Asianet Suvarna News Asianet Suvarna News

ಹಳೆಯ ಅರಮನೇಲಿ ದೆವ್ವದ ಸಂಚಾರ, ಬೆಚ್ಚಿಬಿದ್ದು ಎದ್ದೂ ಬಿದ್ದೂ ಓಡಿದ್ರು ಜನ !

ಅಜ್ಜ-ಅಜ್ಜಿಯಂದಿರ ಕಾಲದಿಂದಲೂ ನಾವು ಭೂತ, ದೆವ್ವಗಳ ಕಥೆಯನ್ನು ಕೇಳುತ್ತಲೇ ಬಂದಿದ್ದೇಬೆ. ಆದರೆ ಕೆಲವೊಬ್ಬರು ಇದೆಲ್ಲಾ ನಿಜ ಅಲ್ಲಪ್ಪ ಅಂತ ಅಲ್ಲಗಳೀತಾರೆ. ಹೀಗಿರುವಾಗ ರಾಜಸ್ಥಾನದಲ್ಲಿ ಹಳೆಯ ಅರಮನೆಯಲ್ಲಿ ದೆವ್ವ ಸಂಚರಿಸಿದ್ದು, ಜನರೆಲ್ಲರೂ ಬೆಚ್ಚಿಬಿದ್ದಿದ್ದಾರೆ.

Woman Dresses Up As Bhool Bhulaiyaas Monjulika To Scare People Vin
Author
First Published Jan 10, 2023, 3:12 PM IST

ಭೂತ, ದೆವ್ವ ಮೊದಲಾದ ಕೆಟ್ಟ ಶಕ್ತಿಗಳು ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಜನರಂತೂ ಈ ಬಗ್ಗೆ ಕೇಳಿದಾಗ ಒಮ್ಮೆಗೆ ಬೆಚ್ಚಿಬೀಳೋದು ಹೌದು. ಕೆಲವೊಬ್ಬರು ದೆವ್ವ ಇದೆ ಅಂತ ನಂಬಿದ್ರೆ, ಇನ್ನು ಕೆಲವರು ಅದೆಲ್ಲಾ ಸುಳ್ಳಪ್ಪಾ ಅಂತಾರೆ. ಹಲವಾರು ವರ್ಷಗಳ ಹಿಂದೆ ದೆವ್ವವನ್ನು ನೋಡಿದವರು, ದೆವ್ವಟ ಕಾಟದಿಂದ ತೊಂದರೆಗೆ ಒಳಗಾದವರು ತಮ್ಮ ಕಥೆಯನ್ನು ಹೇಳಿಕೊಳ್ಳುತ್ತಿದ್ದರು. ಏನನ್ನೋ ನೋಡಿ ಭಯಪಟ್ಟು ಜ್ವರದಿಂದ ವಾರಗಟ್ಟಲೆ ಮಲಗಿರುತ್ತಿದ್ದರು, ಕೆಲವೊಬ್ಬರು ಭಯದಿಂದ ಸತ್ತೇ ಹೋಗಿರುತ್ತಿದ್ದರು. ಹೀಗಾಗಿಯೇ ದೆವ್ವ, ಭೂತ ಅಂದಾಗ ಸಹಜವಾಗಿಯೇ ಭಯ ಮೂಡುತ್ತದೆ. ಸಾಮಾನ್ಯವಾಗಿ ರಾತ್ರಿಯಲ್ಲಿ ದೆವ್ವ ಕಾಣಿಸಿಕೊಂಡು ಕಾಟ ಕೊಡುತ್ತೆ ಅಂತಾರೆ. ಆದ್ರೆ ರಾಜಸ್ಥಾನದಲ್ಲಿ ಮಾತ್ರ ಹಗಲಲ್ಲೇ ದೆವ್ವ ಕಾಣಿಸಿಕೊಂಡು ಜನರನ್ನು ಬೆಚ್ಚಿಬೀಳಿಸಿದೆ.

