Asianet Suvarna News Asianet Suvarna News

ಮದುವೆಯಾದ ನಟಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್​ ಬೆಸ್ಟ್​ ಎಂದ ಕಾಜಲ್​: ನಟಿ ಕೊಟ್ಟ ಕಾರಣ ಹೀಗಿದೆ...

ಮದುವೆಯಾದ ನಟಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್​ ಬೆಸ್ಟ್​ ಎಂದಿದ್ದಾರೆ ನಟಿ ಕಾಜಲ್ ಅಗರ್​ವಾಲ್​. ಅವರು ಹೀಗೆ ಹೇಳಲು ಕಾರಣವೇನು? 
 

Kajal Aggarwal says married actress in Bollywood get opportunities south facing stereotypes suc
Author
First Published Jun 2, 2024, 6:07 PM IST

ಸದ್ಯ ಟಾಲಿವುಡ್‌ನ ಸುಂದರಿ ಕಾಜಲ್ ಅಗರ್​ವಾಲ್​ (Kajal Aggarwal)  ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಇದಕ್ಕೆ  ಕಾರಣ,   ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪರಿಚಯವಾದ, ಈ ಸುಂದರಿ  ಈಗ ಈ ನಟಿ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.  ಕಾಜಲ್ ಅವರ ಇತ್ತೀಚಿನ ಹಾರರ್ ಚಿತ್ರ ಕಾರ್ತಿಕಾ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ. ಕಾರ್ತಿಕಾ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ರೆಜಿನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ‘ಕಾರ್ತಿಕಾ’ ಚಿತ್ರವು ತೆಲುಗಿನ ಜನಪ್ರಿಯ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ. ಇದೇ ವೇಳೆ ಇವರ ಇಂಡಿಯನ್ 2’ ಚಿತ್ರ ಬರುವ ಜುಲೈ 12ರಂದು ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ  ನಟಿ ಕಮಲ್​ ಹಾಸನ್​  ಜೊತೆ ನಟಿಸಿದ್ದಾರೆ. ಈ ಸಿನಿಮಾ ಸೆಟ್ಟೇರಿ ಹಲವು ವರ್ಷ ಕಳೆದಿದ್ದರೂ ಇದೀಗ ರಿಲೀಸ್​ ಆಗುತ್ತಿದೆ.  

2007 ರಲ್ಲಿ ತೆಲುಗು ಚಿತ್ರದ ಮೂಲಕ ದಕ್ಷಿಣಕ್ಕೆ ಎಂಟ್ರಿ ಕೊಟ್ಟಿರುವ ನಟಿ, ಉತ್ತರ ಭಾರತವಾದರೂ ಅವರು ನಟಿಯಾಗಿ ಗುರುತಿಸಿಕೊಂಡಿದ್ದು, ಸ್ಟಾರ್ ನಟಿ ಎನಿಸಿಕೊಂಡಿದ್ದು ದಕ್ಷಿಣ ಭಾರತದಲ್ಲಿ. ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಇಲ್ಲ ಎಂಬ ಕೊರಗುಗಳ ನಡುವೆಯೇ  ಇತ್ತೀಚೆಗೆ ಮಹಿಳಾ ಪ್ರಧಾನ ಕತೆಗಳುಳ್ಳ ಸಿನಿಮಾಗಳು ಬರುತ್ತಿದ್ದು, ಕಾಜಲ್ ಅವರಿಗೆ ಅದರಲ್ಲಿ ಅವಕಾಶ ದೊರಕುತ್ತಿವೆ. ಅಂಥದ್ದರಲ್ಲಿ ಒಂದು ಕಾರ್ತಿಕಾ. ಇದರ ಹೊರತಾಗಿಯೂ ಇದೀಗ ನಟಿ ದಕ್ಷಿಣ ಚಿತ್ರಗಳಿಗಿಂತಲೂ ಬಾಲಿವುಡ್​ ಬೆಸ್ಟ್​ ಎನ್ನುವ ಮೂಲಕ ದಕ್ಷಿಣದವರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ಎರಡು ತಿಂಗಳ ಬಾಣಂತಿಯಾಗಿದ್ದಾಗ ಕುದುರೆ ಸವಾರಿ, ಕಳರಿಪಯಟ್ಟು ಕಲಿತ ನೋವಿನ ದಿನ ನೆನೆದ ನಟಿ ಕಾಜಲ್​
 
