ಸೀರೆ ಧರಿಸಿ ಜಿಮ್‌ ನಲ್ಲಿ ಕ್ಲಿಷ್ಟಕರ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ರೀನಾ ಸಿಂಗ್‌ ಎಂಬಾಕೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಜಿಮ್‌ ನಲ್ಲೂ ಸೀರೆ ಧರಿಸುವುದು ಆರಾಮದಾಯಕ ಎನ್ನುವ ಭಾವನೆ ಮೂಡುವಂತೆ ವರ್ಕೌಟ್‌ ಮಾಡಿದ್ದಾರೆ.

ಜಿಮ್‌ ನಲ್ಲಿ ಧರಿಸುವ ಬಟ್ಟೆಗಳನ್ನು ವಾರ್ಡ್‌ ರೋಬುಗಟ್ಟಲೆ ಇಟ್ಟುಕೊಳ್ಳವವರಿದ್ದಾರೆ. ಬ್ರ್ಯಾಂಡೆಂಡ್‌ ಜಾಗಿಂಗ್‌ ಬಟ್ಟೆಗಳಿಂದ ಹಿಡಿದು ಯಾರೋ ಶಿಫಾರಸು ಮಾಡಿದ ವರ್ಕೌಟ್‌ ಶೂಗಳವರೆಗೆ ಜಿಮ್‌ ವಾರ್ಡ್ ರೋಬುಗಳು ತುಂಬಿ ತುಳುಕುತ್ತವೆ. ಜಿಮ್‌ ನಲ್ಲಿ ವರ್ಕೌಟ್‌ ಮಾಡುವಾಗ ಗರಿಷ್ಠ ಮಟ್ಟದ ಕಂಫರ್ಟ್‌ ನೀಡುವುದು ಮತ್ತು ಆ ಸಮಯವನ್ನು ಸುಲಭವನ್ನಾಗಿಸುವುದು ಈ ಎಲ್ಲ ಉತ್ಪನ್ನಗಳ ಗುರಿ. ಹೀಗಾಗಿ, ಜಿಮ್‌ ನಲ್ಲಿ ಧರಿಸುವ ಬಟ್ಟೆಗಳಿಗೆಂದೇ ಪ್ರತ್ಯೇಕ ವ್ಯವಸ್ಥೆ ಮಾಡುವ ದಿನಗಳು ಇವು. ಜಿಮ್‌ ಗೆ ನಿಯಮಿತವಾಗಿ ಹೋಗುವ ಮಂದಿ ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಜಿಮ್‌ ನಲ್ಲಿ ಧರಿಸುವ ಬಟ್ಟೆಗಳು ಎಂದ ಮೇಲೆ ಹಗುರವಾಗಿ ಬಿಗಿಯಾದ, ಕಂಫರ್ಟ್‌ ಆದ ಬಟ್ಟೆಗಳೇ ಸ್ಮರಣೆಗೆ ಬರುತ್ತದೆ. ಸೀರೆಯಂತಹ ಅಡ್ಡಾದಿಡ್ಡಿ ಹಾರುವ ಡ್ರೆಸ್‌ ಗಳನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಏಕೆಂದರೆ, ಕೆಲವೊಮ್ಮೆ ಅಂತಹ ಡ್ರೆಸ್‌ ಡೇಂಜರಸ್‌ ಕೂಡ ಆಗಬಲ್ಲವು. ಮಷಿನ್‌ ಗಳ ಸಮೀಪದಲ್ಲಿ ಕಂಫರ್ಟೇಬಲ್‌ ಡ್ರೆಸ್‌ ಧರಿಸುವುದು ಅಗತ್ಯ. ಆದರೆ, ಸೀರೆ ಧರಿಸಿ ಜಿಮ್‌ ನಲ್ಲಿ ವರ್ಕೌಟ್‌ ಮಾಡಲೂ ಸಾಧ್ಯ ಎಂದು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. 

ಜಿಮ್‌ (Gym)ನಲ್ಲಿ ಸೀರೆ (Saree) ಧರಿಸಿ ವರ್ಕೌಟ್‌ (Workout) ಮಾಡಿದ ಮಹಿಳೆಯನ್ನು (Woman) ರೀನಾ ಸಿಂಗ್‌ (Reena Singh) ಎಂದು ಗುರುತಿಸಲಾಗಿದ್ದು. ಅತ್ಯಂತ ಕ್ಲಿಷ್ಟಕರವಾದ ಸ್ಟೆಪ್‌ ಅನ್ನು ಯಾವುದೇ ಅಡೆತಡೆಯಿಲ್ಲದೆ ಮಾಡುವುದು ವಿಡಿಯೋದಲ್ಲಿ (Video) ಕಂಡುಬರುತ್ತದೆ. ಡ್ರೆಸ್‌ (Dress) ಬಗ್ಗೆ ಯಾವುದೇ ಅನನುಕೂಲ ಇರುವುದಾಗಿ ಎಲ್ಲಿಯೂ ಅನಿಸುವುದಿಲ್ಲ, ಅಷ್ಟು ಸುಲಭವಾಗಿ ಆಕೆ ವರ್ಕೌಟ್‌ ಮಾಡಿದ್ದಾಳೆ. ಇನ್‌ ಸ್ಟಾ ಗ್ರಾಮ್‌ (Instagram) ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಗಮನ ಸೆಳೆದಿದೆ, ಎಲ್ಲರೂ ಭಾರೀ ಮೆಚ್ಚುಗೆ (Like) ವ್ಯಕ್ತಪಡಿಸಿದ್ದಾರೆ.

ಗರ್ಭಾವಸ್ಥೆಯಲ್ಲಿ ಕೆಮ್ಮು: ಏನೇನೋ ಔಷಧಿ ಬಳಸೋ ಬದಲಿ ಈ ಮನೆ ಮದ್ದು ಟ್ರೈ ಮಾಡಿ

ರೀನಾ ಸಿಂಗ್‌ ನಿಯಮಿತವಾಗಿ ತಾವು ವರ್ಕೌಟ್‌ ಮಾಡುವ ವಿಡಿಯೋಗಳನ್ನು ಆಗಾಗ ಶೇರ್‌ (Share) ಮಾಡುತ್ತಲೇ ಇರುತ್ತಾರೆ. ಈ ಹಿಂದೆಯೂ ಆಕೆ ಸೀರೆ ಧರಿಸಿ ವರ್ಕೌಟ್‌ ಮಾಡುವ ವಿಡಿಯೋಗಳನ್ನು ಶೇರ್‌ ಮಾಡಿದ್ದುದು ಸಾಕಷ್ಟು ವೈರಲ್‌ (Viral) ಆಗಿತ್ತು. ಈ ಹಿಂದೆ ಅವರು, ಸೀರೆಯುಟ್ಟು ಡಂಬೆಲ್ಸ್‌, ಹೆವಿವೈಟ್‌ ಲಿಫ್ಟಿಂಗ್‌ (Heavy Weight Lifting) ಸೇರಿದಂತೆ ಹಲವು ರೀತಿಯ ಕ್ಲಿಷ್ಟಕರ ಸ್ಟೆಪ್‌ ಗಳನ್ನು ಮಾಡಿರುವ ವಿಡಿಯೋಗಳನ್ನು ಶೇರ್‌ ಮಾಡಿದ್ದರು. ಈ ವರ್ಷದ ಜನವರಿ ತಿಂಗಳಲ್ಲಿ ಸೀರೆ ಧರಿಸಿ ವರ್ಕೌಟ್‌ ಮಾಡಿದ ತಮ್ಮ ಮೊದಲ ವಿಡಿಯೋ ಶೇರ್‌ ಮಾಡಿದ್ದ ಅವರು “ಇದಿನ್ನೂ ಆರಂಭʼ ಎಂದು ಬರೆದುಕೊಂಡಿದ್ದರು. ಅದಾದ ಬಳಿಕ, ಈಗ ಪುನಃ ಸಾಕಷ್ಟು ಕ್ಲಿಷ್ಟವೆನಿಸುವ ಭಂಗಿಯನ್ನು ಸಹ ಸೀರೆ ಧರಿಸಿ ಮಾಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?

ಸಖತ್ತಾಗಿ ಪೋಸ್‌
ರೀನಾ ಸಿಂಗ್‌, ಮಾರ್ಷಲ್‌ ಆರ್ಟ್‌ ಪ್ರದರ್ಶನದ ಸಮಯದಲ್ಲಿ ಹಾಕುವಂತೆ ಸೀರೆಯನ್ನು ಕಚ್ಚೆಯಂತೆ ಮಾಡಿ ಧರಿಸಿದ್ದಾಳೆ. ಸೀರೆಯ ಬ್ಲೌಸ್‌ ನ ಕೈ ತೋಳುಗಳು ಫ್ಯಾನ್ಸಿಯಾಗಿವೆ. ಕಸರತ್ತು ಪ್ರದರ್ಶಿಸುತ್ತಲೇ ರೀನಾ ಸಖತ್ತಾಗಿ ಪೋಸ್‌ (Pose) ಕೊಟ್ಟಿದ್ದಾರೆ. ಯಾವುದೇ ಕಿರಿಕಿರಿ ಅಥವಾ ಸೀರೆಯಿಂದ ಅಡೆತಡೆಯಾಗುವ (Uncomfortable) ಭಾವನೆಯಿಲ್ಲದೇ ಕಸರತ್ತು ಪ್ರದರ್ಶಿಸಿದ್ದಾರೆ. 
“ಇದು ಅಮೇಜಿಂಗ್‌ (Amazing), ಅದ್ಭುತʼ ಎಂದು ಹಲವರು ಕೊಂಡಾಡಿದ್ದು, ಹಲವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.