ದೆವ್ವಾನ (Ghost) ಅಂತ ಬೆಚ್ಚಿ ಬೀಳ್ಬೇಡಿ. ಇದು ಅಸಲಿ ದೆವ್ವವಲ್ಲ. ವೇಷ ಧರಿಸಿದ ದೆವ್ವ. ರಾಜಸ್ಥಾನದ ಭರತ್‌ಪುರ್ ಹವೇಲಿಯಲ್ಲಿ ಜನರನ್ನು ಹೆದರಿಸಲು ಮಹಿಳೆ (Woman)ಯೊಬ್ಬರು ದೆವ್ವದಂತೆ ವೇಷ ಹಾಕಿ ಬಂದಿದ್ದರು.

ಗುಂಡಿಗೆ ಗಟ್ಟಿ ಇದೆಯಾ? ಹಾಗಿದ್ರೆ ಈ ಹಾಂಟೆಡ್‌ ತಾಣಕ್ಕೊಮ್ಮೆ ಹೋಗ್ ಬನ್ನಿ

ಭರತ್‌ಪುರ ಹವೇಲಿಯಲ್ಲಿ ಓಡಾಡುತ್ತಿರುವ ಮಂಜುಲಿಕಾ
ಸಾಮಾಜಿಕ ಮಾಧ್ಯಮಗಳಲ್ಲಿ ಜನರು ದೆವ್ವಗಳಂತೆ ವೇಷ ಧರಿಸಿ ಮತ್ತು ರಾತ್ರಿಯಲ್ಲಿ ಖಾಲಿ ಬೀದಿಗಳಲ್ಲಿ ಜನರನ್ನು ಹೆದರಿಸುವ ಅನೇಕ ತಮಾಷೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ವೇಷ ಧರಿಸಿ, ಜನರನ್ನು ಭಯ ಬೀಳಿಸಿ ಪ್ರ್ಯಾಂಕ್ ಮಾಡುತ್ತಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋವೊಂದು ರಾಜಸ್ಥಾನದ ಭರತ್‌ಪುರ ಹವೇಲಿಯಲ್ಲಿ ಬಿಳಿ ಬಟ್ಟೆ ಧರಿಸಿರುವ ಮಹಿಳೆಯೊಬ್ಬರು ಭೂಲ್ ಭುಲೈಯಾ ಅವರ ಮಂಜುಲಿಕಾ ಎಂದು ಜನರನ್ನು ಹೆದರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. 'ಭರತ್‌ಪುರದ ನಿವಾಸಿಗಳನ್ನು ಹೆದರಿಸಲು ಮಹಿಳೆ ಮೊಂಜುಲಿಕಾದಂತೆ ಧರಿಸಿದ್ದಾರೆ ಮತ್ತು ಅದು ಹೀಗಾಯಿತು' ಎಂಬ ಶೀರ್ಷಿಕೆಯೊಂದಿಗೆ ಪ್ರಿಶಾ ಎಂಬ ಬಳಕೆದಾರರು ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ವೈರಲ್ ಆಗಿದೆ.

ಪ್ರಾಂಕ್‌ಗೆ ಬೆಚ್ಚಿಬಿದ್ರು ಅರಮನೆಗೆ ಆಗಮಿಸಿದ್ದ ಅತಿಥಿಗಳು
ಬಾಲಿವುಡ್‌ನಲ್ಲಿ 2022ರಲ್ಲಿ ಹಿಟ್ ಆದ ಸಿನಿಮಾಗಳಲ್ಲೊಂದು ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾನಿ ಅಭಿನಯದ ಅಭಿನಯ. ಸಾಂಪ್ರದಾಯಿಕ ಮನೆತನ, ಪ್ರೀತಿ, ಮತ್ಸರ, ಪ್ರೀತಿಸಿದವನನ್ನು ಪಡೆದುಕೊಳ್ಳಲು ಅಕ್ಕ-ತಂಗಿಯ ಜಗಳವನ್ನು ಈ ಸಿನಿಮಾ (Movie) ನಿರೂಪಿಸುತ್ತದೆ. ಜೊತೆಗೆ ಮಾಟ-ಮಂತ್ರದ ಕಥೆಯೂ ಇದರ ಹೈಲೈಟ್ ಚಿತ್ರದಲ್ಲಿ ತಬು ಮಾಟಗಾತಿ ಮಂಜುಲಿಕಾ ಪಾತ್ರವನ್ನು ನಿರ್ವಹಿಸಿದ್ದರು. ಮಂಜುಲಿಕಾ ಪಾತ್ರದಲ್ಲಿ ತಬು ಅದ್ಭುತ ನಟನೆ (Acting) ಥಿಯೇಟರ್‌ನಲ್ಲಿ ಅಕ್ಷರಹಃ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಹೀಗೇ ಅಸಲಿ ಮಂಜುಲಿಕಾ ರಸ್ತೆಗಿಳಿದಳು ಎಂಬಂತೆ ಜನರು ನಿಜವಾಗಿಯೂ ಗಾಬರಿಗೊಂಡರು.

