ಮೊಸಳೆ: ಅಪರೂಪದ ವಿಡಿಯೋ ನೋಡಿ

 

ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್

 ಪ್ರಾಣಿಗಳ ಪರಸ್ಪರ ಕಿತ್ತಾಟ ಹಾಗೂ ಅನ್ಯೋನ್ಯತೆಯ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.  ಪ್ರಾಣಿಗಳ ಜೈವಿಕ ಸರಪಳಿಯಲ್ಲಿ ಹುಲ್ಲನ್ನು ತಿಂದು ಮೊಲ ಮೊಲವನ್ನು ತಿಂದು ಹುಲಿ ಹೀಗೆ ಒಬ್ಬರನೊಬ್ಬರು ತಿಂದು ಬದುಕುವುದು ಸಾಮಾನ್ಯ ಇದು ಪ್ರಕೃತಿಗೂ ಸೈ. ಆದರೆ ಈ ಬೇಟೆಯಲ್ಲಿ ಒಂದಕ್ಕೆ ಹಸಿವು ನೀಗಿಸುವ ಖುಷಿಯಾದರೆ ಮತ್ತೊಂದಕ್ಕೆ ಜೀವ ಉಳಿಸಿಕೊಳ್ಳವ ಕಸಿವಿಸಿ. ಅಂತಹ ರೋಚಕ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು,  ಮೈ ಜುಮ್ಮೆನಿಸುತ್ತಿದೆ. ಈ ವಿಡಿಯೋವನ್ನು ಸಿನಿಮಾ ನಿರ್ಮಾಪಕ ವಿನೋದ್ ಕಪ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

50 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಜಿಂಕೆಯೊಂದು ನದಿಯಲ್ಲಿ ಈಜುತ್ತಾ ಒಂದು ಭಾಗದಿಂದ ಮತ್ತೊಂದು ಭಾಗದ ಕಾಡಿಗೆ ಹೊರಟಿದೆ. ಈ ವೇಳೆ ನೀರಿನಲ್ಲಿದ್ದ ಮೊಸಳೆಯೊಂದು ಜಿಂಕೆಯನ್ನು ನೋಡಿದ್ದು, ಅದನ್ನು ಹಿಂದೆಯಿಂದ ಬೆನ್ನಟ್ಟಲು ಶುರು ಮಾಡಿದೆ. ಇತ್ತ ಜಿಂಕೆಗೆ ತನ್ನ ಬೆನ್ನ ಹಿಂದೆ ಮೊಸಳೆ ಬರುತ್ತಿದೆ ಎಂದು ಗೊತ್ತಾಗಿದೆ ತಡ ತನ್ನ ವೇಗ ಹೆಚ್ಚಿಸಿಕೊಂಡು ಕೂದಲೆಳೆ ಅಂತರದಲ್ಲಿ ಜಿಂಕೆಯಿಂದ ಪಾರಾಗಿದೆ. ಈ ವಿಡಿಯೋದಲ್ಲಿ ಮೊದಲಿಗೆ ಈಜುತ್ತಿರುವ ಜಿಂಕೆಯ ಕೊಂಬುಗಳು ಮಾತ್ರ ಕಾಣಿಸುತ್ತಿರುತ್ತವೆ. ಆದರೆ ಯಾವಾಗ ತನ್ನ ಬೆನ್ನ ಹಿಂದೆ ಮೊಸಳೆ ಇದೆ ಎಂಬುದು ಜಿಂಕೆಗೆ ಗೊತ್ತಾಯ್ತೋ ನೀರಿನಲ್ಲೇ ನೆಗೆಯಲು ಶುರು ಮಾಡಿದ ಅದು ಕ್ಷಣದಲ್ಲಿ ಎಸ್ಕೇಪ್ ಆಗಿದೆ. 

Follow Us:
Download App:
  • android
  • ios