Viral Video: ಈ ಹುಡುಗೀರ ಡ್ಯಾನ್ಸ್ ನೋಡಿ ಹುಡುಗರ ಹೃದಯದ ಬಡಿತವೇ ಹೆಚ್ಚು-ಕಮ್ಮ ಆಯ್ತಂತೆ!
ಮದುವೆ ಅಂದ್ಮೇಲೆ ಡಾನ್ಸ್ ಇರ್ಲೇಬೇಕು. ಈಗ ಬರ್ತ್ ಡೇ ಪಾರ್ಟಿಯಲ್ಲೂ ಡಾನ್ಸ್ ಮಾಡೋದು ಕಾಮನ್ ಆಗಿದೆ. ಚೆಂದದ ಬಟ್ಟೆ ಧರಿಸಿ, ರೆಪ್ಪಿ ಮಿಟುಕಿಸಲು ಅವಕಾಶ ನೀಡದಂತೆ ಹುಡುಗಿಯರು ಸ್ಟೆಪ್ಸ್ ಹಾಕ್ತಿದ್ರೆ ವಿಡಿಯೋ ವೈರಲ್ ಆಗ್ದೆ ಇರುತ್ತಾ?. ಈಗ ಆಗಿದ್ದು ಅದೆ.
ಕೆಲಸದ ಮಧ್ಯೆ ರಿಲ್ಯಾಕ್ಸ್ ಆಗೋಕೆ, ರಾತ್ರಿ ನಿದ್ರೆ ಮುನ್ನ ಮನರಂಜನೆ ಪಡೆಯೋಕೆ, ಮನೆ ಕೆಲಸ ಮಾಡಿ ಸುಸ್ತಾದಾಗ ಸ್ವಲ್ಪ ಟೈಂ ಪಾಸ್ ಮಾಡೋಕೆ ಜನರು ಹಿಡಿಯೋದು ಮೊಬೈಲನ್ನು. ಮೊಬೈಲ್ ನಲ್ಲಿ ಸ್ಕ್ರೋಲ್ ಆಗೋದು ಇನ್ಸ್ಟಾಗ್ರಾಮ್, ಟ್ವಿಟರ್, ಫೇಸ್ಬುಕ್, ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು. ಜನರು ಈ ಸಾಮಾಜಿಕ ಜಾಲತಾಣದಲ್ಲಿ ಮನರಂಜನೆ ಪಡೆಯೋದು ಮಾತ್ರವಲ್ಲ ಹಣ ಗಳಿಕೆ ಕೂಡ ಮಾಡ್ತಿದ್ದಾರೆ. ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಕೆಲ ಜನರು ರಾತ್ರೋ ರಾತ್ರಿ ಪ್ರಸಿದ್ಧಿ ಪಡೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಡಾನ್ಸ್ (Dance) ವಿಡಿಯೋಗಳು ಸಾಕಷ್ಟು ಪೋಸ್ಟ್ ಆಗ್ತಿವೆ. ಸ್ಟೇಜ್ ಮೇಲೆ ಗ್ರೂಪ್ ಡಾನ್ಸ್ ಇರಲಿ, ಮದುವೆ ಮನೆಯಲ್ಲಿ ವಧು- ವರರ ಡಾನ್ಸ್ ಇರಲಿ, ಸಮಾರಂಭದಲ್ಲಿ ವಯಸ್ಸಾದವರ ಡಾನ್ಸ್ ಇರಲಿ, ಬಾಲಿವುಡ್, ಹಾಲಿವುಡ್, ಜಾನಪದ ಹೀಗೆ ಯಾವುದೇ ಡಾನ್ಸ್ ಇರಲಿ ಡಾನ್ಸ್ ಇಷ್ಟವಾದ್ರೆ ವಿಡಿಯೋ ವೈರಲ್ ಆಗೋದು ನಿಶ್ಚಿತ. ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಹುಡುಗಿಯರ ಡಾನ್ಸ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
Akshara Singhs MMS: ಬಾಯ್ಫ್ರೆಂಡ್ ಜೊತೆ ನಟಿ ಅಕ್ಷರಾ ಸಿಂಗ್ ಖಾಸಗಿ ವಿಡಿಯೋ ಲೀಕ್?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ವಿಡಿಯೋ : @abcddancefactory ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾನ್ಸ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಾಲಿವುಡ್ ನ ಶಾದಿ ಮೆ ಜರೂರ್ ಆನಾ ಚಿತ್ರದ ಜ್ಯೋತಿಕಾ ತಂಗ್ರಿ ಮತ್ತು ಯಾಸರ್ ದೇಸಾಯಿ ಅಭಿನಯದ ಪ್ರಸಿದ್ಧ ಹಾಡು ಪಲ್ಲೋ ಲಟ್ಕೆ ಹಾಡಿಗೆ ಹುಡುಗಿಯರ ಗುಂಪು ಡಾನ್ಸ್ ಮಾಡಿದೆ. ವೀಡಿಯೊದಲ್ಲಿ ಡಾನ್ಸ್ ಮಾಡಿದ ಹುಡುಗಿಯರು ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸಿದ್ದಾರೆ.
