Asianet Suvarna News Asianet Suvarna News

ಮುಖದ ಮೇಲಿನ ಕೂದಲು ನೋಡಿ ಡಿವೋರ್ಸ್ ಕೊಟ್ಟ ಗಂಡ, ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

ಮಹಿಳೆಯರಿಗೂ ಮುಖದ ಮೇಲೆ ಕೂದಲು ಬರುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಾತ ಹೆಂಡ್ತಿಯ ಮುಖದ ಮೇಲೆ ಕೂದಲು ನೋಡಿ ಆಕೆಗೆ ಡಿವೋರ್ಸ್ ಕೊಟ್ಟುಬಿಟ್ಟಿದ್ದಾನೆ. ಆ ನಂತ್ರ ಮಹಿಳೆ ಗಡ್ಡ, ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ.

woman became man, husband took divorce, now she is  with mustache and beard Vin
Author
First Published Mar 18, 2023, 11:07 AM IST

ಮನುಷ್ಯನ ದೇಹದ ಮೇಲೆ ಕೂದಲು ಬೆಳೆಯುವುದು ಸಹಜವಾದುದು. ಪುರುಷರು ಹಾಗೂ ಮಹಿಳೆಯರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರ ಮುಖದಲ್ಲಿಯೂ ಕೂದಲು ಬೆಳೆಯುತ್ತದೆ. ಆದರೆ ಸಾಮಾನ್ಯವಾಗಿ ಪುರುಷರ ಮುಖದಲ್ಲಿ ಹೆಚ್ಚು ಕೂದಲಿರುವ ಕಾರಣ ಗಡ್ಡ ಬಿಟ್ಟುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದ, ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಮಹಿಳೆಯರಲ್ಲೂ ಮುಖದ ಮೇಲೆ ಕೂದಲು ಬೆಳೆಯೋದಿದೆ. ಸಣ್ಣಪುಟ್ಟ ಕೂದಲನ್ನು ಥ್ರೆಡ್ಡಿಂಗ್, ವ್ಯಾಕ್ಸಿಂಗ್ ಮೂಲಕ ತೆಗೆದುಹಾಕುತ್ತಾರೆ. ಆದರೆ ಇದಲ್ಲದೆಯೂ ಕೆಲವರಿಗೆ ಮುಖದ ಮೇಲೆ ವಿಪರೀತ ಕೂದಲು ಬೆಳೆಯುತ್ತದೆ. ಇದು ಎಲ್ಲರ ಮುಂದೆ ಓಡಾಡಲು ಮುಜುಗರವಾಗುವಂತೆ ಮಾಡುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಇದ್ಯಾವುದರ ಭಯವೂ ಇಲ್ಲದೆ ಮುಖದ ಮೇಲೆ ಧೈರ್ಯವಾಗಿ ಕೂದಲು ಬೆಳೆಸಿಕೊಂಡಿದ್ದಾರೆ.

ಮನ್‌ದೀಪ್‌ ಎಂಬ ಮಹಿಳೆ (Women) ಹೀಗೆ ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ. ಅವರು ಮುಖದ ಮೇಲಿನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಹತ್ತಕ್ಕೂ ಹೆಚ್ಚು ವರ್ಷ ಜೊತೆಯಾಗಿ ಕೆಲಸ ಮಾಡಿದ ಪತಿಯೂ (Husband) ಅವರನ್ನು ಬಿಟ್ಟು ಹೋಗಿದ್ದಾರೆ. ಮದುವೆಯ ನಂತರ ನನ್ನ ಮುಖದ ಮೇಲೆ ಕೂದಲು ಹೇಗೆ ಬಂದಿತು ಮತ್ತು ಜೀವನವು ಹೇಗೆ ಸಂಪೂರ್ಣವಾಗಿ ಬದಲಾಯಿತು ಎಂಬುದನ್ನು ಮನ್‌ದೀಪ್ ವಿವರಿಸಿದ್ದಾರೆ.. ಆಕೆ ಖಿನ್ನತೆಗೆ ಒಳಗಾಗುವ ರೀತಿಯಲ್ಲಿ ಗಂಡನ ವರ್ತನೆ ಬದಲಾಯಿತು ಎಂದು ಹೇಳುತ್ತಾರೆ.

ಹುಡುಗೀರು ಮುಖದ ಮೇಲಿನ ಹೇರ್ ಶೇವ್ ಮಾಡಿದರೆ ಹೆಚ್ಚು ಕೂದಲು ಬರುತ್ತಾ ?

