ನನ್ನ ಬಟ್ಟೆ ನನ್ನ ಆಯ್ಕೆ ಅಂತ ಹೇಳಿ ಬ್ರಾ, ಮಿನಿ ಸ್ಕರ್ಟ್ ಹಾಕ್ಕೊಂಡು ಮೆಟ್ರೋ ಹತ್ತೋದು ಸರೀನಾ?
ಟೂ ಪೀಸ್ ನಂತಹ ತುಂಡುಡುಗೆ ಧರಿಸಿ ಮೆಟ್ರೋ ಏರಿ ಸುದ್ದಿಯಾಗಿದ್ದ ಹುಡುಗಿ ರಿಧಂ ಚನಾನಾ. ಈಕೆ ಸಂಪ್ರದಾಯಸ್ಥ ಕುಟುಂಬದಿಂದ ಬಂದಿರುವಾಕೆ. ಬಟ್ಟೆಯ ಬಗ್ಗೆ ಪ್ರಶ್ನಿಸಿರುವ ಮಂದಿಗೆ ನನ್ನ ಬಟ್ಟೆ ನನ್ನ ಆಯ್ಕೆ ಎಂದು ಸಿಡಿದಿದ್ದಾಳೆ.
ತುಂಡುಡುಗೆ ಧರಿಸಿ ಬೀದಿಗೆ ಬಂದರೆ ಸಾಮಾನ್ಯವಾಗಿ ಎಲ್ಲರೂ “ಇದೇನಪ್ಪಾʼ ಎಂದು ನೋಡುತ್ತೇವೆ. ಎಷ್ಟೇ ಮುಂದುವರಿದ ಆಧುನಿಕ ಮನಸ್ಥಿತಿಯಿದ್ದರೂ ತೀರಾ ಟೂ ಪೀಸ್ ನಂತಹ ಡ್ರೆಸ್ ಧರಿಸಿ ಬೀದಿಗಿಳಿಯುವುದನ್ನು ನಮ್ಮ ಸಮಾಜ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಇಂಥದ್ದೊಂದು ಭಾರೀ ಅಚ್ಚರಿ ಸಂಭವಿಸಿದೆ. ಮೆಟ್ರೋದಲ್ಲಿ ಪ್ರಯಾಣಿಸಿದ ಅಷ್ಟೂ ಮಂದಿಯ ಗಮನವನ್ನು ತನ್ನತ್ತ ಸೆಳೆಯಲು ಹುಡುಗಿಯೊಬ್ಬಳು ಯಶಸ್ವಿಯಾಗಿದ್ದಾಳೆ. ಏಕೆಂದರೆ, ಈಕೆಯ ಡ್ರೆಸ್ ಹಾಗಿತ್ತು! ಕೇವಲ ಟೂ ಪೀಸ್ ಧರಿಸಿ ಈಕೆ ಮೆಟ್ರೋ ಏರಿದ್ದಳು. ಈಕೆಯ ಫೋಟೊ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಹಾಟ್ ಆಗಿದೆ, ವೈರಲ್ ಆಗಿದೆ. ಈಕೆ ಡ್ರೆಸ್ ಧರಿಸಿದ ರೀತಿ ನೋಡಿದರೆ ಉರ್ಫಿ ಜಾವೇದ್ ತಟಕ್ಕೆಂದು ನೆನಪಿಗೆ ಬರುತ್ತಾಳೆ. ಅವಳಂತೆಯೇ ಇವಳೂ ಬಿಗಿಯಾದ ಬ್ರಾ ಹಾಗೂ ಚಿಕ್ಕದೊಂದು ಸ್ಕರ್ಟ್ ಧರಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಳೆ. ಅಕ್ಕಪಕ್ಕ ಕುಳಿತವರೆಲ್ಲ ನೋಡಿಯೂ ನೋಡದಂತೆ ವರ್ತಿಸಿದ್ದಾರೆ. ಎದುರು ಕುಳಿತವರ್ಯಾರೋ ಈಕೆಯ ವಿಡಿಯೋ ಮಾಡಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟೂ ಪೀಸ್ (Two Piece) ನಂತಹ ಡ್ರೆಸ್ (Dress) ನಲ್ಲಿ ಹುಡುಗಿಯೊಬ್ಬಳು (Girl) ಪ್ರಯಾಣ ಮಾಡಿದ ನಂತರ ದೆಹಲಿ ಮೆಟ್ರೋ (Delhi Metro) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಮತ್ತೊಬ್ಬರ ಸಂವೇದನೆಗಳಿಗೆ ಧಕ್ಕೆ ತರುವಂತಹ ದಿರಿಸು ಧರಿಸುವುದು ಸ್ವೀಕಾರಾರ್ಹವಲ್ಲ, ಇಂತಹ ಬಟ್ಟೆಗಳನ್ನು ಪ್ರಯಾಣಿಕರು (Travellers) ಧರಿಸಬೇಡಿ ಎಂದು ಮನವಿ ಮಾಡಿದೆ. ಈ ಹೇಳಿಕೆ ಕೂಡ ಇದೀಗ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಡ್ರೆಸ್ ವಿಚಾರ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಆದರೆ, ಬಹಳಷ್ಟು ಮಂದಿ ಇಂತಹ ಡ್ರೆಸ್ ಬರೀ ಆಯ್ಕೆ ಸ್ವಾತಂತ್ರ್ಯಕ್ಕೆ (Freedom) ಸಂಬಂಧಿಸಿಲ್ಲ, ಕೆಟ್ಟ ಮನಸ್ಥಿತಿ ಬಿಂಬಿಸುತ್ತದೆ, ಸಮಾಜದಲ್ಲಿ ಆಕೆಯೊಬ್ಬಳೇ ಅಲ್ಲ, ಎಲ್ಲರನ್ನೂ ಸೇರಿಸಿ ಸಮಾಜ ನಿರ್ಮಾಣವಾಗಿದೆ ಎನ್ನುವ ಮಾತುಗಳು ಬಿರುಸು ಪಡೆದುಕೊಂಡಿವೆ.
Viral Video: ಈ ಹುಡುಗೀರ ಡ್ಯಾನ್ಸ್ ನೋಡಿ ಹುಡುಗರ ಹೃದಯದ ಬಡಿತವೇ ಹೆಚ್ಚು-ಕಮ್ಮ ಆಯ್ತಂತೆ!
ಬಟ್ಟೆ ನನ್ನ ಆಯ್ಕೆ
ಅಷ್ಟಕ್ಕೂ ಈ ಹುಡುಗಿ ಯಾರು ಎನ್ನುವ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈಕೆ ರಿಧಂ ಚನಾನಾ (Rhythm Chanana). ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಗೆ ಬಂದಿರುವ ರಿಧಂ ಖಾಸಗಿ ಟಿವಿಗೆ ನೀಡಿದ ಸಂದರ್ಶನವನ್ನೂ ನೀಡಿದ್ದಾಳೆ. “ಬಟ್ಟೆ ನನ್ನ ಆಯ್ಕೆ. ನನ್ನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ನನಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನು ಧರಿಸುತ್ತೇನೆ. ಇದು ಜನಪ್ರಿಯತೆಗಾಗಿ (Publicity) ಮಾಡಿದ ನಾಟಕವಲ್ಲ. ಜನ ಏನು ಹೇಳುತ್ತಾರೆ ಎನ್ನುವುದಕ್ಕೆ ನಾನು ಕೇರ್ (Care) ಮಾಡಲ್ಲ. ಉರ್ಫಿ ಜಾವೇದ್ (Urfi Javed) ರಿಂದ ನಾನು ಸ್ಫೂರ್ತಿ (Inspiration) ಪಡೆದಿಲ್ಲ. ಆಕೆಯ ಬಗ್ಗೆ ನನಗೆ ಗೊತ್ತಿಲ್ಲ. ಇತ್ತೀಚೆಗೆ ಗೆಳತಿಯೊಬ್ಬಳು (Friend) ಆಕೆಯ ಬಗ್ಗೆ ಹೇಳಿದಾಗಲಷ್ಟೇ ತಿಳಿದುಬಂತುʼ ಎಂದು ಹೇಳಿದ್ದಾಳೆ.
