Asianet Suvarna News Asianet Suvarna News

Earn Money : ನಿಮ್ಮತ್ರ ಇರೋ ಕಾರಿನಿಂದಾನೇ ಗಳಿಸಬಹುದು ದುಡ್ಡು? ಇಲ್ಲಿವೆ ಟಿಪ್ಸ್

ಹಣ ಗಳಿಕೆಗೆ ನಾನಾ ವಿಧಗಳಿವೆ. ಮನೆ ಮುಂದೆ ಖಾಲಿ ನಿಂತ ಕಾರಿನ ಮೂಲಕವೂ ನೀವು ಆದಾಯ ಗಳಿಸಬಹುದು. ಅನೇಕ ಕಂಪನಿಗಳು ನಿಮ್ಮ ಕಾರು ಹಾಗೂ ನಿಮ್ಮ ಸೇವನೆಯನ್ನು ಪಡೆದು ಆದಾಯ ನೀಡುತ್ತವೆ. 
 

Legitimate Ways To Make Money With A Private Car
Author
First Published May 12, 2023, 11:58 AM IST

ಸಾಲ ಮಾಡಿ ಅನೇಕರು ಕಾರು ಖರೀದಿ ಮಾಡ್ತಾರೆ.  ಆದ್ರೆ ಪ್ರತಿ ದಿನ ಕಾರು ಬಳಕೆ ಮಾಡೋರ ಸಂಖ್ಯೆ ಕಡಿಮೆಯಿರುತ್ತದೆ. ಪಟ್ಟಣ ಪ್ರದೇಶದಲ್ಲಂತೂ, ಕಾರಿನ ಸಾಲ ತೀರಿಸೋದು ಮಾತ್ರವಲ್ಲ ಪಾರ್ಕಿಂಗ್ ಗೆ ಕೂಡ ಹಣ ನೀಡಬೇಕು. ಇದ್ರಿಂದ ವೆಚ್ಛ ಜಾಸ್ತಿಯಾಗುತ್ತದೆ, ಕಾರು ನಿಂತಲ್ಲೇ ತಿಂಗಳಗಟ್ಟಲೆ ಇರುವ ಕಾರಣ ಅದ್ರಿಂದ ಬಿಡಿಗಾಸು ಸಿಗ್ತಿಲ್ಲ ಎನ್ನುವವರಿದ್ದಾರೆ. ನಿಮ್ಮ ಬಳಿ ಇರುವ ಖಾಸಗಿ ಕಾರಿನಿಂದಲೂ ನೀವು ಹಣ ಸಂಪಾದನೆ ಮಾಡಬಹುದು.  ನಿಮ್ಮ ಬಳಿ ಇರುವ ಕಾರನ್ನು ಸದ್ಭಳಕೆ ಮಾಡಿಕೊಂಡು ಹೇಗೆ ಆದಾಯ ಗಳಿಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ಕಾರಿನಿಂದ ಹಣ ಸಂಪಾದನೆ ಹೀಗೆ ಮಾಡಿ :

