ಹುಡುಗ್ರು ಕಳಿಸೋ ಮೆಸೇಜ್‌ಗೆ ಹುಡುಗೀರು ಲೇಟ್ ರಿಪ್ಲೆ ಮಾಡೋದೇಕೆ?

ಮೆಸೇಜ್ ಕಳುಹಿಸಿ ಅರ್ಧ ಗಂಟೆಯಾಯ್ತು. ಏನಾ ಮಾಡ್ತಾಳೋ, ಇನ್ನೂ ರಿಪ್ಲೆ ಬಂದಿಲ್ಲ. ಟೆನ್ಷನ್ ಜಾಸ್ತಿಯಾಗ್ತಿದೆ ಅಂತಾ ಹುಡುಗ್ರು ಚಡಪಡಿಸ್ತಿರುತ್ತಾರೆ. ಹುಡುಗಿಯರು ಯಾಕೆ ಬೇಗ ಬೇಗ ಪ್ರತಿಕ್ರಿಯೆ ನೀಡಲ್ಲ ಅನ್ನೋದನ್ನು ತಿಳಿದುಕೊಂಡ್ರೆ ತಲೆಬಿಸಿ ಕಡಿಮೆಯಾಗುತ್ತೆ.
 

Why girls replay late to text shared by boys

ಸಂಬಂಧಗಳು ಮುಂದುವರೆಯಬೇಕೆಂದ್ರೆ  ಮಾತುಕತೆ ನಡೆಯಬೇಕು. ಈಗಿನ ದಿನಗಳಲ್ಲಿ ಮಾತುಕತೆಗಿಂತ ಮೆಸ್ಸೇಜ್ ಗೆ ಹೆಚ್ಚು ಮಹತ್ವ ಬಂದಿದೆ. ಅನೇಕ ವಿಷ್ಯಗಳನ್ನು ನೇರಾನೇರ ಹೇಳಲು ಕಷ್ಟವಾಗುತ್ತದೆ. ಆದ್ರೆ ಮೆಸ್ಸೇಜ್ ಮೂಲಕ ಸುಲಭವಾಗಿ ಹೇಳಬಹುದು. ಹಿಂದಿನ ಕಾಲದಲ್ಲಿ ಪತ್ರಗಳನ್ನು ಬಳಸ್ತಿದ್ದರು. ಇದು ಡಿಜಿಟಲ್ ಯುಗ. ಸಾಮಾಜಿಕ ಜಾಲತಾಣಗಳ ಬಳಕೆಯ ಯುಗ. ವಾಟ್ಸ್ ಅಪ್, ಮೆಸ್ಸೆಂಜರ್, ಮೊಬೈಲ್ ಮೆಸ್ಸೇಜ್ ಗಳ ಮೂಲಕ ಚಾಟ್ ಮಾಡುವವರ ಸಂಖ್ಯೆ ಹೆಚ್ಚು. ಪ್ರೀತಿಸುವ ಜೋಡಿ ದಿನವಿಡಿ ಸಂದೇಶ ರವಾನೆಯಲ್ಲಿ ನಿರತವಾಗಿರುತ್ತದೆ. ಆದ್ರೆ ಈಗಷ್ಟೇ ಪ್ರೀತಿಯಲ್ಲಿ ಬಿದ್ದ ಹುಡುಗ ಹೇಳಲು ಆಗದ ಮಾತನ್ನು ಮೆಸ್ಸೇಜ್ ಮೂಲಕ ತಿಳಿಸಿರುತ್ತಾನೆ. ತಕ್ಷಣ ಹುಡುಗಿಯಿಂದ ಪ್ರತಿಕ್ರಿಯೆ ಬರಬೇಕೆಂದು ಬಯಸ್ತಾನೆ. ಆದ್ರೆ ಹುಡುಗಿ ಆ ಕ್ಷಣದಲ್ಲಿ ಉತ್ತರ ರವಾನೆ ಮಾಡೋದಿಲ್ಲ. ಇದು ಹುಡುಗರ ಟೆನ್ಷನ್ ಹೆಚ್ಚಿಸುತ್ತದೆ. ಆದ್ರೆ ಹುಡುಗಿಯರು, ಹುಡುಗರ ಮೆಸ್ಸೇಜ್ ಗೆ ಆ ಕ್ಷಣದಲ್ಲಿಯೇ ಉತ್ತರ ನೀಡದಿರಲು ಅನೇಕ ಕಾರಣವಿದೆ. ಹುಡುಗರ ಸಂದೇಶ ಅರ್ಥವಾಗಿರದೆ ಇರಬಹುದು ಇಲ್ಲವೆ ಅವರು ಗೊಂದಲಕ್ಕೆ ಬಿದ್ದಿರಬಹುದು ಹೀಗೆ ಅನೇಕ ಕಾರಣಗಳಿದ್ದು, ನಾವಿಂದು, ಹುಡುಗಿಯರು ಲೇಟ್ ಆಗಿ ರಿಪ್ಲೇ ಮಾಡಲು ಕಾರಣವೇನು ಎಂಬುದನ್ನು ಹೇಳ್ತೇವೆ. 

