Asianet Suvarna News Asianet Suvarna News

ಮೈಕ್ರೋವೇವ್​ನಲ್ಲಿ ಮೊಟ್ಟೆ ಬೇಯಿಸೋಕೆ ಹೋಗಿ ಮುಖಾನೇ ಸುಟ್ಟೋಯ್ತು!

ಮಹಿಳೆಯೊಬ್ಬಳು ವೈರಲ್ ಟಿಕ್​ಟ್ಯಾಕ್​ ಹ್ಯಾಕ್​ ವಿಡಿಯೋ ನೋಡಿ ತಾನೂ ಅದನ್ನು ಮಾಡಲು ಹೋಗಿ ಅಪಾಯ ತಂದುಕೊಂಡಿದ್ದಾಳೆ. ಮೈಕ್ರೋವೇವ್​ನಲ್ಲಿ ಮೊಟ್ಟೆಗಳನ್ನು ಬೇಯಿಸಲು ಹೋದಾಗ, ಮೊಟ್ಟೆಗಳು ಸ್ಫೋಟಗೊಂಡಿವೆ. ಆ ಪರಿಣಾಮವಾಗಿ ಆಕೆಯ ಮುಖದ ಚರ್ಮವೇ ಸುಟ್ಟುಹೋಗಿದೆ.

Woman Follows Viral TikTok Hack To Cook Egg, Left With Skin Peeling From Face Vin
Author
First Published Jun 1, 2023, 1:12 PM IST

ಹೊಸ ಹೊಸ ವಸ್ತುಗಳ ಆವಿಷ್ಕಾರವಾಗುತ್ತಿದೆ. ಮನುಷ್ಯ ಆಲಸಿಯಾಗುತ್ತಿದ್ದಾನೆ. ಹೀಗಾಗಿ ಮನುಷ್ಯ ಹಸಿವಾದಾಗ ತಿನ್ನೋಕೆ ಅಡುಗೆ ಮಾಡೋಕು ನಾಲ್ಕೈದು ಉಪಕರಣಗಳ ನೆರವು ಬೇಕಾಗುತ್ತದೆ. ಹಿಂದಿನ ಕಾಲದಲ್ಲೆಲ್ಲಾ ಕಲ್ಲಿನಲ್ಲಿ ಅರೆದು, ಒಲೆಯಲ್ಲಿ ಬೇಯಿಸಿ ಅಡುಗೆ ಮಾಡುತ್ತಿದ್ದರು. ಆದ್ರೆ ಈಗ್ಲೋ ಅಡುಗೆ ಮಾಡುವ ಹಂತ ಹಂತಕ್ಕೂ ಉಪಕರಣಗಳು ಬೇಕೇ ಬೇಕು. ಹಿಟ್ಟು ಅಥವಾ ಮಸಾಲೆ ರುಬ್ಬಲು ಮಿಕ್ಸಿ ಅಥವಾ ಗ್ರೈಂಡರ್, ಬೇಯಿಸಲು ಕುಕ್ಕರ್, ಮೈಕ್ರೋವೇವ್‌ ಮೊದಲಾದವು. ಅಷ್ಟೇ ಯಾಕೆ ತಿಂದಾದ ಮೇಲೆ ಪಾತ್ರೆ ತೊಳೆಯಲು ಸಹ ಒಂದು ಮಿಷಿನ್. ಇವೆಲ್ಲವೂ ಸಾಮಾನ್ಯವಾಗಿ ವಿದ್ಯುತ್ ಸಂಪರ್ಕದಿಂದ ಕಾರ್ಯ ನಿರ್ವಹಿಸುವವುಗಳೇ. ಹಾಗೆಯೇ ಇಲ್ಲೊಬ್ಬ ಮಹಿಳೆ ಮೈಕ್ರೋವೇವ್‌ನಲ್ಲಿ ಅಡುಗೆ ಮಾಡೋಕೆ ಹೋಗಿ ಎಂಥಾ ಎಡವಟ್ಟು ಮಾಡಿಕೊಂಡಿದ್ದಾಳೆ ನೋಡಿ.

ಮಹಿಳೆಯೊಬ್ಬಳು ವೈರಲ್ ಟಿಕ್​ಟ್ಯಾಕ್​ ಹ್ಯಾಕ್​ ವಿಡಿಯೋ ನೋಡಿ ತಾನೂ ಅದನ್ನು ಮಾಡಲು ಹೋಗಿ ಅಪಾಯ (Danger) ತಂದುಕೊಂಡಿದ್ದಾಳೆ. ಮೈಕ್ರೋವೇವ್​ನಲ್ಲಿ ಮೊಟ್ಟೆಗಳನ್ನು ಬೇಯಿಸಲು ಹೋದಾಗ, ಮೊಟ್ಟೆಗಳು (Egg) ಸ್ಫೋಟಗೊಂಡಿವೆ. ಆ ಪರಿಣಾಮವಾಗಿ ಆಕೆಯ ಮುಖದ ಚರ್ಮವೇ (Skin) ಸುಟ್ಟುಹೋಗಿದೆ.

ಮೈಕ್ರೋವೇವ್‌ನಲ್ಲಿ ತಯಾರಿಸಿದ ಚಿಕನ್‌ ತಿನ್ತೀರಾ? ಹುಷಾರ್‌ ಸಾವಿಗೆ ಬೇಗ ಹತ್ತಿರವಾಗ್ತೀರಿ

ಮೊಟ್ಟೆಯೊಳಗಿಂದ ಮುಖಕ್ಕೆ ಚಿಮ್ಮಿದ ಬಿಸಿ ನೀರು, ಸುಟ್ಟೋಯ್ತು ಮುಖ
ಶಫಿಯಾ ಬಷೀರ್ ಎಂಬವರು ಟಿಕ್‌ಟಾಕ್‌ನಲ್ಲಿ ವೈರಲ್‌ ಆಗುತ್ತಿರುವ ಕಿಚನ್ ಹ್ಯಾಕ್‌ ನೋಡಿ ಈ ರೀತಿ ಮಾಡಿದ್ದು, ಮುಖ ಸುಟ್ಟುಕೊಂಡಿದ್ದಾರೆ. ]ಯಾರೂ ಇಂಥ ಹ್ಯಾಕ್​ಗಳನ್ನು ಪ್ರಯೋಗಿಸಲು ಹೋಗಬೇಡಿ. ಇದು ಅತ್ಯಂತ ಅಪಾಯಕಾರಿಯಾಗಿದೆ. ಇದಕ್ಕೆ ನನ್ನ ಮುಖವೇ ಸಾಕ್ಷಿ' ಎಂದು ಮಹಿಳೆ ಹೇಳಿದ್ದಾಳೆ. ಶಫಿಯಾ, ಬಟ್ಟಲಿನೊಳಗೆ ನೀರು ಮತ್ತು ಮೊಟ್ಟೆ ಹಾಕಿ ಮೈಕ್ರೋವೇವ್​ನಲ್ಲಿ ಇಟ್ಟಿದ್ದಾರೆ. ಎರಡು ನಿಮಿಷಗಳ ನಂತರ ಹೊರತೆಗೆದು ಸುಲಿಯಲು ನೋಡಿದಾಗ ಮೊಟ್ಟೆಯೊಳಗಿನ ನೀರು ಮುಖಕ್ಕೆ ಚಿಮ್ಮಿದೆ. ಆಗ ಆಕೆಯ ಮುಖದ ಬಲಭಾಗವು ಸಂಪೂರ್ಣ ಸುಟ್ಟಿದೆ.

ಮಹಿಳೆ ಚಿಕಿತ್ಸೆಗೆ ಹೋಗುವ ಮೊದಲು 12 ಗಂಟೆ ನೀರಿನೊಳಗೆ ಮುಖ (Face)ವನ್ನಿಟ್ಟು ಉರಿಯನ್ನು ಶಮನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. 'ದಯವಿಟ್ಟು ಇಂಥ ಅಪಾಯಕಾರಿ ಟ್ರೆಂಡಿಂಗ್​ ವಿಡಿಯೋಗಳನ್ನು ಅನುಸರಿಸಬೇಡಿ. ನನ್ನ ಮುಖದ ಗಾಯ (Injury) ಈಗ ವಾಸಿಯಾಗಿದೆ, ಅದೃಷ್ಟವಶಾತ್ ಕಲೆಗಳು ಉಳಿದಿಲ್ಲ. ವ್ಯಾಸಲೀನ್​, ಸುಡೋಕ್ರೆಮ್​ ಮುಂತಾದನ್ನೆಲ್ಲ ಹಚ್ಚಿಕೊಂಡಿದ್ದೇನೆ' ಎಂದು ಮಹಿಳೆ ಹೇಳಿದ್ದಾಳೆ. 

ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಕಂಟೇನರ್‌ನಲ್ಲಿಟ್ಟು ಆಹಾರ ಬಿಸಿ ಮಾಡ್ಬೋದಾ ?

ಮೈಕ್ರೋವೇವ್‌ನಲ್ಲಿ ಈ ಆಹಾರವನ್ನು ಮಾತ್ರ ಬಿಸಿ ಮಾಡಬೇಡಿ

ಚಿಕನ್: ಮೈಕ್ರೋವೇವ್ ನಲ್ಲಿ ಚಿಕನ್ ಅನ್ನು ಬಿಸಿ ಮಾಡುವುದು ಅದರ ಪ್ರೋಟೀನ್ ನ ರಚನೆಯನ್ನು ಬದಲಾಯಿಸುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಸಂದರ್ಭದಲ್ಲಿ, ಚಿಕನ್ ಅನ್ನು ಮೈಕ್ರೋವೇವ್ ನಲ್ಲಿ ಮತ್ತೆ ಬಿಸಿ ಮಾಡಬಾರದು. ಇದನ್ನು ಆದಷ್ಟು ತಪ್ಪಿಸುವುದು ಉತ್ತಮ. 

