Asianet Suvarna News Asianet Suvarna News

ಇದ್ದಕ್ಕಿದ್ದಂತೆ ತೂಕ ಹೆಚ್ಚುತ್ತಿದ್ದರೆ, ಈ ಕಾರಣಗಳಿರಬಹುದು!

ಅನೇಕ ಬಾರಿ ಹಠಾತ್ ತೂಕ ಏರಿರುತ್ತದೆ. ಅದು – ಇದು ಕಾರಣ ಹೇಳಿ ನಾವೇ ಸಮಾಧಾನ ಮಾಡಿಕೊಂಡಿರುತ್ತೇವೆ. ಆದ್ರೆ ಬರೀ ವಯಸ್ಸು ಮಾತ್ರವಲ್ಲ ಏಕಾಏಕಿ ತೂಕ ಹೆಚ್ಚಾಗಲು ಇನ್ನೂ ಅನೇಕ ಕಾರಣವಿದೆ. 
 

Women increases weight all of a suddon here are reasons
Author
Bangalore, First Published Jul 29, 2022, 2:12 PM IST

ವಯಸ್ಸು ಹೆಚ್ಚಾಗ್ತಿದ್ದಂತೆ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ನಿಮಗೆ ವಯಸ್ಸಾದಂತೆ  ನಿಮ್ಮ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ನೀವು ಓಡಾಡುವುದು ಮತ್ತು ಆಟವಾಡುವುದು ಸೇರಿದಂತೆ ದೈಹಿಕ ಚಟುವಟಿಕೆಗಳು ಬಹುತೇಕ ನಿಲ್ಲುತ್ತವೆ. ನಿಧಾನವಾಗುವ ಚಟುವಟಿಕೆಗಳು, ದುರ್ಬಲವಾಗುವ ಸ್ನಾಯು, ಚಯಾಪಚಯದಲ್ಲಿ ನಿಧಾನಗತಿ ಇತ್ಯಾದಿಗಳು ತೂಕ ಏರಲು  ಕಾರಣಗಳಾಗಿರುತ್ತವೆ. ಆದ್ರೆ  ಇದರಿಂದಾಗಿ ಮಾತ್ರ ತೂಕ ಹೆಚ್ಚಾಗುವುದಿಲ್ಲ. ನಿಮ್ಮ ತೂಕ  ಇದ್ದಕ್ಕಿದ್ದಂತೆ ಹೆಚ್ಚುತ್ತಿದ್ದರೆ ಅದಕ್ಕೆ ಇನ್ನು ಅನೇಕ ಕಾರಣವಿದೆ. ಹಾರ್ಮೋನ್ ಅಸಮತೋಲನ, ಥೈರಾಯ್ಡ್ ಅಥವಾ ಇನ್ನಾವುದೇ ಕಾರಣವೂ ಇದರ ಹಿಂದೆ ಇರಬಹುದು. ಮಾನವನಿಗೆ ವಯಸ್ಸಾಗ್ತಿದ್ದಂತೆ  ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳಲ್ಲಿ ಒಂದು ಹಠಾತ್ ತೂಕ ಹೆಚ್ಚಾಗುವುದು. ಇಂದು ನಾವು ಇದ್ದಕ್ಕಿದ್ದಂತೆ ತೂಕ ಹೆಚ್ಚಾಗಲು ಕಾರಣವೇನು ಎಂಬ ಸಂಗತಿಯನ್ನು ನಿಮಗೆ ಹೇಳ್ತೆವೆ.

ಹೈಪೋಥೈರಾಯ್ಡಿಸಮ್ (Hypothyroidism) : ಮಹಿಳೆಯೊಬ್ಬರಿಗೆ ಏಕಾಏಕಿ ತೂಕ ಹೆಚ್ಚಾಗುತ್ತಿದೆ ಅಂದ್ರೆ ಮೊದಲು ಥೈರಾಯ್ಡ್ ಪರೀಕ್ಷೆ ಮಾಡಿಕೊಳ್ಳಲು ಕೇಳುತ್ತಾರೆ. ನಮ್ಮ ಕುತ್ತಿಗೆಯಲ್ಲಿ ಚಿಟ್ಟೆ ಆಕಾರದ ಗ್ರಂಥಿ ಇದೆ. ಇದು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಸ್ರವಿಸಲು ಕಾರಣವಾಗಿದೆ. ಥೈರಾಯ್ಡ್ ನಿಷ್ಕ್ರಿಯವಾಗಿದ್ದರೆ  ಚಯಾಪಚಯವು ನಿಧಾನವಾಗಬಹುದು. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಈ ಕಾರಣದಿಂದಾಗಿ, ಮಹಿಳೆಯರು ಆಯಾಸ, ಶಕ್ತಿಯ ಸಮಸ್ಯೆ, ಒಣ ಚರ್ಮ, ಕೂದಲು ಉದುರುವಿಕೆ ಅಥವಾ ಧ್ವನಿ ಬದಲಾವಣೆಯ ಸಮಸ್ಯೆಯಿಂದ ಬಳಲುತ್ತಾರೆ. ಆದ್ದರಿಂದ ಮೊದಲು ಥೈರಾಯ್ಡ್ ಮಟ್ಟವನ್ನು ಪರೀಕ್ಷಿಸಿ ಮತ್ತು ಸರಿಯಾದ ಔಷಧ (Medicine) ವನ್ನು ತೆಗೆದುಕೊಳ್ಳಿ.

