Asianet Suvarna News Asianet Suvarna News

ಅಜ್ಜಿಯನ್ನೇ ತಿಂದ್ವಿ ಎಂದ ಮೊಮ್ಮಕ್ಕಳು, ಅಷ್ಟಕ್ಕೂ ಏನಿದು ಸ್ಟ್ರೇಂಜ್ ನ್ಯೂಸ್?

ಜನರು ಅದೇನೇನೋ ಹವ್ಯಾಸ ಹೊಂದಿರುತ್ತಾರೆ. ತಮ್ಮ ಸಮಾಧಾನಕ್ಕೆ ಹೇಸಿಗೆ ತರಿಸುವ ಕೆಲಸ ಮಾಡ್ತಾರೆ. ಈ ಮಹಿಳೆ ಕೂಡ ಅಂಥಹದ್ದೇ ಕೆಲಸ ಮಾಡಿದ್ದಾಳೆ. ಅಜ್ಜಿ ನೆನಪಿಗಾಗಿ ಆಕೆ ಮಾಡಿದ ಕೆಲಸ ಎಲ್ಲರನ್ನು ಅಚ್ಚರಿಗೊಳಿಸಿದೆ.
 

Woman Eats Grandmother Ashes Put It In Pasta Sauce For Brother roo
Author
First Published Jun 3, 2024, 1:26 PM IST

ಜಗತ್ತಿನಲ್ಲಿ ನಂಬಲು ಅಸಾಧ್ಯವಾದ ಜನರಿದ್ದಾರೆ. ಅವರ ಅಭ್ಯಾಸಗಳು ತಲೆ ತಿರುಗಿಸುತ್ತವೆ. ಜನರು ಹೀಗೂ ಬದುಕ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮನೆಯಲ್ಲಿ ಪ್ರೀತಿ ಪಾತ್ರರು ಸಾವನ್ನಪ್ಪಿದಾಗ ನೋವಾಗೋದು ಸಹಜ. ಅವರಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದುಕೊಳ್ಳುವ ಜನರು ಅವರ ನೆನಪಿನಲ್ಲಿಯೇ ಜೀವನ ಕಳೆಯುತ್ತಾರೆ. ಅವರ ನೆನಪಿಗಾಗಿ ಅವರು ಬಳಸಿದ ಬಟ್ಟೆ, ವಸ್ತುಗಳನ್ನು ಭದ್ರವಾಗಿ ಇಟ್ಟುಕೊಳ್ತಾರೆ. ಮನೆಯಲ್ಲಿ ಅವರ ಫೋಟೋಗಳಿರುತ್ತವೆ. ಸಾವನ್ನಪ್ಪಿದವರ ವಸ್ತುಗಳನ್ನು ಬಳಸಿ, ಅವರು ನಮ್ಮ ಜೊತೆಯಲ್ಲಿದ್ದಾರೆ ಎನ್ನುವ ಫೀಲ್ ನಲ್ಲಿರುವ ಜನರೂ ಇದ್ದಾರೆ. ಆದ್ರೆ ಅವರು ಸಾವನ್ನಪ್ಪಿದ ಮೇಲೆ ಅವರ ಮಾಂಸವನ್ನು ತಿನ್ನುವ ಅಥವಾ ಅವರ ಚಿತಾಭಸ್ಮವನ್ನು ತಿನ್ನುವ ಜನರಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು.  

ಅಂತ್ಯಕ್ರಿಯೆ (Funeral) ನಂತ್ರ ಚಿತಾಭಸ್ಮವನ್ನು ಪವಿತ್ರ ನದಿಗೆ ಹಾಕುವ ಸಂಪ್ರದಾಯ (Tradition) ನಮ್ಮಲ್ಲಿದೆ. ಕೆಲವರು ನಿಧನರಾದವರ ಆಸೆಯಂತೆ ಚಿತಾಭಸ್ಮವನ್ನು ಅವರು ಹೇಳಿದ ಜಾಗಕ್ಕೆ ಹಾಕ್ತಾರೆ. ಅವರ ನೆನಪಿಗಾಗಿ ಚಿತಾಭಸ್ಮವನ್ನು ಮನೆಯಲ್ಲಿಟ್ಟುಕೊಳ್ಳುವವರೂ ಇದ್ದಾರೆ. ಆದ್ರೆ ಈ ಮಹಿಳೆ ಮಾತ್ರ ವಿಚಿತ್ರವಾಗಿ ಆಲೋಚಿಸಿದ್ದಾಳೆ. ಆಕೆ ಐಡಿಯಾ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇಷ್ಟವಾಗಿಲ್ಲ.

ಮದುವೆಯಾದ ನಟಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್​ ಬೆಸ್ಟ್​ ಎಂದ ಕಾಜಲ್​: ನಟಿ ಕೊಟ್ಟ ಕಾರಣ ಹೀಗಿದೆ...

