Asianet Suvarna News Asianet Suvarna News

Viral News: ಐದು ಸಾವಿರ ಚೇಳಿನ ಜೊತೆ ವಾಸ.. ಸಾಮಾನ್ಯಳಲ್ಲ ಈಕೆ!

ಚೇಳು ದೂರದಲ್ಲಿ ಕಂಡ್ರೂ ನಮಗೆ ಭಯವಾಗುತ್ತೆ. ಅದು ಕಚ್ಚಿದ್ರೆ ವಿಪರೀತ ನೋವಾಗುವ ಜೊತೆಗೆ ಸಾವು ಬರೋದಿದೆ. ಹೀಗಿರುವಾಗ ಈ ಮಹಿಳೆ ಮಾಡಿದ ಕೆಲಸ ಅಂತಿಂತದ್ದಲ್ಲ. ಚೇಳಿನ ಜೊತೆಯೇ ಈಕೆ ವಾಸ ಮಾಡಿದ್ದಾಳೆ.  

Woman Lived With Five Thousand Poisonous Scorpions For Thirty Three Days Bizzare News Trending roo
Author
First Published Sep 18, 2023, 5:53 PM IST

ಪ್ರಪಂಚದಾದ್ಯಂತ ಸಾಕಷ್ಟು ವಿಷಕಾರಿ ಜೀವಿಗಳಿವೆ. ಈ ಜೀವಿಗಳ ಕಡಿತದಿಂದ ಪ್ರತಿ ವರ್ಷ ನೂರಾರು ಮಂದಿ ಸಾವನ್ನಪ್ಪುತ್ತಾರೆ. ಈ ಅಪಾಯಕಾರಿ ಜೀವಿಗಳಲ್ಲಿ ಚೇಳು ಕೂಡ ಸೇರಿದೆ. ಈ ಚೇಳಿನ ಕಡಿತದ ನೋವು ಸಹಿಸೋದು ಕಷ್ಟ. ಇದ್ರಿಂದ ಕೆಲವರು ಸಾವನ್ನಪ್ಪೋದಿದೆ. ಇನ್ನು ಕೆಲವು ಕಡೆ ಈ ಚೇಳನ್ನೇ ತಿನ್ನುವವರಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ 5 ಸಾವಿರಕ್ಕೂ ಹೆಚ್ಚು ಚೇಳುಗಳೊಂದಿಗೆ ಹಲವಾರು ದಿನಗಳಿಂದ ವಾಸವಾಗಿದ್ದಾಳೆ. 5 ಸಾವಿರಕ್ಕೂ ಹೆಚ್ಚು ಚೇಳುಗಳೊಂದಿಗೆ ವಾಸವಾಗಿದ್ದ ಮಹಿಳೆ ಯಾರು, ಆಕೆ ಕಥೆ ಏನು ಎಂಬುದನ್ನು ನಾವು ಹೇಳ್ತೆವೆ. 

ಕಾಂಚನ್ ಕೆಟ್ಕೆ ಈ ಸಾಹಸಕ್ಕೆ ಕೈಹಾಕಿದ ಮಹಿಳೆ. ಆಕೆ ಥಾಯ್ಲೆಂಡ್ (Thailand) ನಿವಾಸಿ.  ಚೇಳಿನ ಜೊತೆ ವಾಸವಾಗಿದ್ದ ಈ ಮಹಿಳೆ ವಿಶ್ವದಾಖಲೆ World record  ಮಾಡಿದ್ದಾಳೆ. ನಮಗೆ ಒಂದು ಚೇಳು ಕಂಡ್ರೂ ಭಯವಾಗುತ್ತೆ. ಚೇಳು ಕಂಡ ತಕ್ಷಣ ಕೋಲು ತಂದು ಕೊಲ್ಲೋರೇ ಹೆಚ್ಚು. ಆದ್ರೆ ಕಾಂಚನ್ ಒಂದಲ್ಲ ಎರಡಲ್ಲ ಬರೋಬ್ಬರಿ 5,320 ವಿಷಕಾರಿ ಚೇಳುಗಳೊಂದಿಗೆ 12 ಚದರ ಮೀಟರ್ ಗಾಜಿನ ಕೋಣೆಯಲ್ಲಿ 33 ದಿನಗಳನ್ನು ಕಳೆದಿದ್ದಾಳೆ. 2002ರಲ್ಲೂ ಕಾಂಚನ್ ಕೆಟ್ಕೆ ಇದೇ ರೀತಿಯ ದಾಖಲೆಯನ್ನು ಮಾಡಿದ್ದಳು. ಇಲ್ಲಿಯವರೆಗೆ ಕಾಂಚನಾ ಮಾಡಿದ ವಿಶ್ವ ದಾಖಲೆಯನ್ನು ಯಾರೂ ಈವರೆಗೆ ಮುರಿಯಲು ಸಾಧ್ಯವಾಗಿಲ್ಲ.

ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

ಚೇಳಿ (Scorpion) ನಿಂದ ಕಚ್ಚಿಸಿಕೊಂಡರೂ ಭಯಪಡದ ಕಾಂಚನ್ : ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಕಾಂಚನ್ 33 ದಿನಗಳ ಕಾಲ ಚೇಳುಗಳೊಂದಿಗೆ ವಾಸಿಸುತ್ತಿದ್ದಳು. ಈ ಸಮಯದಲ್ಲಿ ವಿಷಕಾರಿ ಚೇಳು 13 ಬಾರಿ ಕಚ್ಚಿದೆ. ಅವರ ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ಕಾರಣ ಚೇಳು ಕಚ್ಚಿದರೂ ಯಾವುದೇ ಪರಿಣಾಮ ಬೀರಲಿಲ್ಲ. ಕಾಂಚನ್ 33 ದಿನಗಳ ಕಾಲ ಚೇಳಿನ ಜೊತೆ ವಾಸವಾಗಿದ್ದು ಸುಲಭದ ಮಾತಲ್ಲ. ಆಕೆ ಚೇಳು 13 ಬಾರಿ ಕಚ್ಚಿದ್ರೂ ಯಾವುದೇ ಭಯಕ್ಕೆ ಒಳಗಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. 

ಆರೋಗ್ಯ ಹಾಳು ಮಾಡೋದೊಂದೆ ಅಲ್ಲ ಸುಧಾರಣೆ ಕೆಲಸ ಕೂಡ ಮಾಡುತ್ತೆ ಒತ್ತಡ!

ಕಾಂಚನ್ ವಾಸವಾಗಿದ್ದ ಕೋಣೆಯಲ್ಲಿ ಇತ್ತು ಎಲ್ಲ ಸೌಲಭ್ಯ: 33 ದಿನಗಳ ಕಾಲ ಗ್ಲಾಸ್ ಮನೆಯಲ್ಲಿದ್ದ ಕಾಂಚನ್ ಗೆ ಎಲ್ಲ ಸೌಲಭ್ಯವನ್ನು ಒದಗಿಸಲಾಗಿತ್ತು. ಟಿವಿ, ಪುಸ್ತಕಗಳು ಮತ್ತು ಫ್ರಿಜ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕೋಣೆಯಲ್ಲಿ ಇರಿಸಲಾಗಿತ್ತು. ಕಾಂಚನ್ 24 ಗಂಟೆಯೂ ಕೋಣೆಯಲ್ಲೇ ಇರಬೇಕಾಗಿತ್ತು. ಆಕೆಗೆ ಬೇರೆಲ್ಲಿಯೂ ಹೋಗಲು ಅವಕಾಶವಿರಲಿಲ್ಲ. ಕಾಂಚನ್  8 ಗಂಟೆಗಳಲ್ಲಿ ಕೇವಲ 15 ನಿಮಿಷಗಳ ಕಾಲ ಶೌಚಾಲಯಕ್ಕೆ ಹೋಗುವ ಅವಕಾಶ ಸಿಗ್ತಾ ಇತ್ತು.   ಕಾಂಚನ್ ಅವಳ ಕೋಣೆಯಲ್ಲಿ ಶಾಪಿಂಗ್ ಮಾಲ್ ಕೂಡ ನಿರ್ಮಿಸಲಾಗಿತ್ತು. ಅಲ್ಲಿಗೆ ಅನೇಕರು ಬರ್ತಿದ್ದರು. ಈ ವೇಳೆ ಕಾಂಚನಾ ನೋಡಿ ಹೋಗ್ತಿದ್ದರು.

ಚೇಳಿನ ಜೊತೆ ಈ ಹಿಂದೆ ವಾಸವಾಗಿದ್ದಳು ಈ ಮಹಿಳೆ : ಕಾಂಚನ್ ದಾಖಲೆ ಮುರಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಈ ಹಿಂದೆ ಮಲೇಷ್ಯಾದ ನಾರ್ ಮಲೆನಾ ಹಾಸನ್ ಹೆಸರಿನಲ್ಲಿ ಈ ವಿಶಿಷ್ಟ ದಾಖಲೆ ದಾಖಲಾಗಿತ್ತು. ಸಾವಿರಾರು ಚೇಳುಗಳಿರುವ ಕೋಣೆಯಲ್ಲಿ ನಾರ್ ಮಲೆನಾ ಹಾಸನ್ 30 ದಿನಗಳ ಕಾಲ ಕಳೆದಿದ್ದಳು. ನಾರ್ ಮಲೆನಾ ಹಾಸನ್ ಗೆ ಕೂಡ ಚೇಳುಗಳು ಕಚ್ಚಿದ್ದವು. ಚೇಳು ಕಚ್ಚಿದ ಕಾರಣ ಹಾಸನ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಒಂದ್ವೇಳೆ ಆಕೆ ಇನ್ನಷ್ಟು ದಿನ ಅಲ್ಲೇ ಇದ್ದರೆ ಬದುಕುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ತೀರ್ಮಾನಿಸಿ ಆಕೆಯನ್ನು ಕೋಣೆಯಿಂದ ಹೊರಗೆ ತರಲಾಗಿತ್ತು. ನಾರ್ ಮಲೆನಾ ಹಾಸನ್ ಗೆ 7 ಚೇಳು ಕಚ್ಚಿತ್ತಂತೆ. 

Follow Us:
Download App:
  • android
  • ios