'ಬನಾರಸಿ ಬಿಕಿನಿ ಧರಿಸಿ ಮದುವೆಯಾದ ವಧು' ಯಾರು? ಇಲ್ಲಿದೆ ಬೃಹನ್ನಾಟಕ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಬನಾರಸಿ ಬಿಕಿನಿ ಧರಿಸಿದ ವಧುವಿನ ಫೋಟೋದ ಹಿಂದಿನ ಸತ್ಯವನ್ನು ಈ ಲೇಖನ ಚರ್ಚಿಸುತ್ತದೆ. ಈ ಘಟನೆ ಎಲ್ಲಿ ನಡೆದಿದೆ ಮತ್ತು ವಧು ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಮದುಮಗಳು ಬನಾರಸಿ ಬಿಕಿನಿ ಹಾಕೊಂಡು ಮದುವೆ ಮಾಡಿಕೊಳ್ಳುತ್ತಿರುವಂತೆ ಕಾಣಿಸುತ್ತಿದ್ದಾಳೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು, ಈ ವಧು ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಮದುವೆ ಮಾಡಿಕೊಳ್ಳುತ್ತಿರುವ ಜೋಡಿಯ ಪೈಕಿ ವರ ಶೇರ್ವಾನಿ ಧರಿಸಿ ಸುರ ಸುಂದರಾಂಗನಂತೆ ಕಾಣಿಸುತ್ತಿದ್ದರೆ, ಆತನ ಮುಂದೆ ನಗುತ್ತಾ ನಿಂತಿರುವ ನಿಂತಿರುವ ವಧು (ಮದುಮಗಳು) ಬನಾರಸಿ ಬಿಕಿನಿ ಧರಿಸಿ ನಿಂತಿದ್ದಾಳೆ. ಅವರ ಹಿಂದೆ ಮದುವೆಗೆ ಬಂದ ಜನರು ಕೂಡ ಕಾಣಿಸುತ್ತಿದ್ದು, ಅವರೆಲ್ಲರೂ ಮದುವೆಯಾಗುತ್ತಿರುವ ಜೋಡಿ ನೋಡಿ ನಗಾಡುತ್ತಿದ್ದಾರೆ. ಆದರೆ, ಈ ಮದುವೆ ಎಲ್ಲಿ ನಡೆದಿದ್ದು, ಈ ಜೋಡಿ ಮೂಲ ಏನು? ಹೀಗೆ ಬಿಕಿನಿ ಧರಿಸಿ ಮದುವೆ ಮಾಡಿಕೊಂಡ ಉದ್ದೇಶವಾದರೂ ಏನು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಉಂಟಾಗಿದೆ. ಈ ಜೋಡಿಯ ಅಸಲಿ ಸತ್ಯ ಇಲ್ಲಿದೆ..
ಸಾಮಾನ್ಯವಾಗಿ ಮದುವೆ ಮಾಡಿಕೊಳ್ಳುವುದೆಂದರೆ ಅದಕ್ಕೆ ವಧು-ವರರ ಕಡೆಯ ಎರಡೂ ಮನೆಯವರು ಭಾರೀ ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಒಮ್ಮೆ ನಡೆಯುವ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು, ವಿಭಿನ್ನವಾಗಿ ಮಾಡಿಕೊಳ್ಳಬೇಕು ಎಂದು ಇಂದಿನ ಯುವಜನರು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಇದಕ್ಕೆ ವಿಭಿನ್ನ ಥೀಮ್ ಕೂಡ ಅನುಸರಿಸುತ್ತಾರೆ. ಇನ್ನು ಮದುವೆ ದಿನ ಎಲ್ಲರ ಗಮನ ವಧು-ವರರ ಮೇಲೆ ಇರುತ್ತದೆ. ಇದಕ್ಕಾಗಿ ಇಬ್ಬರೂ ತಿಂಗಳುಗಟ್ಟಲೆ ಮುಂಚೆಯೇ ತಯಾರಿ ಮಾಡಿಕೊಂಡಿರುತ್ತಾರೆ. ಮದುವೆ ದಿನದ ಉಡುಪುಗಳನ್ನು ಇಬ್ಬರೂ ತಲೆಕೆಡಿಸಿಕೊಂಡು ಸೆಲೆಕ್ಟ್ ಮಾಡುತ್ತಾರೆ. ಕೆಲವೊಮ್ಮೆ ಲಕ್ಷಗಟ್ಟಲೆ ಖರ್ಚು ಮಾಡಿ ಲೆಹೆಂಗಾ-ಶೆರ್ವಾನಿ ತೆಗೆದುಕೊಳ್ಳುತ್ತಾರೆ. ಇಷ್ಟು ಕಷ್ಟಪಟ್ಟು ಆಯ್ಕೆ ಮಾಡಿದ, ಹೊಲಿಸಿದ ಡ್ರೆಸ್ ಅನ್ನು ಧರಿಸಿ ಮಿಂಚುತ್ತಾರೆ.