ಮುಟ್ಟು ನಿಲ್ಲುವುದು (Menopasue) : ಮುಟ್ಟು ನಿಲ್ಲುವ ಆರಂಭದ ಹಿಂದಿನ ಅವಧಿಯನ್ನು ಪೆರಿಮೆನೊಪಾಸ್ (Perimenopause) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ 40 ವರ್ಷಗಳ ನಂತರ ಪ್ರಾರಂಭವಾಗುತ್ತದೆ. ಪೆರಿಮೆನೋಪಾಸ್ ಹಂತದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಕಾರಣದಿಂದಾಗಿ, ಈಸ್ಟ್ರೊಜೆನ್ ಹಾರ್ಮೋನ್ ಅಸಮಾನವಾಗಿ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ  ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲ ಲೈಂಗಿಕ ಬಯಕೆ ಕಡಿಮೆಯಾಗುವುದು, ಅನಿಯಮಿತ ಅವಧಿಗಳು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.  

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD) : ಐದರಲ್ಲಿ ಒಬ್ಬ ಮಹಿಳೆಯರಲ್ಲಿ  ಕೆಲವು ಹಂತದಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಕಾಡುವ ಸಾಧ್ಯತೆಯಿರುತ್ತದೆ ಎಂದು ಸಂಶೋಧಕರು ಹೇಳ್ತಾರೆ. ಇದು ಎಂಡೋಕ್ರೈನ್ ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಇದು ಸಂತಾನೋತ್ಪತ್ತಿ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್‌ಗಳ ಸಮತೋಲನಕ್ಕೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡಬಹುದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದ ಮಧ್ಯ ಭಾಗದ ಸುತ್ತಲೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಹದಿ ವಯಸ್ಸಿನ ಗರ್ಭಧಾರಣೆ ಹೆಚ್ಚಳ, ಗರ್ಭಪಾತದ ಬಗ್ಗೆ Indian Law ಹೇಳೋದೇನು ?

ಒತ್ತಡ ಮತ್ತು ಆತಂಕ (Stress): ನೀವು ಒತ್ತಡಕ್ಕೊಳಗಾದಾಗ ನಿಮ್ಮ ಅಡ್ರಿನಾಲಿನ್ ಗ್ರಂಥಿಯು ಪರಿಣಾಮ ಬೀರುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಸ್ರವಿಸುವಿಕೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ದೇಹವು ಶಕ್ತಿ ಮತ್ತು ಕೊಬ್ಬು ಎರಡನ್ನೂ ಸಂಗ್ರಹಿಸಲು ಕಾರಣವಾಗುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ದೀರ್ಘಕಾಲದವರೆಗೆ ಹೆಚ್ಚಿದ್ದರೆ  ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ತೂಕ ಕೂಡ ಹೆಚ್ಚಾಗಬಹುದು.

ಹುಡುಗ್ರು ಕಳಿಸೋ ಮೆಸೇಜ್‌ಗೆ ಹುಡುಗೀರು ಲೇಟ್ ರಿಪ್ಲೆ ಮಾಡೋದೇಕೆ?

ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆ : ಪ್ರೋಬಯಾಟಿಕ್ಸ್ ಸೇರಿದಂತೆ ಉತ್ತಮ ಬ್ಯಾಕ್ಟೀರಿಯಾಗಳು ಕರುಳು ಸರಿಯಾಗಿ ಕಾರ್ಯನಿರ್ವಹಿಸಲು ಕಾರಣವಾಗಿವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಇರುತ್ತವೆ. ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಸಮತೋಲನ ತಪ್ಪಿದಾಗ ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಬಹುದು. ಇದು ನಿಮ್ಮ ಕರುಳು ಉಬ್ಬಲು ಕಾರಣವಾಗುತ್ತದೆ. ಹೊಟ್ಟೆ ನೋವು, ಅತಿಸಾರ ಮತ್ತು ಹೆಚ್ಚುವರಿ ಅನಿಲವನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ ನಿಮ್ಮ ತೂಕವು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಇದಲ್ಲದೆ, ಔಷಧದ ಅತಿಯಾದ ಬಳಕೆಯು ಹಠಾತ್ ತೂಕ ಹೆಚ್ಚಾಗಲು ಕಾರಣವಾಗಬಹುದು.
 

Follow Us:
Download App:
  • android
  • ios