ಕಾರ (Car) ನ್ನು ಬಾಡಿಗೆ (Rent) ಗೆ ನೀಡಿ : ನಿಮ್ಮ ವೃತ್ತಿ ಜೊತೆ ಹೆಚ್ಚಿನ ಆದಾಯ ಗಳಿಸಬೇಕು ಎನ್ನುವವರು ಕಾರನ್ನು ಕಾಲ್ ಸೆಂಟರ್ ಅಥವಾ ಕಂಪನಿಗೆ ಬಾಡಿಗೆ ನೀಡಬಹುದು. ಆ ಕಂಪನಿ (Company) ನಿಮ್ಮ ಕಾರನ್ನು ಬಾಡಿಗೆ ಪಡೆದು ಹಣವನ್ನು ನೀಡುತ್ತದೆ. ಕಂಪನಿ ಆಯ್ಕೆ ಮಾಡಿಕೊಳ್ಳುವ ವೇಳೆ ಎಚ್ಚರಿಕೆ ವಹಿಸಬೇಕು. ಮೊದಲು ಕಂಪನಿಯ ಉದ್ಯೋಗಿಗಳ ಸಂಖ್ಯೆಯನ್ನು ಪರಿಗಣಿಸಬೇಕು. ಟ್ರಾನ್ಸ್ಫೋರ್ಟ್  ನಿರ್ವಹಿಸುವ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಬೇಕು. ಯಾವುದೇ ಟ್ರಾವೆಲ್ ಏಜೆಂಟ್ ಅಥವಾ ಏಜೆನ್ಸಿಯನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ಪ್ರತಿಯೊಂದು ಕಂಪನಿಯು ವಿಭಿನ್ನ ಸಾರಿಗೆ ನೀತಿಗಳನ್ನು ಹೊಂದಿರುವುದರಿಂದ ಕಂಪನಿ ಪಾಲಿಸಿಯನ್ನು ಪರಿಶೀಲಿಸಿ. ಎಲ್ಲ ನಿಯಮಗಳನ್ನು ಅರ್ಥ ಮಾಡಿಕೊಳ್ಳಿ. ತಿಂಗಳ ಆಧಾರದ ಮೇಲೆ ನೀವು ಕ್ಯಾಬ್ ಒಪ್ಪಂದ ಮಾಡಿಕೊಳ್ಳಿ. ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಪೇಮೆಂಟ್ ಬಗ್ಗೆ ಮಾತುಕತೆ ನಡೆಸಿ. ಉದ್ಯೋಗಿಗಳ ಸಂಖ್ಯೆ, ಅವರನ್ನು ತಲುಪಿಸುವ ಜಾಗ, ಕಾರನ್ನು ಬಳಸುವ ಸಮಯ ಎಲ್ಲವನ್ನೂ ನೀವು ಗಮನಿಸಿ, ನಿಮಗೆ ಲಾಭವಾಗುತ್ತಾ ಎಂಬುದನ್ನು ಪರಿಶೀಲಿಸಿ ನಂತ್ರ ಒಪ್ಪಂದ ಮಾಡಿ. ರೌಂಡ್ ಮೇಲೆ ಹಣ ಪಾವತಿ ಮಾಡ್ತಾರಾ ಇಲ್ಲ ತಿಂಗಳ ಸಂಬಳ ನೀಡ್ತಾರಾ ಎಂಬುದನ್ನು ಕೂಡ ನೀವು ಗಮನಿಸಬೇಕು. 

Earning App : ವಾಕಿಂಗ್ ಮಾಡ್ತಾ ಹಣ ಗಳಿಸೋಕೆ ಇಲ್ಲಿದೆ ಅವಕಾಶ

ಕಾಲ್ ಸೆಂಟರ್ ಗೆ ಕಾರನ್ನು ಬಾಡಿಗೆ ನೀಡುವ ಜೊತೆಗೆ ನೀವೇ ಕಾರನ್ನು ಚಲಾಯಿಸುತ್ತಿದ್ದರೆ ನೀವು ಚಾಲಕನಿಗೂ ಸಂಬಳ ನೀಡುವ ಅವಶ್ಯಕತೆ ಇರುವುದಿಲ್ಲ. ಬಂದ ಲಾಭವೆಲ್ಲ ನಿಮ್ಮದಾಗಿರುತ್ತದೆ. ಒಂದು ವೇಳೆ ನೀವು ಕಾರನ್ನು ಮಾತ್ರ ಕಂಪನಿಗೆ ನೀಡ್ತಿದ್ದರೆ ಚಾಲಕರ ನೇಮಕ, ಬಾಡಿಗೆ ಎಲ್ಲವನ್ನೂ ನೀವೇ ನೋಡಿಕೊಳ್ಳಬೇಕಾಗುತ್ತದೆ. ಕೆಲ ಕಂಪನಿಗಳು ಚಾಲಕನನ್ನು ತಾವೇ ನೇಮಿಸಿಕೊಂಡು, ಕಾರನ್ನು ಮಾತ್ರ ಬಾಡಿಗೆಗೆ ಪಡೆಯುತ್ತವೆ. ಅಂಥ ಕಂಪನಿ ಜೊತೆ ನೀವು ಒಪ್ಪಂದ ಮಾಡಿಕೊಂಡಿದ್ದರೆ ಸಂಬಳ ನೀಡುವ ಸಮಸ್ಯೆ ಇರುವುದಿಲ್ಲ.