ಇದನ್ನೂ ಓದಿ: Viral Video: ಗರ್ಲ್‌ಫ್ರೆಂಡ್ ಜೊತೇಲಿದ್ದರೆ ಸಿಂಹ ಕೂಡ ಸೈಲೆಂಟ್!
ಆದರೆ, ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮದುಮಗ ಕ್ರೀಮ್ ಕಲರ್ ಶೇರ್ವಾನಿ ಧರಿಸಿಕೊಂಡು ಹಾರ ಹಾಕಿಸಿಕೊಂಡರೆ, ಆತನಿಗೆ ಹಾರ ಹಾಕಿದ ಮದುಮಗಳು ತಲೆ ಮೇಲೆ ಚೂಡಿದಾರ್ ವೇಲ್, ಮುಂಗುಟಿ, ಕೊರಳಲ್ಲಿ ಭಾರವಾದ ನೆಕ್ಲೇಸ್, ಕಿವಿಯಲ್ಲಿ ಜುಮುಕಿ, ಕೈತುಂಬಾ ಮೆಹಂದಿ ಹಾಗೂ ಕೈಯಲ್ಲಿ ಬಳೆಗಳನ್ನು ಹಾಕಿಕೊಂಡಿದ್ದಾರೆ. ಆದರೆ, ಮುಖ್ಯವಾಗಿ ಮೈ ಮುಚ್ಚುವಂತೆ ಬಟ್ಟೆಯನ್ನೇ ಧರಿಸದೇ ಹಳದಿ ಬಿಕಿನಿ ಹಾಕೊಂಡಿದ್ದಾಳೆ. ಇದು ಕೂಡ ಸೀರೆ, ಲೆಹೆಂಗಾ ಜೊತೆ ಮ್ಯಾಚ್ ಆಗುವಂತೆ ಬನಾರಸಿ ಸ್ಟೈಲ್ ನಲ್ಲಿದೆ. ಜನ ಈ ರೀತಿಯ ವೆಡ್ಡಿಂಗ್ ಡ್ರೆಸ್ ನೋಡಿ ಶಾಕ್ ಆಗಿದ್ದಾರೆ.
ಈ ವೈರಲ್ ಫೋಟೋ ಇದನ್ನು ನೋಡಿದ ಜನರು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಇಂದಿನ ಯುವಜನರು ಬೆಡ್‌ರೂಮ್ ಮತ್ತು ಬಾತ್‌ರೂಮ್ ಬಟ್ಟೆಗಳನ್ನು ಪಬ್ಲಿಕ್‌ನಲ್ಲಿ ಹಾಕೊಂಡು ಬರುತ್ತಿದ್ದಾರೆ. ನಮ್ಮ ಈ ಹೊಸ ಪೀಳಿಗೆ ನಮ್ಮ ಸಂಸ್ಕೃತಿಯನ್ನು ಏನು ಮಾಡಬೇಕು ಅಂದುಕೊಂಡಿದೆ? ತಮ್ಮ ದೇಹವನ್ನು ಯಾರಾದರೂ ಈ ರೀತಿ ತೋರಿಸುತ್ತಾರೆಯೇ ಎಂದು ಕಾಮೆಂಟ್‌ಗಳನ್ನು ಮಾಡುತ್ತಾ ಅವರಿಗೆ ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಕಾಲುವೆ ಬಿದ್ದ ಕಾರು, ಪ್ರಯಾಣಿಕರ ಜೀವ ಉಳಿಸಿದ ಟಾಟಾ ಟಿಗೋರ್!
ವೈರಲ್ ಫೋಟೋದ ಹಿಂದಿನ ಸತ್ಯ: ಏಷ್ಯಾನೆಟ್ ನ್ಯೂಸ್ ತಂಡ ಈ ವೈರಲ್ ಫೋಟೋದ ಹಿಂದಿನ ಸತ್ಯ ತಿಳಿದುಕೊಳ್ಳಲು ಸೈಟೊ, ಇನ್‌ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಹಲವು ಟೂಲ್ಸ್ ಬಳಸಿತು. ಆದರೆ, ಯಾವುದೇ ಮದುಮಗಳು ಬಿಕಿನಿಯಲ್ಲಿ ವರಮಾಲೆ ಹಾಕಿದ ಘಟನೆ ನಡೆದಿಲ್ಲ. ಈ ವೈರಲ್ ಫೋಟೋ ಎಐ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ತಯಾರಿಸಲ್ಪಟ್ಟಿದೆ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ ಎಐನಿಂದ ಕಣ್ಣಿಗೆ ನಂಬಲಾರದಂತಹ ಅನೇಕ ಸೃಷ್ಟಿಗಳನ್ನು ಮಾಡುತ್ತಿದ್ದು, ಇದನ್ನು ನೇರವಾಗಿ ನಂಬದೇ ಪರಿಶೀಲನೆ ಮಾಡುವುದು ಒಳಿತು..