Women's Health: ಹಿಂಗೆಲ್ಲ ಆದ್ರೆ ನಿಮ್ಮ ಯೋನಿ ಕ್ಲೀನ್ ಇಲ್ಲ ಎಂದರ್ಥ

ಖಾಸಗಿ ಅಂಗದ ವಿಷ್ಯ ಬಂದಾಗ ಮಹಿಳೆಯರು ಮಾತನಾಡೋದು ಅಪರೂಪ. ವೈದ್ಯರ ಬಳಿ ಕೂಡ ಈ ಸಂಗತಿಯನ್ನು ಮುಚ್ಚಿಡ್ತಾರೆ. ಪರಿಸ್ಥಿತಿ ಕೈಮೀರಿದೆ ಎಂದಾಗ ಚಿಕಿತ್ಸೆ ಅನಿವಾರ್ಯವಾಗುತ್ತದೆ. ನಿಮ್ಮ ಯೋನಿಯ ಸ್ವಚ್ಛತೆ ನಿಮಗೆ ತಿಳಿದಿದ್ರೆ ಅನೇಕ ರೋಗದಿಂದ ದೂರವಿರಬಹುದು.
 

Women Health Tips. Signs That Shows Your Vagina Needs Attention

ಶರೀರದ ಸೂಕ್ಷ್ಮಾತಿ ಸೂಕ್ಷ್ಮ ಭಾಗಗಳಲ್ಲಿ ಯೋನಿ ಕೂಡ ಒಂದು. ಇದರ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವವರೂ ವಿರಳವೇ. ಯೋನಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಮಹಿಳೆಯರು ಅನುಭವಿಸುತ್ತಾರೆ. ಯೋನಿ ಸೋಂಕು ಅವರನ್ನು ಕಾಡ್ತಿದ್ರೂ ಅವರು ವೈದ್ಯರ ಬಳಿ ಹೋಗಲು ನಾಚಿಕೊಳ್ಳುವುದಿದೆ. ಆದರೆ ಆರೋಗ್ಯದ ವಿಷಯಕ್ಕೆ ಬಂದಾಗ ಯೋನಿಯ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಸಮಸ್ಯೆಗಳ ಬಗ್ಗೆ ತಿಳಿಯಬೇಕು. ಸಾಮಾನ್ಯವಾಗಿ ಯೋನಿಯ ಬೆವರು, ಮುಟ್ಟಿನ ಸಮಯದ ಬ್ಲೀಡಿಂಗ್, ಮೂತ್ರ, ಬಿಳಿ ಸೆರಗುಗಳೆಲ್ಲವೂ ಯೋನಿಯ ಸೋಂಕಿಗೆ ಮೂಲವಾಗಬಹುದು. ಯೋನಿಯ ಸೋಂಕು ತೀವ್ರವಾದರೆ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಏಕೆಂದರೆ ನಮ್ಮ ಮೂತ್ರಕೋಶ ಮತ್ತು ಹೊಟ್ಟೆಯು ಯೋನಿಯೊಂದಿಗೆ ಸಂಪರ್ಕ ಹೊಂದಿದೆ.

ಯೋನಿಯ ಸೋಂಕು ಹೆಚ್ಚಾದಂತೆ ಬ್ಯಾಕ್ಟೀರಿಯಾಗಳು ಮೂತ್ರಕೋಶವನ್ನು ಪ್ರವೇಶಿಸಿ ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಮೇಲೆ ಪರಿಣಾಮ ಬೀರುತ್ತದೆ. ಅನಾರೋಗ್ಯಗೊಂಡ ಯೋನಿ ನಿಮಗೆ ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಆಗ ಅದನ್ನು ಗಂಭೀರವಾಗಿ ಪರಿಗಣಿಸಿ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಹಾಗಾದರೆ ಯೋನಿ ಸೋಂಕಿಗೆ ಒಳಗಾದಾಗ ನಮಗೆ ಕಾಣುವ ಸಂಕೇತಗಳಾವುವು ಎಂದು ನೋಡೋಣ.

ಯೋನಿಯ ವಾಸನೆ (Smell) : ಯೋನಿ ಸ್ವಯಂ ಶುದ್ಧೀಕರಿಸುವ ಅಂಗವಾಗಿದೆ. ಇದು ತನ್ನದೇ ಆದ ನೈಸರ್ಗಿಕ ವಾಸನೆಯನ್ನು ಹೊಂದಿರುತ್ತದೆ. ಆದರೆ ನಮ್ಮ ಕೆಲವು ಅಭ್ಯಾಸಗಳಿಂದ ಯೋನಿಯ ವಾಸನೆ ಹೆಚ್ಚುತ್ತದೆ ಮತ್ತು ಯೋನಿಯ ನೈರ್ಮಲ್ಯ ಯೋನಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಪಿಎಚ್ ಕೂಡ ಅಸಮತೋಲನಗೊಳ್ಳುತ್ತದೆ. ಹೀಗೆ ಯೋನಿಯಿಂದ ಕೆಟ್ಟ ವಾಸನೆ ಬರಲು ಆರಂಭವಾದರೆ ನಿಮ್ಮ ಯೋನಿ ಸುಸ್ಥಿತಿಯಲ್ಲಿಲ್ಲ ಎಂದರ್ಥ.