ಹುಡುಗಿಯರ ನಂಬರ್ ಹೇಗೋ ಪಡೆದಿರುತ್ತೇವೆ. ನಂಬರ್ (Nambar) ಸಿಕ್ಕ ಖುಷಿಯಲ್ಲಿ ಒಂದಾದ್ಮೇಲೆ ಒಂದರಂತೆ ಮೆಸೇಜ್ (Message) ಕಳುಹಿಸಲು ಶುರು ಮಾಡಿರ್ತೇವೆ. ಹುಡುಗಿ ಬಗ್ಗೆ ಎಲ್ಲ ತಿಳಿದುಕೊಳ್ಳುವ ಕುತೂಹಲ ಹುಡುಗರಿಗೆ. ಆದ್ರೆ ಗುಡ್ ಮಾರ್ನಿಂಗ್ (Good Morning) ನಿಂದ ಹಿಡಿದು, ತಿಂಡಿ ಆಯ್ತಾ, ಕಾಫಿ ಆಯ್ತಾ ಎನ್ನುವ ಸಂದೇಶ ಹುಡುಗಿಯರಿಗೆ ಬೋರ್ ಎನ್ನಿಸುತ್ತದೆ. ಪದೇ ಪದೇ ಮೆಸ್ಸೇಜ್ ಮಾಡುವುದು ಅವರಿಗೆ ಇಷ್ಟವಾಗದೆ ಹೋಗಬಹುದು. ಆಗ ಅವರು ನಿಮ್ಮನ್ನು ಅವೈಡ್ ಮಾಡಲು ಶುರು ಮಾಡ್ತಾರೆ. 

ಕೆಟ್ಟ ಅನುಭವ: ಕೆಲ ಹುಡುಗಿಯರು ಈ ಹಿಂದೆ ನಂಬರ್ ಕೊಟ್ಟು, ಮೆಸೇಜ್ ಮಾಡಿ ಕೆಟ್ಟ ಅನುಭವ ಪಡೆದಿರುತ್ತಾರೆ. ಹಾಗಾಗಿ ಈಗ ಎಚ್ಚರಿಕೆ ಹೆಜ್ಜೆ ಇಡುತ್ತಾರೆ. ದೀರ್ಘ ಸಂಬಂಧದ ನಂತ್ರ ಬ್ರೇಕ್ ಅಪ್ (Break Up) ಆದ ಹುಡುಗಿಯರು ಕೆಲವೊಮ್ಮೆ ತಮ್ಮ ಬಗ್ಗೆ ಆಲೋಚನೆ ಮಾಡಲು ಶುರು ಮಾಡಿರ್ತಾರೆ. ಹೊಸ ಸಂಬಂಧದ ಬಗ್ಗೆ ಅವರಿಗೆ ಆಸಕ್ತಿ ಇರುವುದಿಲ್ಲ. ಆದ್ರೆ ಹುಡುಗ್ರು ಅವರಿಗೆ ಇಷ್ಟವಿಲ್ಲದ ವಿಷ್ಯವನ್ನು ಪದೇ ಪದೇ ಕೇಳ್ತಿದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ. ಲೇಟ್ ರಿಪ್ಲೇ (Late Replay) ಲೀಸ್ಟ್ ನಲ್ಲಿ ನಿಮ್ಮನ್ನು ಸೇರಿಸುತ್ತಾರೆ.

ಮನುಷ್ಯ ಪ್ರಬುದ್ಧನಾದರೆ ಸುಮಧುರ ಸಂಬಂಧ ಗ್ಯಾರಂಟಿ!

ಪೊಳ್ಳು ಹೊಗಳಿಕೆ: ಈ ಬಗ್ಗೆಯೂ ಹುಡುಗರು ಗಮನ ಹರಿಸಬೇಕು. ಹುಡುಗರ ಸುಳ್ಳನ್ನು ಹುಡುಗಿಯರು ಬೇಗ ಪತ್ತೆ ಮಾಡ್ತಾರೆ. ಕೆಲ ಹುಡುಗರು, ಹುಡುಗಿಯನ್ನು ಸೆಳೆಯಲು ಮೇಲ್ನೋಟಕ್ಕೆ ಹೊಗಳುತ್ತಿರುತ್ತಾರೆ. ಅವರ ವರ್ತನೆ (behavior), ಸೌಂದರ್ಯದ ಬಗ್ಗೆ ಅತಿಯಾಗಿ ಗುಣಗಾನ ಮಾಡ್ತಾರೆ. ಇದನ್ನು ಥಟ್ ಅಂತ ಪತ್ತೆ ಹಚ್ಚುವ ಹುಡುಗಿಯರು, ಹುಡುಗರ ಮೇಲೆ ಇಂಟರೆಸ್ಟ್ ಕಳೆದುಕೊಳ್ತಾರೆ.

WEIRD NEWS: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ

ಇದೂ ಒಂದು ಕಾರಣ: ಕೆಲ ಹುಡುಗಿಯರಿಗೆ ಅಪರಿಚಿತ ಹುಡುಗರ ಜೊತೆ ಮಾತನಾಡುವುದು ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಅವರು ಸಮಯಕ್ಕೆ ಸರಿಯಾಗಿ ರಿಪ್ಲೇ ಮಾಡುವುದಿಲ್ಲ. ನಿಮ್ಮ ಬಗ್ಗೆ ಸರಿಯಾಗಿ ತಿಳಿಯದ ಕಾರಣ ಅವರು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಅಂತ ಹುಡುಗಿಯರ ಬಗ್ಗೆ ನೀವು ತಪ್ಪು ತಿಳಿಯುವುದು ಸರಿಯಲ್ಲ. ನೀವು ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು. ನಿಧಾನವಾಗಿ ನೀವು ಅವರಿಗೆ ಆಪ್ತರಾಗ್ತಿದ್ದಂತೆ ಅವರು ನಿಮ್ಮ ಮೆಸ್ಸೇಜ್ ಗೆ ಬೇಗ ಪ್ರತಿಕ್ರಿಯೆ ನೀಡಲು ಶುರು ಮಾಡ್ತಾರೆ. 
 

Latest Videos
Follow Us:
Download App:
  • android
  • ios