ಸೀರೆ ಉಟ್ರೆ ಸಾಕು ನಡೆಯೋದೆ ಕಷ್ಟಾನಪ್ಪಾ ಅಂತಾರೆ ಇವತ್ತಿನ ಹುಡುಗಿರು. ಹೀಗಿರುವಾಗ ಇಲ್ಲೊಬ್ಬ ಮಹಿಳೆ ಸಾರಿಯಲ್ಲೇ ಅದೆಷ್ಟು ಸಖತ್ತಾಗಿ ಸ್ಟಂಟ್ ಮಾಡಿದ್ದಾಳೆ ನೋಡಿ. ಅಷ್ಟೇ ಅಲ್ಲ ಬ್ಯಾಕ್‌ಫ್ಲಿಪ್ ಸಹ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸ್ಟಂಟ್ ಮಾಡೋದಂದ್ರೆ ಸಾಕು ಅದು ಜಸ್ಟ್ ಹುಡುಗರಿಂದಾನೇ ಸಾಧ್ಯ ಅನ್ನೋ ಮೆಂಟಾಲಿಟಿ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಸಾಹಸ ಕಾರ್ಯ, ಅಡ್ವೆಂಚರ್‌ಗಳು ಗಂಡು ಮಕ್ಕಳಿಗೆ ಸಾಧ್ಯ. ಹೀಗೆ ಪಲ್ಟಿ ಹೊಡೆಯೋಕೆ ಹೆಣ್ಣು ಮಕ್ಕಳಿಂದ ಸಾಧ್ಯಾನೆ ಇಲ್ಲಪ್ಪ ಅಂತಾರೆ. ಅವ್ರೇನಿದ್ದರೂ ಅಉಡಗೆ ಮಾಡೋಕೆ, ಪಾತ್ರೆ ತೊಳೆಯೋಕೆ ಬರೀ ಇಂಥಾ ಕೆಲಸಗಳಿಗೇ ಸೈ ಅನ್ನೋ ಮೆಂಟಾಲಿಟಿಯಿದೆ. ಹೀಗಿರುವಾಗ ಇಲ್ಲೊಬ್ಬಳು ಲೇಡಿ ಸೀರೆ ಉಟ್ಟುಕೊಂಡೇ ಸ್ಟಂಟ್ ಮಾಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಮಹಿಳೆ ಸೀರೆಯಲ್ಲಿ ಸಾಹಸಗಳನ್ನು, ಬ್ಯಾಕ್‌ಫ್ಲಿಪ್‌ಗಳನ್ನು ನಿರ್ವಹಿಸುತ್ತಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ.
ಹಿಂದೆಲ್ಲಾ ಮಹಿಳೆಯರು (Women) ದಿನಪೂರ್ತಿ ಸೀರೆಯನ್ನೇ ಉಡುತ್ತಿದ್ದರು. ಸೀರೆಯನ್ನುಂಟು ಕೊಂಡೇ ಎಲ್ಲಾ ಕೆಲಸವನ್ನು ನಿರ್ವಹಿಸುವುದರಲ್ಲಿ ನಿಪುಣರಾಗಿದ್ದರು. ಆದ್ರೆ ಇವತ್ತಿನ ಕಾಲದಲ್ಲಿ ಸೀರೆ (Saree)ಯನ್ನು ಬಿಟ್ಟು ಜೀನ್ಸ್, ಕುರ್ತಾ, ಸ್ಕರ್ಟ್ ಮೊದಲಾದವುಗಳನ್ನು ಹೆಣ್ಮಕ್ಕಳು ಹೆಚ್ಚು ಬಳಸುತ್ತಿದ್ದಾರೆ. ಹೀಗೆ ಸೀರೆಯುಡುವುದೇ ಅಪರೂಪ ಎಂಬಂತಾಗಿದೆ. ಕೇವಲ ಹಬ್ಬ ಹರಿದಿನ, ಮದುವೆ (Marriage) ಮೊದಲಾದ ಸಮಾರಂಭಗಳಲ್ಲಿ ಮಾತ್ರ ಸೀರೆಯುಡುತ್ತಾರೆ. ಹೀಗೆ ಯಾವತ್ತಾದರೊಮ್ಮೆ ಸೀರೆಯುಡುವ ಕಾರಣ ನಡೆಯೋದು ಕಷ್ಟ, ಕೆಲಸ ಮಾಡುವುದು ಕಷ್ಟ ಎಂದು ಅಲವತ್ತುಕೊಳ್ಳುತ್ತಾರೆ. ಆದ್ರೆ ಈ ಮಹಿಳೆ ಮಾತ್ರ ಇದೆಲ್ಲಾ ಸುಳ್ಳು ಅನ್ನೋದನ್ನು ನಿರೂಪಿಸಿದ್ದಾರ. ಸೀರೆಯುಟ್ಟುಕೊಂಡೇ ಸಖತ್ತಾಗಿ ಸ್ಟಂಟ್ ಮಾಡಿದ್ದಾರೆ.