ಚಿಕ್ಕ ವಯಸಲ್ಲೇ ಅಜ್ಜಿಯಂತೆ ಕಾಣ್ತಿದ್ದೀರಾ? ಈ ತಪ್ಪು ಮಾಡೋದು ಬಿಡಿ

ಯೋನಿಯಲ್ಲಿ ತುರಿಕೆ (Itching) : ಯೋನಿಯಲ್ಲಿ ಮತ್ತೆ ಮತ್ತೆ ತುರಿಕೆಯಾಗುತ್ತಿದ್ದರೆ ಇದು ಒಳ್ಳೆಯ ಲಕ್ಷಣವಲ್ಲ. ನೀವು ಬಳಸುವ ಒಳಬಟ್ಟೆ, ಸಾಬೂನು ಅಥವಾ ಇನ್ಯಾವುದೋ ವಸ್ತುವಿನ ಅಲರ್ಜಿ ಅಥವಾ ಇನ್ಫೆಕ್ಷನ್ ಆಗಿರಬಹುದು. ಯೀಸ್ಟ್ ಸೋಂಕು, ಯುಟಿಐ , ಬ್ಯಾಕ್ಟೀರಿಯಾದ ಯೋನಿನೋಸಿಸ್ ಇತ್ಯಾದಿಗಳಿಂದಲೂ ತುರಿಕೆಯ ಅನುಭವವಾಗಬಹುದು. ಹೀಗಾದಾಗ ತಜ್ಞರ ಸಲಹೆ ಪಡೆದು ಯೋನಿಯ ಆರೈಕೆ ಮಾಡಿಕೊಳ್ಳಿ.

ಯೋನಿ ವಿಸರ್ಜನೆಯ ಬಣ್ಣ (Color ) ಅಥವಾ ಪ್ರಮಾಣದಲ್ಲಿ ಬದಲಾವಣೆ: ಯೋನಿ ವಿಸರ್ಜನೆ ಸಾಮಾನ್ಯ ಸಂಗತಿಯಾಗಿದೆ. ವಿಸರ್ಜನೆ ಬಣ್ಣ ಬಿಳಿ, ಕಂದು, ಕೆಂಪು, ಹಸಿರು ಮತ್ತು ಹಳದಿ ಆಗಿದ್ದರೆ ಅಥವಾ ಹೆಚ್ಚಿನ ವಿಸರ್ಜನೆಯಾಗಿದ್ದರೆ ಯೋನಿ ಆರೋಗ್ಯವಾಗಿಲ್ಲ ಎಂದರ್ಥ. ಇದು ಯೀಸ್ಟ್, ಯುಟಿಐ ಸೋಂಕು ಅಥವಾ ಹಾರ್ಮೋನು (Hormone) ಗಳ ಅಸಮತೋಲನದಿಂದ ಉಂಟಾಗಬಹುದು. ಈ ರೀತಿಯ ಸಂಕೇತಗಳನ್ನು ನಿರ್ಲಕ್ಷಿಸಬೇಡಿ.

ಹೊಟ್ಟೆ (Stomach ) ತಳಭಾಗದಲ್ಲಿ ನೋವು:  ಕಿಬ್ಬೊಟ್ಟೆಯ ನೋವಿಗೆ ಕೂಡ ಯುಟಿಐ, ಮೂತ್ರ ಕೋಶದ ಸೋಂಕು, ಗರ್ಭಾಶಯ ಸೋಂಕು ಕೂಡ ಕಾರಣವಾಗಿರಬಹುದು. ಇದರಿಂದ ಕಿಬ್ಬೊಟ್ಟೆಯ ನೋವು ಬರಬಹುದು. ಹೀಗಾದಾಗ ನಿಮ್ಮ ಪೆಲ್ವಿಕ್ ಫ್ಲೋರ್ ಸ್ನಾಯುಗಳ ಆರೈಕೆಯನ್ನು ಕೂಡ ಮಾಡಿಕೊಳ್ಳಬೇಕು.

Women Health : ಸಾವಿಗೆ ದಾರಿ ಮಾಡ್ಕೊಡಬಹುದು ಗರ್ಭನಿರೋಧಕ ಮಾತ್ರೆ..

ಯೋನಿಯಲ್ಲಿ ಊತ: ವೆಜಿನೈಟಿಸ್ ಸಾಮಾನ್ಯ ಲಕ್ಷಣವಾಗಿದೆ. ಇದರ ಹೊರತಾಗಿ ಹರ್ಪಿಸ್ ಮತ್ತು ಯುಟಿಐಗಳ ಸ್ಥಿತಿಯಲ್ಲಿ ಕೂಡ ಯೋನಿ ಊದಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಯೋನಿ ಡ್ರೈ ಆಗುವುದು ಮತ್ತು ಚರ್ಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿರಬಹುದು. ಈಸ್ಟ್ರೋಜಿನ್ ಮಟ್ಟವು ಕಡಿಮೆಯಾದರೂ ಕೂಡ ಯೋನಿಯಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಆರೋಗ್ಯಕರ ಯೋನಿ ಹೊಂದುವುದು ಅತೀ ಮುಖ್ಯವಾಗಿದೆ. ಹಾಗಾಗಿ ಸಮತೋಲಿತ ಆಹಾರ, ಹೆಚ್ಚು ನೀರು ಸೇವನೆ, ವ್ಯಾಯಾಮಗಳಿಂದ ಯೋನಿಯನ್ನು ಸುರಕ್ಷಿತವಾಗಿಡಬೇಕು.

Latest Videos
Follow Us:
Download App:
  • android
  • ios