ಅಷ್ಟಕ್ಕೂ ನಟಿ ಹೀಗೆ ಹೇಳಲು ಕಾರಣವೇನೆಂದರೆ, ದಕ್ಷಿಣದಲ್ಲಿ ನಟಿಯರು ಮದ್ವೆಯಾದ ಮೇಲೆ ಅವರಿಗೆ ಸೂಕ್ತ ಪಾತ್ರಗಳು ದೊರಕುತ್ತಿಲ್ಲ ಎನ್ನುವುದು. ಆದರೆ ಬಾಲಿವುಡ್​ನಲ್ಲಿ ನಟಿಯರಿಗೆ ಮದುವೆಯಾದ ಮೇಲೂ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ ಎನ್ನುವುದು ಅವರ ಮಾತು. ಅದಕ್ಕೆ ಉದಾಹರಣೆ ಸಹಿತ ನಟಿ ವಿವರಿಸಿದ್ದಾರೆ.  ದೀಪಿಕಾ ಪಡುಕೋಣೆಗೆ ‘ಫೈಟರ್’ನಂಥ ಆಕ್ಷನ್-ರೊಮ್ಯಾಂಟಿಕ್ ಪಾತ್ರ ಸಿಕ್ಕಿತು,  ಆಲಿಯಾ ಭಟ್​ಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯಲ್ಲಿ ರೊಮ್ಯಾಂಟಿಕ್ ಸಿನಿಮಾಗಳು ಸಿಕ್ಕವು. ಆದರೆ ದಕ್ಷಿಣದಲ್ಲಿ ಮದುವೆಯಾದ ನಟಿಯರಿಗೆ ಅವಕಾಶ ಸಿಕ್ಕರೂ ಪತ್ತೆಧಾರಿ ಕತೆಗಳುಳ್ಳ ಸಿನಿಮಾಗಳು ಮಾತ್ರ. ರೊಮ್ಯಾಂಟಿಕ್​ ಪಾತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶಗಳೇ ಸಿಗುತ್ತಿಲ್ಲ ಎಂದಿದ್ದಾರೆ. ನಟಿ ಮದುವೆಯಾದ ಕೂಡಲೇ ಆಕೆಗೆ ರೊಮ್ಯಾಂಟಿಕ್ ಪಾತ್ರಗಳು, ಮುಖ್ಯ ನಾಯಕಿಯ ಪಾತ್ರಗಳು ಸಿಗುವುದು ನಿಂತೇ ಹೋಗುತ್ತವೆ. ಈ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದಿದ್ದಾರೆ ನಟಿ. 

ಇದಕ್ಕೆ ಅವರು ದಕ್ಷಿಣದ ಕೆಲವು ನಟಿಯರು ಉದಾಹರಣೆಗಳನ್ನೂ ನೀಡಿದ್ದಾರೆ. ಮಗುವಾದ ಮೇಲೆ ಸೂಕ್ತ ಪಾತ್ರ ಪಡೆದುಕೊಳ್ಳಲು ದಕ್ಷಿಣದ ನಟಿಯರು ಹೆಣಗಾಡುವ ಸ್ಥಿತಿ ಇದೆ.  ದಕ್ಷಿಣ ಭಾರತದಲ್ಲಿ ಸ್ಟಿರಿಯೋಟೈಪ್ ಕಾಸ್ಟಿಂಗ್ ಮಾಡಲಾಗುತ್ತದೆ. ಆದರೆ ಬಾಲಿವುಡ್​ನಲ್ಲಿ  ಹೇಮಾ ಮಾಲಿನಿ, ಶರ್ಮಿಳಾ ಟ್ಯಾಗೋರ್, ಶ್ರೀದೇವಿ, ಮಾಧುರಿ ದೀಕ್ಷಿತ್​​ನಂಥ ಹಲವು ನಟಿಯರು  ಮಕ್ಕಳಾದ ಮೇಲೂ  ನಾಯಕಿಯರಾಗಿಯೇ ಮುಂದುವರೆದಿದ್ದರು. ಇವೆಲ್ಲಾ ನೋಡಿದರೆ ಬಾಲಿವುಡ್​ ಬೆಸ್ಟ್​ ಎನಿಸುತ್ತಿದೆ ಎಂದಿದ್ದಾರೆ. ನಟಿ ನಯನತಾರಾ ಒಬ್ಬರೇ ಇದಕ್ಕೆ ವ್ಯತಿರಿಕ್ತರಾಗಿದ್ದಾರೆ ಎಂದೂ ಹೇಳಿದ್ದಾರೆ ಕಾಜಲ್​. 

ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್​ ಹೀಗೆ ನಡೆಯತ್ತೆ ನೋಡಿ...
 

Latest Videos
Follow Us:
Download App:
  • android
  • ios