ಇನ್ನೂ ಮಗುವಿನಂತೆಯೇ ಕಾಲ ಕಳೆಯೋ ಮಹಿಳೆ! ತೊಟ್ಟಿಲಲ್ಲಿ ಮಲಗೋ ಈಕೆ ಡೈಪರ್‌ಗೆ ಸ್ಪೆಂಡ್ ಮಾಡೋದಿಷ್ಟು!
ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ಅವರ ಜೀವನಶೈಲಿ ಭಿನ್ನವಾಗಿರುತ್ತದೆ. ಯಾರಿಗೂ ಭಯಪಡದೆ, ಮುಜುಗರಪಟ್ಟುಕೊಳ್ಳದೆ ತಮ್ಮಿಷ್ಟದಂತೆ ಲೈಫ್ ಲೀಡ್ ಮಾಡ್ತಾರೆ. ಅದ್ರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ಆಕೆ ಲೈಫ್ ಸ್ಟೈಲ್ ನೋಡಿದ್ರೆ ಅಚ್ಚರಿಯಾಗುತ್ತೆ.
ದೊಡ್ಡವರಾಗ್ತಿದ್ದಂತೆ ನಮ್ಮ ಬುದ್ಧಿ ಬೆಳೆಯುತ್ತಾ ಹೋಗುತ್ತೆ. ನಾವು ಮಕ್ಕಳಂತೆ ಇರ್ಬೇಕು ಅಂತಾ ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಿಲ್ಲ. ಜವಾಬ್ದಾರಿ, ಓದು, ಶಿಕ್ಷಣ, ಕೆಲಸ ನಮ್ಮನ್ನು ನಮಗೆ ಗೊತ್ತಿಲ್ಲದೆ ಬದಲಿಸಿರುತ್ತದೆ. ಆಯಾ ವಯಸ್ಸಿನಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು, ಯಾವ ಬಟ್ಟೆ ಧರಿಸಬೇಕು ಎಂಬೆಲ್ಲ ಅಲಿಖಿತ ನಿಯಮವೊಂದು ನಮ್ಮಲ್ಲಿದೆ. ನಾವದನ್ನು ಪಾಲಿಸುತ್ತ ಬಂದಿದ್ದೇವೆ ಕೂಡ. ಕೆಲವೊಮ್ಮೆ ಆ ನಿಯಮ ಮೀರಿ ನಡೆದುಕೊಂಡಾಗ, ಎಲ್ಲರ ಮುಂದೆ ಸ್ವಲ್ಪ ಚಿಕ್ಕವರಂತೆ ವರ್ತಿಸಿದಾಗ ಸಮಾಜ ನಮ್ಮನ್ನು ಆಡಿಕೊಳ್ಳುತ್ತದೆ. ಇಷ್ಟು ದೊಡ್ಡವರಾದ್ರೂ ಬುದ್ಧಿ ಬಂದಿಲ್ಲ. ಚಿಕ್ಕವರಂತೆ ವರ್ತಿಸ್ತಾರೆ ಎಂಬ ಮಾತುಗಳನ್ನು ನಾವು ಕೇಳಬೇಕಾಗುತ್ತದೆ.
ವಯಸ್ಸು (Age) ಎರಡು ದಾಟುತ್ತಿದ್ದಂತೆ ಮಕ್ಕಳಿಗೆ ಡೈಪರ್ (Diaper) ಹಾಕೋದನ್ನು ಪಾಲಕರು ಬಿಡ್ತಾರೆ. ಎಲ್ಲಿ ಮೂತ್ರ ವಿಸರ್ಜನೆ ಮಾಡ್ಬೇಕು ಎಂಬುದನ್ನು ಕಲಿಸ್ತಾರೆ. ಮಕ್ಕಳು ದೊಡ್ಡವರಾದಂತೆ ಅವರ ಆಟಿಕೆ ಬದಲಾಗುತ್ತದೆ. ಆದ್ರೆ ಈ ಹುಡುಗಿ ದೊಡ್ಡವಳಾದ್ರೂ ದೊಡ್ಡವಳಂತಿಲ್ಲ. ಚಿಕ್ಕವರಂತೆ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದಾಳೆ. ಮಕ್ಕಳಂತೆ ಡೈಪರ್ ಧರಿಸುವ ಈಕೆ ಆಟಿಕೆ ಹಿಡಿದು ಆಟ ಆಡ್ತಾಳೆ.