ಪಾಸ್ತಾ ಜೊತೆ ಅಜ್ಜಿ ಬೂದಿ ತಿಂದ ಮಹಿಳೆ: ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. Fifi, Fev & Nick ಹೆಸರಿನ ಶೋನಲ್ಲಿ ಮಹಿಳೆ ಈ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಕಳೆದ ವರ್ಷ ಆಗಸ್ಟ್ ನಲ್ಲಿ ಮಹಿಳೆ ಅಜ್ಜಿ ಸಾವನ್ನಪ್ಪಿದ್ದಳು. ಅಜ್ಜಿ ನೆನಪು ಅವರನ್ನು ಕಾಡುತ್ತಿತ್ತು. ಮನೆಯಲ್ಲಿ ದುಃಖದ ವಾತಾವರಣ ಮನೆ ಮಾಡಿತ್ತು. ಸದಾ ಅಜ್ಜಿ ನಮ್ಮ ಜೊತೆಯಲ್ಲಿರಬೇಕೆಂದು ಮಹಿಳೆ ಹಾಗೂ ಆಕೆ ತಾಯಿ ಬಯಸಿದ್ದರು. ಅಮ್ಮನನ್ನು ಕಳೆದುಕೊಂಡ ತನ್ನ ಅಮ್ಮ ಖುಷಿಯಾಗಿರಬೇಕೆಂದು ಮಹಿಳೆ ಒಂದು ಐಡಿಯಾ ಮಾಡಿದಳು. ತನ್ನ ಐಡಿಯಾವನ್ನು ಆಕೆ ಅಮ್ಮನಿಗೆ ಹೇಳಿದ್ದಳು. ಅಮ್ಮ ಅದಕ್ಕೆ ಸಂಪೂರ್ಣ ಒಪ್ಪಿಗೆ ನೀಡಿದ್ದಳು. ಆ ನಂತ್ರ ಮಹಿಳೆ ತನ್ನ ಕೆಲಸಕ್ಕೆ ತಯಾರಿ ನಡೆಸಿದಳು. 

ಅಜ್ಜಿ ಸದಾ ನಮ್ಮ ಜೊತೆಗೆ ಇರಬೇಕು ಎನ್ನುವ ಕಾರಣಕ್ಕೆ ಮಹಿಳೆ ಅಜ್ಜಿ ಬೂದಿಯನ್ನು ತಿನ್ನುವ ನಿರ್ಧಾರಕ್ಕೆ ಬಂದಳು. ಈ ವಿಷ್ಯವನ್ನು ಆಕೆ ತನ್ನ ತಾಯಿಗೆ ಹೇಳಿದಳು. ತಾಯಿ ಒಪ್ಪಿಗೆ ನೀಡಿದ ನಂತ್ರ ಚಿತಾಭಸ್ಮವನ್ನು ಆಕೆ ತಿನ್ನಲು ಶುರು ಮಾಡಿದಳು. ತಾಯಿ ಹಾಗೂ ಮಗಳು ಇಬ್ಬರೂ ಬೂದಿ ಸೇವನೆ ಮಾಡಿದ್ದರು. 

ತಮ್ಮನಿಗೂ ಅಜ್ಜಿ ಬೂದಿ ತಿನ್ನಿಸಿದ ಮಹಿಳೆ : ಈ ಮಹಿಳೆ ಮತ್ತೆ ಅಮ್ಮ ಮಾತ್ರವಲ್ಲ ತಮ್ಮನೂ ಅಜ್ಜಿಯ ಬೂದಿ ತಿಂದಿದ್ದಾನೆ ಎಂದು ಮಹಿಳೆ ಸಂದರ್ಶನದಲ್ಲಿ ಹೇಳಿದ್ದಾಳೆ. ಆಕೆ ತಮ್ಮ ಜೈಲಿನಿಂದ ಹೊರಗೆ ಬಂದ ದಿನ ಪಾಸ್ತಾಕ್ಕೆ ಇದನ್ನು ಬೆರೆಸಲಾಗಿದೆ. ತಮ್ಮನನ್ನು ಸ್ವಾಗತಿಸಿದ ನಂತ್ರ ಪಾಸ್ತಾ ನೀಡಿದ್ದೆ. ಅದ್ರಲ್ಲಿ ಅಜ್ಜಿ ಭಸ್ಮವನ್ನು ಹಾಕಿದ್ದೆ ಎಂದು ಮಹಿಳೆ ಹೇಳಿದ್ದಾಳೆ. ಆದ್ರೆ ಅಜ್ಜಿಯ ಬೂದಿಯನ್ನು ಪಾಸ್ತಾಕ್ಕೆ ಬೆರೆಸಿದ್ದು ತಮ್ಮನಿಗೆ ತಿಳಿದಿರಲಿಲ್ಲವಂತೆ. ಪಾಸ್ತಾ ಸಾಸ್ ಮಾಡುವ ವೇಳೆ ಅದಕ್ಕೆ ಸ್ವಲ್ಪ ಬೂದಿ ಬೆರೆಸಿದ್ದೆ ಎಂದು ಮಹಿಳೆ ಹೇಳಿದ್ದಾಳೆ. ತಮ್ಮನಿಗೆ ಸಾಸೇಜ್ ತಿನ್ನುವ ಅಭ್ಯಾಸವಿದೆ. ಹಾಗಾಗಿ ಆತನಿಗೆ ಅದು ತಿಳಿಯಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ.

ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

ಅಜ್ಜಿ ಬೂದಿಯನ್ನು ತಿಂದ್ರೆ ಆಕೆ ತಮಗೆ ಮತ್ತಷ್ಟು ಹತ್ತಿರವಾಗ್ತಾಳೆ, ಆಕೆ ನಮ್ಮ ಜೊತೆ ಶಾಶ್ವತವಾಗಿರುತ್ತಾಳೆ ಎಂಬ ನಂಬಿಕೆಯಲ್ಲಿ ಇವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಮಹಿಳೆಯ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ವಿರೋಧಿಸಿದ್ದಾರೆ. ಇದೊಂದು ಮೂರ್ಖ ಕೆಲಸ ಎಂದಿದ್ದಾರೆ.  

Latest Videos
Follow Us:
Download App:
  • android
  • ios