Women Career: ಎರಡನೇ ಬಾರಿ ವೃತ್ತಿ ಶುರುಮಾಡುವ ಮಹಿಳೆಯರಿಗೆ ಈ ಕಂಪನಿ ನೀಡುತ್ತೆ ಅವಕಾಶ
ಮದುವೆ, ಮಕ್ಕಳಾದ್ಮೇಲೆ ಎಲ್ಲ ಮುಗೀತು ಎಂದುಕೊಳ್ಳುವ ಮಹಿಳೆಯರಿಗೂ ಸಾಕಷ್ಟು ಅವಕಾಶವಿದೆ. ನೀವು ಕೂಡ ಸ್ವಾವಲಂಬಿ ಜೀವನ ನಡೆಸಬಹುದು. ಆರ್ಥಿಕವಾಗಿ ಸದೃಢವಾಗಬಹುದು. ಹೊರಗೆ ಹೋಗಲು ಸಾಧ್ಯವಿಲ್ಲ ಎನ್ನುವವರು ಮನೆಯಲ್ಲೇ ನಾನಾ ಕೆಲಸ ಮಾಡಬಹುದು. ಅದಕ್ಕೆ ಕೆಲ ಸಂಸ್ಥೆ ನೆರವಾಗ್ತಿದೆ.
ವಿದ್ಯಾವಂತ ಹುಡುಗಿಯರಿಗೆ, ಉನ್ನತ ಹುದ್ದೆಯಲ್ಲಿ ಕೆಲಸ ಪಡೆದು, ದೊಡ್ಡ ದೊಡ್ಡ ಜವಾಬ್ದಾರಿ ನಿಭಾಯಿಸಿದ್ರೂ ಮದುವೆಯಾದ್ಮೇಲೆ ಇಲ್ಲವೆ ಮಕ್ಕಳಾದ್ಮೇಲೆ ಬ್ರೇಕ್ ಪಡೆಯೋದು ಅನಿವಾರ್ಯವಾಗುತ್ತದೆ. ಭಾರತದಲ್ಲಿ ಬಹುತೇಕ ಮಹಿಳೆಯರು ಮದುವೆಯಾದ್ಮೇಲೆ ತಮ್ಮ ವೃತ್ತಿಗೆ ಗುಡ್ ಬೈ ಹೇಳ್ತಾರೆ. ಗರ್ಭಧಾರಣೆ, ಮಕ್ಕಳ ಪಾಲನೆ ಹೆಸರಿನಲ್ಲಿ ಮತ್ತಷ್ಟು ಮಹಿಳೆಯರು ವೃತ್ತಿ ತೊರೆಯುತ್ತಾರೆ. ತಮ್ಮ ವೃತ್ತಿ ಜೀವನ ಬಿಟ್ಟು ಇಡೀ ದಿನ ಸಂಸಾರಕ್ಕೆ ಮೀಸಲಿಡುವ ಮಹಿಳೆಯರಿಗೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಅಲ್ಪಸ್ವಲ್ಪ ಸಮಯ ಸಿಗಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ನಾನೇನಾದ್ರೂ ಮಾಡ್ಬೇಕು ಎನ್ನುವ ತುಡಿತ ಶುರುವಾಗುತ್ತದೆ. ಈಗಾಗಲೇ ಕೆಲಸ ಬಿಟ್ಟು ಅನೇಕ ವರ್ಷ ಕಳೆದಿರುವ ಕಾರಣ ಮತ್ತೆ ಕೆಲಸ ಸಿಗುತ್ತಾ ಎಂಬ ಚಿಂತೆ ಕೆಲವರನ್ನು ಕಾಡಿದ್ರೆ ಮತ್ತೆ ಕೆಲವರು ಸ್ವಂತ ವ್ಯಾಪಾರ ಮಾಡ್ಬೇಕು, ಆದ್ರೆ ಯಾವುದು ಎಂಬ ಗೊಂದಲಕ್ಕೆ ಬೀಳ್ತಾರೆ. ಮತ್ತೆ ವೃತ್ತಿ ಜೀವನ ಶುರುಮಾಡಲು ಬಯಸುವ ಮಹಿಳೆಯರಿಗಾಗಿಯೇ ಕೆಲ ಸಂಸ್ಥೆಗಳಿವೆ. ಅವು ನಿಮ್ಮ ಕನಸನ್ನು ನನಸು ಮಾಡಲು ನೆರವಾಗುತ್ತವೆ. ನಾವಿಂದು ಎರಡನೇ ಇನ್ನಿಂಗ್ಸ್ ಶುರು ಮಾಡಲು ಮಹಿಳೆಯರಿಗೆ ನೆರವಾಗುವ ಸಂಸ್ಥೆಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೇವೆ.
ಮಹಿಳೆಯರ ಉದ್ಯೋಗ (Employment) ದ ಕನಸು ನನಸು ಮಾಡುತ್ತೆ ಈ ಕಂಪನಿ (Company) :
Earn Money : ನಿಮ್ಮತ್ರ ಇರೋ ಕಾರಿನಿಂದಾನೇ ಗಳಿಸಬಹುದು ದುಡ್ಡು? ಇಲ್ಲಿವೆ ಟಿಪ್ಸ್
ಜಾಬ್ ಫಾರ್ ಹರ್ (Job for Her): ಜಾಬ್ ಫಾರ್ ಹರ್ ಸಂಸ್ಥೆ ಬೆಂಗಳೂರಿನಲ್ಲಿದೆ. ಅದ್ರ ಸಂಸ್ಥಾಪಕರು ನೇಹಾ ಬಗಾರಿಯಾ. ಮಕ್ಕಳಾದ್ಮೇಲೆ ಮನೆಯ ಜವಾಬ್ದಾರಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಮಹಿಳೆಯರಿಗೆ ಮತ್ತೆ ವೃತ್ತಿ ಜೀವನ ಶುರು ಮಾಡಲು ಈ ಸಂಸ್ಥೆ ನೆರವಾಗುತ್ತದೆ. ಇಂಥ ಮಹಿಳೆಯರಿಗೆ ಸ್ಫೂರ್ತಿ (Inspiration) ನೀಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತದೆ. ಸಂಸ್ಥೆ ವತಿಯಿಂದ ಕಾರ್ಯಾಗಾರಗಳು ನಡೆಯುತ್ತವೆ. ಪೂರ್ಣ ಸಮಯದ ಉದ್ಯೋಗದ ಜೊತೆ ಪಾರ್ಟ್ ಟೈಂ, ವರ್ಕ್ ಫ್ರಂ ಹೋಮ್, ಸ್ವ ಉದ್ಯೋಗ, ಸ್ಟಾರ್ಟ್ ಅಪ್ (Start up) ಸೇರಿದಂತೆ ಎಲ್ಲ ರೀತಿಯ ಅವಕಾಶಗಳನ್ನು ಈ ಸಂಸ್ಥೆ ನೀಡುತ್ತದೆ. ಉತ್ತಮ ಕಂಪನಿಗಳಲ್ಲಿ ಕೆಲಸ ಪಡೆಯಲು ಮಹಿಳೆಯರಿಗೆ ಈ ಸಂಸ್ಥೆ ಸಹಾಯ ಮಾಡುತ್ತದೆ.
