Asianet Suvarna News Asianet Suvarna News

ನಾಲ್ಕು ವರ್ಷ ಪತಿ ಶವದ ಜೊತೆ ಮಲಗಿದ ಪತ್ನಿ!

ವಿಶ್ವದಲ್ಲಿ ಕೆಲವೊಂದು ನಂಬಲಾಗದ ಘಟನೆಗಳು ನಡೆಯುತ್ತವೆ. ಜನರು ಮೂಢನಂಬಿಕೆ ಅಥವಾ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಅಚ್ಚರಿ ರೀತಿಯಲ್ಲಿ ಜೀವನ ನಡೆಸ್ತಾರೆ. ಶವವನ್ನು ನಾಲ್ಕು ದಿನ ಇಡೋದೇ ಕಷ್ಟ. ಈಕೆ ಪತಿ ಶವದ ಜೊತೆ ಇಷ್ಟೊಂದು ವರ್ಷ ಜೀವನ ನಡೆಸಿದ್ದಾಳೆ.  

Woman Shares Bed With Husband Corpse For Four Years roo
Author
First Published Feb 8, 2024, 12:17 PM IST

ಜನನ – ಮರಣ ಎರಡೂ ಸಹಜ ಎಂಬುದು ತಿಳಿದಿದ್ದರೂ ಆಪ್ತರ ಸಾವನ್ನು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಾಗ ನೋವಾಗುವ ಜೊತೆಗೆ ಅವರಿಲ್ಲದೆ ಬದುಕುವುದು ಕಷ್ಟವಾಗುತ್ತದೆ. ಪ್ರತಿ ದಿನ ನಮ್ಮ ಜೊತೆಗಿದ್ದ, ಮನೆಯಲ್ಲಿ ಓಡಾಡಿಕೊಂಡು, ಮಾತನಾಡಿಕೊಂಡಿರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದಾಗ ಅನೇಕರು ಶಾಕ್ ಗೆ ಒಳಗಾಗ್ತಾರೆ. ಮಾನಸಿಕ ಸ್ಥಿಮಿತ ಕಳೆದುಕೊಳ್ತಾರೆ. ಅವರ ಅಂತ್ಯಸಂಸ್ಕಾರವನ್ನು ತಿರಸ್ಕರಿಸಿ, ಶವದ ಜೊತೆ ವಾಸ ಮಾಡಲು ಸಿದ್ಧವಾಗ್ತಾರೆ. ಸತ್ತ ವ್ಯಕ್ತಿ ಮತ್ತೆ ಬದುಕಿಬರಲು ಸಾಧ್ಯವಿಲ್ಲ ಎಂಬ ಸತ್ಯ ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ಅವರಿಂದ ಸಾಧ್ಯವಾಗೋದಿಲ್ಲ. ಶವಕ್ಕೆ ಒಂದಲ್ಲ ಒಂದು ಸಮಯದಲ್ಲಿ ಮತ್ತೆ ಜೀವ ಬರುತ್ತೆ, ಮತ್ತೆ ಅದರ ಜೊತೆ ಜೀವನ ನಡೆಸಬಹುದು ಎಂಬ ಆಸೆಯಲ್ಲೇ ಮಾಟ – ತಂತ್ರಗಳ ಮೊರೆ ಹೋಗುವ ಜನರೂ ಇದ್ದಾರೆ. ಈಗ ಇಂಥ ಮಹಿಳೆಯೊಬ್ಬಳ ಸುದ್ದಿ ವೈರಲ್ ಆಗಿದೆ. ಆಕೆ ಗಂಡನ ಶವದ ಜೊತೆ ಒಂದೆರಡು ತಿಂಗಳಲ್ಲ ಬರೋಬ್ಬರಿ ನಾಲ್ಕು ವರ್ಷ ಜೀವನ ನಡೆಸಿದ್ದಾಳೆ. ಆಕೆ ಬೆಡ್ ಮೇಲೆಯೇ ಪತಿ ಶವ ಇಟ್ಟುಕೊಂಡಿದ್ದ ಮಹಿಳೆ, ವಿಷ್ಯ ಹೊರಗೆ ಹೇಳಿದ್ರೆ ಶಿಕ್ಷೆ ನೀಡೋದಾಗಿ ಬೆದರಿಸಿದ್ದಳಂತೆ. 

