Asianet Suvarna News Asianet Suvarna News

ಮಗುವಿನ ಜೊತೆಗೆ ಕಚೇರಿ ನಿರ್ವಹಿಸುವುದು ಹೇಗೆ ? ಸಿಇಒ ರಾಧಿಕಾ ಗುಪ್ತಾ ಪೋಸ್ಟ್ ವೈರಲ್‌

ಉದ್ಯೋಗದಲ್ಲಿರುವ ಮಹಿಳೆ ಕುಟುಂಬವನ್ನು ನಿಭಾಯಿಸುವುದು ಅದೆಷ್ಟು ಕಷ್ಟ ಎಂಬುದು ಹಲವರಿಗೆ ತಿಳಿದಿರುವ ವಿಚಾರ. ಅದರಲ್ಲೂ ಮದುವೆಯಾದ ಮೇಲೆ, ಮಗುವಾದ ಮೇಲಂತೂ ಇದು ಇನ್ನಷ್ಟು ಕಷ್ಟಕರವಾಗಿ ಪರಿಣಮಿಸುತ್ತದೆ. ಹೀಗಿರುವಾಗ ಎಡೆಲ್ವೀಸ್​ ಮ್ಯೂಚುವಲ್​ ಫಂಡ್​ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ, ಆಫೀಸಿನಲ್ಲಿಯೇ ಮಗುವನ್ನು ನೋಡಿಕೊಳ್ಳುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

Woman CEO Radhika Gupta Looks After Baby While Working In Office Vin
Author
First Published Jan 10, 2023, 11:17 AM IST

ಹೆಣ್ಣಿನ ಜೀವನ ಅಂದುಕೊಂಡಷ್ಟು ಸರಳವಲ್ಲ. ಮದುವೆಗೂ ಮೊದಲೂ ನಂತರವೂ ಆಕೆ ಹಲವಾರು ಸಮಸ್ಯೆಗಳ ನಡುವೆ ಒದ್ದಾಡಬೇಕಾಗುತ್ತದೆ. ಅದರಲ್ಲೂ ಆಕೆ ಉದ್ಯೋಗ ನಿರ್ವಹಿಸುವವಳಾಗಿದ್ದರೆ ಇನ್ನಷ್ಟು ಕಷ್ಟವನ್ನು ಎದುರಿಸಬೇಕಾದೀತು. ಮನೆ, ಕಚೇರಿ ಎರಡೂ ಕಡೆಯಿಂದ ಎದುರಾಗುವ ಒತ್ತಡವನ್ನು ನೋಡಿಕೊಳ್ಳಬೇಕಾಗುತ್ತದೆ. ಮದುವೆಯ ನಂತರವಂತೂ ಮಹಿಳೆ ಮನೆ ಮತ್ತು ಕಚೇರಿಯ ನಡುವೆ ಅಕ್ಞರಶಃ ಗುದ್ದಾಟವೇ. ಮಗುವೊಂದು ಆದ ಮೇಲೆ ಕೇಳಬೇಕಾ, ಮಗುವನ್ನು ನೋಡಿಕೊಳ್ಳುವುದೋ, ಕಚೇರಿಗೆ ಹೋಗುವುದೋ ಎರಡನ್ನೂ ನಿರ್ವಹಿಸಲು ಆಗದೆ ಒದ್ದಾಡುವಂತಾಗುತ್ತದೆ. 

ಉನ್ನತ ಹುದ್ದೆಯಲ್ಲಿರುವವರಿಗೆ ಇದೆಲ್ಲವೂ ಸುಲಭ. ಆದರೆ ನಿತ್ಯವೂ ಕಚೇರಿಗೆ (Office) ಓಡಾಡಿಕೊಂಡು ಕೆಲಸ ಮಾಡುವ ದಂಪತಿಗೆ ಇದು ಕಷ್ಟಕರವಾಗಿ ಬಿಡುತ್ತದೆ. ಈ ಸಂದರ್ಭದಲ್ಲಿ ಈ ಎರಡನ್ನೂ ನಿಭಾಯಿಸುವುದು ಸಣ್ಣ ಮಾತಲ್ಲ. ಅನೇಕರು ಈ ಸಂದರ್ಭದಲ್ಲಿ ಕೆಲಸವನ್ನೇ ಬಿಟ್ಟು ಬಿಡುತ್ತಾರೆ. ಇನ್ನೂ ಕೆಲವರು ಸ್ವಲ್ಪ ತಿಂಗಳ ಬ್ರೇಕ್​ ತೆಗೆದುಕೊಂಡು ಮತ್ತೆ ವಾಪಸ್​ ಕೆಲಸಕ್ಕೆ ಸೇರುತ್ತಾರೆ. ಆದರೆ ಸ್ವಂತ ಕಂಪೆನಿ ಹೊಂದಿದವರು ಈ ಹಂತವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಸದ್ಯ ವೈರಲ್ ಆಗಿರುವ ವೀಡಿಯೋದಲ್ಲಿ ವಾವಿದಕ್ಕೆ ಉತ್ತರವನ್ನು ಪಡೆದುಕೊಳ್ಳಬಹುದು. ಇದೀಗ ವೈರಲ್ ಆಗಿರುವ ಎಡೆಲ್ವೀಸ್​ ಮ್ಯೂಚುವಲ್​ ಫಂಡ್​ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ (Radhika Guptha) ಅವರ ಪೋಸ್ಟ್‌ನಲ್ಲಿ ಅವರು ಕಚೇರಿಯಲ್ಲೇ ಮಗು (Baby)ವನ್ನು ನೋಡಿಕೊಳ್ಳುತ್ತಾರೆ.

