ಪ್ರಪಂಚದಲ್ಲೇ ಅತಿ ದೊಡ್ಡ ತುಟಿ ಹೊಂದಿರೋ ಮಹಿಳೆ, ಉಸಿರಾಡೋದು ಸಹ ಕಷ್ಟವಂತೆ !
ಸುಂದರವಾಗಿ ಕಾಣ್ಬೇಕು ಅಂತ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಅದರಲ್ಲೂ ಹುಡುಗಿಯರಂತೂ ಬ್ಯೂಟಿಫುಲ್ ಆಗ್ಬೇಕು ಅಂತ ನಾನಾ ರೀತಿಯ ಸರ್ಜರಿ ಮಾಡಿಸ್ಕೊಳ್ತಾರೆ. ಹಾಗೆಯೇ ಇಲ್ಲೊಬ್ಬ ಯುವತಿ, ಸುಂದರವಾದ ತುಟಿಯನ್ನು ಪಡೆಯಲು ಲಿಪ್ ಫಿಲ್ಲರ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ದೊಡ್ಡ ತುಟಿಯಿಂದ ಈಕೆಯೀಗ ಉಸಿರಾಡಲು ಕಷ್ಟಪಡುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜನರು ಸೌಂದರ್ಯ (Beauty)ವನ್ನು ಹೆಚ್ಚಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಇದಕ್ಕಾಗಿ, ಕೆಲವರು ಮನೆಮದ್ದುಗಳನ್ನು ಅಳವಡಿಸಿಕೊಂಡರೆ, ಕೆಲವರು ಸರಿಯಾದ ಚರ್ಮದ ಆರೈಕೆ (Skin care) ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದೆಲ್ಲದರ ಹೊರತಾಗಿಯೂ ವಿಚಿತ್ರ ಮೂಗು, ತುಟಿ, ಬಾಯಿಯನ್ನು ಹೊಂದಿದವರಿದ್ದಾರೆ. ಈಕೆಯೂ ಹಾಗೆಯೇ. ಜಗತ್ತಿನಲ್ಲಿ ಅತಿ ದೊಡ್ಡ ತುಟಿ (Lips)ಗಳನ್ನು ಹೊಂದಿರುವ ಮಹಿಳೆ (Woman). ಈಕೆ ಬಲ್ಗೇರಿಯಾದ ನಿವಾಸಿ ಆಂಡ್ರಿಯಾ ಇವನೊವಾ. ತನ್ನ ದೊಡ್ಡ ತುಟಿಗೆ ಸಂಬಂಧಿಸಿದ ಸಂಪೂರ್ಣ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದೊಡ್ಡ ತುಟಿಯನ್ನು ಹೊಂದಿರುವ ಆಂಡ್ರಿಯಾ
ಚಿತ್ರದಲ್ಲಿ ಆಂಡ್ರಿಯಾ ತುಟಿಯನ್ನು ನೋಡಿದರೇನೆ ಅಚ್ಚರಿಯೆನಿಸುತ್ತದೆ. ಯಾಕೆಂದರೆ ಈಕೆ ಅಸಾಮಾನ್ಯವಾದ ತುಟಿಯನ್ನು ಹೊಂದಿದ್ದಾಳೆ. ಈ ಮಹಿಳೆ 2018ರಿಂದ ತನ್ನ ನೋಟಕ್ಕೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿದಳು ಮತ್ತು ಅಂದಿನಿಂದ ಈ ಪ್ರಕ್ರಿಯೆಯು ಇಲ್ಲಿಯವರೆಗೆ ಮುಂದುವರೆಯುತ್ತಿದೆ. ಆಂಡ್ರಿಯಾ ಅವರ ತುಟಿಗಳು ಎಷ್ಟು ದೊಡ್ಡದಾಗಿದೆ ಎಂದರೆ ಅವರು ಉಸಿರಾಡಲು ಸಹ ತೊಂದರೆ ಅನುಭವಿಸುತ್ತಿದ್ದಾರೆ.
ಟಾಲ್ಕಮ್ ಪೌಡರ್ ಬಳಸೋ ಮುನ್ನ ಎಚ್ಚರ, ಕ್ಯಾನ್ಸರ್‌ಗೂ ಕಾರಣವಾಗುತ್ತೆ
32 ಬಾರಿ ಲಿಪ್ ಫಿಲ್ಲರ್ ಚಿಕಿತ್ಸೆ ಪಡೆದಿದ್ದಾರೆ
ಆಂಡ್ರಿಯಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು 2018ರಲ್ಲಿ ಲಿಪ್ ಫಿಲ್ಲರ್‌ಗಳನ್ನು ಪಡೆಯಲು ಪ್ರಾರಂಭಿಸಿದರು. ಇದುವರೆಗೆ ಅವರು ಈ ಪ್ರಕ್ರಿಯೆಯನ್ನು 32 ಬಾರಿ ಮಾಡಿದ್ದಾರೆ. ಅವರು ಹೈಲುರಾನಿಕ್ ಆಸಿಡ್ ಫಿಲ್ಲರ್‌ಗಳಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ. ಈ ಮೊತ್ತವು ಸರಿಸುಮಾರು 7.59 ಲಕ್ಷ ರೂ. ಆಗಿದೆ. ಲಿಫ್ ಫಿಲ್ಲರ್‌ನಿಂದ ಆರೋಗ್ಯಕ್ಕೆ (Health) ಹಲವು ರೀತಿಯಲ್ಲಿ ಸಮಸ್ಯೆಯಾಗುತ್ತದೆ.