ನಾಲ್ಕು ವರ್ಷ ಹಾಸಿಗೆ (Bed) ಮೇಲಿತ್ತು ಪತಿಯ ಶವ : 50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ತನ್ನ ಪತಿ ವ್ಲಾಡಿಮಿರ್‌ನ ಮೃತ ದೇಹ (Dead Body) ವನ್ನು ತನ್ನ ಹಾಸಿಗೆಯಲ್ಲಿ ಇಟ್ಟುಕೊಂಡಿದ್ದಳು. 49 ವರ್ಷದ ವ್ಲಾಡಿಮಿರ್, ನಾಲ್ಕು ವರ್ಷಗಳ ಹಿಂದೆ ತನ್ನ ಇನ್ನೊಂದು ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಆತನ ಶವವನ್ನು ಕಂಬಳಿಯಲ್ಲಿ ಸುತ್ತಿಕೊಂಡು ಬಂದಿದ್ದ ಸ್ವೆಟ್ಲಾನಾ, ತನ್ನ ಹಾಸಿಗೆ ಮೇಲೆ ಇಟ್ಟಿದ್ದಳು. ತಂದೆ ಶವದ ಬಗ್ಗೆ ಹೊರಗೆ ಮಾಹಿತಿ ನೀಡಿದ್ರೆ ನಿಮ್ಮನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರೋದಾಗಿ ಮಕ್ಕಳಿಗೆ ಬೆದರಿಕೆ ಹಾಕಿದ್ದಳು. ಪತಿ ಮತ್ತೆ ಎದ್ದು ಬರ್ತಾನೆ ಎಂಬ ನಂಬಿಕೆ ಆಕೆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪ್ರತಿ ದಿನ ನೋಡ್ಬಹುದು ಎನ್ನುವ ಕಾರಣಕ್ಕೆ ಶವವನ್ನು ಹಾಸಿಗೆ ಮೇಲೆ ಇಟ್ಟುಕೊಂಡಿದ್ದಳು.

ನನ್ನ ತಂಗಿಗೆ ಬ್ರೇಕಪ್ ಆಗಿದೆ, ಆಕೆಯೊಂದಿಗೆ ಮಲಗುವಂತೆ ಗೆಳೆಯನನ್ನು ಕೇಳಿದ ಗರ್ಲ್‌ಫ್ರೆಂಡ್!

ಸಾಮಾಜಿಕ ಕಾರ್ಯಕರ್ತರು ಮನೆಗೆ ಬಂದಾಗ ವಿಷ್ಯ ಬಹಿರಂಗವಾಗಿದೆ. ಮನೆಯಲ್ಲಿ ಸ್ಲೆಟ್ಲಾನಾ, 17 ಮತ್ತು 8 ವರ್ಷದ ಇಬ್ಬರು ಹೆಣ್ಣುಮಕ್ಕಳು, 11 ವರ್ಷದ ಅವಳಿ ಗಂಡು ಮಕ್ಕಳ ಜೊತೆ ವಾಸವಾಗಿದ್ದಾಳೆ. ಹಿಂದೆ ಅಲ್ಲಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರು ಬೆಡ್ ಮೇಲಿದ್ದ ಶವದ ಬಗ್ಗೆ ಗಮನ ಹರಿಸಿರಲಿಲ್ಲ. 

ಈ 5 ವಿಧದ ರೇಶ್ಮೆ ಸೀರೆಗಳು ನಿಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿಸುತ್ತವೆ..

ಆರು ಬೆಡ್‌ರೂಮ್‌ಗಳ ಮನೆಯಲ್ಲಿ, ಅನೇಕ ಅವಶೇಷಗಳೊಂದಿಗೆ ತಂತ್ರ ವಿದ್ಯೆಯನ್ನು ನಡೆಸಲಾಗ್ತಿತ್ತು. ಸ್ವೆಟ್ಲಾನಾ ಮತ್ತು ಅವಳ ಪತಿ ಈ ಹಿಂದೆಯೂ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.  ಪಾದಕ್ಕೆ  ಈಜಿಪ್ಟಿನ ಶಿಲುಬೆ ಹಾಕಲಾಗಿತ್ತು. ಮಹಿಳೆಯ ಮನೆಯು ಟ್ಯಾರೋ ಕಾರ್ಡ್‌ಗಳು, ತಾಯತಗಳು, ತಲೆಬುರುಡೆಗಳು ಮತ್ತು ಸತ್ತವರ ಪ್ರಾಚೀನ ಈಜಿಪ್ಟಿನ ದೇವರು ಅನುಬಿಸ್‌ನ ಸೇರಿದಂಯೆ ಹಲವಾರು ಚಿತ್ರ, ಅನೇಕ ನಿಗೂಢ ವಸ್ತುಗಳಿಂದ ತುಂಬಿತ್ತು ಎಂದು ವರದಿ ಮಾಡಲಾಗಿದೆ. 

ಸ್ವೆಟ್ಲಾನಾ ಪತಿ ವ್ಲಾಡಿಮಿರ್ ನಿಧನಕ್ಕಿಂತ ಮೊದಲು ಪತಿ – ಪತ್ನಿ ಮಧ್ಯೆ ಜಗಳ ನಡೆದಿತ್ತಂತೆ. ಈ ಸಮಯದಲ್ಲಿ ಕೋಪಗೊಂಡ ಪತ್ನಿ ಸ್ವೆಟ್ಲಾನಾ, ಸತ್ತೋಗು ಅಂತಾ ಶಾಪ ಹಾಕಿದ್ದಳು. ಆಕೆ ಬಾಯಿಂದ ಈ ವಿಷ್ಯ ಹೊರಗೆ ಬರ್ತಿದ್ದಂತೆ ವ್ಲಾಡಿಮಿರ್ ತಲೆ ಸುತ್ತಿ ಬಿದ್ದಿದ್ದ. ಅಲ್ಲಿಯೇ ಸಾವನ್ನಪ್ಪಿದ್ದ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದಾರೆ.    

Follow Us:
Download App:
  • android
  • ios