ಮದ್ವೆಯಾಗಿ 25 ವರ್ಷಕ್ಕೆ 24 ಮಕ್ಕಳು! ಗಂಡನ ಗುಟ್ಟು ಬಿಚ್ಚಿಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದ ಮಹಿಳೆ!

ಮದ್ವೆಯಾಗಿ 25 ವರ್ಷಕ್ಕೆ 24 ಮಕ್ಕಳನ್ನು ಪಡೆದಿರುವ ಉತ್ತರ ಪ್ರದೇಶದ ಮಹಿಳೆ ಈಗ ಗುಟ್ಟು ಬಿಚ್ಚಿಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ. 
 

Woman claims she had 24 kids in past 23 years turns out 16 boys and 8 girls suc

ನೋಡಲು ತರುಣಿಯಂತೆ ಇರುವ ಈ ಮಹಿಳೆ ಮದುವೆಯಾಗಿ 25 ವರ್ಷಗಳಾಗಿವೆ. 24 ಮಕ್ಕಳನ್ನು ಹಡೆದಿದ್ದಾರೆ. 16 ಮಂದಿ ಗಂಡು ಮಕ್ಕಳು ಹಾಗೂ ಎಂಟು ಮಂದಿ ಹೆಣ್ಣು ಮಕ್ಕಳು ಈಕೆಗೆ. ದೊಡ್ಡ ಮಗನಿಗೆ 18 ವರ್ಷ, ಚಿಕ್ಕವನಿಗೆ ಎರಡು ವರ್ಷ. ಅವಳಿ-ಜವಳಿ ಮಕ್ಕಳೇ ಹೆಚ್ಚಾಗಿ ಹುಟ್ಟಿದ್ದರಿಂದ 24 ಮಕ್ಕಳು ನನಗಿದ್ದಾರೆ ಎಂದಿದ್ದಾಳೆ ಈ ಸುಂದರಿ. ಅಂದಹಾಗೆ ಈಕೆ ಹೆಸರು ಖುಷ್ಬೂ ಪಾಠಕ್​. ಉತ್ತರ ಪ್ರದೇಶದವರು. ಈ ವಿಷಯ ಯೂಟ್ಯೂಬ್​ ಒಂದರಲ್ಲಿ ವೈರಲ್ ಆಗುತ್ತಲೇ, ಈಕೆಯ ಮನೆಯ ಹಾದಿ ತುಳಿದವರು ಅದೆಷ್ಟೋ ಮಂದಿ. ತಮ್ಮ ಯೂಟ್ಯೂಬ್​, ಇನ್​ಸ್ಟಾಗ್ರಾಮ್​ಗಳಲ್ಲಿ ಈ ಮಹಿಳೆಯ ಸಂದರ್ಶನ ಮಾಡಲು ಜನರು ಬರುತ್ತಲೇ ಇದ್ದಾರೆ. ಸೋಷಿಯಲ್​ ಮೀಡಿಯಾ ಅಂದ್ರೆನೇ ಹಾಗಲ್ವೆ? ಒಂದು ವಿಡಿಯೋ ಸಕತ್​ ಸದ್ದು ಮಾಡ್ತಿದೆ, ಸಾಕಷ್ಟು ವೈರಲ್​ ಆಗ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಮತ್ತೊಬ್ಬ ಯೂಟ್ಯೂಬರ್​ ಅದೇ ವಿಡಿಯೋ ಮಾಡಲು ಹಾತೊರೆಯುತ್ತಾರೆ.

ಅದೇ ರೀತಿ ಖುಷ್ಬೂ ಪಾಠಕ್​ ಅವರನ್ನು ಹುಡುಕಿ ಹೋಗ್ತಿರೋ ಯೂಟ್ಯೂಬರ್​ಗಳಿಗೆ ಲೆಕ್ಕವೇ ಇಲ್ಲ. ಸದ್ಯ ಸೋಷಿಯಲ್​  ಮೀಡಿಯಾದಲ್ಲಿ ಈಕೆ ಸ್ಟಾರ್​ ಆಗಿದ್ದಾರೆ. ಒಂದಿಷ್ಟು ಮಕ್ಕಳನ್ನು ತನ್ನ ಹಿಂಬದಿ ನಿಲ್ಲಿಸಿಕೊಂಡಿರೋ ಖಷ್ಬೂ ಇವರೆಲ್ಲಾ ನನ್ನ ಮಕ್ಕಳು, ಉಳಿದವರು ಮನೆಯಲ್ಲಿ ಇದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲಿ ಇದ್ದವರು ಕೂಡ ಹೌದು, ಹೌದು ಇದು ನಿಜ ಎಂದಿದ್ದಾರೆ. ಓರ್ವ ಯೂಟ್ಯೂಬರ್​ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ಹಲವು ಬಾರಿ ಅವಳಿ ಮಕ್ಕಳು ಹುಟ್ಟಿವೆ ಎಂದಿದ್ದಾರೆ. ನಿಮ್ಮನ್ನು ನೋಡಿದರೆ ಇಷ್ಟು ಮಕ್ಕಳ ತಾಯಿ ಎಂದು ಕಾಣಿಸುವುದಿಲ್ಲ, ನಿಮ್ಮ ಬ್ಯೂಟಿ ಸೀಕ್ರೇಟ್​ ಏನು ಎಂದು ಕೇಳಿದ್ದಾನೆ. ನಮ್ಮದು ಗ್ರಾಮೀಣ ಪ್ರದೇಶ, ಮನೆ, ಮಕ್ಕಳು, ಕುಟುಂಬ ಜವಾಬ್ದಾರಿ ಅಂತೆಲ್ಲಾ ದಿನಪೂರ್ತಿ ಬಿಜಿ ಇರ್ತೇನೆ. ಅದೇ ವ್ಯಾಯಾಮ ಆಗುತ್ತದೆ. ಮತ್ತೇನೂ ಮಾಡಲ್ಲ ಎಂದಿದ್ದಾರೆ ಖುಷ್ಬೂ.

