Asianet Suvarna News Asianet Suvarna News

ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖ ಬದಲಾಗ್ತಿದ್ದಂತೆ ಆಸ್ಪತ್ರೆಯಿಂದ ಓಡಿದ ಮಹಿಳೆ…!

ಜನರು ಹಣ ಉಳಿಸಲು ಏನೆಲ್ಲ ಮೋಸ ಮಾಡ್ತಾರೆ. ಜನರಿಗೆ, ಬ್ಯಾಂಕ್‌ಗೆ, ಸಂಸ್ಥೆಗೆ ವಂಚಿಸುವ ಜನರಿದ್ದಾರೆ. ಆದ್ರೆ ಈ ಮಹಿಳೆ ಆಸ್ಪತ್ರೆಗೆ ಮೋಸ ಮಾಡಲು ಮುಂದಾಗಿದ್ದಳು. ಮುಖಕ್ಕೆ ಬ್ಯಾಂಡೇಜ್ ಇರುವಾಗ್ಲೇ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಳು.

Woman Runs Out Of Hospital After Plastic Surgery To Avoid Paying Video Viral roo
Author
First Published Feb 16, 2024, 3:12 PM IST

ಸ್ವಲ್ಪ ಹುಷಾರಿಲ್ಲ ಅಂತ ಆಸ್ಪತ್ರೆಗೆ ಹೋದ್ರೆ ಖರ್ಚಿನ ಮೇಲೆ ಖರ್ಚು ಬರುತ್ತೆ. ಒಂದಲ್ಲ ಮೂರ್ನಾಲ್ಕು ಚಿಕಿತ್ಸೆ, ಮಾತ್ರೆ ಅಂತ ಜೇಬು ಖಾಲಿ ಆಗಿರುತ್ತೆ. ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ಚಿಕಿತ್ಸೆ ಅನಿವಾರ್ಯ. ಆದ್ರೆ ಮೂಗು ಚೆನ್ನಾಗಿಲ್ಲ, ತುಟಿ ಅಂದವಾಗಿಲ್ಲ, ಕಿವಿ ಸೊಟ್ಟಗಿದೆ ಅದು ಇದು ಅಂತಾ ಜನರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗ್ತಾರೆ. ಇದು ಅವರ ಮೈಮೇಲೆ ಅವರೇ ಬರೆ ಎಳೆದುಕೊಂಡಂತೆ. ಕಾಸ್ಮೆಟಿಗ್ ಸರ್ಜರಿ ನಂತ್ರ ಅನೇಕ ಸಮಸ್ಯೆ ಕಾಡೋದಿದೆ. ಆದ್ರೂ ಜನರು ಅದನ್ನು ಮಾಡಿಸಿಕೊಳ್ತಾರೆ. ಇನ್ನು ಕೆಲವರು ಕಾಸ್ಮೆಟಿಕ್ ಸರ್ಜರಿಗೆ ವಿದೇಶಕ್ಕೆ ಹೋಗ್ತಾರೆ. ಈ ಶಸ್ತ್ರಚಿಕಿತ್ಸೆಗೆ ಎಷ್ಟು ಖರ್ಚಾಗುತ್ತೆ ಎಂಬುದು ಮೊದಲೇ ಗೊತ್ತಿರುತ್ತದೆ. ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ಮೊದಲೇ ರೋಗಿಗೆ ಮಾಹಿತಿ ನೀಡಿರುತ್ತಾರೆ. ಅಲ್ಲದೆ ಸ್ವಲ್ಪ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯುವ ಆಸ್ಪತ್ರೆಗಳಿವೆ. ಇಷ್ಟಾದ್ರೂ ಆಸ್ಪತ್ರೆಗೆ ಮೋಸ ಮಾಡುವ ಕೆಲ ಜನರನ್ನು ನೀವು ಆಗಾಗ ಕಾಣ್ತಿರುತ್ತೀರಿ. ಆಸ್ಪತ್ರೆ, ಬಿಲ್ ಹೆಚ್ಚಿಗೆ ಮಾಡಿದೆ ಅಂತ ಜಗಳ, ಪ್ರತಿಭಟನೆ ಮಾಡುವ ಜನರಿದ್ದಾರೆ. ಆದ್ರೆ ಈಕೆ ಮಾತ್ರ ಒಂದು ಕೈ ಮೇಲಿದ್ದಾಳೆ. ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಸರ್ಜರಿ ಆದ ಕೆಲವೇ ಗಂಟೆಯಲ್ಲಿ ಆಸ್ಪತ್ರೆಯಿಂದ ಕಾಲ್ಕಿಳುವ ಪ್ರಯತ್ನ ನಡೆಸಿದ್ದಾಳೆ. ಆಸ್ಪತ್ರೆಯಿಂದ ಹೊರಗೆ ಓಟ ಶುರು ಮಾಡಿದ್ದಾಳೆ. ಆಕೆ ಪ್ರಯತ್ನ ಫಲ ನೀಡಲಿಲ್ಲ. ಕೊನೆಯಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಘಟನೆ ಇಸ್ತಾಂಬುಲ್‌ (Istanbul) ನ ಸಿಸ್ಲಿ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ ಕಾಸ್ಮೆಟಿಕ್ (Cosmetic) ಸರ್ಜರಿ (Surgery) ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲ ವಿಚಾರಿಸಿ ನಂತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದಳು. ಅದರಂತೆ ಆಕೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ನಡೆದಿದೆ. ಸರ್ಜರಿ ನಡೆದು ಕೆಲವೇ ಗಂಟೆಯಾಗಿದ್ದು, ಆಕೆ ಆಸ್ಪತ್ರೆಯಿಂದ ಹೊರಗೆ ಓಡಿದ್ದಾಳೆ. ಅನಸ್ತೇಶಿಯಾ ಇಂಜೆಕ್ಷನ್ ಪ್ರಭಾವ ಕಡಿಮೆ ಆಗ್ತಿದ್ದಂತೆ ಮಹಿಳೆ ಆಸ್ಪತ್ರೆ ಬಟ್ಟೆಯಲ್ಲೇ ಹೊರಗೆ ಓಡಿದ್ದಾಳೆ. ಆಕೆ ಮುಖಕ್ಕೆ ಹಾಕಿದ್ದ ಬ್ಯಾಂಡೇಜ್ ಹಾಗೆ ಇದೆ. ಜೊತೆಗೆ ಬಿಳಿ ಸ್ಲಿಪ್ಪರ್ ಹಾಕಿಕೊಂಡು ಮಹಿಳೆ ಓಡ್ತಿದ್ದಾಳೆ.

ಮದುವೆಯಾಗಿ ಮಗು ಇರುವವ ವ್ಯಾಲೆಂಟೈನ್ಸ್ ಡೇಗೆ ಪತ್ನಿಗೆ ನೀಡಿದ ಬೆಸ್ಟ್ ಗಿಫ್ಟ್‌ಗೆ ಫಿದಾ ಆದ ಹೆಂಗೆಳೆಯರು?

ಆಕೆ ಓಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಪತ್ರೆ ಸಿಬ್ಬಂದಿಗೆ ವಿಷ್ಯ ಗೊತ್ತಾಗ್ತಿದ್ದಂತೆ ಅವರು ಆಕೆಯ ಹಿಂದೆ ಓಡಿದ್ದಾರೆ. ಆಕೆಯನ್ನು ಹಿಡಿದು ಮತ್ತೆ ಆಸ್ಪತ್ರೆಗೆ ಕರೆ ತಂದಿದ್ದಾರೆ. 

ವಿಡಿಯೋದಲ್ಲಿ ಮಹಿಳೆ ವೈದ್ಯರು ಮತ್ತು ನರ್ಸ್ ಗಳ ಜೊತೆ ಜಗಳ ಆಡ್ತಿರೋದನ್ನು ನೋಡ್ಬಹುದು. ಮಹಿಳೆಯ ಮುಖವು ಸ್ಪಷ್ಟವಾಗಿ ಊದಿಕೊಂಡಿದೆ ಮತ್ತು ಸಂಪೂರ್ಣವಾಗಿ ಬ್ಯಾಂಡೇಜ್ಗಳಿಂದ ಮುಚ್ಚಲ್ಪಟ್ಟಿದೆ. ಇದನ್ನು ನೋಡಿದ್ರೆ ಕೆಲವೇ ಗಂಟೆಗಳ ಹಿಂದೆ ಮಹಿಳೆಗೆ ಪ್ಲಾಸ್ಟಿಕ್ ಸರ್ಜರಿ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ.

ಅಮೆರಿಕದಲ್ಲಿನ ಉದ್ಯೋಗಕ್ಕೆ ಗುಡ್ ಬೈ ಹೇಳಿದ ಐಐಟಿ ಪದವೀಧರೆ ಈಗ 100 ಕೋಟಿ ಮೌಲ್ಯದ ಕಂಪನಿ ಒಡತಿ!

ಟರ್ಕಿಶ್ ಸುದ್ದಿ ಪತ್ರಿಕೆಗಳು ಈ ವಿಷ್ಯವನ್ನು ಬರೆದಿವೆ. ಅವರು ವಿದೇಶಿ ಮಹಿಳೆ ಎಂದಿದ್ದಾರೆಯೇ ವಿನಃ ಆಕೆ ಯಾವ ದೇಶದವಳು, ಹೆಸರೇನು ಎಂಬುದನ್ನು ವಿವರಿಸಿಲ್ಲ. ಆಕೆ ತನ್ನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಟರ್ಕಿಗೆ ಬಂದಿದ್ದಳು ಎಂದು ಸುದ್ದಿ ವಾಹಿನಿಗಳು ಹೇಳಿವೆ.

ಮಹಿಳೆ ಯಾವ ಕಾರಣಕ್ಕೆ ಆಸ್ಪತ್ರೆಯಿಂದ ಹೊರಗೆ ಓಡಿದ್ದಳು ಎಂಬುದು ಸ್ಪಷ್ಟವಾಗಿಲ್ಲ. ಮುಖ ಬದಲಾದ್ರೂ ಬ್ಯಾಂಡೇಜ್ ತೆಗೆದಿರಲಿಲ್ಲ. ಹಾಗಾಗಿ ಬಿಲ್ ಪಾವತಿ ತಪ್ಪಿಸುವ ಕಾರಣಕ್ಕೆ ಆಕೆ ಓಡಿದ್ದಾಳಾ ಅಥವಾ ಅನಸ್ತೇಶಿಯಾ ಏಪೆಕ್ಟ್ ಇನ್ನೂ ಇಳಿದಿರಲಿಲ್ಲವಾ ಎಂಬುದು ಗೊತ್ತಿಲ್ಲ. ಇದಲ್ಲದೆ ಆಕೆ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಗೆ ಕೊನೆಯಲ್ಲಿ ಬಿಲ್ ಪಾವತಿ ಮಾಡಿದ್ದಾಳಾ ಎನ್ನುವ ಬಗ್ಗೆಯೂ ಯಾವುದೇ ಸುದ್ದಿ ವಾಹಿನಿ ವರದಿ ಮಾಡಿಲ್ಲ. 

Follow Us:
Download App:
  • android
  • ios