ಹಾರುತ್ತಿದ್ದ ಡ್ರೋಣ್ ಹಿಡಿಯಲು ನೀರಿನಿಂದ ನೆಗೆದ ಮೊಸಳೆ: ಅಪರೂಪದ ವಿಡಿಯೋ ನೋಡಿ
ನೀರಿನಿಂದ ಸ್ವಲ್ಪ ಮೇಲೆ ಹಾರುತ್ತಿದ್ದ ಡ್ರೋಣ್ ಒಂದನ್ನು ಮೊಸಳೆಯೊಂದು ನೀರಿನಿಂದ ಮೇಲೆ ಹಾರಿ ಕೆಳಗುರುಳಿಸಲು ನೋಡಿದೆ. ಈ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.
ನವದೆಹಲಿ: ಭಾರತ ಪಾಕಿಸ್ಥಾನ ಗಡಿಯಲ್ಲಿ ಭಾರತೀಯ ರಕ್ಷಣಾ ಪಡೆ ಪಾಕಿಸ್ತಾನದಿಂದ ಡ್ರಗ್ ತುಂಬಿ ಬಂದ ಡ್ರೋಣ್‌ಗಳನ್ನು ಹೊಡೆದುರುಳಿಸಿದ ಹಲವು ಘಟನೆಗಳನ್ನು ಈಗಾಗಲೇ ಕೇಳಿದ್ದೀರಿ. ಡ್ರೋಣ್ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಸಾಗಬಲ್ಲದು, ಬೇಹುಗಾರಿಕೆ ಮಾಡಬಲ್ಲದು ಅಗತ್ಯವಿದ್ದುದ್ದನ್ನು ತಲುಪಿಸಬಲ್ಲದು. ಈ ಹಿಂದೆ ದುರ್ಗಮ ಪ್ರದೇಶಗಳಲ್ಲಿ ಔಷಧಿ ಸಾಗಿಸಲು ಕೂಡ ಡ್ರೋಣ್ ಅನ್ನು ಬಳಸಲಾಗಿದೆ. ನಿನ್ನೆಯಷ್ಟೇ ದುರ್ಗಮ ಪ್ರದೇಶದಲ್ಲಿ ವಾಸವಿದ್ದ ವಿಶೇಷ ಚೇತನ ವ್ಯಕ್ತಿಗೆ ಡ್ರೋಣ್ ಮೂಲಕ ಪಿಂಚಣಿ ತಲುಪಿಸಿದ ಸುದ್ದಿ ಒಡಿಶಾದಿಂದ ವರದಿಯಾಗಿತ್ತು. ಹೀಗೆ ಎಲ್ಲೆಂದರಲ್ಲಿ ಹಾರಬಲ್ಲ ಈ ವಿಶೇಷ ಡ್ರೋಣ್ ಬಗ್ಗೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕುತೂಹಲವಿದೆ. ಇದೇ ಕಾರಣಕ್ಕೆ ನೀರಿನಿಂದ ಸ್ವಲ್ಪ ಮೇಲೆ ಹಾರುತ್ತಿದ್ದ ಡ್ರೋಣ್ ಒಂದನ್ನು ಮೊಸಳೆಯೊಂದು ನೀರಿನಿಂದ ಮೇಲೆ ಹಾರಿ ಕೆಳಗುರುಳಿಸಲು ನೋಡಿದೆ. ಈ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.
