Women's Day Special : ಸೋಲಾರ್ ಪ್ಯಾನಲ್ ಮೂಲಕ ಮಹಿಳೆಯರಿಗೆ ಆಸರೆಯಾದ ಲಕ್ಷ್ಮಿ
ನಮ್ಮ ದೇಶದಲ್ಲಿ ಸಾಕಷ್ಟು ಮಹಿಳಾ ಉದ್ಯಮಿಗಳಿದ್ದಾರೆ. ತಮ್ಮ ಜೊತೆ ತಮ್ಮವರನ್ನು ಬೆಳೆಸುವ ಛಲತೊಟ್ಟು, ಹಳ್ಳಿಯಲ್ಲೇ ಸಣ್ಣ ಉದ್ಯಮ ಶುರು ಮಾಡಿ, ಸಾಧನೆ ಮಾಡಿದ ಸಾಕಷ್ಟು ಮಹಿಳೆಯರು ಈಗಿನ ಯುವಜನರಿಗೆ ಮಾದರಿ.
ಕೆಲಸ ಮಾಡುವ ಮನಸ್ಸಿದ್ರೆ ಯಾವ ಕೆಲಸವೂ ಕಠಿಣವಲ್ಲ. ದೃಢ ಸಂಕಲ್ಪದಿಂದ ಎಲ್ಲವನ್ನೂ ಮಾಡಬಹುದು. ಕೆಲಸ ಪೂರ್ಣಗೊಳಿಸುವ ನಿರ್ಧಾರ ತೆಗೆದುಕೊಂಡಾಗ ಮನಸ್ಸು ಅದಕ್ಕೆ ಸಿದ್ಧವಾಗುತ್ತದೆ. ಎಂಥ ಸಂದರ್ಭದಲ್ಲೂ ಗೆಲುವು ಸಾಧಿಸುವ ಹಂಬಲ, ಶಕ್ತಿ ಬರುತ್ತದೆ. ಆಗ ಎಲ್ಲ ಕೆಲಸವೂ ಅತ್ಯುತ್ತಮವಾಗಿಯೇ ನಡೆಯುತ್ತದೆ. ಇದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಅದ್ರಲ್ಲಿ ಮಹಿಳಾ ಉದ್ಯಮಿ ಲಕ್ಷ್ಮಿ ಇಡುಲ್ವಾರ್ ಕೂಡ ಒಬ್ಬರು.
ಇತ್ತೀಚಿಗಷ್ಟೆ ಮಹಿಳಾ ಉದ್ಯಮಿ ಲಕ್ಷ್ಮಿ ಇಡುಲ್ವಾರ್ (Lakshmi Idulwar) ಅವರಿಗೆ ಸಾಮಾಜಿಕ ಉದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಲಕ್ಷ್ಮಿ ಇಡುಲ್ವಾರ್, ಎನರ್ಜಿ ಪ್ರೈ. ಲಿಮಿಟೆಡ್ ಕಂಪನಿ (Company) ನಡೆಸುತ್ತಿದ್ದಾರೆ. ಅವರ ಸಾಧನೆ (Achievement) ಏನು, ಅವರ ಹಿನ್ನಲೆಯೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
Inspiration Story ಕಾಶ್ಮೀರದಲ್ಲಿ ಕೆಫೆ ಆರಂಭಿಸಿ ಯಶಸ್ವಿಯಾದ ಮಹಿಳೆ
ಮಹಿಳಾ ಉದ್ಯಮಿ ಲಕ್ಷ್ಮಿ ಇಡುಲ್ವಾರ್ ಯಾರು? : ಲಕ್ಷ್ಮಿ ಇಡುಲ್ವಾರ್ ಮಹಾರಾಷ್ಟ್ರ (Maharashtra) ದ ಗಡ್ಚಿರೋಲಿ ಬುಡಕಟ್ಟು ಸಮುದಾಯದ ಮಹಿಳೆ. ಅವರು ಉಡಾನ್ ಸೋಲಾರ್ ಎನರ್ಜಿ ಪ್ರೈ. ಲಿಮಿಟೆಡ್ ಕಂಪನಿಯನ್ನು ನಡೆಸುತ್ತಿದ್ದಾರೆ. ತನ್ನ ಜೊತೆ ತಮ್ಮವರೂ ಬೆಳೆಯಬೇಕು ಎನ್ನುವ ಸಂಕಲ್ಪತೊಟ್ಟ ಮಹಿಳೆ ತಮ್ಮ ಪ್ರದೇಶದ ಮಹಿಳೆಯರಿಗೆ ಸೌರ ದೀಪಗಳನ್ನು ತಯಾರಿಸಲು ಪ್ರೇರೇಪಿಸಿದರು. ವಿಭಿನ್ನ ತಂತ್ರಜ್ಞಾನದೊಂದಿಗೆ ಸೌರ ಫಲಕಗಳನ್ನು ತಯಾರಿಸುವ ಉಡಾನ್ (Udan) ಕಂಪನಿಯ ಸಂಸ್ಥಾಪಕರಾದ್ರು. ಲಕ್ಷ್ಮಿ ಇಡುಲ್ವಾರ್ ಯಾವುದೇ ತಾಂತ್ರಿಕ ಹಿನ್ನೆಲೆ ಹೊಂದಿಲ್ಲ. ಲಕ್ಷ್ಮಿ, ಸೋಲಾರ್ ಪ್ಯಾನಲ್ ತಯಾರಿಕೆಗೆ ಸಂಬಂಧಿಸಿದಂತೆ ಐಐಟಿಯಿಂದ ತರಬೇತಿ ಪಡೆದಿದ್ದಾರೆ. UMED ಮತ್ತು IIT ಬಾಂಬೆಯ 28 ಮಹಿಳೆಯರೊಂದಿಗೆ ಲಕ್ಷ್ಮಿ ಕಂಪನಿಯನ್ನು ಪ್ರಾರಂಭಿಸಿದರು.
ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ ಲಕ್ಷ್ಮಿ : ಉಡಾನ್ ಸೋಲಾರ್ ಕಂಪನಿಯನ್ನು ನಿರ್ಮಿಸಲು ಲಕ್ಷ್ಮಿ ಇಡುಲ್ವರ್ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿತ್ತು. ಹಳ್ಳಿಯ ಮಹಿಳೆಯರಿಗೆ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲು ಲಕ್ಷ್ಮಿ ಯಶಸ್ವಿಯಾದ್ರು. ಹಳ್ಳಿಯ ಮಹಿಳೆಯರು ಉಡಾನ್ ಕಂಪನಿಗಾಗಿ 1000 ರೂಪಾಯಿ ಹೂಡಿಕೆ ಮಾಡಿದ್ದರು. 3 ವಿವಿಧ ಸಮಾಜಗಳಿಂದ 426 ಮಹಿಳೆಯರನ್ನು ಕಂಪನಿಯಲ್ಲಿ ಷೇರುದಾರರನ್ನಾಗಿ ಮಾಡುವಲ್ಲಿ ಲಕ್ಷ್ಮಿ ಯಶಸ್ವಿಯಾದರು. ಕೋವಿಡ್-19 ಸಮಯದಲ್ಲೂ ಇವರು ಭರವಸೆ ಕಳೆದುಕೊಳ್ಳಲಿಲ್ಲ. ಒಟ್ಟಿಗೆ ಕೆಲಸ ಮುಂದುವರೆಸಿದ್ದರು. ಅನೇಕರು ಲಕ್ಷ್ಮಿ ಹಾಗೂ ಅವರ ತಂಡದ ಮೇಲೆ ಭರವಸೆ ಇಟ್ಟಿರಲಿಲ್ಲ. ಮಹಿಳೆಯರು ಸೋಲಾರ್ ಅಳವಡಿಸಲು ಸಾಧ್ಯವಿಲ್ಲವೆಂದು ಭಾವಿಸಿದ್ದರು. ಆದ್ರೆ ಲಕ್ಷ್ಮಿ ಮತ್ತವರ ತಂಡ ಇದನ್ನು ಸುಳ್ಳು ಮಾಡಿದೆ.
Women's Day: ಅವಳು ಬಹುವಚನ, ಮಹಿಳಾ ದಿನವನ್ನಲ್ಲ, ಮಹಿಳಾತನವನ್ನು ಸಂಭ್ರಮಿಸಬೇಕು
ಉಡಾನ್ ಸೋಲಾರ್ ಕಂಪನಿಯ ಕೆಲಸವೇನು? : ಉಡಾನ್ ಸೋಲಾರ್ ಕಂಪನಿ ಆರಂಭದಲ್ಲಿ ಬ್ರ್ಯಾಂಡ್ ಸ್ಟಡಿ ಲ್ಯಾಂಪ್‌ಗಳ ಒಂದೇ ಉತ್ಪನ್ನವನ್ನು ಮಾತ್ರ ತಯಾರಿಸುತ್ತಿತ್ತು. ಆದ್ರೀದ 11 ಉತ್ಪನ್ನಗಳ ವೈವಿಧ್ಯತೆಯನ್ನು ಹೊಂದಿದೆ. ಉಡಾನ್ ಸೋಲಾರ್ ಸ್ಟಡಿ ಲ್ಯಾಂಪ್‌ಗಳು, ಮಿನಿ ಹೋಮ್ ಲೈಟ್ ಸಿಸ್ಟಮ್‌ಗಳು ಮತ್ತು ಎಲ್ ಇಡಿ ಬಲ್ಬ್ ಗಳಂತಹ ಸಣ್ಣ ಉತ್ಪನ್ನಗಳಿಂದ (5W ನಿಂದ 18W) ಪ್ರಸ್ತುತ 2.5W ನಿಂದ 100W ವರೆಗಿನ ಸೌರ ಫಲಕಗಳನ್ನು ತಯಾರಿಸುತ್ತಿದೆ.
ಉಡಾನ್ ಸಂಸ್ಥೆ ಐಐಟಿ ಬಾಂಬೆಯ ಸೋಲಾರ್ ಇಕೋಸಿಸ್ಟಮ್ ಅಡಿಯಲ್ಲಿ ಬರುತ್ತದೆ. ಇದು ಸ್ಥಳೀಯ ಜನರಿಗಾಗಿ ಸ್ಥಳೀಯ ಜನರಿಂದ ನಿರ್ಮಾಣವಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವುದು ಈ ಕಂಪನಿಯ ಪ್ರಧಾನ ಗುರಿಯಾಗಿದೆ. ಇದು ಹೂಡಿಕೆದಾರರಿಗೆ ಸುರಕ್ಷತೆ ಮತ್ತು ಕಡಿಮೆ ಅಪಾಯದಡಿಯಲ್ಲಿ ಕೆಲಸ ಮಾಡುತ್ತದೆ.
ಲಕ್ಷ್ಮಿ ಇಡುಲ್ವರ್ ಗೆ ಸಂದಿದೆ ಈ ಎಲ್ಲ ಪ್ರಶಸ್ತಿ : ಹರಜಿಂದಗಿ ಮಹಿಳಾ ಪ್ರೀನಿಯರ್ ಪ್ರಶಸ್ತಿಯಲ್ಲಿ ವರ್ಷದ ಮಹಿಳಾ ಸಾಮಾಜಿಕ ಉದ್ಯಮಿ ಪ್ರಶಸ್ತಿಗೆ ಲಕ್ಷ್ಮಿ ಭಾಜನರಾಗಿದ್ದಾರೆ. ಇದಲ್ಲದೆ ಅನೇಕ ಕಡೆ ಲಕ್ಷ್ಮಿ ಕೆಲಸವನ್ನು ಗುರುತಿಸಿ ಗೌರವಿಸಲಾಗಿದೆ .