ಅಮ್ಮ-ಮಕ್ಕಳ ಬಾಂಡಿಂಗ್ ಗಟ್ಟಿಯಾಗಿಸಲು ಕಾಂಗರೂ ಕೇರ್!

ತಾಯ್ತನದ ಜೊತೆಗೆ ಕಚೇರಿಯ ನಿರ್ವಹಣೆ, ಪೋಸ್ಟ್ ವೈರಲ್
ರಾಧಿಕಾ, ತಮ್ಮ ಕಚೇರಿಯ ಫೋಟೋ ಟ್ವೀಟ್ ಮಾಡಿದ್ದು ಇದರಲ್ಲಿ ಮಗು ಚಾಪೆಯ ಮೇಲೆ ಮಲಗಿರುವುದನ್ನು ನೋಡಬಹುದು. ಈ ಮೂಲಕ ರಾಧಿಕಾ, ತಾಯ್ತನ ಮತ್ತು ಕಚೇರಿ ಕೆಲಸವನ್ನು ಒಟ್ಟಿಗೆ ಹೇಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಪೋಷಕರಿಬ್ಬರೂ ಕೆಲಸ ಮಾಡಲೇಬೇಕಾದಾಗ ಹೀಗೆಲ್ಲಾ ಮಾಡಬೇಕಾಗುತ್ತದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಮದುವೆಯಾದ ಮೇಲೂ ಕೆಲಸವನ್ನು ನಿರ್ವಹಿಸಲು ಮೊದಲೇ ಪ್ಲ್ತಾನ್ ಮಾಡಬೇಕಾಗುತ್ತದೆ. ತಾಳ್ಮೆ, ಸಹನೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ. ರಾಧಿಕಾ ಹಂಚಿಕೊಂಡಿರುವ ಫೋಟೋದಲ್ಲಿ ಮಗು ಕಚೇರಿಯಲ್ಲೇ ಚಾಪೆಯಲ್ಲಿ ಆಟಿಕೆಗಳೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು.

'ತಂದೆ-ತಾಯಿ ಇಬ್ಬರೂ ಕೆಲಸ ಮಾಡಬೇಕಾದ ಪರಿಸ್ಥಿತಿಯಿರುವಾಗ ಮತ್ತು ನಿಮಗೆ ಸಹಾಯ ಮಾಡಲು ಯಾರೂ ಇಲ್ಲ ಎಂದಾದಾಗ ನೀವೇನು ಮಾಡಬಹುದು ? ನೀವು ತಾಯಿ ಮತ್ತು CEO ಆಗಿರುವ ಈ ಜೀವನ (Life)ವನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಆಗಾಗ ಜನರು ನನ್ನನ್ನು ಕೇಳುತ್ತಾರೆ. ತಾಯಿ ಮತ್ತು ಕಚೇರಿಯ ಕೆಲಸವನ್ನು ಬ್ಯಾಲೆನ್ಸ್ ಮಾಡಲು ಸ್ವಲ್ಪ ಯೋಜನೆ, ಸಾಕಷ್ಟು ತಾಳ್ಮೆಯಿರುವುದು ಅಗತ್ಯ. ಮಗುವಿನ ನಗು ಮತ್ತೆಲ್ಲಾ ಸಮಸ್ಯೆಯನ್ನು ಮರೆಯುವಂತೆ ಮಾಡುತ್ತದೆ' ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದಿದ್ದು, ಪೋಸ್ಟ್ ವೈರಲ್ ಆಗಿದೆ. ಇಲ್ಲಿಯವರೆಗೆ, ಟ್ವೀಟ್ ನೂರಾರು ಲೈಕ್‌ಗಳು ಮತ್ತು ಟ್ವೀಟ್‌ಗಳೊಂದಿಗೆ 300 ಸಾವಿರ ವೀಕ್ಷಣೆಗಳನ್ನು ಹೊಂದಿದೆ.