ಬಹುಶಃ ಮೊಸಳೆಗೂ (crocodile) ಸೇನೆಯ ಯೋಧರಂತೆ ತನ್ನ ಸರಹದ್ದಿನ ವ್ಯಾಪ್ತಿಯಲ್ಲಿ ಯಾರೋ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಅನಿಸಿರಬೇಕು. ನೀರಿನಿಂದ ತುಸುವೇ ಮೇಲೆ ಹಾರುತ್ತಿದ್ದ ಇದನ್ನು ನೋಡುತ್ತಲೇ ಇದ್ದ ಮೊಸಳೆ ಒಮ್ಮೆಲೇ ಮೇಲೆ ಹಾರಿ ಅದನ್ನು ಹಿಡಿಯಲೆತ್ನಿಸಿದೆ. ಅಷ್ಟರಲ್ಲಿ ಡ್ರೋಣ್ ಮೇಲೆ ಮೊಸಳೆ ಕೈಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡು ಮೇಲೆ ಹಾರಿ ಹೋಗಿದೆ. ಅಪರೂಪದ ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @reach_anupam ಎಂಬ ಖಾತೆಯಿಂದ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 640ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಇದೊಂದು ತರ ಜಸ್ಟ್ ಮಿಸ್ ಎನಿಸುವ ಸಂದರ್ಭವಾಗಿದೆ.
ಸಿನಿಮಾದ ಕ್ಲೈಮ್ಯಾಕ್ಸ್ ಮೀರಿಸ್ತಿದೆ ಈ ದೃಶ್ಯ: ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್
ಸಾಮಾನ್ಯವಾಗಿ ಅದ್ಭುತ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯಲು ಡ್ರೋಣ್‌ಗಳನ್ನು ಬಳಸಲಾಗುತ್ತದೆ. ಹಾಗೆಯೇ ನೀರಿನ ಮೇಲೆ ಡ್ರೋಣ್ ಚಿತ್ರೀಕರಣದಲ್ಲಿ ತೊಡಗಿದಾಗ ಕುತೂಹಲಕ್ಕೀಡಾದ ಮೊಸಳೆ ನೀರಿನಲ್ಲೇ ಅದನ್ನು ಹಿಂಬಾಲಿಸುತ್ತಾ ಬಂದಿದೆ. ಡ್ರೋಣ್‌ನಿಂದ ಬರುವ ಸದ್ದಿಗೆ ಮೊಸಳೆ ವಿಚಲಿತಗೊಂಡಿದ್ದು, ನೀರಿನತ್ತ ಬರುತ್ತಿದ್ದಂತೆ ಮೇಲೆ ಹಾರಿ ಅಟ್ಯಾಕ್ ಮಾಡಿದೆ. ಆದರೆ ಡ್ರೋಣ್ ಆ ಕ್ಷಣ ಜಸ್ಟ್ ಮಿಸ್ ಆಗಿದೆ.
ಅಲ್ಲದೇ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ವನ್ಯಜೀವಿಗಳನ್ನು ಕೆಣಕುವ ಪ್ರಯತ್ನ ಮಾಡಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವು ಪ್ರವಾಸಿಗರು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಡುವೆ ಇರುವ ರಸ್ತೆಯ ಮಧ್ಯೆ ಹೀಗೆ ಮಾಡುತ್ತಾ ಆನೆ ಮುಂತಾದ ಕಾಡುಪ್ರಾಣಿಗಳನ್ನು ಪ್ರಚೋದಿಸುತ್ತಾರೆ. ನಂತರ ಅವುಗಳು ಬೆನ್ನಟ್ಟಲು ಶುರು ಮಾಡುತ್ತವೆ ಎಂದಿದ್ದಾರೆ. ಈ ಡ್ರೋಣ್ ಅನ್ನು ಉಳಿಸಿದ ಗುರುತ್ವಾಕರ್ಷಣೆ ಮತ್ತು ದ್ರವದ ಚಲನೆಗೆ ಕೃತಜ್ಞರಾಗಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು 8 ರಿಂದ 10 ಅಡಿಗೆ ಜಿಗಿದಿದೆ. ಆದರಿಂದ ಇಲ್ಲಿ ಬೋಟಿಂಗ್ ಮಾಡುವಾಗ ನದಿಯಲ್ಲಿ ಕೈ ಬಿಡಬೇಡಿ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ದಿವ್ಯಾಂಗ ವ್ಯಕ್ತಿಗೆ ಪಿಂಚಣಿ ವಿತರಿಸಿದ ಡ್ರೋಣ್