ಮೊಟ್ಟೆ: ಮೊಟ್ಟೆಗಳಿಂದ ಮಾಡಿದ ಯಾವುದನ್ನೂ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು. ಮೈಕ್ರೋವೇವ್ ನಲ್ಲಿ ಮೊಟ್ಟೆಗಳನ್ನು ಕುದಿಸಿದಾಗ  ಅದನ್ನು ಮುಚ್ಚಿ, ಏಕೆಂದರೆ ಮೈಕ್ರೋವೇವ್ ನಲ್ಲಿ ಮೊಟ್ಟೆಯನ್ನು ಬಿಸಿ ಮಾಡುವುದರಿಂದ ಅದರೊಳಗಿನ ತಾಪಮಾನಹೆಚ್ಚಾಗುತ್ತದೆ, ಆದರೆ ಮೈಕ್ರೋವೇವ್ ತರಂಗಗಳು ಮೊಟ್ಟೆಯ ಚಿಪ್ಪನ್ನು ಬಿಸಿ ಮಾಡುವುದಿಲ್ಲ, ಇದರಿಂದ ಅದು ಮುರಿಯಬಹುದು. ಇದರಿಂದ ಮೊಟ್ಟೆ ಸಿಡಿಯುತ್ತದೆ.

ಅಣಬೆ: ಮೈಕ್ರೋವೇವ್ ನಲ್ಲಿ ಬಿಸಿ ಮಾಡುವುದರಿಂದ ಅಣಬೆಗಳಲ್ಲಿ ಇರುವ ಪ್ರೋಟೀನ್ ನಿವಾರಣೆಯಾಗುತ್ತದೆ. ಇದನ್ನು ತಪ್ಪಿಸಬೇಕು. ಅಣಬೆಗಳನ್ನು ತಿನ್ನಲು ಉತ್ತಮ ಮಾರ್ಗವೆಂದರೆ ಅದನ್ನು ತಕ್ಷಣ ತಯಾರಿಸುವುದು ಮತ್ತು ತಕ್ಷಣ ತಿನ್ನುವುದು. ಮೈಕ್ರೋವೇವ್ ನಲ್ಲಿ ಬಿಸಿ ಮಾಡಿದ ಅಣಬೆಗಳನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು.

ಪಿಜ್ಜಾ: ಮೈಕ್ರೋವೇವ್ ನಲ್ಲಿ ಪಿಜ್ಜಾವನ್ನು ಬಿಸಿ ಮಾಡುವುದರಿಂದ ಅದು ತುಂಬಾ ಮೃದುವಾಗುತ್ತದೆ. ಅದೇ ಸಮಯದಲ್ಲಿ, ಅದರ ಮೇಲೆ ರಬ್ಬರ್ ನಂತೆ ಆಗುತ್ತದೆ, ಆದ್ದರಿಂದ ಪಿಜ್ಜಾವನ್ನು ಯಾವಾಗಲೂ ಬಾಣಲೆಯಲ್ಲಿ ಗ್ಯಾಸ್ ಸ್ಟೌ ಮೇಲೆ ಬಿಸಿ ಮಾಡಬೇಕು.

ಮೀನು: ಮೀನನ್ನು ಎಂದಿಗೂ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು, ಏಕೆಂದರೆ ಹೆಚ್ಚಿನ ತಾಪಮಾನದಿಂದ ಹಬೆಯು ಮೀನಿನ ರುಚಿಯನ್ನು ಹಾಲು ಮಾಡುತ್ತದೆ ಮತ್ತು ಮೀನಿನ ಗರಿಗರಿತನವನ್ನು ತೆಗೆದುಹಾಕುತ್ತದೆ ಮತ್ತು ಅದನ್ನು ತುಂಬಾ ಮೃದುಗೊಳಿಸುತ್ತದೆ, ಆದ್ದರಿಂದ ಮೀನು ಯಾವಾಗಲೂ ಗ್ಯಾಸ್ ಮೇಲೆ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು, ಇದರಿಂದ ಅದು ಕ್ರಂಚಿಯಾಗಿ ಉಳಿಯುತ್ತದೆ.

ಎಣ್ಣೆ: ಮೈಕ್ರೋವೇವ್ ನಲ್ಲಿ ಯಾವುದೇ ರೀತಿಯ ತೈಲವನ್ನು ಬಿಸಿಮಾಡುವುದನ್ನು ತಪ್ಪಿಸಬೇಕು, ಏಕೆಂದರೆ ಹೆಚ್ಚಿನ ತಾಪಮಾನವು ಸಂಪರ್ಕಕ್ಕೆ ಬರುತ್ತಿದ್ದಂತೆ ಅದರ ಉತ್ತಮ ಕೊಬ್ಬು, ಕೆಟ್ಟ ಕೊಬ್ಬಾಗಿ ಬದಲಾಗುತ್ತವೆ. ವಿಶೇಷವಾಗಿ ಆಲಿವ್ ಎಣ್ಣೆ, ತೆಂಗಿನಕಾಯಿ ಎಣ್ಣೆಗಳನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು.

Follow Us:
Download App:
  • android
  • ios