ಇನ್ನಷ್ಟು ದೊಡ್ಡ ತುಟಿಗಳು ಬೇಕಂತೆ: ಈಗಾಗಲೇ ಉಸಿರಾಡಲು (Breathing) ಕಷ್ಟವಾಗುವಷ್ಟು ದೊಡ್ಡ ತುಟಿಗಳನ್ನು ಹೊಂದಿದ್ದರೂ ಆಂಡ್ರಿಯಾ ಇವನೊವಾಗೆ ಇನ್ನಷ್ಟು ದೊಡ್ಡ ತುಟಿಗಳು ಬೇಕಾಗಿದೆಯಂತೆ. ಅವರು ಇನ್ನೂ ದೊಡ್ಡದಾಗಿ ಮತ್ತು ತುಟಿಗೆ ಇನ್ನಷ್ಟು ತುಂಬುವಿಕೆಯನ್ನು ಪಡೆಯಲು ಬಯಸುತ್ತಾರೆ. ಆದರೆ ಈಗ ವೈದ್ಯರು ಕೂಡಾ ಇದಕ್ಕಿಂತ ಹೆಚ್ಚಿನ ಫಿಲ್ಲಿಂಗ್ ಮಾಡಬಾರದು ಎಂದು ಹೇಳಿದ್ದಾರೆ. ಆದರೆ ಆಂಡ್ರಿಯಾ ತುಟಿಯನ್ನು ದೊಡ್ಡದುಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಲು ಬಯಸುವುದಿಲ್ಲ ಎಂದು ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗೆ ಸ್ತನ ಕಸಿ ಮಾಡಿಸಿಕೊಂಡಿದ್ದಾರೆ ಮತ್ತು ಅದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ.
ದಿನವೂ ಲಿಪ್‌ಸ್ಟಿಕ್ ಹಚ್ಚೋದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏನಾಗುತ್ತೆ?
ಹೈಲುರಾನಿಕ್ ಆಮ್ಲ ಎಂದರೇನು ?
ಹೈಲುರಾನಿಕ್ ಆಮ್ಲವು ದೇಹ (Body)ದಲ್ಲಿ ನೈಸರ್ಗಿಕವಾಗಿ ಇರುತ್ತದೆ. ಇದು ತ್ವಚೆಯನ್ನು ಹೈಡ್ರೀಕರಿಸಿ ದೃಢವಾಗಿಡಲು ಸಹಾಯ ಮಾಡುತ್ತದೆ. ಈ ಆಮ್ಲದ ಸಂಶ್ಲೇಷಿತ ರೂಪವು ಕಳೆದ ಕೆಲವು ವರ್ಷಗಳಲ್ಲಿ ಕಾಸ್ಮೆಟಿಕ್ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿದೆ. ಇದನ್ನು ವಯಸ್ಸಾದ ಚಿಹ್ನೆಗಳಿಗೆ ಮತ್ತು ಫಿಲ್ಲರ್ ಆಗಿ ಬಳಸಲಾಗುತ್ತದೆ. ಈ ಭರ್ತಿ ಸಾಮಗ್ರಿಗಳು ಒಂದರಿಂದ ಎರಡು ವರ್ಷಗಳ ವರೆಗೆ ಪರಿಣಾಮಕಾರಿಯಾಗಿರುತ್ತವೆ. ಆಂಡ್ರಿಯಾ ತನ್ನ ತುಟಿಗಳಲ್ಲಿ ಈ ಆಮ್ಲವನ್ನು ತುಂಬಿಕೊಂಡಳು, ಅದು ಅವಳ ತುಟಿಗಳನ್ನು ದಪ್ಪವಾಗಿ ಕಾಣುವಂತೆ ಮಾಡಿದೆ ಎಂದು ತಿಳಿದುಬಂದಿದೆ.
ಲಿಪ್ ಫಿಲ್ಲರ್‌ನಿಂದ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳು
ತುಟಿಗಳು ಮತ್ತು ಸುತ್ತಮುತ್ತಲಿನ ಪ್ರದೇಶವು ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತದೆ. ತುಟಿಗಳಲ್ಲಿ ಊತ ಕಂಡು ಬರುತ್ತದೆ. ತುಟಿಗಳು
ತುಂಬಿದ ನಂತರ ಒಂದು ದಿನ ಅಥವಾ ಎರಡು ದಿನಗಳವರೆಗೆ ನೋವಿನ ಅನುಭವವಾಗುತ್ತದೆ. ತುಟಿಗಳ ಸುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದು ದೃಷ್ಟಿಯ (Vision) ಮೇಲೆ ಸಹ ಪರಿಣಾಮ ಬೀರಬಹುದು. ಕೀವು ವಿಸರ್ಜನೆ, ಬಣ್ಣ ಬದಲಾವಣೆ ಅಥವಾ ತುಟಿಗಳ ಮರಗಟ್ಟುವಿಕೆ ಸಹ ಸಂಭವಿಸಬಹುದು. ಹೀಗಾಗಿ ಸೌಂದರ್ಯವರ್ಧನೆಗಾಗಿ ನಾನಾ ರೀತಿಯ ಚಿಕಿತ್ಸೆ ಮಾಡಿಕೊಳ್ಳೋ ಮೊದ್ಲು ಅವುಗಳಿಂದಾಗುವ ಪರಿಣಾಮಗಳ (Side effects) ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.