ವೇದಿಕೆ ಮೇಲೆ ಹುಡುಗಿಯರ ಗುಂಪು ಡಾನ್ಸ್ ಮಾಡ್ತಿದೆ. ಪಲ್ಲೋ ಲಟ್ಕೆ ಹಾಡಿನ ತಾಳಕ್ಕೆ ತಕ್ಕಂತೆ ಹುಡುಗಿಯರು ಡಾನ್ಸ್ ಮಾಡ್ತಿದ್ದಾರೆ. ಅವರು ಸ್ಟೆಪ್ಸ್ ಹಾಕ್ತಿದ್ದಂತೆ ಪ್ರೇಕ್ಷಕರು ಅವರನ್ನು ಹುರಿದುಂಬಿಸುತ್ತಾರೆ.
ವಿಡಿಯೋಕ್ಕೆ ಸಿಕ್ಕಿದೆ ಇಷ್ಟೊಂದು ಲೈಕ್ಸ್ : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಒಂದು ವಾರದ ಹಿಂದೆ ಹಂಚಿಕೊಳ್ಳಲಾಗಿದೆ. ಈಗ್ಲೂ ಈ ವಿಡಿಯೋ ವೈರಲ್ ಆಗ್ತನೆ ಇದೆ. ಈವರೆಗೆ 1.1 ಮಿಲಿಯನ್ ಗೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ಸಾವಿರಾರು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಯುವತಿಯರ ಡಾನ್ಸ್ ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್ ಕೂಡ ಬಂದಿದೆ. ಅಧ್ಬುತವಾಗಿ ಡಾನ್ಸ್ ಮಾಡಿದ ಯುವತಿಯರನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಮನಸ್ಪೂರ್ತಿಯಾಗಿ ಹೊಗಳಿದ್ದಾರೆ.
Viral Video: ದೇವಸ್ಥಾನದಲ್ಲಿ ಅಜ್ಜಿಯ ಸಖತ್ ಸ್ಟೆಪ್ಸ್, ಡಾನ್ಸಿಗೆ ಮರುಳಾದ ನೆಟ್ಟಿಗರು
ವೀಕ್ಷಕರು ಡಾನ್ಸ್ ಮಾಡಿರುವ ಯುವತಿಯರ ಸಿಂಕ್ರೊನೈಸ್ ಚಲನೆಗಳು ಮತ್ತು ಡಾನ್ಸ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸುಗಮವಾಗಿವೆ ಬದಲಾವಣೆ ಮಾಡ್ತಿರೋದು ಮೆಚ್ಚಿಕೊಳ್ಳುವಂತಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಪಲ್ಲು ಮಾತ್ರ ಯಾರ ಡ್ರೆಸ್ ನಲ್ಲೂ ಕಾಣಿಸ್ತಿಲ್ಲವೆಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಇವರ ಪಲ್ಲುವಿನಲ್ಲಿ ನನ್ನ ಹೃದಯ ಸಿಕ್ಕಿಕೊಂಡಿದೆ. ಅಧ್ಬುತವಾಗಿ ಡಾನ್ಸ್ ಮಾಡಿದ್ದಾರೆ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಪೈಜಾಮಾ ಹುಡುಗಿ : ಮೊದಲೇ ಹೇಳಿದಂತೆ ಡಾನ್ಸ್ ವಿಡಿಯೋಗಳು ಈಗ ಹೆಚ್ಚು ವೈರಲ್ ಆಗ್ತಿವೆ. ಎರಡು ದಿನಗಳ ಹಿಂದೆ ಪೈಜಾಮಾ ಧರಿಸಿ, ಸ್ಟೀಲ್ ಬಾಟಲ್ ಹಿಡಿದು ಹುಡುಗಿ ಮಾಡಿದ್ದ ಡಾನ್ಸ್ ಇಂಟರ್ನೆಟ್ ನಲ್ಲಿ ಸದ್ದು ಮಾಡಿದೆ. ಬಾಲಿವುಡ್ ನ ನೋ ಎಂಟ್ರಿ ಹಾಡಿಗೆ ಹುಡುಗಿ ಡಾನ್ಸ್ ಮಾಡಿದ್ದಾಳೆ. ಖುಷಿಯಾಗಿ ಕುಣಿಯುತ್ತಿರುವ ಆಕೆ ವಿಡಿಯೋವನ್ನು @myhumour_side ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊ ಈವರೆಗೆ 41 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ.