Asianet Suvarna News Asianet Suvarna News

ಕುಳಿತಲ್ಲೇ ದುಬಾರಿ ಆಭರಣದ ಒಡತಿಯಾದ ಮಹಿಳೆ

ಅದೃಷ್ಟದ ಬಾಗಿಲು ಯಾವಾಗ ತೆರೆಯುತ್ತೆ ಗೊತ್ತಿಲ್ಲ. ಅನೇಕ ಬಾರಿ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಹಾಗೂ ಅಮೂಲ್ಯವಾದ ವಸ್ತು ನಮ್ಮ ಕೈ ಸೇರಿರುತ್ತದೆ. ಅದಕ್ಕೆ ಈ ಅಮೆರಿಕಾ ಹುಡುಗಿ ಕೂಡ ಒಳ್ಳೆಯ ಉದಾಹರಣೆ. 
 

Woman Shocked As She Gets Trove Of Gold Jewelry In Her Mothers House roo
Author
First Published Feb 5, 2024, 4:42 PM IST

ಹಣದ ಅವಶ್ಯಕತೆ ಇದ್ದಾಗ, ತುರ್ತು ಸಂದರ್ಭದಲ್ಲಿ ಏನಾದ್ರೂ ಮ್ಯಾಜಿಕ್ ನಡೆದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಂತಾ ನಾವು ಅಂದುಕೊಳ್ತೇವೆ. ಮನೆಯ ಮೂಲೆಯಲ್ಲಿ ಅಥವಾ ಗೋಡೆ ಒಳಗೆ ಇಲ್ಲವೆ ಮರದ ಅಡಿಯಲ್ಲಿ ಎಲ್ಲೋ ಒಂದಿಷ್ಟು ಹಣ ಸಿಕ್ಕಿದ್ರೆ ಆರಾಮವಾಗಿ ಜೀವನ ನಡೆಸಬಹುದಿತ್ತು ಎಂದು ಕನಸು ಕಾಣ್ತೇವೆ. ಎಲ್ಲೋ ಹೊಲದಲ್ಲಿ ಯಾರಿಗೋ ನಿಧಿ ಸಿಕ್ಕಿದೆ ಎಂಬ ಸುದ್ದಿ ಕೇಳಿದಾಗೆಲ್ಲ ನಮಗೆ ಸಿಕ್ಕಿದ್ರೆ ಆ ಹಣದಿಂದ ನಾವೇನು ಮಾಡ್ತಿದ್ವಿ ಎಂಬ ಕಲ್ಪನೆ ಮಾಡಿಕೊಳ್ತೇವೆ. ಈಗಿನ ದಿನಗಳಲ್ಲಿ ಇದು ಬರೀ ಕನಸು, ಕಲ್ಪನೆ ಆಗೋಕೆ ಮಾತ್ರ ಸಾಧ್ಯ. ಮನೆಯ ಗೋಡೌನ್ ನಾವೇ ತುಂಬಿರೋ ಕಾರಣ ಅಲ್ಲಿ ಒಂದು ರೂಪಾಯಿ ಸಿಗೋದು ಕಷ್ಟ, ಇನ್ನು ರಾಶಿ ರಾಶಿ ನೋಟು ಎಲ್ಲಿಂದ ಬಂತು ಅಲ್ವಾ? ನಿಮ್ಮ ಮನೆ ತುಂಬಾ ಹಳೆಯದಾಗಿದ್ರೆ ನಿಮಗೆ ನಿಧಿ ಸಿಗೋ ಸಾಧ್ಯತೆ ಇದೆ. ಅದೇನೇ ಇರಲಿ, ಅಮೆರಿಕಾದ ಈ ಹುಡುಗಿ ಲೈಫ್ ನಲ್ಲಿ ಮ್ಯಾಜಿಕ್ ನಡೆದಿದೆ. ಆಕೆಯ ಕಲ್ಪನೆಗೆ ಮೀರಿದ ಘಟನೆ ನಡೆದಿದೆ. ಇದ್ರಿಂದ ಆಕೆ ತುಂಬಾ ಖುಷಿಯಾಗಿದ್ದಾಳೆ. 

ಬಂಗಾರ (Gold) ದ ದರ ಗಗನಕ್ಕೇರುತ್ತಿರೋ ಕಾರಣ ನಾವು ಬಂಗಾರ ಧರಿಸೋದೆ ಕಷ್ಟವಾಗಿದೆ. ಒಂದು ಓಲೆ, ರಿಂಗ್, ಚೈನ್ ಖರೀದಿ ಮಾಡೋಕೆ ಎಷ್ಟೋ ದಿನಗಳಿಂದ ಹಣ (Money) ಕೂಡಿಡಬೇಕಾದ ಸ್ಥಿತಿ ಇದೆ. ಹೀಗಿರುವಾಗ ಈ ಹುಡುಗಿಗೆ ಆಭರಣ (Jewelry) ತುಂಬಿದ ಬಾಕ್ಸ್ ಸಿಕ್ಕಿದೆ.  ಅಮೆರಿಕಾದ ಈ ಹುಡುಗಿ ಹೆಸರು ಯೊಲಾಂಡಾ ಡಯಾಜ್. ಆಕೆ ಕಂಟೆಂಟ್ ಕ್ರಿಯೇಟರ್. ಟಿಕ್ ಟಾಕ್ ನಲ್ಲಿ ಆಕೆ ಎಲ್ಲ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಮೆಕ್ಸಿಕೊದಲ್ಲಿರುವ ಹಳೆ ಮನೆಗೆ ತನ್ನ ತಾಯಿಯನ್ನು ಭೇಟಿಯಾಗಲು ಹೋದಾಗ ಆಕೆ ಜೀವನದಲ್ಲಿ ಅಧ್ಬುತ ನಡೆದಿದೆ. ಅದನ್ನು ನಂಬೋದೆ ನನಗೆ ಕಷ್ಟವಾಯ್ತು ಎಂದು ಯೊಲಾಂಡಾ ಡಯಾಜ್ ಹೇಳಿದ್ದಾಳೆ.

ದಿನಕ್ಕೆ ಕೇವಲ 20 ರೂ. ಗಳಿಸ್ತಿದ್ದ ಬೆಂಗಳೂರಿನ ಮಹಿಳೆ ಈಗ ಕೋಟಿಗಳ ಒಡತಿ, ಮಾಡೆಲ್‌ಗಳನ್ನು ಮೀರಿಸುವಷ್ಟು ಚೆಲುವೆ!

ಅಜ್ಜಿಯ ಹಳೆ ಆಭರಣಗಳನ್ನು ಯೊಲಾಂಡಾ ಡಯಾಜ್ ತಾಯಿ ಆಕೆಗೆ ಬಳುವಳಿಯಾಗಿ ನೀಡಿದ್ದಾಳೆ. ಅಜ್ಜಿ ಬಳಿ ಇಷ್ಟೊಂದು ಆಭರಣವಿತ್ತು ಎಂಬುದು ಯೊಲಾಂಡಾ ಡಯಾಜ್ ಗೆ ತಿಳಿದೇ ಇರಲಿಲ್ಲ. ತಾಯಿ ಹಳೆ ಚಿನ್ನದ ಆಭರಣಗಳನ್ನು ಮಗಳ ಕೈಗೆ ಇಡುತ್ತಿದ್ದಂತೆ ಡಯಾಜ್ ಳನ್ನು ಹಿಡಿಯೋರಿರಲಿಲ್ಲ. ನನಗೆ ಈ ಆಭರಣ ನೋಡಿ ತುಂಬಾ ಖುಷಿಯಾಗಿದೆ ಎಂದು ಟಿಕ್ ಟಾಕ್ ವಿಡಿಯೋದಲ್ಲಿ ಹೇಳಿದ ಡಯಾಜ್, ಎಲ್ಲ ಆಭರಣವನ್ನು ತನ್ನ ಅಭಿಮಾನಿಗಳಿಗೆ ತೋರಿಸಿದ್ದಾಳೆ.

ಡಯಾಜ್ ತೋರಿಸಿದ ಆಭರಣದಲ್ಲಿ ಕಿವಿಯೋಲೆ, ಬಳೆ, ಉಂಗುರ, ನೆಕ್ಲೆಸ್ ಸೇರಿದಂತೆ ಅನೇಕ ಆಭರಣಗಳಿವೆ. ನನ್ನ ಅಜ್ಜಿಯ ಆಭರಣ ಇದು. ಆದ್ರೆ ಇದ್ರ ಬಗ್ಗೆ ನನಗೆ ಗೊತ್ತಿರಲಿಲ್ಲ. ಅಮ್ಮ  ಆಭರಣ ಬಾಕ್ಸ್ (Jewellery Box) ನನಗೆ ನೀಡಿದ್ದಾಳೆ. ಇಲ್ಲಿ ಬಂಗಾರ (Gold), ಬೆಲೆ ಎನ್ನುವುದಕ್ಕಿಂತ ಅದ್ರ ಜೊತೆ ಅಡಗಿರುವ ನೆನಪು ಮುಖ್ಯವಾಗುತ್ತದೆ ಎಂದು ಡಯಾಜ್ ಹೇಳಿದ್ದಾಳೆ. ಈ ಆಭರಣದ ಜೊತೆ ಬಾಲ್ಯದ ಕಥೆಗಳಿವೆ ಎಂದು ಆಕೆ ಹೇಳಿದ್ದಾಳೆ. 

ನೀತಾ ಅಂಬಾನಿಯೂ ಅಲ್ಲ, ಯಾವ ನಟಿಯೂ ಅಲ್ಲ; ಭಾರತದ ಅತ್ಯಂತ ಶ್ರೀಮಂತ ಮಹಿಳೆ ಈಕೆ

ಅಜ್ಜಿ ಕೊಟ್ಟ ಕೆಲ ಆಭರಣಗಳನ್ನು ಈಗ್ಲೂ ಧರಿಸಬಹುದು. ಆದ್ರೆ ನಾನು ಇವುಗಳನ್ನು ಧರಿಸುವ ಬದಲು ಭದ್ರವಾಗಿ ಇಡುತ್ತೇನೆ. ಯಾಕೆಂದ್ರೆ ಇದು ತುಂಬಾ ಶುದ್ಧ ಬಂಗಾರ  (Pure Gold) ಎಂದು ಡಯಾಜ್ ಹೇಳಿದ್ದಾಳೆ. ಆಕೆ ಪೋಸ್ಟ್ ಗೆ ಸಾಕಷ್ಟು ಕಮೆಂಟ್ಸ್ ಹಾಗೂ ಲೈಕ್ಸ್ ಬಂದಿದೆ. ಲಕ್ಷಾಂತರ ಮಂದಿ ಲೈಕ್ಸ್ ಒತ್ತಿದ್ದಾರೆ. ಕೆಲವರು ತಾವು ಮೆಕ್ಸಿಕೋದಲ್ಲಿ ಹುಟ್ಟುಬೇಕಿತ್ತು ಎಂದ್ರೆ ಮತ್ತೆ ಕೆಲವರು ಆಭರಣ ತುಂಬಾ ಸುಂದರವಾಗಿ, ಆಕರ್ಷಕವಾಗಿದೆ ಎಂದು ಹೊಗಳಿದ್ದಾರೆ. 

Follow Us:
Download App:
  • android
  • ios