ಮದುವೆಗೂ ಮುನ್ನ ಮುಖದಲ್ಲಿ ಕೂದಲಿರಲಿಲ್ಲ ಎಂದು ಮನದೀಪ್ ಹೇಳಿದ್ದಾರೆ. ಆದರೆ 2012ರ ನಂತರ ಪರಿಸ್ಥಿತಿ ಬದಲಾಯಿತು. ಮುಖ ಮತ್ತು ಗಲ್ಲದ ಮೇಲೆ ಕೂದಲು (Hair) ಮೂಡಿತ್ತು. ಮುಖದ ಮೇಲಿನ ಕೂದಲು ನೋಡಿದ ಪತಿ ವಿಚ್ಛೇದನಕ್ಕೆ (Divorce) ಒತ್ತಾಯಿಸಲು ಪ್ರಾರಂಭಿಸಿದರು. ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ತನ್ನ ಮಾನಸಿಕ ಆರೋಗ್ಯವನ್ನು(Mental health) ನಿಭಾಯಿಸಲು ಮತ್ತು ಅಂತಹ ಪರಿಸ್ಥಿತಿಯಲ್ಲಿ ತನ್ನನ್ನು ಒಪ್ಪಿಕೊಳ್ಳಲು ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದೆ. ಅಂದಿನಿಂದ ಗುರು ಸಾಹಿಬರ ಆಶೀರ್ವಾದ ನನ್ನ ಮೇಲಿದೆ ಎಂದು ಮನ್‌ದೀಪ್ ಹೇಳುತ್ತಾರೆ. ಮನ್‌ದೀಪ್ ನಂತರದ ದಿನಗಳಲ್ಲಿ ತನ್ನ ಕೂದಲಿನೊಂದಿಗೆ ತನ್ನನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದರು. ಕೂದಲನ್ನು ಕ್ಷೌರ ಮಾಡಲು ನಿರಾಕರಿಸಿದರು.

ಪೇಟ ಧರಿಸಿ ಬೈಕ್ ಓಡಿಸುವ ಮನ್‌ದೀಪ್
ಸದ್ಯ ಮನ್‌ದೀಪ್ ತನ್ನ ಮುಖದ ಕೂದಲಿನ ಬಗ್ಗೆ ಯಾವುದೇ ಭಯವನ್ನು ಹೊಂದಿಲ್ಲ. ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಪೇಟವನ್ನು ಧರಿಸಲು ಆರಂಭಿಸಿದ್ದಾರೆ. ಮುಖದ ಕೂದಲನ್ನ, ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾರೆ. ಹೊಸ ಮೋಟಾರ್ ಬೈಕ್‌ನ್ನು ಓಡಿಸುತ್ತಾರೆ. ಜನರು ಸಹ ಅವರನ್ನು ಪುರುಷ ಎಂದು ಅಂದುಕೊಳ್ಳಲು ಆರಂಭಿಸಿದ್ದಾರೆ. ಮನ್ ದೀಪ್‌ ಪಂಜಾಬ್‌ನಲ್ಲಿ ತನ್ನ ಸಹೋದರರೊಂದಿಗೆ ಕೆಲಸ ಮಾಡುತ್ತಾ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

Hair Waxing: ಬೇಡದ ರೋಮಗಳ ನಿವಾರಣೆಗೆ ಇವೆ ನಾನಾ ವಿಧಾನಗಳು

ಮುಖದ ಕೂದಲನ್ನು ಅಳವಡಿಸಲು ಕಲಿತುಕೊಂಡ ಹರ್ನಮ್‌ ಕೌರ್
ಹೀಗೆ ಮುಖದ ಕೂದಲನ್ನು ಒಪ್ಪಿಕೊಂಡಿರುವುದು ಮನ್‌ದೀಪ್ ಮಾತ್ರವಲ್ಲ, ಈ ಹಿಂದೆ ಹರ್ನಮ್‌ ಕೌರ್ ಎಂಬವರು ತಮ್ಮ 11 ನೇ ವಯಸ್ಸಿನಲ್ಲಿ ಬೆಳೆಯಲು ಪ್ರಾರಂಭಿಸಿದ ಮುಖದ ಕೂದಲನ್ನು ಹೇಗೆ ಅಳವಡಿಸಿಕೊಳ್ಳಲು ಕಲಿತರು ಎಂಬುದರ ಕುರಿತು ಮಾತನಾಡಿದ್ದರು. 12 ನೇ ವಯಸ್ಸಿನಲ್ಲಿ ಪಿಸಿಓಎಸ್ ರೋಗನಿರ್ಣಯ ಮಾಡಿದ ನಂತರ, ಅವರು ಗಡ್ಡವನ್ನು ಬೆಳೆಸಲು ನಿರ್ಧರಿಸಿದರು. ಹರ್ನಾಮ್ ನಾಲ್ಕು ವರ್ಷಗಳ ಕಾಲ ವಾರಾಂತ್ಯದ ವ್ಯಾಕ್ಸಿಂಗ್ ಸೆಷನ್‌ಗಳನ್ನು ದಿನಕ್ಕೆ ಎರಡು ಬಾರಿ ಮಾಡಿದರು.

ನಂತರದ ದಿನಗಳಲ್ಲಿ ಮುಖದ ಕೂದಲನ್ನು ತೆಗೆಯದೆ ಹಾಗೆಯೇ ಇಟ್ಟುಕೊಳ್ಳುತ್ತೇನೆ ಎಂಬ ನಿರ್ಧಾರಕ್ಕೆ ಬಂದರು. ಇವರ ದಿಟ್ಟ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹರ್ನಮ್ ಕೌರ್ ಫೋಟೋ ವೋಗ್ ಜಪಾನ್, ಟೀನ್ ವೋಗ್ ಮತ್ತು ಕಾಸ್ಮೊ ಇಂಡಿಯಾದಲ್ಲಿ ಪ್ರಕಟಿಸಲಾಗಿತ್ತು.

Follow Us:
Download App:
  • android
  • ios