ಬೆದರಿಕೆಯೂ ಇದೆ
ಅಂದ ಹಾಗೆ, ರಿಧಂ ಆಯ್ಕೆಯ ಬಗ್ಗೆ ಆಕೆಯ ಕುಟುಂಬದವರಿಗೂ ಬೇಸರವಿದೆಯಂತೆ. ಹಾಗೂ ನೆರೆಯವರಿಂದ ನಿರಂತರವಾಗಿ ಬೆದರಿಕೆ (Threat) ಎದುರಿಸುತ್ತಿದ್ದಾಳಂತೆ. ಆದರೆ, ಜನ ಆಕೆಯ ಬಗ್ಗೆ ಏನು ಹೇಳುತ್ತಾರೆ ಎನ್ನುವುದಕ್ಕೆ ಕೇರ್ ಮಾಡುವುದೇ ಇಲ್ಲವಂತೆ. ಅಷ್ಟಕ್ಕೂ ಮೆಟ್ರೋ ಒಳಗೆ ವಿಡಿಯೋ (Video) ಮಾಡುವುದನ್ನು ನಿಷೇಧಿಸಲಾಗಿದೆ. ನನ್ನ ವಿಡಿಯೋ ಮಾಡಿರುವುದು ಸರಿಯಲ್ಲ. ಇದಕ್ಕೂ ಮೊದಲೂ ಸಹ ನಾನು ಈ ರೀತಿಯ ಉಡುಪಿನಲ್ಲಿ ಪ್ರಯಾಣ ಮಾಡಿದ್ದೇನೆ. ಹಲವು ತಿಂಗಳಿಂದ ಹೀಗೆ ಬಟ್ಟೆ ಧರಿಸುತ್ತಿದ್ದೇನೆ. ಈಗ ಏಕಾಏಕಿ ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ನನ್ನ ಬಟ್ಟೆಯ ಬಗ್ಗೆ ಅವರಿಗೆ ಸಮಸ್ಯೆ (Problem) ಇದ್ದರೆ, ಅದನ್ನು ಶೂಟ್ ಮಾಡಿದವರ ಮೇಲೂ ಸಮಸ್ಯೆ ಉಂಟಾಗಬೇಕುʼ ಎಂದೆಲ್ಲ ಹೇಳಿಕೊಂಡಿದ್ದಾಳೆ.
ಸಾರಿಯಲ್ಲಿ ನಾರಿಯ ಕರಾಮತ್ತು..ಸೀರೆಯುಟ್ಟು ಗೋಲ್ ಹೊಡೆದ ಮಹಿಳಾಮಣಿಗಳು
ತಾನು ಸಾಂಪ್ರದಾಯಿಕ ಕುಟುಂಬದ ಮೂಲದಿಂದ ಬಂದವಳು ಎಂದು ರಿಧಂ ಹೇಳಿಕೊಂಡಿದ್ದಾಳೆ. ದೆಹಲಿಯ ಪಿಂಕ್ ಲೈನ್ (Pink Line) ಮೆಟ್ರೋದಲ್ಲಿ ಪ್ರಯಾಣಿಸಲು ನನಗೀಗ ಸಮಸ್ಯೆ ಉಂಟಾಗಿದೆ. ಬೇರೆ ಯಾವುದೇ ಮಾರ್ಗದಲ್ಲಿ (Route) ಹೀಗಾಗಿಲ್ಲ ಎಂದಿದ್ದಾಳೆ.