ಸನಾ ಖಾನ್​ಗೆ 12 ಮಕ್ಕಳನ್ನು ಹೆರುವ ಆಸೆಯಂತೆ: ಮನದ ಮಾತು ತೆರೆದಿಟ್ಟು ಕಾರಣವನ್ನೂ ನೀಡಿದ ನಟಿ!

ನಿಮ್ಮ ಪತಿ ಏನು ಮಾಡುತ್ತಾರೆ ಎಂದು ಕೇಳಿದಾಗ ಡ್ರೈವರ್​ ಎಂದಿದ್ದಾಳೆ. ಏನು ಮಾಡಿದರೂ ಯೂಟ್ಯೂಬರ್​ಗೆ ಇದು ನಂಬಲು ಸಾಧ್ಯವೇ ಇಲ್ಲದ ಮಾತಾಗುತ್ತದೆ, ಆದರೆ ಇದಾಗಲೇ ಸಾಕಷ್ಟು ವೈರಲ್​ ಆಗಿರೋ ವಿಡಿಯೋದಲ್ಲಿಯೂ ಮಹಿಳೆ ಇದನ್ನೇ ಹೇಳುತ್ತಾ ಬಂದಿದ್ದು, ಅಲ್ಲಿರುವವರು ಕೂಡ ಈಕೆಗ 24 ಮಕ್ಕಳು ಎಂದೇ ಹೇಳುತ್ತಿದ್ದಾರೆ. ಆದರೆ ಅಸಲಿಯತ್ತೇ ಬೇರೆ ಇದೆ. ಇವೆಲ್ಲಾ ಪ್ರಚಾರದ ಗಿಮಿಕ್​ ಅಷ್ಟೇ. ತಮಾಷೆಗೆಂದು ಖುಷ್ಬೂ ಅವರು ಒಂದು ಕಡೆ ಹೇಳಿದ್ದು ವೈರಲ್​ ಆಗುತ್ತಲೇ ಎಲ್ಲರೂ ಈಕೆಯನ್ನು ಹುಡುಕಿ ಬರುತ್ತಿದ್ದಾರೆ. ಒಮ್ಮೆ ಫೇಮಸ್​ ಆಗುತ್ತಿದ್ದಂತೆಯೇ ಎಲ್ಲರಿಗೂ ಅದನ್ನೇ ಹೇಳಿದ್ದಾರೆ. 

ಇವರು 22 ಗಿಡಗಳನ್ನು ನೆಟ್ಟಿದ್ದಾರೆ. ಅವು ಕೂಡ ನನ್ನ ಮಕ್ಕಳು. ನನಗೆ ಅಸಲಿಗೆ ಇರುವುದು ಇಬ್ಬರೇ ಮಕ್ಕಳು. ಇವೆಲ್ಲಾ ತಮಾಷೆಗೆ ಹೇಳ್ತಿರೋದು ಎಂದು ಕೊನೆಗೂ ಗುಟ್ಟನ್ನು ರಟ್ಟು ಮಾಡಿದ್ದಾರೆ. ಆದರೆ ಈ ಗುಟ್ಟು ರಟ್ಟು ಮಾಡಿರುವ ವಿಡಿಯೋ ಅಷ್ಟೆಲ್ಲಾ ವೈರಲ್​ ಆಗದ ಕಾರಣ, 24 ಮಕ್ಕಳ ತಾಯಿಯನ್ನು ಹುಡುಕಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಖಷ್ಬೂ ಕೂಡ ಅವರ ಬಳಿ ತಮ್ಮದೇ ಆದ ಸ್ಟೈಲ್​ನಲ್ಲಿ ಅದನ್ನೇ ನಿಜ ಎಂದು ಇಂದಿಗೂ ನಂಬಿಸುತ್ತಿದ್ದಾರೆ. 

ಆ ಘಟನೆ ನಂತ್ರ ಹೆಂಡ್ತಿಗೆ ಸೀರೆ ಕೊಡಿಸೋ ಧೈರ್ಯ ಇಂದಿಗೂ ಮಾಡ್ಲಿಲ್ಲಾ ಸಾರ್​... ನಾ.ಸೋಮೇಶ್ವರ್​ ಹೇಳಿದ್ದು ಕೇಳಿ...

Latest Videos
Follow Us:
Download App:
  • android
  • ios