ಕಷ್ಟಗಳು ಬಂದಾಗ ಸುಧಾಮೂರ್ತಿ ಹೇಗೆ ಎದುರಿಸ್ತಾರೆ? ಅವರ ಬಳಿಯಿದೆ ಸರಳ ಸೂತ್ರ
ಯಸ್, ನಾವು ಹೇಳ್ತಿರೋದು ನಿಜ. ಈಕೆ ಹೆಸರು ಪೆಗ್ಗಿ ಮಿಲ್ಲರ್. ಅಮೆರಿಕ (Usa) ದ ಪೂರ್ವ ಕರಾವಳಿಯ ನಿವಾಸಿ. ಕಂಟೆಂಟ್ (Content) ಕ್ರಿಯೇಟರ್ ಆಗಿ ಕೆಲಸ ಮಾಡ್ತಾಳೆ. ಫುಲ್ ಟೈಂ ಮಗುವಾಗಿರೋದು ಈಕೆಗೆ ಇಷ್ಟ. ಆಹಾರದಿಂದ ನಿದ್ರೆ ಮಾಡುವವರೆಗೆ ಎಲ್ಲವನ್ನೂ ಮಕ್ಕಳಂತೆ ಮಾಡ್ತಾಳೆ ಪೆಗ್ಗು ಮಿಲ್ಲರ್.
ಪೆಗ್ಗಿ ಮಿಲ್ಲರ್ ತನ್ನನ್ನು ತಾನು ವಯಸ್ಕ ಮಗು ಎಂದು ಕರೆದಿಕೊಳ್ಳುತ್ತಾಳೆ. 2018ರಿಂದ ಹೀಗೇ ಇರಲು ಪೆಗ್ಗಿ ಮಿಲ್ಲರ್ ನಿರ್ಧರಿಸಿದ್ದಾಳೆ. ಪ್ರತಿ ದಿನ ಪೆಗ್ಗಿ ಮಿಲ್ಲರ್ ಡೈಪರ್ ಬಳಕೆ ಮಾಡ್ತಾಳೆ. ಈ ಡೈಪರ್ ಗೆ ಆಕೆ 230 ಪೌಂಡ್‌ಗಳು ಅಂದ್ರೆ ಸುಮಾರು 24 ಸಾವಿರ ರೂಪಾಯಿಗಳು ಪ್ರತಿ ತಿಂಗಳು ಖರ್ಚು ಮಾಡ್ತಾಳೆ. ಈ ಹಣ ಪೇಡ್ ಸಬ್ಸ್ಕ್ರೈಬ್ ನಿಂದ ಸಿಗುತ್ತಂತೆ. ಪೆಗ್ಗಿ ಮಿಲ್ಲರ್ ಹೀಗಿರೋದನ್ನು ಆಕೆ ಸ್ನೇಹಿತರು ಮತ್ತು ಕುಟುಂಬಸ್ಥರು ಇಷ್ಟಪಟ್ಟಿದ್ದಾರೆ. ಅವರಿಂದ ಯಾವುದೇ ಸಮಸ್ಯೆ ಈಕೆಗೆ ಆಗಿಲ್ಲ. ಪೆಗ್ಗಿ ಪ್ರತಿ ದಿನ ತೊಟ್ಟಿಲಲ್ಲಿ ಮಲಗ್ತಾಳೆ. ಬೆಳಿಗ್ಗೆ ಎದ್ದು ಡೈಪರ್ ಚೇಂಜ್ ಮಾಡ್ತಾಳೆ. ನಂತ್ರ ಆಟಿಕೆಗಳ ಜೊತೆ ಆಟ ಶುರು ಮಾಡ್ತಾಳೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಾಳೆ.
ಪೆಗ್ಗಿ ಮಿಲ್ಲರ್ ಗೆ ಆಟಿಕೆಗಳನ್ನು ಸಂಗ್ರಹಿಸೋದು ಒಂದು ಕೆಲಸ. ತನ್ನಿಷ್ಟದ ಆಟಿಗಳನ್ನು ಖರೀದಿ ಮಾಡಿ ತರ್ತಾಳೆ ಪೆಗ್ಗಿ. ಮಕ್ಕಳಂತೆ ಜೀವಿಸುವ ನಿರ್ಧಾರ ತೆಗೆದುಕೊಂಡಾಗ ಅನೇಕರು ದಂಗಾಗಿದ್ದರಂತೆ. ಇಂಟರ್ನೆಟ್ ನಲ್ಲಿ ಸರ್ಜ್ ಮಾಡಿದಾಗ, ಪೆಗ್ಗಿ ಮಾತ್ರವಲ್ಲ ಇನ್ನೂ ಅನೇಕರು ಹೀಗೆ ಜೀವನ ನಡೆಸುವವರು ಇದ್ದಾರೆ ಎಂಬ ಸತ್ಯ ಅವರಿಗೆ ಗೊತ್ತಾಯ್ತಂತೆ.
ಪೆಗ್ಗಿ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಆಕೆಯ ವೆಬ್ಸೈಟ್ ಕೂಡ ಇದೆ. ಆಟಿಕೆಗಳ ಜೊತೆ ಆಟ ಆಡೋದು ನನಗೆ ಇಷ್ಟ. ಮಕ್ಕಳಿಗೆ ಪ್ರಿಯವಾಗುವ ಎಲ್ಲ ಕೆಲಸಗಳನ್ನು ಮಾಡಲು ನನಗೆ ಖುಷಿಯಾಗುತ್ತದೆ. ಪೊಲ್ಲಿ ಪಾಕೆಟ್ಸ್ ಮತ್ತು ಬಾರ್ಬಿಗಳನ್ನು ಸಂಗ್ರಹಿಸಲು ತುಂಬಾ ಸಂತೋಷವಾಗುತ್ತದೆ ಎಂದು ಪೆಗ್ಗಿ ಹೇಳಿದ್ದಾಳೆ.
ನಟನೆಗೆ ಹೋದರೆ ಶೂಟ್ ಮಾಡುತ್ತೇನೆ ಎಂದಿದ್ದ ತಂದೆ! ಇಂದೀಕೆ ಬಾಲಿವುಡ್‌ನ ಖ್ಯಾತ ನಟಿ
ಪೆಗ್ಗಿಯ ಜೀವನ ನೋಡಿದ ಅನೇಕರು ಕಮೆಂಟ್ ಮಾಡ್ತಿರುತ್ತಾರೆ. ಪೆಗ್ಗಿ ಆರೋಗ್ಯ ಸರಿಯಿಲ್ಲ ಎಂದು, ಪೆಗ್ಗಿ ಬುದ್ಧಿಮಾಂಧ್ಯೆ (Mentally Retarded) ಎಂದು, ಪೆಗ್ಗಿ ಮೆದುಳು ಬೆಳವಣಿಗೆ ಆಗಿಲ್ಲ ಎಂದು ಹೀಗೆ ನಾನಾ ರೀತಿಯ ನೆಗೆಟಿವ್ ಕಮೆಂಟ್ (Negative Comments) ಬರ್ತಿರುತ್ತದೆ. ಆದ್ರೆ ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎನ್ನುತ್ತಾಳೆ ಪೆಗ್ಗಿ.