ಸನಾ ಖಾನ್​ಗೆ 12 ಮಕ್ಕಳನ್ನು ಹೆರುವ ಆಸೆಯಂತೆ: ಮನದ ಮಾತು ತೆರೆದಿಟ್ಟು ಕಾರಣವನ್ನೂ ನೀಡಿದ ನಟಿ!

ಬಿಕಿನಿ ಬಿಟ್ಟು ಹಿಜಾಬ್​ ಅಪ್ಪಿಕೊಂಡಿರೋ ನಟಿ ಸನಾ ಖಾನ್​ಗೆ ಒಂದು ಡಜನ್​ ಮಕ್ಕಳನ್ನು ಹೆರುವ ಆಸೆಯಂತೆ: ಮನದ ಮಾತು ತೆರೆದಿಟ್ಟು ಕಾರಣವನ್ನೂ ನೀಡಿದ ನಟಿ!
 

Sana Khan faces backlash for wanting more than two kids and about 12 children suc

 ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿ ಈಗ ಗಂಡ- ಮುದ್ದು ಕಂದನ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್. ಇವರು ಬಣ್ಣದ ಲೋಕ ತ್ಯಜಿಸಿ ನಾಲ್ಕು ವರ್ಷಗಳಾಗಿವೆ.  ಹಲವು ವರ್ಷಗಳ ಸಿನಿಮಾ ನಂಟು ಹೊಂದಿದ್ದ ನಟಿ, ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ವಿವಾಹದ ನಿರ್ಧಾರದ ಮಾಡುತ್ತಲೇ ಸಿನಿಮಾರಂಗ ತೊರೆಯುವ ಸಂದರ್ಭ ಬಂದಿತ್ತು. ಆಗ ನಟಿ ತುಂಬಾ ದುಃಖಿತರಾಗಿದ್ದರು. ಅಕ್ಷರಶಃ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎನ್ನುತ್ತಲೇ  ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ,  ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು.

ಇದೀಗ ಸನಾ ಖಾನ್​, ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ. ಈಚೆಗೆ ಗಂಡು ಮಗುವಿನ ತಾಯಿಯಾಗಿರುವ ಸನಾ ಖಾನ್​, ತಾಯ್ತನದ ಖುಷಿಯನ್ನು ಹಂಚಿಕೊಂಡಿದ್ದಾರೆ.  ಪತಿ ಅನಾಸ್ ಸೈಯದ್ ತಮ್ಮ ಗರ್ಭಾವಸ್ಥೆಯಲ್ಲಿ ಹೇಗೆ ಬೆಂಬಲಿಸಿದ್ದಾರೆಂದು ಹೇಳಿಕೊಂಡ ಸನಾ, ತಮ್ಮ ಮೊದಲ ಮಗುವಿನ ಜನ್ಮ ನೀಡುವ ಸಂದರ್ಭದಲ್ಲಿ ಅವರಿಗೇ ಹೆಚ್ಚು ಭಯವಾಗಿತ್ತು. ಅವರು ಮೂರ್ಛೆ ಹೋಗಿಬಿಟ್ಟಿದ್ದರು ಎಂದಿದ್ದಾರೆ. ಕೊನೆಗೆ, ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಇನ್ನೂ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಹಂಬಲ. ಹಿಂದಿನ ಕಾಲದಲ್ಲಿ ಬಹುತೇಕ ಮನೆಯಗಳಲ್ಲಿ 10-12 ಮಕ್ಕಳು ಇರುತ್ತಿದ್ದರು. ಅದೇ ರೀತಿ ನನಗೂ 10-12 ಮಕ್ಕಳು ಬೇಕು. ಕುಟುಂಬ ಇನ್ನಷ್ಟು ವಿಸ್ತಾರ ಆಗಬೇಕು ಎನ್ನುವುದು ನನ್ನ ಆಸೆ. ನನ್ನ ಆಸೆಯನ್ನು ನಾನು ಈಡೇರಿಸಿಕೊಳ್ಳುತ್ತೇನೆ. 12 ಮಕ್ಕಳು ಸಾಧ್ಯವಾಗದಿದ್ದರೂ ಹತ್ತಾದರೂ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.  ಈ ಮಾತೀಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ! ನಟಿಯ ಮಾತು ಸಾಕಷ್ಟು ಟ್ರೋಲ್​ಗೂ ಒಳಗಾಗುತ್ತಿದ್ದು, ತಮ್ಮದೇ ಆದ ರೀತಿಯಲ್ಲಿ ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. 

ಚೂಡಿದಾರ ಹಾಕ್ಕೊಂಡು, ಎಣ್ಣೆ ಹಚ್ಕೊತ್ತಿದ್ದೆ... ಅದ್ಯಾವಾಗ ಬಿಕಿನಿ ಧರಿಸಿದ್ನೋ... ಕಣ್ಣೀರಾದ 'ಕೂಲ್'​ ನಟಿ ಸನಾ!
 
ಅಂದಹಾಗೆ ಸನಾ,  ನವೆಂಬರ್ 20, 2020 ರಂದು  ಮುಫ್ತಿ ಅನಾಸ್ ಸೈಯದ್  ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು. ಕಳೆದ ಜೂನ್​ನಲ್ಲಿ ಮಗುವಿನ ತಾಯಿ ಆಗಿದ್ದಾರೆ. ಈಚೆಗಷ್ಟೇ ಮಗುವಿನ   ದರ್ಶನ ಮಾಡಿಸಿ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅಂದಹಾಗೆ, ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ತಾವು ಸಿನಿಮಾ ಬಿಡುವ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು,  ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು... you don’t want your last day to be your first day of wearing hijab ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ' ಎಂದಿದ್ದರು. 

ಇನ್ನು ಸನಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಆದರೆ ದೃಢ ಸಂಕಲ್ಪದೊಂದಿಗೆ ನಟಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು. ಆಗ ಅವರು, ತಾವು ನಟನೆ ಬಿಡುವ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, 'ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ  ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು' ಎಂದು ಹೇಳಿದ್ದರು.  

ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ
 

Latest Videos
Follow Us:
Download App:
  • android
  • ios