Viral Video: ಜಿಮ್ ನಲ್ಲೂ ಸೀರೆನಾ? ಸೀರೆ ಧರಿಸಿ ಈಕೆ ಕ್ಲಿಷ್ಟಕರ ಕಸರತ್ತು ಮಾಡ್ತಾಳೆ
ಸೀರೆಯುಟ್ಟು ಬ್ಯಾಕ್‌ಫ್ಲಿಪ್, ನಿಬ್ಬೆರಗಾದ ನೆಟ್ಟಿಗರು
ಇತ್ತೀಚಿಗೆ ಸೀರೆಯನ್ನುಟ್ಟುಕೊಂಡು ಮಹಿಳೆಯರು ವರ್ಕ್‌ಔಟ್ ಮಾಡುವುದು, ರನ್ನಿಂಗ್‌ನಲ್ಲಿ ಭಾಗವಹಿಸುವ ಹಲವು ವಿಡಿಯೋಗಳು ವೈರಲ್ ಆಗಿವೆ. ಮಹಿಳೆಯರು ಸಾಂಪ್ರದಾಯಿಕ ಸೀರೆ ಯಾವುದೇ ಸಾಧನೆಗಳಿಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಹಾಗೆಯೇ ಈ ವೈರಲ್ ಆದ ವಿಡಿಯೋದಲ್ಲಿ ನರ್ತಕಿ (Dancer), ನೃತ್ಯ ನಿರ್ದೇಶಕಿ ರುಕ್ಮಿಣಿ ವಿಜಯಕುಮಾರ್, ಸೀರೆಯಲ್ಲಿ ಸ್ಟಂಟ್, ಬ್ಯಾಕ್‌ಫ್ಲಿಪ್ ಮತ್ತು ಇತರ ಜಿಮ್ನಾಸ್ಟಿಕ್ ಚಟುವಟಿಕೆಗಳನ್ನು ಮಾಡಿದ್ದಾರೆ. ಈ ವಿಡಿಯೋ ಅಕ್ಷರಶಃ ಇಂಟರ್‌ನೆಟ್‌ನ್ನು ಬೆರಗುಗೊಳಿಸಿದೆ.
ವೀಡಿಯೊದಲ್ಲಿ, ಅವರು ಹಳ್ಳಿಯೊಂದರಲ್ಲಿ ಈ ಎಲ್ಲಾ ಸ್ಟಂಟ್‌ಗಳನ್ನು ಸುಲಭವಾಗಿ ನಿರ್ವಹಿಸುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಅವರು ಈ ಸ್ಟಂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆಯಾಗಿ 'ಸರಿಯಾದ ರೀತಿಯಲ್ಲಿ ಸೀರೆಯುಟ್ಟರೆ ನಾವು ಈ ಎಲ್ಲಾ ಕೆಲಸವನ್ನು ಮಾಡಬಹುದು' ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಆಕೆಯ ವೀಡಿಯೋ 270K ಲೈಕ್‌ಗಳನ್ನು ಪಡೆದುಕೊಂಡಿದ್ದು, ಆಕೆಯ ಪ್ರತಿಭೆಯನ್ನು (Talent) ಶ್ಲಾಘಿಸಿ ಸಾವಿರಾರು ಕಾಮೆಂಟ್‌ಗಳು ಬಂದಿವೆ.
ಸೀರೆಯುಟ್ಟು, ಹೀಲ್ಸ್ ಹಾಕಿದ್ರೂ..ಯುವತಿ ಏನ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ಲು ನೋಡಿ!
ನೆಟ್ಟಿಗರು ಸೀರೆಯುಟ್ಟು ಮಾಡಿರೋ ಈ ಸ್ಟಂಟ್‌ಗೆ ಮೆಚ್ಚುಗೆ (Compliment) ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, 'ಇದು ನಿಜವಾಗಿಯೂ ನಂಬಲಾಗದ ಸಾಹಸಕಾರ್ಯ (Adventure) ಎಂದು ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ತುಂಬಾ ಅದ್ಭುತವಾಗಿ ಸ್ಟಂಟ್ ಮಾಡಿದ್ದೀರಿ. ಅಭಿನಂದನೆಗಳು' ಎಂದಿದ್ದಾರೆ. ಇನ್ನು ಕೆಲವರು 'ಸೀರೆಯನ್ನು ಅಡ್ಡಿ ಎಂದು ಅಂದುಕೊಳ್ಳುವ ಇವತ್ತಿನ ಕಾಲದ ಕೆಲವು ಯುವತಿಯರು ಈ ವಿಡಿಯೋವನ್ನು ಖಂಡಿತವಾಗಿಯೂ ನೋಡಬೇಕು' ಎಂದು ಕಾಮೆಂಟಿಸಿದ್ದಾರೆ. .
ಈ ಹಿಂದೆ, ಒಡಿಯಾ ಮಹಿಳೆ ಮಧುಸ್ಮಿತಾ ಜೆನಾ ಅವರು 2023ರ ಮ್ಯಾಂಚೆಸ್ಟರ್ ಮ್ಯಾರಥಾನ್‌ನಲ್ಲಿ 'ಖಂಡುವಾ ಪಟ ಸೀರೆ'ಯಲ್ಲಿ ಭಾಗವಹಿಸಿದ ನಂತರ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಧುಸ್ಮಿತಾ ಇಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೀರೆಯನ್ನುಂಟುಕೊಂಡು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