ಗರ್ಭಪಾತ... ಇನ್ನೆಂದು ಅಮ್ಮನಾಗಲಾರೆಂದು ಭಾವಿಸಿದಾಕೆ ಹೆತ್ತಿದ್ದು 11 ಮಕ್ಕಳ

ನೆಟ್ಟಿಗರಿಂದ ಸಿಇಒ ರಾಧಿಕಾ ಗುಪ್ತಾ ಟ್ವೀಟ್‌ಗೆ ಶ್ಲಾಘನೆ
ಅನೇಕ ಇಂಟರ್ನೆಟ್ ಬಳಕೆದಾರರು ಗುಪ್ತಾ ಅವರ ಕೆಲಸ (Work) ಮತ್ತು ಜೀವನ ಎರಡಕ್ಕೂ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ಆದರೆ ಮತ್ತೆ ಕೆಲವರು ಮೇಲಾಧಿಕಾರಿಯಂತೆ ಕೆಳ ಹಂತದ ಸ್ಥಾನದಲ್ಲಿರುವ ಇತರರು ಸಹ ಒಂದೇ ರೀತಿಯ ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂದು ಹೇಳಿದರು. ಮತ್ತೊಬ್ಬರು, 'ಇಂತಹ ವಿಷಯಗಳು ಉನ್ನತ ನಿರ್ವಹಣೆಯ ಮಟ್ಟದಲ್ಲಿ ಮಾತ್ರ ಲಭ್ಯವಿದೆ' ಎಂದರು. ಮಹಿಳೆಯೊಬ್ಬರು, 'ಈ ನೀತಿ ಮತ್ತು ಸೌಲಭ್ಯವು ಕೇವಲ ಕಂಪನಿಯ ಸಿಇಒಗೆ ಅಲ್ಲ ಆದರೆ ಪ್ರತಿಯೊಬ್ಬ ಉದ್ಯೋಗಿಗೆ ಸಿಗಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. ಆದರೆ ನಿತ್ಯವೂ ಕಚೇರಿಗೆ ಹೋಗಿ ಕೆಲಸ ಮಾಡುವ ದಂಪತಿ (Couple)ಗಳಲ್ಲಿ ಇದು ಅಸಾಧ್ಯ ಎಂದಿದ್ದಾರೆ ಒಬ್ಬರು.

ಇದು ಅದ್ಭುತ. ಆದರೆ ಎಲ್ಲ ಮಹಿಳೆಯರಿಗೂ ಕಚೇರಿಗಳಿಗೆ ಮಗುವನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ. ಹಾಗೆಯೇ ಎಷ್ಟೋ ಕಚೇರಿಗಳಲ್ಲಿ ಬೇಬಿ ಸಿಟಿಂಗ್​ಗಳಿಲ್ಲ. ಹಾಗಾಗಿ ಸಾಮಾನ್ಯರಿಗೆ ಇದು ದೊಡ್ಡ ಸವಾಲೇ ಎಂದಿದ್ಧಾರೆ ಮತ್ತೊಬ್ಬ ಬಳಕೆದಾರರು, ಆದರೆ ಜನಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ದಂಪತಿಗಳು ಪರಂಪರಾಗತ ನಂಬಿಕೆಗಳನ್ನು ಹಿಂದೂಡಿ, ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ, ಪರಸ್ಪರ ಅರ್ಥ ಮಾಡಿಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಮತ್ತು ತಾತ್ಕಾಲಿಕವಾಗಿಯಾದರೂ ಇತರರ ಸಹಾಯ ತೆಗೆದುಕೊಂಡು ನಿಭಾಯಿಸುವಲ್ಲಿ ಈ ದ್ವಂದ್ವಕ್ಕೆ ಪರಿಹಾರವಿದೆ. ಹಾಗೆಯೇ ಕಂಪೆನಿಗಳು ಶಿಶುವಿಹಾರಗಳನ್ನು ಸ್ಥಾಪಿಸಿದಲ್ಲಿ ಇನ್ನೂ ಅನುಕೂಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios