Asianet Suvarna News Asianet Suvarna News

ಒಂಟಿಯಾಗಿದ್ದಾಗ Googleನಲ್ಲಿ ಇದನ್ನೆಲ್ಲಾ ಹುಡುಕಾಡ್ತಾರೆ ಯುವತಿಯರು!

ಭಾರತದಲ್ಲಿ ಇಂಟರ್‌ನೆಟ್‌ ಮಹಿಳಾ ಬಳಕೆದಾರರ ಪೈಕಿ ಶೇ.75ರಷ್ಟು ಜನರು 15 ರಿಂದ 34 ವಯಸ್ಸಿನವರು ಆಗಿದ್ದಾರೆ. ಅದರಲ್ಲಿಯೂ ಯುವತಿಯರು ಏಕಾಂಗಿಯಾಗಿದ್ದ ವೇಳೆ ಗೂಗಲ್‌ನಲ್ಲಿ ಏನು ಸರ್ಚ್ ಮಾಡ್ತಾರೆ ಎಂಬುದನ್ನು ವರದಿ ಮಾಡಿದೆ.

women more searching these things in google mrq
Author
First Published Jun 8, 2024, 10:21 AM IST | Last Updated Jun 8, 2024, 10:21 AM IST

ಜಗತ್ತಿನಲ್ಲಿ ಮೊಬೈಲ್ ಇಲ್ಲಾ ಅಂದ್ರೆ ಒಂದು ಕ್ಷಣ  ಏನಾಗುತ್ತೆ  ಒಮ್ಮೆ ಯೋಚಿಸಿದ್ರೂ ಭಯ ಆಗುತ್ತದೆ. ಮೊಬೈಲ್ (Mobile) ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಅಸಾಧ್ಯ. ಕ್ಷಣ ಕ್ಷಣಕ್ಕೊಮ್ಮೆ  ಮೊಬೈಲ್ ನೋಡುವ ಅಭ್ಯಾಸ ಬಹುತೇಕ ಎಲ್ಲರಿಗೂ ರೂಢಿಯಾಗಿದೆ. ವಾಟ್ಸಪ್ ಸೇರಿದಂತೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಅಂತಹ ಸಾವಿರಾರ ಆಪ್‌ಗಳು ಸಿಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ (Social Media Addicts) ರೀಲ್ಸ್ ನೋಡುತ್ತಿದ್ದರೆ ತನ್ನಿಂದ  ತಾನೇ ನಿಮ್ಮ ಇಚ್ಛೆಗೆ ಅನುಗುಣವಾದ ವಿಡಿಯೋಗಳು ಒಂದಾದ ನಂತರ ಮತ್ತೊಂದರಂತೆ ಬರುತ್ತವೆ. ಇನ್ನು ಜನರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಗೂಗಲ್‌ನಲ್ಲಿ (Google Search) ತಮಗೆ ಬೇಕಾಗಿರೋದನ್ನು ಹುಡುಕಾಡುತ್ತಾರೆ. ಅದರಲ್ಲಿಯೂ ಹುಡುಗಿಯರು ಏಕಾಂಗಿಯಾಗಿದ್ದಾಗ (Woman google Searching) ಏನು ಸರ್ಚ್ ಮಾಡುತ್ತಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಯುವತಿಯರು ತಮ್ಮ ಹಲವು ಪ್ರಶ್ನೆಗಳಿಗೆ ಗೂಗಲ್‌ ಮೂಲಕ  ಉತ್ತರ ಕಂಡುಕೊಳ್ಳುತ್ತಾರೆ. 

ಭಾರತದಲ್ಲಿ ಇಂಟರ್‌ನೆಟ್‌ ಮಹಿಳಾ ಬಳಕೆದಾರರ ಪೈಕಿ ಶೇ.75ರಷ್ಟು ಜನರು 15 ರಿಂದ 34 ವಯಸ್ಸಿನವರು ಆಗಿದ್ದಾರೆ. ಅದರಲ್ಲಿಯೂ ಯುವತಿಯರು ಏಕಾಂಗಿಯಾಗಿದ್ದ ವೇಳೆ ಗೂಗಲ್‌ನಲ್ಲಿ ಏನು ಸರ್ಚ್ ಮಾಡ್ತಾರೆ ಎಂಬುದನ್ನು ವರದಿ ಮಾಡಿದೆ. ಯುವತಿಯರು  ಗೂಗಲ್‌ನಲ್ಲಿ ಏನು ನೋಡತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಆ ವಿಷಯಗಳು ಏನು ಎಂಬುದನ್ನು ನೋಡೋಣ ಬನ್ನಿ. 

1.ಶಿಕ್ಷಣ, ವೃತ್ತಿ ಜೀವನ: ಇಂದು ಬಾಲ್ಯದಿಂದಲೂ ಯುವತಿಯರು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಶೇ.80ರಷ್ಟು ಜನರು ತಾವು ಏನು ಮಾಡಬೇಕು? ಏನು ಓದಬೇಕು? ಭವಿಷ್ಯದಲ್ಲಿ ಯಾವ ಹಂತಕ್ಕೆ ಹೋಗಬೇಕು ಎಂಬ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿ ತಮ್ಮ ವೃತ್ತಿ ಭವಿಷ್ಯದ ಕುರಿತ ವಿಷಯಗಳನ್ನು ಸರ್ಚ್ ಮಾಡುತ್ತಾರೆ. ವೃತ್ತಿ ಜೀವನದಲ್ಲಿ ಉನ್ನತಮಟ್ಟಕ್ಕೆ ತಲುಪಬೇಕಾದ್ರೆ ಏನು ಮಾಡಬೇಕು? ಯಾವ ಕೋರ್ಸ್ ಸೇರಿಕೊಂಡರೆ ಏನು ಮಾಡಬೇಕು ಎಂದು ಹುಡುಕಾಡುತ್ತಿರುತ್ತಾರೆ. ಇನ್ನು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಕುರಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

2.ರೊಮ್ಯಾಂಟಿಕ್ ಹಾಡು ಮತ್ತು ಸಂಗೀತ: ಯುವತಿಯರು ಸೇರಿದಂತೆ ಮಧ್ಯ ವಯಸ್ಕ ಮಹಿಳೆಯರು ಏಕಾಂತದಲ್ಲಿ ರೊಮ್ಯಾಂಟಿಕ್ ಹಾಡು ಮತ್ತು ಸಂಗೀತ ಕೇಳಲು ಇಷ್ಟಪಡುತ್ತಾರೆ. ಗೂಗಲ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಸದಾ ಹುಡುಕುತ್ತಾರೆ. ಮನೆಯಲ್ಲಿದ್ದಾ ಇಂಪಾದ  ಹಾಡುಗಳನ್ನು ಕೇಳುತ್ತಲೇ ಹಲವರು ಕೆಲಸ ಮಾಡುತ್ತಾರೆ.

ದೀರ್ಘಾವಧಿಯ ಸಮಯಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಅಪಾಯ!

3.ಫ್ಯಾಶನ್ ಟಿಪ್ಸ್: ಪುರುಷರಿಗಿಂತ ಮಹಿಳೆಯರು ಹೆಚ್ಚು ತಮ್ಮ ಸೌಂದರ್ಯದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಬೇರೆಯವರಿಗಿಂತ ತಾನು ಹೇಗೆ  ಚೆನ್ನಾಗಿ ಕಾಣಬೇಕು ಎಂಬುದರ ಕುರಿತಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿರುತ್ತಾರೆ.  ಸೌಂದರ್ಯಕ್ಕಾಗಿ ಯಾವ ಪ್ರೊಡಕ್ಟ್ ಬಳಸಬೇಕು? ಹೇಗೆ  ಬಳಸಬೇಕು? ಯಾವ ಪ್ರೊಡಕ್ಟ್ ಉತ್ತಮ? ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಹೇಗೆ ತಯಾರಾಗಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಾಡುತ್ತಿರುತ್ತಾರೆ. ಫ್ಯಾಶನ್, ನೇಲ್ ಆರ್ಟ್, ಹೇರ್ ಕೇರ್, ಡಯಟಿಂಗ್ ಟಿಪ್ಸ್, ಟ್ರೆಂಡ್, ಸೌಂದರ್ಯ ಚಿಕಿತ್ಸೆ, ಮನೆಮಮದ್ದುಗಳ ಬಗ್ಗೆಯೂ ಗೂಗಲ್‌ನಲ್ಲಿ ಹುಡುಕಾಡುತ್ತಿರುತ್ತಾರೆ.

4.ಆನ್‌ಲೈನ್‌ ಶಾಪಿಂಗ್: ಶಾಪಿಂಗ್ ಮಾಡೋದು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಆನ್‌ಲೈನ್‌ನಲ್ಲಿ ಯಾವುದಾದ್ರೂ ಟ್ರೆಂಡ್ ಬಂದಿದ್ಯಾ? ಯಾವ ಪ್ಲಾಟ್‌ಫಾರಂನಲ್ಲಿ ಡಿಸ್ಕೌಂಟ್ ಸಿಗುತ್ತೆ? ತಮ್ಮ ಬಜೆಟ್‌ನಲ್ಲಿ ಫ್ಯಾಷನ್ ಬಟ್ಟೆ ಎಲ್ಲಿ ಸಿಗುತ್ತೆ ಎಂಬುದನ್ನು ನೋಡುತ್ತಿರುತ್ತಾರೆ. ಅಮೆಜಾನ್, ಮಿಂತ್ರಾ, ಫ್ಲಿಪ್‌ಕಾರ್ಟ್, ಆಜಯೋ ಅಂತಹ ಆಪ್‌ಗಳು ಗೂಗಲ್‌ನಲ್ಲಿ ಸಿಗುತ್ತವೆ.  ಫೇಸ್‌ಬುಕ್,  ಟೆಲಿಗ್ರಾಂ, ಇನ್‌ಸ್ಟಾಗ್ರಾಂನಲ್ಲಿಯೂ ಶಾಪಿಂಗ್ ಮಾಡಬಹುದಾಗಿದೆ.

ಜಗತ್ತಿನ ಮೋಸ್ಟ್ ವಾಂಟೆಡ್ ಮಹಿಳೆ ಈ ಸುಂದರಿ! ಬರೋಬ್ಬರಿ 36,000 ಕೋಟಿಯ ವಂಚಕಿ..

5.ಮೆಹಂದಿ ಡಿಸೈನ್: ಮಹೆಂದಿ ಹಾಕಿಕೊಳ್ಳೋದು ಅಂದ್ರೆ ಯುವತಿಯರಿಗೆ ಬಲುಇಷ್ಟ. ತಮ್ಮ ಅಂಗೈ ಯಾವಾಗಲೂ ಕಲರ್‌ಫುಲ್ ಆಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಗೂಗಲ್‌ನಲ್ಲಿ ಹೊಸ ಹೊಸ ಮೆಹಂದಿ ಡಿಸೈನ್‌ಗಳನ್ನು ಹುಡುಕುತ್ತಾರೆ. ಮೆಹಂದಿ ವಿನ್ಯಾಸಗಳನ್ನು ನೋಡಲು ಮಹಿಳೆಯರು ಇಷ್ಟಪಡುತ್ತಾರೆ  ಅನ್ನೋ ಅಂಶ ಅಧ್ಯಯನದಲ್ಲಿ ತಿಳಿದು ಬಂದಿದೆ.

Latest Videos
Follow Us:
Download App:
  • android
  • ios