600 ರೂ.ಗೆ ಖರೀದಿ ಮಾಡಿದ ಹಳೆ ಪರ್ಸ್‌ನಲ್ಲಿತ್ತು ಇಷ್ಟೊಂದು ದುಡ್ಡು! ಲೆಟರ್ ಓದಿ ಶಾಕ್ ಆದ ಮಹಿಳೆ
ಹಳೆ ವಸ್ತುಗಳನ್ನು ಖರೀದಿ ಮಾಡುವಾಗ ಅದೃಷ್ಟ, ದುರಾದೃಷ್ಟ ಎರಡರ ಬಗ್ಗೆಯೂ ಆಲೋಚನೆ ಮಾಡ್ಬೇಕು. ಕೆಲವೊಮ್ಮೆ ಹಳೆ ಪರ್ಸ್ ನಮ್ಮ ಜೇಬು ತುಂಬಿಸಿದ್ರೂ ಮನಸ್ಸಿಗೆ ನೋವು ನೀಡ್ತಿರುತ್ತದೆ. ಈ ಮಹಿಳೆ ಜೀವನದಲ್ಲೂ ಅದೇ ಆಗಿದೆ.
ಅಪರೂಪಕ್ಕೆ ಹಳೆ ವಸ್ತು (Old thing)ಗಳು ನಮ್ಮ ಅದೃಷ್ಟ (good luck) ಬದಲಿಸುತ್ತವೆ. ಹಳೆ ನೋಟುಗಳು, ವಸ್ತುಗಳು ಲಕ್ಷಾಂತರ ರೂಪಾಯಿಗೆ ಮಾರಾಟ ಆಗೋದಿದೆ. ಮತ್ತೆ ಕೆಲ ಬಾರಿ ನಾವು ಖರೀದಿ ಮಾಡಿದ ಹಳೆ ವಸ್ತು ಅಥವಾ ಹಳೆ ಮನೆಯಲ್ಲಿ ನಮಗೆ ಅಚ್ಚರಿ ಹುಟ್ಟಿಸುವ ವಸ್ತು ಅಥವಾ ಘಟನೆ ನಡೆಯತ್ತದೆ. ಈ ಮಹಿಳೆ ಜೀವನದಲ್ಲೂ ಅಂಥ ಘಟನೆಯೊಂದು ಸಂಭವಿಸಿದೆ. 600 ರೂಪಾಯಿಗೆ ಹಳೆ ಪರ್ಸ್ (purse) ಖರೀದಿ ಮಾಡಿದ್ದ ಮಹಿಳೆ, ಅದ್ರಲ್ಲಿರುವ ವಸ್ತು ಹಾಗೂ ಪತ್ರ ಓದಿ ದಂಗಾಗಿದ್ದಾಳೆ.
ಘಟನೆ ಪೆನ್ಸಿಲ್ವೇನಿಯಾ (Pennsylvania)ದಲ್ಲಿ ನಡೆದಿದೆ. ಅಲ್ಲಿನ ಲಯನೋರಾ ಸಿಲ್ವರ್ಮೆನ್ ಹೆಸರಿನ ಮಹಿಳೆ ಗುಡ್ ವಿಲ್ ಹೆಸರಿನ ಸ್ಟೋರ್ ನಲ್ಲಿ ಹಳೆ ಪರ್ಸ್ ಒಂದನ್ನು ನೋಡಿದ್ದಳು. ಪರ್ಸ್ ಆಕೆಗೆ ಇಷ್ಟವಾಗಿತ್ತು. ಬೆಲೆ ಕೂಡ ತುಂಬಾ ಕಡಿಮೆಯಿದ್ದ ಕಾರಣ ಲಯನೋರಾ ಆ ಪರ್ಸ್ ಖರೀದಿ ಮಾಡಿದ್ದಳು. ಮನೆಗೆ ಪರ್ಸ್ ತಂದ್ಮೇಲೆ ಅದು ಸ್ವಲ್ಪ ಕೊಳಕಾದಂತೆ ಕಂಡ್ತು. ಹಾಗಾಗಿ ಅದನ್ನು ಸ್ವಚ್ಛಗೊಳಿಸಲು ಪರ್ಸ್ ಜಿಪ್ ತೆಗೆದಾಗ ಅದ್ರಲ್ಲಿ ಹಣ ಮತ್ತು ಲೆಟರ್ ಒಂದು ಲಯನೋರಾಗೆ ಸಿಕ್ಕಿದೆ. ಪರ್ಸ್ನಲ್ಲಿ 300 ಡಾಲರ್ ಅಂದ್ರೆ ಸುಮಾರು 25 ಸಾವಿರ ರೂಪಾಯಿ ಇತ್ತು. ಆದ್ರೆ ಪರ್ಸ್ ನಲ್ಲಿದ್ದ ಲೆಟರ್ ನೋಡಿ ಲಯನೋರಾ ಸ್ವಲ್ಪ ಭಾವುಕಳಾಗಿದ್ದಾಳೆ.
ಪೆಟಿಕೋಟ್ ಇಲ್ಲದೆ ಸೀರೆ ಉಡುವುದು ಹೇಗೆ?