ರಾಜಸ್ಥಾನದಲ್ಲೊಂದು ನಿಗೂಢ ತಾಣ; ರಾತ್ರೋರಾತ್ರಿ ಊರಿಗೂರೇ ಖಾಲಿ!

ಉದ್ದ ಕೂದಲಿನ ವಿಗ್ ಮತ್ತು ದೇಹದ ಸುತ್ತಲೂ ಬಿಳಿ ಹಾಳೆಯನ್ನು ಸುತ್ತಿಕೊಂಡ ಮಹಿಳೆಯೊಂದಿಗೆ ವೈರಲ್ ಕ್ಲಿಪ್ ಪ್ರಾರಂಭವಾಗುತ್ತದೆ. ವೀಡಿಯೋ ಮುಂದುವರೆದಂತೆ, ಮಹಿಳೆ ಮತ್ತು ಆಕೆಯ ಮತ್ತೊಬ್ಬ ಸ್ನೇಹಿತ ಬಿಳಿ ಹಾಳೆಯನ್ನು ಧರಿಸಿ ಹವೇಲಿಯ ಸುತ್ತಲೂ ಸಂಚರಿಸುತ್ತಾರೆ ಮತ್ತು ಅರಮನೆಯ ಅತಿಥಿಗಳು (Guest) ಮತ್ತು ಸಿಬ್ಬಂದಿಯನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಈ ನಡುವೆ, ಭೂಲ್ ಭುಲೈಯಾ ಚಿತ್ರದ 'ಮೇರೆ ದೋಲ್ನಾ ಸನ್' ಹಾಡನ್ನು ಹವೇಲಿಯಲ್ಲಿ ಪ್ಲೇ ಮಾಡುವುದನ್ನು ನಾವು ಕೇಳಬಹುದು, ಜನರು ಹಿಂದೆ ತಿರುಗಿ ಹಾಡನ್ನು ಯಾರು ನುಡಿಸುತ್ತಿದ್ದಾರೆಂದು ಆಶ್ಚರ್ಯ ಪಡುತ್ತಾರೆ. ಕೆಲವರು ದಿಢೀರನೆ ದೆವ್ವವನ್ನು ಕಂಡು ಭಯಪಟ್ಟರೆ, ಇನ್ನು ಕೆಲವರು ಅಷ್ಟೊಂದು ಪ್ರಭಾವ ಬೀರದೆ ದೆವ್ವ ವೇಷಧಾರಿಯ  ಮೇಲೆಯೇ ದಾಳಿ ಮಾಡುತ್ತಾರೆ.

ವೈರಲ್ ಪ್ರಾಂಕ್ ವೀಡಿಯೊ ಸುಮಾರು 120K ವೀಕ್ಷಣೆಗಳನ್ನು ಮತ್ತು ಅನೇಕ ಲೈಕ್ಸ್‌ಗಳನ್ನು ಮತ್ತು ಶೇರ್‌ಗಳನ್ನು ಗಳಿಸಿದೆ. ವೀಡಿಯೊ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ, ಕೆಲವರು ಅದನ್ನು ತಮಾಷೆಯಾಗಿ ಕಂಡಿದ್ದಾರೆ. ಕೆಲವರು ಹವೇಲಿಯಲ್ಲಿ ವಾಸಿಸುವ ವಯಸ್ಸಾದವರಿಗೆ ಅಥವಾ ಹೃದ್ರೋಗಿಗಳಿಗೆ ಇದು ಅಪಾಯಕಾರಿ ಎಂದು ಹೇಳಿದ್ದಾರೆ.

Follow Us:
Download App:
  • android
  • ios