ಅವತಾರ್ ಐ ವಿನ್ : 2005ರಲ್ಲಿ ಅವತಾರ್ ಐ ವಿನ್ ಶುರುವಾಗಿದೆ. ಇದನ್ನು ಡಾಕ್ಟರ್ ಸೌಂದರ್ಯ ರಾಜೇಶ್ ಶುರು ಮಾಡಿದ್ದಾರೆ. ಎರಡನೇ ಬಾರಿ ವೃತ್ತಿ ಜೀವನ ಶುರು ಮಾಡಲು ಬಯಸುವ ಮಹಿಳೆಯರಿಗೆ ಈ ಕಂಪನಿ ನೆರವಿನ ಹಸ್ತ ಚಾಚುತ್ತದೆ. ಕಾರ್ಪೋರೇಟ್ ನಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ಇಂದಿಗೂ ಅವರಿಗೆ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಮಹಿಳೆಗೆ ಮಹಿಳೆಯೇ ಆಸರೆಯಾಗಬೇಕು. ನಾನು ಈ ಕೆಲಸ ಮಾಡ್ತಿದ್ದೇನೆ ಎಂದು ಸೌಂದರ್ಯ ಹೇಳ್ತಾರೆ. 40 ಸಾವಿರಕ್ಕೂ ಹೆಚ್ಚು ಮಹಿಳೆಯರು ಅವತಾರ್ ಐ – ವಿನ್ ಜೊತೆ ಸಂಪರ್ಕದಲ್ಲಿದ್ದಾರೆ. ಈವರೆಗೆ 8 ಸಾವಿರಕ್ಕೂ ಹೆಚ್ಚು ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸವನ್ನು ಅವತಾರ್ ಐ ವಿನ್ ಮಾಡಿದೆ.
ಮನೆ ಕೆಲಸದ ಜೊತೆ ಇದನ್ನೂ ಮಾಡಿದ್ರೆ ಹಣ ಗಳಿಸ್ಬಹುದು ಗೃಹಣಿಯರು!
ಶಿರೋಜ್ (Shiroz) : ಮನೆ, ಮಕ್ಕಳ ಕೆಲಸದ ಜೊತೆ ಎಲ್ಲ ರೀತಿಯ ವೃತ್ತಿ ಮಾಡಲು ಮಹಿಳೆಯರಿಗೆ ಸಾಧ್ಯವಾಗೋದಿಲ್ಲ. ಅವರಿಗೆ ತಕ್ಕಂತ ಕೆಲಸ ನೀಡಬೇಕಾಗುತ್ತದೆ. ನೋಯ್ಡಾ ನಿವಾಸಿ ಸೈರ್ ಚಾಹಲ್ ಸಂಸ್ಥೆ ಈ ಕೆಲಸ ಮಾಡ್ತಿದೆ. ಸೈರ್ ಚಾಹಲ್, ಶಿರೋಜ್ ಹೆಸರಿನ ಕಂಪನಿ ಶುರು ಮಾಡಿ, ಮಹಿಳೆಯರಿಗೆ ನೆರವು ನೀಡ್ತಿದೆ. ಈ ಸಂಸ್ಥೆಯು ವಿಶೇಷವಾಗಿ ಮನೆಯಿಂದ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಸಹಾಯ ಮಾಡುತ್ತದೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಬಯಸುವವರು ಈ ಕಂಪನಿ ಸಹಾಯ ಪಡೆಯಬಹುದು.
ಹರ್ ಸೆಕೆಂಡ್ ಇನ್ನಿಂಗ್ಸ್ (Her Second Innings) : ಹೆಸರೇ ಹೇಳುವಂತೆ ಎರಡನೇ ಬಾರಿ ವೃತ್ತಿ ಜೀವನ ಶುರು ಮಾಡುವ ಮಹಿಳೆಯರಿಗೆ ಈ ಕಂಪನಿ ನೆರವು ನೀಡುತ್ತದೆ. ಮನೆಯಿಂದಲೇ ಕೆಲಸ, ಪೂರ್ಣ ಕೆಲಸ, ಪಾರ್ಟ್ ಟೈಂ ಕೆಲಸ ಸೇರಿದಂತೆ ಎಲ್ಲ ರೀತಿಯ ಉದ್ಯೋಗದ ಜೊತೆ ಮಹಿಳೆಯರ ಕೌಶಲ್ಯ ವೃದ್ಧಿಸುವ ತರಬೇತಿಗಳನ್ನು ಈ ಕಂಪನಿ ನಡೆಸುತ್ತದೆ.