ಲೆಟರ್ ನಲ್ಲಿ ಏನಿತ್ತು? : ಈ ಪತ್ರವನ್ನು ಮಾರ್ಥ್ ಹೆಸರಿನ ಮಹಿಳೆ ಬರೆದಿದ್ದಾಳೆ. ಆಕೆಗೆ ಮೂರು ಮಕ್ಕಳು ಎಂಬುದು ಲೆಟರ್ ಓದಿದ ಮೇಲೆ ಅರ್ಥವಾಗುತ್ತದೆ. ಈ ಪರ್ಸ್ ವಾಸ್ತವವಾಗಿ ಮಾರ್ಥ್ದಲ್ಲ. ಆಕೆ ಪತಿಯ ಗರ್ಲ್ ಫ್ರೆಂಡ್ ಪರ್ಸ್ ಇದು. ನನ್ನ ಮಕ್ಕಳು , ನನ್ನ ನಿಧನದ ನಂತ್ರ ನನ್ನೆಲ್ಲ ವಸ್ತುಗಳನ್ನು ಗುಡ್ ವಿಲ್ ಗೆ ನೀಡ್ತಾರೆ ಎಂಬುದು ನನಗೆ ಗೊತ್ತು. ಇದ್ರಿಂದ ಬಡವರಿಗೆ ಸಹಾಯವಾಗುತ್ತೆ ಎಂದು ನಾನು ಭಾವಿಸ್ತೇನೆ ಎಂದು ಮಾರ್ಥ್ ಪತ್ರದಲ್ಲಿ ಬರೆದಿದ್ದಾಳೆ. ಪರ್ಸ್ ಬಗ್ಗೆಯೂ ಸಾಕಷ್ಟು ವಿಷ್ಯಗಳು ಲೆಟರ್ನಲ್ಲಿವೆ. ನಾನು ಅಮೆರಿಕಾದ ನನ್ನ ತವರಿಗೆ ಹೋಗಿದ್ದ ಸಮಯದಲ್ಲಿ ನನ್ನ ಮನೆಗೆ ನನ್ನ ಪತಿಯ ಗರ್ಲ್ ಫ್ರೆಂಡ್ ಬಂದಿದ್ದಳು. ಆಕೆ ತರಾತುರಿಯಲ್ಲಿ ಪರ್ಸನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಳು. ನಾನು ವಾಪಸ್ ಬಂದಾಗ ನನಗೆ ಪರ್ಸ್ ಸಿಕ್ಕಿತ್ತು. ಆದ್ರೆ ನಾನು ಈ ಬಗ್ಗೆ ನನ್ನ ಪತಿಗೆ ಯಾವುದೇ ಪ್ರಶ್ನೆ ಕೇಳಿರಲಿಲ್ಲ. ಗರ್ಲ್ ಫ್ರೆಂಡ್ ಪರ್ಸನ್ನು ನಾನು ಎಲ್ಲ ಕಡೆ ತೆಗೆದುಕೊಂಡು ಹೋಗ್ತಿದೆ. ಆದ್ರೆ ನನ್ನ ಮಕ್ಕಳಿಗೆ ಈ ಪರ್ಸ್ ಇಷ್ಟವಿರಲಿಲ್ಲ. ಹಾಗಾಗಿ ಅವರು ಇದನ್ನು ಗುಡ್ ವಿಲ್ಗೆ ಮಾರಾಟ ಮಾಡಲು ಮುಂದಾದ್ರು ಎಂದು ಮಹಿಳೆ ಬರೆದಿದ್ದಾಳೆ.
'ಬನಾರಸಿ ಬಿಕಿನಿ ಧರಿಸಿ ಮದುವೆಯಾದ ವಧು' ಯಾರು? ಇಲ್ಲಿದೆ ಬೃಹನ್ನಾಟಕ!
ಇದನ್ನು ಓದಿದ ಲಯನೋರಾ, ಗುಡ್ ವಿಲ್ ಗೆ ಭೇಟಿ ನೀಡಿದ್ದಾಳೆ. ಮಾರ್ಥ್ ಮಕ್ಕಳು, ಆಕೆಯ ವಸ್ತುಗಳನ್ನು ಗುಡ್ ವಿಲ್ ಶಾಪ್ ಗೆ ನೀಡಿರಬಹುದೆಂಬ ನಿರೀಕ್ಷೆ ಲಯನೋರಾಗೆ ಇತ್ತು. ಆದ್ರೆ ಅಲ್ಲಿ ಮಾರ್ಥ್ ಹೆಸರಿನಲ್ಲಿ ಮತ್ತ್ಯಾವ ವಸ್ತುವೂ ಇರಲಿಲ್ಲ. ಮಾರ್ಥ್ ಕುಟುಂಬವನ್ನು ಭೇಟಿಯಾಗಲು ಲಯನೋರಾ ಪ್ರಯತ್ನಿಸಿದ್ದಳು. ಆದ್ರೆ ಗುಡ್ ವಿಲ್ ಶಾಪ್ ಬಳಿ ಮಾರ್ಥ್ ವಿಳಾಸ ಕೂಡ ಇರಲಿಲ್ಲ. ಲಯನೋರಾ, ತನಗೆ ಸಿಕ್ಕ ಪರ್ಸ್ ಬಗ್ಗೆ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾಳೆ. ಸುಮಾರು ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಈಗ್ಲೂ ಲಯನೋರಾ ಈ ವಿಡಿಯೋಕ್ಕೆ ಸಾಕಷ್ಟು ವೀವ್ಸ್ ಮತ್ತು ಕಮೆಂಟ್ ಬರ್ತಾನೇ ಇದೆ.