100 ವರ್ಷ ಹಳೆ ಪೋಸ್ಟ್ ಕಾರ್ಡಲ್ಲಿತ್ತು ಮಾಟಗಾತಿ ಚಿತ್ರ!
ಹಳೆ ವಸ್ತು, ಪತ್ರಗಳನ್ನು ನೋಡೋದು, ಓದೋದು ಖುಷಿ ನೀಡುತ್ತದೆ. ಕೆಲವೊಮ್ಮೆ ನಮ್ಮದಲ್ಲದ ವಸ್ತುಗಳು ನಮಗೆ ಸಿಗುತ್ತವೆ. ಅವುಗಳನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡೋದಿದೆ. ಈ ಮಹಿಳೆ ಜೀವನದಲ್ಲೂ ಅಂಥಹದ್ದೇ ಘಟನೆ ನಡೆದಿದೆ.

ಜೀವನದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತವೆ. ಅವು ಕಲ್ಪನೆ ಮಾಡಿಕೊಳ್ಳದ ಘಟನೆಗಳಾಗಿರುತ್ತವೆ. ಮನೆಯಲ್ಲಿರುವ ಕೆಲ ವಸ್ತುಗಳನ್ನು ನಾವು ತೆಗೆಯೋದೇ ಇಲ್ಲ. ವರ್ಷಾನುಗಟ್ಟಲೆ ರೂಮ್ ನಲ್ಲಿ ಕೆಲ ವಸ್ತುಗಳು ಬಿದ್ದಿರುತ್ತವೆ. ಅವುಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ, ಅಚ್ಚರಿಯ ವಸ್ತುಗಳು ಸಿಗುವುದಿದೆ.
ಮಿಚಿಗನ್‌ನ (Michigan ) ಬೆಲ್ಡಿಂಗ್‌ನಲ್ಲಿ ಬ್ರಿಟಾನಿ ಕೀಚ್ ಜೊತೆ ಕೂಡ ಇದೇ ರೀತಿಯ ಘಟನೆ ನಡೆದಿದೆ. ಬ್ರಿಟಾನಿ ಕೀಚ್ ಗೆ 30 ವರ್ಷ. ಒಂದು ದಿನ ಬ್ರಿಟಾನಿ ಕೀಚ್, ತನ್ನ ಮನೆಯ ಹೊರಗಿರುವ ಅಂಚೆ ಪೆಟ್ಟಿಗೆಯನ್ನು ಪರಿಶೀಲಿಸಿದ್ದಾಳೆ. ಈ ವೇಳೆ ಅಚ್ಚರಿಕಾದಿತ್ತು. ಎಲ್ಲಾ ಪತ್ರ (Letter) ಗಳು ಮತ್ತು ಬಿಲ್‌ಗಳನ್ನು ಹೊರತುಪಡಿಸಿ ತುಂಬಾ ಹಳೆಯ ಪೋಸ್ಟ್ ಕಾರ್ಡ್ (Post card) ಒಂದು ಆಕೆಗೆ ಸಿಕ್ಕಿದೆ.
ಅನ್ನಪೂರ್ಣೆಯ ವಾಸ ಸ್ಥಾನ ಅಡುಗೆ ಮನೆ ಕ್ಲೀನ್ ಇಲ್ಲವೆಂದರೆ ದುಡ್ಡಿಲ್ಲವಾಗುತ್ತಷ್ಟೇ!
ಮನೆಗೆ ಬಂದಿತ್ತು 100 ವರ್ಷ ಹಳೆ ಪತ್ರ : ಮನೆಯ ಮುಂದಿರುವ ಅಂಚೆ ಬಾಕ್ಸ್ ನಲ್ಲಿ ಸಿಕ್ಕಿರುವ ಪತ್ರದ ಬಗ್ಗೆ ಬ್ರಿಟಾನಿ ಕೀಚ್ ಮೊದಲು ಹೆಚ್ಚು ಗಮನ ಹರಿಸಿರಲಿಲ್ಲ. ನಂತ್ರ ಅದನ್ನು ಸರಿಯಾಗಿ ನೋಡಿದ್ದಾಳೆ. ಮಿಚಿಗನ್ ಬೆಲ್ಡಿಂಗ್ ಅಕ್ಟೋಬರ್ 29, 1920 ರ ದಿನಾಂಕವನ್ನು ಬರೆಯಲಾಗಿದೆ. ಅದರ ಮೇಲೆ ಒಂದು ಸೆಂಟ್ ಜಾರ್ಜ್ ವಾಷಿಂಗ್ಟನ್ ಸ್ಟಾಂಪ್ ಇತ್ತು. 100 ವರ್ಷಗಳ ಹಿಂದಿನ ಪತ್ರ ಇದು ಎಂಬುದು ನೋಡಿದಾಗ ನನಗೆ ಅಚ್ಚರಿಯಾಯ್ತು. ಇಷ್ಟು ವರ್ಷಗಳ ಹಿಂದಿನ ಪತ್ರ ನನ್ನ ಮನೆಗೆ ಹೇಗೆ ಬಂತು ಎನ್ನುವ ಆಶ್ಚರ್ಯ ಬ್ರಿಟಾನಿ ಕೀಚ್ ಕಾಡಿತ್ತಂತೆ.
ಬೆಂಗಳೂರಿಗರಿಂದ ಮೂಡಿಬಂದ 'ಕಪ್ಪೆ ರಾಗ'ಕ್ಕೆ ಗ್ರೀನ್ ಆಸ್ಕರ್ ಅವಾರ್ಡ್: ಏನಿದರ ಕಥೆ?
ಪೋಸ್ಟ್ ಕಾರ್ಡ್‌ನಲ್ಲಿ ಇತ್ತು ಈ ಎಲ್ಲ ವಿಷ್ಯ : ಪೋಸ್ಟ್ ಕಾರ್ಡ್ ನಲ್ಲಿ ಮಾಟಗಾತಿ ಚಿತ್ರವನ್ನು ಬಿಡಿಸಲಾಗಿತ್ತು. ಅಲ್ಲದೆ ಕಪ್ಪು ಬೆಕ್ಕು, ಬಾವಲಿ, ಕುಂಬಳಕಾಯಿ, ಪೊರಕೆ ಮತ್ತು ಗೂಬೆ ಚಿತ್ರವನ್ನು ಬಿಡಿಸಲಾಗಿತ್ತು. ಮಾಟಗಾತಿ, ನೀವು ಬಾತುಕೋಳಿ ಅಥವಾ ಕುಂಬಳಕಾಯಿಯಾಗಲು ಬಯಸುವಿರಾ ಎಂದು ಪತ್ರದ ಮೇಲೆ ಬರೆಯಲಾಗಿತ್ತಂತೆ. ಪೋಸ್ಟ್ ಕಾರ್ಡ್‌ನಲ್ಲಿ ಬರೆದ ಮಸುಕಾದ ಅಕ್ಷರಗಳನ್ನು ಕೀಚ್ ಅರ್ಥಮಾಡಿಕೊಂಡಳು. ಅದು ಯಾರೋ ರಾಯ್ ಮೆಕ್‌ಕ್ವೀನ್ ಹೆಸರಿನಲ್ಲಿತ್ತು ಎಂಬುದು ಕೀಚ್ ಗೆ ಗೊತ್ತಾಯಿತು. ಕುಟುಂಬದ ಒಬ್ಬ ಸದಸ್ಯರು ಈ ಪತ್ರವನ್ನು ಇನ್ನೊಬ್ಬರಿಗೆ ಬರೆದಿದ್ದಾರೆ ಎಂಬುದು ತಿಳಿಯಿತು.
ಆತ್ಮೀಯ ಸೋದರ ಸಂಬಂಧಿಗಳೇ, ನಾವು ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ಆದರೆ ಅಮ್ಮನ ಮೊಣಕಾಲುಗಳು ನೋಯುತ್ತಿವೆ. ಇಲ್ಲಿ ತುಂಬಾ ಚಳಿ ಇದೆ. ಹೀಗೆ ಅನೇಕ ವಿಷ್ಯಗಳು ಇದ್ರಲ್ಲಿದ್ದವು. ದೀರ್ಘ ಪತ್ರದ ಕೊನೆಯಲ್ಲಿ ನಮಗೆ ವಾಪಸ್ ಪತ್ರ ಬರೆಯಲು ಮರೆಯದಿರಿ ಎಂದು ಬರೆಯಲಾಗಿತ್ತು. ಪತ್ರಕ್ಕೆ ಫ್ಲೋಸಿ ಬರ್ಗೆಸ್ ಸಹಿ ಹಾಕಿದ್ದರು. 100 ವರ್ಷಗಳ ಹಿಂದೆ ಬರೆದ ಈ ಪತ್ರವನ್ನು ಯಾರಿಗೆ ಬರೆಯಲಾಗಿದೆಯೋ ಅವರ ಕುಟುಂಬಕ್ಕೆ ತಲುಪಿಸಲು ಕೀಚ್ ನಿರ್ಧರಿಸಿದಳು.
ಕೊನೆಗೂ ತಲುಪಿದ ಪತ್ರ : ಪಾಸಿಟಿವಿಟಿ ಬೋಲ್ಡಿಂಗ್ ಹೆಸರಿನ ಫೇಸ್ಬುಕ್ ಪೋಸ್ಟ್ ನಲ್ಲಿ ಬ್ರಿಟಾನಿ ಕೀಚ್ ಈ ವಿಷ್ಯವನ್ನು ಪೋಸ್ಟ್ ಮಾಡಿದ್ದಳು. ಕೀಚ್ ಅವರ ಪೋಸ್ಟ್ ನೋಡಿದ ನಂತರ, ಸಾರ್ವಜನಿಕ ಗ್ರಂಥಾಲಯದಲ್ಲಿ ಕೆಲಸ ಮಾಡುವ ರಾಬಿ ಪೀಟರ್ಸ್ ಸಹ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. 1920 ರ ಜನಗಣತಿಯ ಮೂಲಕ ಶೋಧಿಸುವಾಗ, ಕೋ ಮೆಕ್ಕ್ವೀನ್ 100 ವರ್ಷಗಳ ಹಿಂದೆ ಕೀಚ್ ವಿಳಾಸದಲ್ಲಿ ವಾಸಿಸುತ್ತಿದ್ದರು ಮತ್ತು ಪತ್ರವು ಅವಳನ್ನು ತಲುಪಲಿಲ್ಲ ಎಂದು ಪೀಟರ್ಸ್ ಕಂಡುಹಿಡಿದರು. ಅವರು ಕೀಚ್ ಜೊತೆಗೆ ಮೆಕ್ಕ್ವೀನ್ ಅವರ ಮೊಮ್ಮಗಳು ರಾಯ್ ಮತ್ತು ನೋರಾ ಅವರನ್ನು ಕಂಡು ಪತ್ರವನ್ನು ಅವರಿಗೆ ನೀಡಿದ್ದಾರೆ.