ರೈಡ್‌ಶೇರಿಂಗ್ ಅಪ್ಲಿಕೇಶನ್‌ ನಲ್ಲಿ ಗಳಿಕೆ : ರೈಡ್ ಶೇರಿಂಗ್ ಅಪ್ಲಿಕೇಷನ್ ಮೂಲಕವೂ ನೀವು ಹಣ ಗಳಿಸಬಹುದು. ಇಲ್ಲಿ ನೀವು ಕಾರಿನ ಚಾಲಕರಾಗಿ ಕೆಲಸ ಮಾಡಬೇಕಾಗುತ್ತದೆ. ಪಾರ್ಟ್ ಟೈಂ  ಕಾರು ಓಡಿಸಿಯೂ ನೀವು ಆದಾಯ ಗಳಿಸಬಹುದು. ರೈಡ್ ಶೇರಿಂಗ್ ಅಪ್ಲಿಕೇಷನ್ ಮೂಲಕ ಸವಾರರು ನಿಮ್ಮ ಕಾರನ್ನು ಬುಕ್ ಮಾಡ್ತಾರೆ. ಪ್ರಯಾಣದ ನಂತ್ರ ಹಣ ಪಾವತಿ ಮಾಡ್ತಾರೆ.  ನೀವು ವಾರಾಂತ್ಯದಲ್ಲಿ ಅಥವಾ ವಾರದಲ್ಲಿ ಒಂದೆರಡು ದಿನ ಮಾತ್ರ ಈ ಕೆಲಸ ಮಾಡಬಹುದು. ಉಬರ್, ಓಲಾ ಸೇರಿದಂತೆ ಅನೇಕ ಅಪ್ಲಿಕೇಷನ್ ಆಧಾರಿತ ಸಾರಿಗೆಯಿದ್ದು, ತಡರಾತ್ರಿ ಮಾತ್ರ ಈ ಅಪ್ಲಿಕೇಷನ್ ನಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. 

Business Ideas : ಬಹುಬೇಡಿಕೆಯಿರುವ ಈ ಬ್ಯುಸಿನೆಸ್ ಶುರು ಮಾಡಿ, ಲಾಭ ಗಳಿಸಿ

ಫುಡ್ ಡಿಲೆವರಿ ಅಪ್ಲಿಕೇಷನ್ : ಫುಡ್ ಡಿಲೆವರಿ ಅಪ್ಲಿಕೇಷನ್ ಮೂಲಕವೂ ನೀವು ಹಣ ಗಳಿಸಬಹುದು. ಈ ಅಪ್ಲಿಕೇಷನ್ ಗೆ ಸೈನ್ ಇನ್ ಮಾಡಿ, ನೀವು ನಿಮಗೆ ಬೇಕಾದ ಸಮಯದಲ್ಲಿ ಫುಡ್ ಡಿಲೆವರಿ ಕೆಲಸ ಮಾಡಬಹುದು. ಉಬರ್ ಈಸ್ಟ್ ಸೇರಿದಂತೆ ಪ್ರಸಿದ್ಧ ಫುಡ್ ಡಿಲೆವರಿ ಅಪ್ಲಿಕೇಷನ್ ಜೊತೆ ನೀವು ಒಪ್ಪಂದ ಮಾಡಿಕೊಳ್ಳಿ. ಹೆಚ್ಚಿನ ಆಹಾರ ವಿತರಣಾ ಚಾಲಕರು ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮಾಡುವ ಚಾಲಕರು ರಾತ್ರಿ ಸಮಯದಲ್ಲಿ ಫುಡ್ ಡಿಲೆವರಿ ಅಪ್ಲಿಕೇಷನ್ ಜೊತೆ ಕೆಲಸ ಮಾಡಬಹುದು. ಇದಲ್ಲದೆ ನೀವು ಅಮೆಜಾನ್ ಫ್ಲೆಕ್ಸ್ ಡಿಲೆವರಿಗೆ, ಸ್ಥಳೀಯ ಜನರಿಗೆ ಕಾರನ್ನು ಬಾಡಿಗೆ ನೀಡುವ ಮೂಲಕ ಅಥವಾ ಹಾಲು, ಆಹಾರ, ಬಟ್ಟೆ ಸೇರಿದಂತೆ ವಸ್ತುಗಳನ್ನು ಸಾಗಿಸಲು ಕಾರನ್ನು ನೀಡುವ ಮೂಲಕ ಆದಾಯ ಗಳಿಸಬಹುದು. 

Follow Us:
Download App:
  • android
  • ios